CTR-JK Tyre FMSCI ಭಾರತೀಯ ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್ಶಿಪ್ 2026ರ ಮೊದಲ ಸುತ್ತು ಅಕ್ಟೋಬರ್ 24 ಮತ್ತು 25ರಂದು ಕೊಯಮತ್ತೂರಿನ ಕರಿ ಮೋಟಾರ್ ಸ್ಪೀಡ್ವೇನಲ್ಲಿ ನಡೆಯಲಿದೆ.
29ನೇ ಸೀಸನ್ಗೆ ಕಾಲಿಡುತ್ತಿರುವ ಈ ಚಾಂಪಿಯನ್ಶಿಪ್ನಲ್ಲಿ ದೇಶದ ಅನುಭವಿ ಚಾಲಕರು ಮತ್ತು ಹೊಸ ಪ್ರತಿಭೆಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ವಾರಾಂತ್ಯದಲ್ಲಿ ಒಟ್ಟು 17 ರೇಸ್ಗಳು ನಡೆಯಲಿವೆ.
ಭಾರತದ ಮೋಟಾರ್ಸ್ಪೋರ್ಟ್ಸ್ ಕ್ಷೇತ್ರವನ್ನು ಮತ್ತಷ್ಟು ಬೆಳೆಸುವ ಉದ್ದೇಶದಿಂದ JK Tyre ಮತ್ತು CTR (Chennai Turbo Riders) ಕೈಜೋಡಿಸಿವೆ. ಈ ಚಾಂಪಿಯನ್ಶಿಪ್ ಚಾಲಕರಿಗೆ ತಮ್ಮ ಕೌಶಲ ಪ್ರದರ್ಶಿಸಲು ಮತ್ತು ಮುಂದಿನ ಹಂತಕ್ಕೆ ಬೆಳೆಯಲು ಉತ್ತಮ ವೇದಿಕೆ ಒದಗಿಸಲಿದೆ.
ಈ ಬಾರಿ LGB Formula 4, Royal Enfield Continental GT Cup, Novice F1300, Super Saloon, IJTC, ITC, ISTC ಮತ್ತು JK Tyre Levitas Cup ವಿಭಾಗಗಳಲ್ಲಿ ರೇಸ್ಗಳು ನಡೆಯಲಿವೆ. ವೇಗ, ಕಾರ್ ಕಂಟ್ರೋಲ್, ಸ್ಥಿರ ಪ್ರದರ್ಶನ ಮತ್ತು ರೇಸಿಂಗ್ ಕೌಶಲ್ಯ ಈ ಸ್ಪರ್ಧೆಗಳಲ್ಲಿ ಪ್ರಮುಖವಾಗಿರಲಿವೆ.
LGB Formula 4 ಸಿಂಗಲ್-ಸೀಟರ್ ರೇಸಿಂಗ್ಗೆ ಪ್ರವೇಶಿಸಲು ಉತ್ತಮ ವೇದಿಕೆಯಾಗಿದೆ. ಈ ವಿಭಾಗದಲ್ಲಿ Suzuki Swift 1,298cc ಎಂಜಿನ್ ಹೊಂದಿರುವ ಕಾರುಗಳನ್ನು ಬಳಸಲಾಗುತ್ತದೆ. 29ನೇ ವರ್ಷಕ್ಕೆ ಕಾಲಿಟ್ಟಿರುವ ಈ ವಿಭಾಗದಲ್ಲಿ ಮೂರು ರೇಸ್ಗಳು ನಡೆಯಲಿವೆ. ಧ್ರುವ್ ಘೋಷ್ವಾನಿ, ಮೋನಿತ್ ಶ್ರೀನಿವಾಸನ್, ಸಂದೀಪ್ ಕುಮಾರ್ ಮತ್ತು ಸರಣ್ ವಿಕ್ರಮ್ ಸೇರಿದಂತೆ ಹಲವು ಚಾಲಕರು ಸ್ಪರ್ಧಿಸಲಿದ್ದಾರೆ.
ಆರನೇ ಆವೃತ್ತಿಗೆ ಕಾಲಿಡುತ್ತಿರುವ Royal Enfield Continental GT Cup ಈ ಬಾರಿ ಹೊಸ ಬದಲಾವಣೆಗಳೊಂದಿಗೆ ನಡೆಯಲಿದೆ. ಅಮೆಚೂರ್ ಮತ್ತು ಪ್ರೊಫೆಷನಲ್ ವಿಭಾಗಗಳ ಚಾಲಕರು ಪ್ರತ್ಯೇಕ ಗ್ರಿಡ್ಗಳಲ್ಲಿ ಸ್ಪರ್ಧಿಸಲಿದ್ದಾರೆ. ಅಮೆಚೂರ್ ವಿಭಾಗದಲ್ಲಿ 20 ಮಂದಿ ಮತ್ತು ಪ್ರೊಫೆಷನಲ್ ವಿಭಾಗದಲ್ಲಿ 15 ಮಂದಿ ಭಾಗವಹಿಸಲಿದ್ದಾರೆ. ಎರಡೂ ವಿಭಾಗಗಳಲ್ಲಿ ತಲಾ ಮೂರು ರೇಸ್ಗಳು ನಡೆಯಲಿವೆ. ಕಬೀರ್ ಸಾಹೋಚ್, ಸೌರವ್ ಡೇ, ಸೆಂಥಿಲ್ ಕುಮಾರ್, ಅನೀಶ್ ಡಿ ಶೆಟ್ಟಿ ಮತ್ತು ಆಲ್ವಿನ್ ಕ್ಸೇವಿಯರ್ ಪ್ರಮುಖ ಚಾಲಕರಾಗಿದ್ದಾರೆ.
JK Tyre Novice Cup ಗೋ-ಕಾರ್ಟಿಂಗ್ನಿಂದ ಫಾರ್ಮುಲಾ ರೇಸಿಂಗ್ಗೆ ಪ್ರವೇಶಿಸುವ ಹೊಸ ಚಾಲಕರಿಗೆ ಅವಕಾಶ ನೀಡಲಿದೆ. ಈ ವಿಭಾಗದಲ್ಲಿ ಎರಡು ರೇಸ್ಗಳು ನಡೆಯಲಿವೆ.
Super Saloon ವಿಭಾಗದಲ್ಲಿ ವಿವಿಧ ರೀತಿಯ ರೇಸಿಂಗ್ ಕಾರುಗಳು ಸ್ಪರ್ಧಿಸಲಿವೆ. ಇಲ್ಲಿ ಚಾಲಕರು ತಮ್ಮ ಕಾರ್ ಕಂಟ್ರೋಲ್, ತಿರುವುಗಳಲ್ಲಿ ಕಾರನ್ನು ನಿಭಾಯಿಸುವುದು ಮತ್ತು ಇತರ ಕಾರುಗಳನ್ನು ಹಿಂದಿಕ್ಕುವ ಕೌಶಲವನ್ನು ಪ್ರದರ್ಶಿಸಲಿದ್ದಾರೆ. ಈ ವಿಭಾಗದಲ್ಲೂ ಎರಡು ರೇಸ್ಗಳು ನಡೆಯಲಿವೆ.
ITC ಮತ್ತು ISTC ವಿಭಾಗಗಳಲ್ಲಿ ಸರ್ಕ್ಯೂಟ್ ರೇಸಿಂಗ್ಗೆ ಸಿದ್ಧಪಡಿಸಲಾದ ಕಾರುಗಳು ಸ್ಪರ್ಧಿಸಲಿವೆ. ಹೆಚ್ಚಿನ ವೇಗ ಮತ್ತು ಉತ್ತಮ ಚಾಲನಾ ಕೌಶಲಕ್ಕೆ ಇಲ್ಲಿ ಆದ್ಯತೆ ಇರಲಿದೆ. ಈ ವಿಭಾಗದಲ್ಲಿ ಎರಡು ರೇಸ್ಗಳು ನಡೆಯಲಿವೆ.
ಭಾರತದ ಏಕೈಕ ಸಿಂಗಲ್-ಮೇಕ್ ರೇಸಿಂಗ್ ಚಾಂಪಿಯನ್ಶಿಪ್ ಆಗಿರುವ JK Tyre Levitas Cup ಈ ಬಾರಿ ಎರಡನೇ ಆವೃತ್ತಿಗೆ ಕಾಲಿಡುತ್ತಿದೆ. ಈ ವಿಭಾಗದಲ್ಲಿ ರೇಸಿಂಗ್ಗೆ ಸಿದ್ಧಪಡಿಸಲಾದ Maruti Suzuki Ignis ಕಾರುಗಳನ್ನು ಬಳಸಲಾಗುತ್ತದೆ. Rookie ಮತ್ತು Pro/Gentlemen ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಚಾಲಕರು ತಮ್ಮ ಕೌಶಲವನ್ನು ಪ್ರದರ್ಶಿಸಲು ಅವಕಾಶ ಸಿಗಲಿದೆ. ಈ ವಾರಾಂತ್ಯದಲ್ಲಿ ಎರಡು ರೇಸ್ಗಳು ನಡೆಯಲಿವೆ.
ಒಟ್ಟು ಆರು ಪ್ರಮುಖ ವಿಭಾಗಗಳು ಮತ್ತು 17 ರೇಸ್ಗಳೊಂದಿಗೆ ಈ ಚಾಂಪಿಯನ್ಶಿಪ್ ರೋಚಕ ಸ್ಪರ್ಧೆಗೆ ವೇದಿಕೆಯಾಗಲಿದೆ. ದೇಶದ ಪ್ರಮುಖ ಚಾಲಕರ ಜೊತೆಗೆ ಮಲೇಷ್ಯಾ ಮತ್ತು ಶ್ರೀಲಂಕಾದ ಅಂತಾರಾಷ್ಟ್ರೀಯ ಸ್ಪರ್ಧಿಗಳು ಹಾಗೂ ಭಾರತದ ಮಹಿಳಾ ರೇಸರ್ಗಳು ಭಾಗವಹಿಸಲಿದ್ದಾರೆ.
ಶನಿವಾರ ಬೆಳಗ್ಗೆ 10 ಗಂಟೆಯಿಂದ ಮತ್ತು ಭಾನುವಾರ ಬೆಳಗ್ಗೆ 9.45ರಿಂದ JK Tyre Motorsportನ Facebook ಮತ್ತು YouTube ಚಾನೆಲ್ಗಳಲ್ಲಿ ರೇಸ್ಗಳನ್ನು ವೀಕ್ಷಿಸಬಹುದು.





