ಮೇಕಪ್‌ನ ಸರಿಯಾದ ಟೆಕ್ನಿಕ್ಸ್ ಬಗ್ಗೆ ತಿಳಿದುಕೊಳ್ಳಿ. ನಟಿ ರೇಖಾರ ರಹಸ್ಯಮಯ ಸೌಂದರ್ಯ, ಶ್ರೀದೇವಿಯ ಮುಗ್ಧತೆ, ಮಾಧುರಿಯ ಮಾದಕತೆ, ಬಿಪಾಶಾರ ಜಾದೂ ಮತ್ತು ಕರಿಶ್ಮಾ ಹಾಗೂ ಮಲೈಕಾರ ಗ್ಲಾಮರಸ್‌ ಲುಕ್ಸ್ ಕಂಡು ವಯಸ್ಸು ಹೆಚ್ಚುತ್ತಿದ್ದರೂ ಇವರುಗಳ ಸೌಂದರ್ಯ ಇನ್ನೂ ಹೊಳೆಯುತ್ತಿದೆ ಎಂದು ತಿಳಿಯುತ್ತದೆ. `ಹುಂ, ಇದಂತೂ ಸರ್ಜರಿಯ ಚಮತ್ಕಾರ' ಎನ್ನುವ ಮಾತು ಸತ್ಯವಾದರೂ ಪೂರ್ಣ ಸತ್ಯವಲ್ಲ. ಏಕೆಂದರೆ ಸೌಂದರ್ಯದ ಒಂದು ಪಾರ್ಶ್ವ ಸರ್ಜರಿಯಾಗಿದ್ದರೂ ಇನ್ನೊಂದು ಪಾರ್ಶ್ವ ಸರಿಯಾದ ಮೇಕಪ್‌, ಹೇರ್‌ ಸ್ಟೈಲ್ ಮತ್ತು ಡ್ರೆಸ್‌ ಸೆನ್ಸ್.

ನೀವು ಸರ್ಜರಿ ಇಲ್ಲದೆಯೂ ಸರಿಯಾದ ಮೇಕಪ್‌ ಟೆಕ್ನಿಕ್‌ ನಿಮ್ಮದಾಗಿಸಿಕೊಂಡು ಫ್ರೆಶ್‌, ಯಂಗ್‌ ಹಾಗೂ ಬ್ಯೂಟಿಫುಲ್ ಆಗಿ ಕಂಡುಬರಬಹುದು. ಅದಕ್ಕಾಗಿ ಯಾವ ವಿಷಯಗಳನ್ನು ಗಮನಿಸಬೇಕೆಂದು ತಿಳಿಯೋಣ ಬನ್ನಿ.

ರಾಂಗ್‌ ಮೇಕಪ್‌ ಹ್ಯಾಬಿಟ್‌ ಮೇಕಪ್‌ನ್ನು ಮುಖದ ಸೌಂದರ್ಯ ಹೆಚ್ಚಿಸಲೆಂದೇ ಮಾಡಲಾಗುತ್ತದೆ. ಆದರೆ ಹೆವಿ ಮೇಕಪ್‌ ಹಾಗೂ ತಪ್ಪು ಹೇರ್‌ ಕಟ್‌ ಮತ್ತು ಹೇರ್‌ ಸ್ಟೈಲ್ ನಿಂದಾಗಿ ನೀವು ನಿಮ್ಮ ವಯಸ್ಸಿಗಿಂತ ಹೆಚ್ಚಿನವರಂತೆ ಕಂಡುಬರುತ್ತೀರಿ. ಸರಿಯಾದ ಹೇರ್‌ ಕಟ್‌ ಮತ್ತು ಹೇರ್‌ ಸ್ಟೈಲ್ ಸರಿಯಾದ ಮೇಕಪ್‌ನಿಂದ ನಿಮ್ಮ ವಯಸ್ಸಿಗಿಂತ ಚಿಕ್ಕವರಾಗಿ, ಫ್ರೆಶ್‌, ಯಂಗ್‌ ಮತ್ತು ಗಾರ್ಜಿಯಸ್‌ ಆಗಿ ಕಾಣುತ್ತೀರಿ.

ಟಿಂಟೆಡ್‌ ಮಾಯಿಶ್ಚರೈಸರ್‌ ಉಪಯೋಗಿಸಿ

theBalm-theBalm-BalmShelter-Tinted-Moisturizer-SPF-18-1

ಮೇಕಪ್‌ಗೆ ಮೊದಲು ಸಾಮಾನ್ಯವಾಗಿ ಎಲ್ಲರೂ ತಮ್ಮ ಮುಖ ಸ್ವಚ್ಛಗೊಳಿಸುತ್ತಾರೆ. ಆದರೆ ಮುಖವನ್ನು ಮಾಯಿಶ್ಚರೈಸರ್‌ಗೊಳಿಸಲು ಅಲಕ್ಷಿಸುತ್ತಾರೆ. ಕ್ಲೆನ್ಸಿಂಗ್‌ ಮತ್ತು ಟೋನಿಂಗ್‌ ನಂತರ ಮಾಯಿಶ್ಚರೈಸಿಂಗ್‌ ಬಹಳ ಅಗತ್ಯ. ಏಕೆಂದರೆ ಮೇಕಪ್‌ ಪ್ಯಾಚಿ ಆಗಿ ಕಾಣಬಾರದು. ಅದಕ್ಕೆ ಕೊಂಚ ಟಿಂಟೆಡ್‌ ಮಾಯಿಶ್ಚರೈಸರ್‌ನ್ನು ಕೈಗಳಿಂದ ಹಗುರವಾಗಿ ಮುಖಕ್ಕೆ ಕೆಳಗಿನಿಂದ ಮೇಲೆ ಬ್ಲೆಂಡ್‌ ಮಾಡಿ.

ಕನ್ಸೀಲ್ ಡಾರ್ಕ್‌ ಸರ್ಕಲ್ಸ್ ವಿತ್‌ ರೈಟ್‌ ಶೇಡ್ಸ್ : ವಯಸ್ಸಿನ ಜೊತೆ ಜೊತೆಗೆ ಮಾನಸಿಕ ಒತ್ತಡ, ನಿದ್ರೆಯ ಕೊರತೆ, ಆಹಾರ ಸೇವನೆಯ ಕ್ರಮ ಸರಿಯಿಲ್ಲದಿರುವುದು ಅಂದರೆ ಫಾಸ್ಟ್ ಫುಡ್‌, ಜಂಕ್‌ ಫುಡ್‌ ಸೇವನೆ, ಕೆಲಸದ ಒತ್ತಡದಿಂದಾಗಿ ಕಣ್ಣುಗಳ ಸುತ್ತಮುತ್ತ ಕಪ್ಪು ಕಲೆಯುಂಟಾಗಿ ನಿಮ್ಮನ್ನು ಹೆಚ್ಚು ವಯಸ್ಸಾದವರಂತೆ ಕಾಣಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತವೆ. ಹೆಚ್ಚು ಗಾಢವಾದ ಬ್ಲೂ ಟೋನ್‌ ಸರ್ಕಲ್ ಗಳನ್ನು ಯೆಲ್ಲೋ ಮತ್ತು ಪೀಚ್‌ ಟಿಂಟೆಡ್‌ ಕನ್ಸೀಲರ್‌ನಿಂದ ಮತ್ತು ವೈಟ್‌ ಸರ್ಕಲ್ ಗಳನ್ನು ಸ್ಕಿನ್‌ ಟೋನ್‌ಗಿಂತ ವೈಟ್‌ ಶೇಡ್‌ನಿಂದ ಬ್ರಶ್‌ ಅಥವಾ ಬೆರಳಿನ ಗಂಟುಗಳ ಸಹಾಯದಿಂದ ಕನ್ಸೀಲ್ ‌ಮಾಡಿ. ಹೆಚ್ಚು ಕವರೇಜ್‌ಗಾಗಿ ಹೆಚ್ಚು ಸಮಯದವರೆಗೆ ಅದರ ಪ್ರಭಾವ ಇರುವಂತೆ ಮಾಡಲು ಅದನ್ನು ಪೌಡರ್‌ನಿಂದ ಲಾಕ್‌ ಮಾಡಿ.

ಪ್ಲಂಪಿಂಗ್‌ ಲಿಪ್ಸ್

plumping-lips-1

ತೆಳುವಾದ ಲಿಪ್ಸ್ ಹಾಗೂ ಸುತ್ತಮುತ್ತಲ ಲೂಸ್‌ ಸ್ಕಿನ್‌ ನಿಮ್ಮ ಹೆಚ್ಚುತ್ತಿರುವ ವಯಸ್ಸನ್ನು ಸಾರಿ ಹೇಳುತ್ತದೆ. ಮಹಿಳೆಯರು ಒಮ್ಮೊಮ್ಮೆ ಡಾರ್ಕ್‌ ಕಲರ್‌ ಲಿಪ್‌ಸ್ಟಿಕ್‌ ಅಥವಾ ಡಾರ್ಕ್‌ ಲಿಪ್‌ ಪೆನ್ಸಿಲ್‌ನಿಂದ ತಮ್ಮ ತುಟಿಗಳಿಗೆ ಶೇಪ್‌ ಕೊಟ್ಟು ಯುವತಿಯರಂತೆ ಕಾಣಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಡಾರ್ಕ್‌ ಕಲರ್‌ ಉಪಯೋಗಿಸಿದರೆ ಇನ್ನಷ್ಟು ವಯಸ್ಸಾದವರಂತೆ ಕಾಣುತ್ತಾರೆ. ಏಕೆಂದರೆ ಆ ಶೇಡ್‌ನ್ನು ಉಪಯೋಗಿಸುವುದರಿಂದ ತೆಳುವಾದ ತುಟಿಗಳು ಇನ್ನೂ ಹೆಚ್ಚು ತೆಳುವಾಗಿ ಕಂಡು ಬಂದು ಪಾರ್ಟಿ ಇತ್ಯಾದಿಗಳಲ್ಲಿ ಊಟದ ನಂತರ ಲಿಪ್‌ಸ್ಟಿಕ್‌ ಸ್ಮಜ್‌ ಆಗುವುದರಿಂದ ಸುತ್ತಮುತ್ತಲ ಸ್ಕಿನ್‌ ವಿಕಾರವಾಗಿ ಕಂಡುಬರುತ್ತದೆ. ಲಿಪ್ಸ್ ಗೆ ಪ್ಲಂಪಿಂಗ್‌ ಎಫೆಕ್ಟ್ ಕೊಡಲು ಔಟರ್‌ ಲೈನಿಂಗ್‌ ಮಾಡಿ ಸುಂದರ ಆಕಾರ ಕೊಡಿ ಮತ್ತು ತುಟಿಗಳ ನಡುವೆ ಲಿಪ್‌ಗ್ಲಾಸ್‌ನ ಡಾಟ್‌ ಹಾಕಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ