ಯಾರು ಬೇರೆ ಮಾಡುತ್ತಾರೋ ಅವರೇ ಕಂಟಕರು
`ಹರಿದು ಹಂಚಿಹೋದರೆ ನಾವು ಹಾಳಾಗುತ್ತೇವೆ' ಎಂಬ ಘೋಷಣೆ ಇದೀಗ ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಇಲ್ಲಿ ಯಾರು ಹಾಗೆ ಬೇರೆ ಮಾಡುತ್ತಿದ್ದಾರೋ ಅವರ ಬಗ್ಗೆ ಪ್ರಸ್ತಾಪವಿಲ್ಲ. ಹಾಗಾದರೆ ಯಾರನ್ನು ತಡೆಯಬೇಕು? ಇಲ್ಲಿ ಯಾವ ಜಾತಿಯ ಹೆಸರನ್ನೂ ಹೇಳುತ್ತಿಲ್ಲ. ಆದರೆ ಜಾತಿ ಆಧಾರಿತ ಜನಗಣತಿಗೆ ಹೆದರಿ ಅದರ ವಿರುದ್ಧವಾಗಿ ಇಂಥ ಮಾತು ಕೇಳಿಬರುತ್ತಿದೆ ಎಂಬುದಂತೂ ಗ್ಯಾರಂಟಿ. ಆಯಾ ಜಾತಿಗಳನ್ನು ಗುರುತಿಸಿ, ಎಣಿಕೆ ಮಾಡಿದ್ದೇ ಆದಲ್ಲಿ, ಈ ಜಾತಿಗಳನ್ನು ಹೊರಗಿನವರು ಕಂಟಕರಾಗಿ ಕಾಡುತ್ತಾರೆ, ಎಂದೇ ಹೆದರಿಸಲಾಗುತ್ತಿದೆ.
ಇಲ್ಲಿ ಏಳು ಮುಖ್ಯ ಪ್ರಶ್ನೆ, ಜಾತಿಗಳನ್ನು ಗುರುತಿಸುವವರು ಯಾರು? ಎಲ್ಲಿಂದ ಶುರುವಾಗುತ್ತದೆ? ಇಡೀ ದೇಶದಲ್ಲಿ ಜಾತಿಯ ಗುರುತು ಸಿಗುತ್ತಿದ್ದಂತೆ, ಇದಕ್ಕೆ ಬ್ರಾಹ್ಮಣರೇ ಹೊಣೆ. ಅವರ ಪ್ಲಾನಿಂಗ್ ಪ್ರಕಾರ ಎಲ್ಲರೂ ಅವರವರ ಸೀಮಿತ ಜಾತಿಯಲ್ಲೇ ಉಳಿಯತಕ್ಕದ್ದು.
ಹಳ್ಳಿಗಳಲ್ಲಂತೂ ಇದು 100% ಖರೇ! ಏಕೆಂದರೆ ಈಗಲೂ ಅಲ್ಲಿ ಸಮಾಜ 18ನೇ ಶತಮಾನದ ತರಹವೇ ಇದೆ. ಓದುಬರಹ, ನೆಹರೂ ತಂದ ಸಂವಿಧಾನ, ಆ ಕಾಲದ ಕಾನೂನು, ಪ್ರತಿಯೊಬ್ಬರಿಗೂ ಸಮಾನ ಮತದಾನದ ಅವಕಾಶ ಇದ್ದರೂ, ಪ್ರತಿ ಜಾಗದಲ್ಲೂ ಜನ ತಮ್ಮ ಹೆಸರಿನ ಹಿಂದೆ ತಮ್ಮದೇ ಜಾತಿ ಜೋಡಣೆ ಮಾಡಿಕೊಂಡು ಸುತ್ತುತ್ತಾರೆ. ಎದುರಿಗಿರುವವನ ಜಾತಿಯ ಬಗ್ಗೆ ಗೊತ್ತಾಗುವ ತನಕ, ಯಾರೂ ಮಾತನಾಡಲಿಕ್ಕೂ ರೆಡಿ ಇಲ್ಲ.
ಜಾತಿ ಹೆಸರಿನಲ್ಲಿ ಹಂಚಿ ಹೋಗುವುದು ಅಂದ್ರೆ ಇದೇ. ಯಾರಿಗೆ ಈ ರೀತಿ ಬೇರ್ಪಡಿಸುವಿಕೆ ಗೊತ್ತೋ, ಅವರು ಮುಖ ನೋಡುತ್ತಲೇ ಯಾರು ಯಾವ ಜಾತಿಯವರೆಂದು ಹೇಳಿಬಿಡುತ್ತಾರೆ. ಜೊತೆಗೆ ವ್ಯವಹರಿಸುವರು, ಅಕ್ಕಪಕ್ಕ ನೆಲೆಸಿರುವರು, ಸಹಪಾಠಿಗಳು ಅಥವಾ ಸಹೋದ್ಯೋಗಿಗಳು ತಮ್ಮ ಜಾತಿಯ ಬಗ್ಗೆ ಎಲ್ಲಿಯವರೆಗೆ ಹೇಳಿಕೊಳ್ಳುವುದಿಲ್ಲವೇ, ಇಂಥವರು ನೆಮ್ಮದಿಯಾಗಿ ಇರಲಾರರು. ಸಾಮಾನ್ಯವಾಗಿ ಜನ ತಮ್ಮ ತಂದೆಯ ಹೆಸರು, ಕೆಲಸ, ಪೂರ್ವಾಪರ, ವಾಸದ ಜಾಗಗಳ ಬಗ್ಗೆ ವಿವರ ಕೇಳುತ್ತಿರುತ್ತಾರೆ. ಆಗ ಯಾರಾದರೂ ತಮ್ಮ ಜಾತಿಯ ಬಗ್ಗೆ ಸಹಜವಾಗಿ ಹೇಳಿಕೊಳ್ಳದಿದ್ದರೆ, ಅವರು ಯಾವ ಜಾತಿ... ಯಾಕೆ ಅದನ್ನು ಹೇಳಿಕೊಳ್ಳುತ್ತಿಲ್ಲ ಎಂದು ಗುಸುಗುಟ್ಟುತ್ತಾರೆ.
ಇಂಥವರು ಪ್ರತಿ ಊರು, ಪ್ರತಿ ಜಾಗದಲ್ಲೂ ತುಂಬಿದ್ದಾರೆ. ಹಾಗಿರುವಾಗ ಕಂಟಕರ ಮಾತೇಕೆ ಇಲ್ಲಿ ಬೇಕು? ಅಂತಹವರೇ ಈ ರೀತಿ ದಿನಕ್ಕೆ 10 ಸಲ ಜಾತಿಯ ಬಗ್ಗೆ ಪ್ರಸ್ತಾಪ ಮಾಡುತ್ತಿರುತ್ತಾರೆ. `ಆರ್ಟಿಕಲ್ 15' ಚಿತ್ರದಲ್ಲಿ ಇಂಥ ಒಂದು ರೋಚಕ ಸನ್ನಿವೇಶವಿದೆ. ಇಲ್ಲಿ ಒಂದು ಪಾತ್ರ ನಾಯಕನನ್ನು ಬ್ರಾಹ್ಮಣನೆಂದೇನೋ ಹೇಳುತ್ತದೆ, ಆದರೆ ಅಲ್ಲೇ ಇರುವ ಇತರ 4 ಬ್ರಾಹ್ಮಣರ ಉಪಜಾತಿ ಬೇರೆ ಬೇರೆ, ಅದರಲ್ಲೂ ಮೇಲು ಕೀಳುಗಳಿವೆ ಎನ್ನುತ್ತಾ ಅವರನ್ನೂ ಬೇರೆ ಮಾಡುತ್ತದೆ. ಈ ಬ್ರಾಹ್ಮಣ ಪಾತ್ರಕ್ಕೆ ಶೂದ್ರ ಯಾವ ಅಸ್ಪೃಶ್ಯ ಹೆಣ್ಣಿನೊಂದಿಗೆ ಸಹವಾಸವಿದ್ದರೆ ಏನೂ ಪರವಾಗಿಲ್ಲ, ಆದರೆ ಅವಳು ಇಂಥವರ ಮನೆಯಲ್ಲಿ ಏನಾದರೂ ಮುಟ್ಟಿಬಿಟ್ಟರೆ ಆಪತ್ತು ತಪ್ಪಿದ್ದಲ್ಲ.
ಚುನಾವಣೆಗೆ ಮೊದಲು ಎಲ್ಲಾ ಪಕ್ಷಗಳೂ ಪ್ರತಿ ಜಾತಿಯವರ ಕುಲಗೋತ್ರ ವಿಚಾರಿಸಿ, ಆ ಆಧಾರದ ಮೇಲೆ ಟಿಕೆಟ್ ಹಂಚಲಾಗುತ್ತದೆ. ಇಲ್ಲಿ ಜಾತಿ ಎಷ್ಟು ಪ್ರಾಬಲ್ಯ ವಹಿಸುತ್ತದೆಂದರೆ, ರಾಷ್ಟ್ರಪತಿ ಹುದ್ದೆಗೇರಿದ ದಲಿತ ರಾಮನಾಥ್ ಕೋವಿಂದ್ ಹಾಗೂ ನಂತರ ದ್ರೌಪದಿ ಮುರ್ಮುರನ್ನು ಬಹಳಷ್ಟು ಕಾರ್ಯಕ್ರಮಗಳಿಗೆ ಆಹ್ವಾನಿಸಲೇ ಇಲ್ಲ. ಹೊಸ ಸಂಸತ್ತಿನ ಭವನದ ಗುದ್ದಲಿಪೂಜೆಯನ್ನು ರಾಮನಾಥರಿಂದ ಮಾಡಿಸಲಿಲ್ಲ, ಅದರ ಉದ್ಘಾಟನೆಯನ್ನು ದ್ರೌಪದಿಯವರಿಂದ ಮಾಡಿಸಲಿಲ್ಲ.





