ಮೇಕಪ್‌ನ ಸರಿಯಾದ ಟೆಕ್ನಿಕ್ಸ್ ಬಗ್ಗೆ ತಿಳಿದುಕೊಳ್ಳಿ. ನಟಿ ರೇಖಾರ ರಹಸ್ಯಮಯ ಸೌಂದರ್ಯ, ಶ್ರೀದೇವಿಯ ಮುಗ್ಧತೆ, ಮಾಧುರಿಯ ಮಾದಕತೆ, ಬಿಪಾಶಾರ ಜಾದೂ ಮತ್ತು ಕರಿಶ್ಮಾ ಹಾಗೂ ಮಲೈಕಾರ ಗ್ಲಾಮರಸ್ ಲುಕ್ಸ್ ಕಂಡು ವಯಸ್ಸು ಹೆಚ್ಚುತ್ತಿದ್ದರೂ ಇವರುಗಳ ಸೌಂದರ್ಯ ಇನ್ನೂ ಹೊಳೆಯುತ್ತಿದೆ ಎಂದು ತಿಳಿಯುತ್ತದೆ. `ಹುಂ, ಇದಂತೂ ಸರ್ಜರಿಯ ಚಮತ್ಕಾರ’ ಎನ್ನುವ ಮಾತು ಸತ್ಯವಾದರೂ ಪೂರ್ಣ ಸತ್ಯವಲ್ಲ. ಏಕೆಂದರೆ ಸೌಂದರ್ಯದ ಒಂದು ಪಾರ್ಶ್ವ ಸರ್ಜರಿಯಾಗಿದ್ದರೂ ಇನ್ನೊಂದು ಪಾರ್ಶ್ವ ಸರಿಯಾದ ಮೇಕಪ್, ಹೇರ್ ಸ್ಟೈಲ್ ಮತ್ತು ಡ್ರೆಸ್ ಸೆನ್ಸ್.
ನೀವು ಸರ್ಜರಿ ಇಲ್ಲದೆಯೂ ಸರಿಯಾದ ಮೇಕಪ್ ಟೆಕ್ನಿಕ್ ನಿಮ್ಮದಾಗಿಸಿಕೊಂಡು ಫ್ರೆಶ್, ಯಂಗ್ ಹಾಗೂ ಬ್ಯೂಟಿಫುಲ್ ಆಗಿ ಕಂಡುಬರಬಹುದು. ಅದಕ್ಕಾಗಿ ಯಾವ ವಿಷಯಗಳನ್ನು ಗಮನಿಸಬೇಕೆಂದು ತಿಳಿಯೋಣ ಬನ್ನಿ.
ರಾಂಗ್ ಮೇಕಪ್ ಹ್ಯಾಬಿಟ್ ಮೇಕಪ್‌ನ್ನು ಮುಖದ ಸೌಂದರ್ಯ ಹೆಚ್ಚಿಸಲೆಂದೇ ಮಾಡಲಾಗುತ್ತದೆ. ಆದರೆ ಹೆವಿ ಮೇಕಪ್ ಹಾಗೂ ತಪ್ಪು ಹೇರ್ ಕಟ್ ಮತ್ತು ಹೇರ್ ಸ್ಟೈಲ್ ನಿಂದಾಗಿ ನೀವು ನಿಮ್ಮ ವಯಸ್ಸಿಗಿಂತ ಹೆಚ್ಚಿನವರಂತೆ ಕಂಡುಬರುತ್ತೀರಿ. ಸರಿಯಾದ ಹೇರ್ ಕಟ್ ಮತ್ತು ಹೇರ್ ಸ್ಟೈಲ್ ಸರಿಯಾದ ಮೇಕಪ್‌ನಿಂದ ನಿಮ್ಮ ವಯಸ್ಸಿಗಿಂತ ಚಿಕ್ಕವರಾಗಿ, ಫ್ರೆಶ್, ಯಂಗ್ ಮತ್ತು ಗಾರ್ಜಿಯಸ್ ಆಗಿ ಕಾಣುತ್ತೀರಿ.
ಟಿಂಟೆಡ್ ಮಾಯಿಶ್ಚರೈಸರ್ ಉಪಯೋಗಿಸಿ
ಮೇಕಪ್‌ಗೆ ಮೊದಲು ಸಾಮಾನ್ಯವಾಗಿ ಎಲ್ಲರೂ ತಮ್ಮ ಮುಖ ಸ್ವಚ್ಛಗೊಳಿಸುತ್ತಾರೆ. ಆದರೆ ಮುಖವನ್ನು ಮಾಯಿಶ್ಚರೈಸರ್‌ಗೊಳಿಸಲು ಅಲಕ್ಷಿಸುತ್ತಾರೆ. ಕ್ಲೆನ್ಸಿಂಗ್ ಮತ್ತು ಟೋನಿಂಗ್ ನಂತರ ಮಾಯಿಶ್ಚರೈಸಿಂಗ್ ಬಹಳ ಅಗತ್ಯ. ಏಕೆಂದರೆ ಮೇಕಪ್ ಪ್ಯಾಚಿ ಆಗಿ ಕಾಣಬಾರದು. ಅದಕ್ಕೆ ಕೊಂಚ ಟಿಂಟೆಡ್ ಮಾಯಿಶ್ಚರೈಸರ್‌ನ್ನು ಕೈಗಳಿಂದ ಹಗುರವಾಗಿ ಮುಖಕ್ಕೆ ಕೆಳಗಿನಿಂದ ಮೇಲೆ ಬ್ಲೆಂಡ್ ಮಾಡಿ.
ಕನ್ಸೀಲ್ ಡಾರ್ಕ್ ಸರ್ಕಲ್ಸ್ ವಿತ್ ರೈಟ್ ಶೇಡ್ಸ್ : ವಯಸ್ಸಿನ ಜೊತೆ ಜೊತೆಗೆ ಮಾನಸಿಕ ಒತ್ತಡ, ನಿದ್ರೆಯ ಕೊರತೆ, ಆಹಾರ ಸೇವನೆಯ ಕ್ರಮ ಸರಿಯಿಲ್ಲದಿರುವುದು ಅಂದರೆ ಫಾಸ್ಟ್ ಫುಡ್, ಜಂಕ್ ಫುಡ್ ಸೇವನೆ, ಕೆಲಸದ ಒತ್ತಡದಿಂದಾಗಿ ಕಣ್ಣುಗಳ ಸುತ್ತಮುತ್ತ ಕಪ್ಪು ಕಲೆಯುಂಟಾಗಿ ನಿಮ್ಮನ್ನು ಹೆಚ್ಚು ವಯಸ್ಸಾದವರಂತೆ ಕಾಣಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಹೆಚ್ಚು ಗಾಢವಾದ ಬ್ಲೂ ಟೋನ್ ಸರ್ಕಲ್ ಗಳನ್ನು ಯೆಲ್ಲೋ ಮತ್ತು ಪೀಚ್ ಟಿಂಟೆಡ್ ಕನ್ಸೀಲರ್‌ನಿಂದ ಮತ್ತು ವೈಟ್ ಸರ್ಕಲ್ ಗಳನ್ನು ಸ್ಕಿನ್ ಟೋನ್‌ಗಿಂತ ವೈಟ್ ಶೇಡ್‌ನಿಂದ ಬ್ರಶ್ ಅಥವಾ ಬೆರಳಿನ ಗಂಟುಗಳ ಸಹಾಯದಿಂದ ಕನ್ಸೀಲ್ ಮಾಡಿ. ಹೆಚ್ಚು ಕವರೇಜ್‌ಗಾಗಿ ಹೆಚ್ಚು ಸಮಯದವರೆಗೆ ಅದರ ಪ್ರಭಾವ ಇರುವಂತೆ ಮಾಡಲು ಅದನ್ನು ಪೌಡರ್‌ನಿಂದ ಲಾಕ್ ಮಾಡಿ.
ಪ್ಲಂಪಿಂಗ್ ಲಿಪ್ಸ್
ತೆಳುವಾದ ಲಿಪ್ಸ್ ಹಾಗೂ ಸುತ್ತಮುತ್ತಲ ಲೂಸ್ ಸ್ಕಿನ್ ನಿಮ್ಮ ಹೆಚ್ಚುತ್ತಿರುವ ವಯಸ್ಸನ್ನು ಸಾರಿ ಹೇಳುತ್ತದೆ. ಮಹಿಳೆಯರು ಒಮ್ಮೊಮ್ಮೆ ಡಾರ್ಕ್ ಕಲರ್ ಲಿಪ್‌ಸ್ಟಿಕ್ ಅಥವಾ ಡಾರ್ಕ್ ಲಿಪ್ ಪೆನ್ಸಿಲ್‌ನಿಂದ ತಮ್ಮ ತುಟಿಗಳಿಗೆ ಶೇಪ್ ಕೊಟ್ಟು ಯುವತಿಯರಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಡಾರ್ಕ್ ಕಲರ್ ಉಪಯೋಗಿಸಿದರೆ ಇನ್ನಷ್ಟು ವಯಸ್ಸಾದವರಂತೆ ಕಾಣುತ್ತಾರೆ. ಏಕೆಂದರೆ ಆ ಶೇಡ್‌ನ್ನು ಉಪಯೋಗಿಸುವುದರಿಂದ ತೆಳುವಾದ ತುಟಿಗಳು ಇನ್ನೂ ಹೆಚ್ಚು ತೆಳುವಾಗಿ ಕಂಡು ಬಂದು ಪಾರ್ಟಿ ಇತ್ಯಾದಿಗಳಲ್ಲಿ ಊಟದ ನಂತರ ಲಿಪ್‌ಸ್ಟಿಕ್ ಸ್ಮಜ್ ಆಗುವುದರಿಂದ ಸುತ್ತಮುತ್ತಲ ಸ್ಕಿನ್ ವಿಕಾರವಾಗಿ ಕಂಡುಬರುತ್ತದೆ. ಲಿಪ್ಸ್ ಗೆ ಪ್ಲಂಪಿಂಗ್ ಎಫೆಕ್ಟ್ ಕೊಡಲು ಔಟರ್ ಲೈನಿಂಗ್ ಮಾಡಿ ಸುಂದರ ಆಕಾರ ಕೊಡಿ ಮತ್ತು ತುಟಿಗಳ ನಡುವೆ ಲಿಪ್‌ಗ್ಲಾಸ್‌ನ ಡಾಟ್ ಹಾಕಿ.
ಕ್ರೀಮೀ ಬ್ಲಶರ್
ವಯಸ್ಸನ್ನು ತಡೆಗಟ್ಟಲು ಕ್ರೀಮಿ ಬ್ಲಶರ್ ಉಪಯೋಗಿಸಿ. ಏಕೆಂದರೆ ಪೌಡರ್ ಬ್ಲಶರ್ ಉಪಯೋಗಿಸಿದರೆ ಫೈನಲ್ ಲೈನ್ಸ್ ಹಾಗೂ ರಿಂಕಲ್ಸ್ ಹೆಚ್ಚು ಕಂಡುಬರುತ್ತದೆ. ಸ್ಕಿನ್ ಟೋನ್ ಕೂಡ ಡಲ್ ಆಗಿರುತ್ತದೆ. ಆದ್ದರಿಂದ ನಿಮ್ಮ ಸ್ಕಿನ್ ಟೋನ್‌ಗೆ (ಲೈಟ್, ಮೀಡಿಯಂ ಮತ್ತು ಡಾರ್ಕ್) ಅನುಗುಣವಾಗಿ ಕ್ರೀಮಿ ಬ್ಲಶರ್ ಉಪಯೋಗಿಸಿ. ಅದು ನಿಮಗೆ ಹೆಚ್ಚು ನ್ಯಾಚುರಲ್ ಗ್ಲೋಯಿಂಗ್ ಚೀಕ್ಸ್ ಎಫೆಕ್ಟ್ ಕೊಡುತ್ತದೆ. ಅದೂ ಹೆವಿ ಲುಕ್ಸ್ ಇಲ್ಲದೆ.
ಆ್ಯಂಟಿ ಏಜಿಂಗ್ ಐ ಮೇಕಪ್
ಹೆಚ್ಚುತ್ತಿರುವ ವಯಸ್ಸಿನ ಪ್ರಭಾವ ಕಣ್ಣುಗಳು ಹಾಗೂ ಅದರ ಸುತ್ತಮುತ್ತಲ ತ್ವಚೆಯ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಹಾರ್ಮೋನ್‌ಗಳಲ್ಲಿ ಅಸಮತೋಲನದಿಂದ ಲ್ಯಾಶಸ್ ತೆಳುವಾಗುವುದು, ರಿಂಕಲ್ಸ್ ನಿಂದಾಗಿ ಐ ಬ್ರೋಸ್ ಸುತ್ತಿಕೊಳ್ಳುವುದು, ಡಾರ್ಕ್ ಸರ್ಕಲ್ಸ್ ಮತ್ತು ಕಣ್ಣುಗಳಲ್ಲಿ ಸುಕ್ಕು ಇತ್ಯಾದಿ ಉಂಟಾಗುತ್ತದೆ. ಅದಕ್ಕಾಗಿ ಹೀಗೆ ಮಾಡಿ :
ಐ ಬ್ರೋಸ್ ಶೇಪ್ : ಐ ಮೇಕಪ್‌ಗೆ ಮೊದಲು ಐ ಬ್ರೋಸ್‌ನ್ನು ಪಾಯಿಂಟ್ ಆರ್ಚ್ ಶೇಪ್ ಮಾಡಿಸಿ. ಸಾಧ್ಯವಾದಷ್ಟೂ ಐ ಬ್ರೋಸ್‌ನ ಶೇಪ್ ದಪ್ಪಗಿರಲಿ. ಅದರಿಂದ ನಿಮ್ಮ ವಯಸ್ಸು ಕಡಿಮೆ ಕಾಣುತ್ತದೆ.
ಐ ಬ್ರೋಸ್ ಮೇಕಪ್ : ಅದಕ್ಕೆ ಬ್ರೌನ್ ಕಲರ್‌ನ ಐ ಶೇಡ್ ಅಥವಾ ಪೆನ್ಸಿಲ್‌ನಿಂದ ಐ ಬ್ರೋಸ್‌ಗೆ ಶೇಪ್ ಕೊಡುತ್ತಾ ಟ್ರ್ಯಾನ್ಸ್ ಪರೆಂಟ್ ಮಸ್ಕರಾದಿಂದ ಐ ಬ್ರೋಸ್‌ನ್ನು ಅಗತ್ಯವಾಗಿ ಸೆಟ್ ಮಾಡಿ.
ಲ್ಯಾಶಸ್ ವರ್ಕ್ : ಕಣ್ಣುಗಳು ಎತ್ತಿದಂತೆ ಕಾಣಲು ಮತ್ತು ಯವತಿಯಂತೆ ಕಾಣಿಸಲು ಐ ಲ್ಯಾಶಸ್‌ನ್ನು ವರ್ಕ್ ಮಾಡುವುದು ಬಹಳ ಅಗತ್ಯ. ಏಕೆಂದರೆ ಸ್ವಲ್ಪ ಹೊತ್ತಿನ ನಂತರ ಐ ಲಿಡ್ ಸುತ್ತಿಕೊಳ್ಳುವುದು ಮತ್ತು ಲ್ಯಾಶಸ್ ಫ್ಲ್ಯಾಟ್ ಆಗಿ ಕಂಡುಬರುತ್ತದೆ. ಆದ್ದರಿಂದ ಹಸನ್ಮುಖಿಯಾಗಿ ಮತ್ತು ಯುವತಿಯಂತೆ ಕಾಣಲು 2 ಕೋಟ್ ಮಸ್ಕರಾ ಹಚ್ಚಿ (ಒಂದು ಒಣಗಿದ ನಂತರ ಇನ್ನೊಂದು ಹಾಕಿ) ಲ್ಯಾಶಸ್‌ನ್ನು ವರ್ಕ್ ಮಾಡಲು ಮರೆಯದಿರಿ. ಮಾರುಕಟ್ಟೆಯಲ್ಲಿ ವಾಲ್ಯುಮೈಸಿಂಗ್ ಮಸ್ಕರಾ ಲಭ್ಯವಿದೆ. ಉತ್ತಮ ರಿಸ್ಟ್‌ಗಾಗಿ ಅದನ್ನು ಅಪ್ಲೈ ಮಾಡಿ.
ಲೈಟ್ ಐ ಶೇಡ್ : ಐ ಲಿಡ್‌ನ ಇನ್ನರ್ ಕಾರ್ನರ್‌ನಲ್ಲಿ ಲೈಟ್ ಶಿಮರ್ ಐ ಶೇಡ್ ಉಪಯೋಗಿಸಿ. ನಿಮ್ಮ ಕಣ್ಣುಗಳನ್ನು ದೊಡ್ಡದಾಗಿ ಮತ್ತು ಎತ್ತಿದಂತೆ ಕಾಣಿಸಬಹುದು. ಔಟರ್ ಕಾರ್ನರ್‌ನಲ್ಲಿ ಮೀಡಿಯಂ ಡಾರ್ಕ್ ಶೇಡ್ ಉಪಯೋಗಿಸಿ ಮತ್ತು ಐ ಬ್ರೋ ಬೋನ್‌ನ್ನು ಲೈಟ್ ಶಿಮರ್‌ನಿಂದ ಹೈಲೈಟ್ ಮಾಡಿ. ಹೆವಿ ಗ್ಲಿಟರ್ ನಿಮಗೆ ಉಪಯುಕ್ತವಲ್ಲ. ಅದನ್ನು ಹಚ್ಚಬೇಡಿ. ಲೋಯರ್ ಲಿಡ್ ಮೇಲೆ ಲೈಟ್ ಬ್ರೌನ್ ಶೇಡ್ ಅಥವಾ ಪೆನ್ಸಿಲ್ ಉಪಯೋಗಿಸಿ.
ಪರ್ಫೆಕ್ಟ್ ಹೇರ್ ಕಟ್ ಮತ್ತು ಕಲರ್
ನಿಮ್ಮ ಹೇರ್ ಕಟ್ ಸಹ ನಿಮ್ಮನ್ನು ಯುವತಿ ಅಥವಾ ವೃದ್ಧರ ಶ್ರೇಣಿಯಲ್ಲಿ ನಿಲ್ಲಿಸುತ್ತದೆ. ಅದಕ್ಕಾಗಿ ಮಾಮೂಲಿ ಗಂಟು ಅಥವಾ ಜಡೆಯನ್ನು ಬಿಟ್ಟು ಬೇರೇನಾದರೂ ಹೊಸದನ್ನು ಟ್ರೈ ಮಾಡಿ. ಉದಾಹರಣೆಗೆ ರೊಟೀನ್ ಹೇರ್ ಸ್ಟೈಲ್ ಬಿಟ್ಟು ಒಂದು ಒಳ್ಳೆಯ ಹೇರ್ ಕಟ್ ಮಾಡಿಸಿ. ಇದು ನೀವು ಇನ್ನಷ್ಟು ಹೊಳೆಯಲು ಸಹಾಯ ಮಾಡುತ್ತದೆ.
ಹೇರ್ ಕಟ್‌ನಲ್ಲಿ ನೀವು ನಿಮ್ಮ ಸುಂದರ, ಉದ್ದವಾದ ಕೂದಲಿಗೆ ತಿಲಾಂಜಲಿ ಕೊಡಬೇಕೆಂದಿಲ್ಲ. ಉದ್ದನೆಯ ಕೂದಲಿನೊಂದಿಗೂ ನೀವು ಸುಂದರವಾದ ಹೇರ್ ಕಟ್ ಪಡೆಯಬಹುದು. ಪಿರಮಿಡ್ ಲೇಯರ್, ಫ್ಯೂಶನ್ ಮಲ್ಟಿಪಲ್ ಲೇಯರ್ಸ್, ಇನ್ನೋವೇಟಿವ್ ಫೆದರ್ಸ್ ಟಚ್ ಇತ್ಯಾದಿ.
ಇದಲ್ಲದೆ ಗ್ರೇ ಹೇರ್ ಮೆಹಂದಿ ಹಚ್ಚುವುದರಿಂದ ಅದು ನಿಮ್ಮ ವಯಸ್ಸನ್ನು ಅಡಗಿಸದೆ ಪ್ರಕಟಿಸುತ್ತದೆ. ಆದ್ದರಿಂದ ಮೆಹಂದಿಯ ಬದಲು ಹೇರ್ ಕಲರ್ ಮತ್ತು ಹೈಲೈಟರ್ ಉಪಯೋಗಿಸಿ. ಆಗ ನಿಮ್ಮ ಗಾರ್ಜಿಯಸ್ ಬ್ಯೂಟಿ ಲುಕ್ ಪಡೆಯಬಹುದು.
– ಸ್ಮಿತಾ ರಾವ್
ಗಮನಹರಿಸಬೇಕಾದ ವಿಷಯಗಳು
ಮೇಕಪ್ ಬೇಸ್ ಲೈಟ್ ಆಗಿರಲಿ. ಹೆವಿ ಮತ್ತು ಕೇಕಿ ಮೇಕಪ್ ಬೇಡ. ಪೌಡರ್ ಮೇಕಪ್ ಪ್ರಾಡಕ್ಟ್ ಬದಲು ಕ್ರೀಮಿ ಬೇಸ್ ಪ್ರಾಡಕ್ಟ್ ಆರಿಸಿಕೊಳ್ಳಿ.
ಬ್ರೈಟ್ ಶೇಡ್ಸ್ ಮತ್ತು ಥಿಕ್ ಗ್ಲಿಟರ್ ಹೆವಿ ಶಿಮರ್ ಉಪಯೋಗಿಸಬೇಡಿ. ಅದರ ಬದಲು ಲೈಟ್ ಮ್ಯೂಟ್ ಪೇಸ್ಟಲ್ ಶೇಡ್ ಅಪ್ಲೈ ಮಾಡಿ.
ಥಿಕ್ ಮತ್ತು ಲಿಕ್ವಿಡ್ ಐ ಲೈನರ್ ಬದಲು ಜೆಲ್ ಐ ಲೈನರ್ ಉತ್ತಮ.
ಲೋಯರ್ ಲ್ಯಾಶಸ್ ಮೇಲೆ ಬ್ಲ್ಯಾಕ್ ಮಸ್ಕರಾ ಬದಲು ಟ್ರ್ಯಾನ್ಸ್ ಪರೆಂಟ್ ಮಸ್ಕರಾ ಉಪಯೋಗಿಸಿದರೆ ಡಾರ್ಕ್ ಸರ್ಕಲ್ ಹೆಚ್ಚು ಕಾಣಿಸುವುದಿಲ್ಲ.
ಕ್ರೀಮಿ ಬ್ಲಶರ್‌ನ್ನು ತೆಳುವಾಗಿ ಹಚ್ಚಿ, ಸರಿಯಾಗಿ ಬ್ಲೆಂಡ್ ಮಾಡಿ. ಅದರಿಂದ ನ್ಯಾಚುರಲ್ ಲುಕ್ಸ್ ಸಿಗುತ್ತದೆ.
ಐ ಬ್ರೋಸ್ ಮೇಲೆ ಬ್ಲ್ಯಾಕ್ ಪೆನ್ಸಿಲ್ ಉಪಯೋಗಿಸಬೇಡಿ. ಐ ಬ್ರೋಸ್‌ನ್ನು ತೆಳುವಾಗಿಯೂ ಮಾಡಬೇಡಿ.
ಹಾರ್ಮೋನುಗಳ ಅಸಮತೋಲನದಿಂದಾಗಿ ಫೇಶಿಯಲ್ ಹೇರ್ ಗ್ರೋಥ್ ಹೆಚ್ಚಾಗಿದ್ದರೆ ಬ್ಲೀಚ್‌ಗಿಂತ ವ್ಯಾಕ್ಸಿಂಗ್ ಅಥವಾ ಎಲೆಕ್ಟ್ರಾಲಿಸಿಸ್ ಉತ್ತಮ.
ಮೇಕಪ್ ಮಾಡುವಾಗ ಅದು ನ್ಯಾಚುರಲ್ ಎಫೆಕ್ಟ್ ಕೊಡುವಂತೆ ಅದನ್ನು ಅಗತ್ಯವಾಗಿ ಬ್ಲೆಂಡ್ ಮಾಡಿ.
ಶೋಲ್ಡರ್ ಲೆಂತ್ ಹೇರ್ ಕಟ್ ಮೂಲಕ ನೀವು ಹೊಸ ಲುಕ್ಸ್ ಪಡೆಯಬಹುದು.
ಮೇಕಪ್ ಮತ್ತು ಹೇರ್ ಕಟ್‌ನೊಂದಿಗೆ ಡ್ರೆಸ್ ಸೆನ್ಸ್ ನ್ನೂ ಸರಿಯಾದ ವಿಧಾನದಲ್ಲಿ ನಿಮ್ಮದಾಗಿಸಿಕೊಂಡರೆ, ನೀವು ಹೆಚ್ಚು ಸುಂದರವಾಗಿ ಮತ್ತು ಫ್ರೆಶ್ ಆಗಿ ಕಂಡುಬರುತ್ತೀರಿ.