ಪಟಾಕಿ ಹಚ್ಚುವುದನ್ನು ನೋಡುವುದು ಬಹಳ ಸುಂದರವಾಗಿ ಕಾಣುತ್ತದೆ. ಆದರೆ ಅದನ್ನು ಹಚ್ಚುವವರು ಹಾಗೂ ಅವರ ಆಸುಪಾಸು ಇರುವವರಿಗೆ ಅಪಾಯವೇನೂ ಕಡಿಮೆ ಇರುವುದಿಲ್ಲ. ಪ್ರತಿ ವರ್ಷ ಪಟಾಕಿಯಿಂದ ಗಾಯಗೊಂಡ ಸಾವಿರಾರು ಜನರು ಆಸ್ಪತ್ರೆಗೆ ಸೇರುವುದನ್ನು ಕೇಳುತ್ತೇವೆ. ಇದರಲ್ಲಿ 15 ವರ್ಷಕ್ಕಿಂತ ಕಡಿಮೆ ಇರುವ ಮಕ್ಕಳ ಸಂಖ್ಯೆಯೇ ಹೆಚ್ಚು. ಗೊತ್ತಿದ್ದೊ ಗೊತ್ತಿಲ್ಲದೆಯೋ ಸಂಭವಿಸುವ ಇಂತಹ ಘಟನೆಗಳಿಂದಾಗಿ ಹಬ್ಬಗಳ ಮಜವೇ ಕಿರಿಕಿರಿಯಾಗುತ್ತದೆ. ಒಮ್ಮೊಮ್ಮೆ ಈ ಘಟನೆಗಳು ಕಣ್ಣು ಕಳೆದುಕೊಳ್ಳುವಷ್ಟು ಮಟ್ಟಿಗೆ ಇಲ್ಲಿ ಜೀವಕ್ಕೆ ಅಪಾಯ ಕೂಡ ತಂದೊಡ್ಡಬಹುದು.

ಮಕ್ಕಳು ಪಟಾಕಿ ಹಚ್ಚುತ್ತಿದ್ದರೆ, ಪಾಲಕರು ಅವರ ಬಗ್ಗೆ ಗಮನಿಸುತ್ತಿರಬೇಕು. ಶಾಲೆಯಲ್ಲೂ ಕೂಡ ಮಕ್ಕಳಿಗೆ ಈ ಕುರಿತಂತೆ ಜಾಗೃತಿ ಮೂಡಿಸಬೇಕು.

ಇದರ ಹೊರತಾಗಿ ಅಷ್ಟಿಷ್ಟು ಗಮನಕೊಟ್ಟರೆ ಪಟಾಕಿಯಿಂದ ಗಾಯಗೊಳ್ಳುವ ಘಟನೆಗಳನ್ನು ಸಾಕಷ್ಟು ಮಟ್ಟಿಗೆ ತಡೆಯಬಹುದಾಗಿದೆ.

ಮಕ್ಕಳನ್ನು ಪಟಾಕಿಗಳ ಅಪಾಯದಿಂದ ತಪ್ಪಿಸಲು ನೀವು ಎಲ್ಲಕ್ಕೂ ಮುಂಚೆ ಮಾಡಬೇಕಾದುದು ಇಷ್ಟೆ, ನೀವು ಬ್ರ್ಯಾಂಡೆಡ್‌ಪಟಾಕಿಗಳನ್ನೇ ಖರೀದಿಸಿ. ಎರಡನೆಯದು, ಪಟಾಕಿ ಸುಡುವಾಗ ಎಚ್ಚರಿಕೆ ವಹಿಸುವುದು.

ಇದರ ಹೊರತಾಗಿಯೂ ಮನೆ ಅಥವಾ ಆಸುಪಾಸಿನಲ್ಲಿ ಪಟಾಕಿಯಿಂದ ಗಾಯಗೊಂಡರೆ ರೋಗಿಗೆ ತಕ್ಷಣವೇ ಚಿಕಿತ್ಸೆ ಕೊಡಬೇಕು. ಅದಕ್ಕಾಗಿ ಮನೆಯಲ್ಲಿ ಚಿಕಿತ್ಸಾ ಪೆಟ್ಟಿಗೆ ಅಂದರೆ ಫಸ್ಟ್ ಏಡ್‌ ಕಿಟ್‌ ಇಟ್ಟಿರಬೇಕು. ಅದರಲ್ಲಿ ಪ್ರಾಥಮಿಕ ಚಿಕಿತ್ಸೆಗಾಗಿ ಬೇಕಾಗುವ ಎಲ್ಲ ಸಲಕರಣೆಗಳೂ ಇರಲಿ.

ಯಾವುದೇ ರೀತಿಯಲ್ಲಿ ಗಾಯಗೊಂಡಾಗ ಪ್ರಾಥಮಿಕ ಚಿಕಿತ್ಸೆ ಎಲ್ಲಕ್ಕೂ ಮುಖ್ಯ. ಅದಕ್ಕಾಗಿ ಮನೆಯಲ್ಲಿ ಒಂದು ಒಳ್ಳೆಯ ಫಸ್ಟ್ ಏಡ್‌ ಕಿಟ್‌ ಹೊಂದಿರಬೇಕಾದುದು ಅಗತ್ಯ. ಇದರಿಂದ ಚಿಕ್ಕಪುಟ್ಟ ಗಾಯಗಳ ನಿರ್ವಹಣೆ ಸುಲಭ ಸಾಧ್ಯವಾಗುತ್ತದೆ. ಒಂದು ವೇಳೆ ಗಾಯ ಹೆಚ್ಚಾಗಿದ್ದಲ್ಲಿ ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ.

ಪ್ರಥಮ ಚಿಕಿತ್ಸೆ ಮುಂದಿನ ಚಿಕಿತ್ಸೆಯನ್ನು ಸುಲಭಗೊಳಿಸುತ್ತದೆ. ಏಕೆಂದರೆ ತಕ್ಷಣವೇ ಸೂಕ್ತ ಚಿಕಿತ್ಸೆ ದೊರೆತರೆ ರೋಗಿಯ ಸ್ಥಿತಿ ಬಿಗಡಾಯಿಸುವುದನ್ನು ತಪ್ಪಿಸಬಹುದು.

ನಿಮ್ಮ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಲ್ಲಿ ಏನೇನು ಇರಬೇಕು ಎನ್ನುವುದನ್ನು ತಿಳಿದುಕೊಳ್ಳಿ :

ಚಿಕ್ಕಪುಟ್ಟ ಗಾಯಾದಾಗ ಅಥವಾ ತರಚಿದಾಗ ರಕ್ತದ ಹರಿವು ತಡೆಯಲು ಸ್ಟೆರೈಲ್‌ಗಾರ್‌.

ಸೋಂಕನ್ನು ತಡೆಯಲು ಸ್ಟೆರೈಲ್ ಕ್ರೀಮ್.

ಸ್ಟೆರೈಲ್ ‌ಬ್ಯಾಂಡೇಜ್‌ ಇವು ಹಲವು ಸೈರ್‌ಗಳಲ್ಲಿ ಬರುತ್ತವೆ.

ಅಲರ್ಜಿ ಮತ್ತು ಹುಳ ಹುಪ್ಪಡಿಗಳು ಕಚ್ಚಿದಾಗ ಉಂಟಾಗುವ ತುರಿಕೆ ಮತ್ತು ತರಚು ಗಾಯದಿಂದ ನಿರಾಳತೆ ಪಡೆದುಕೊಳ್ಳಲು ಹೈಡ್ರೋ ಕಾರ್ಟಿಜನಲ್ ಕ್ರೀಮ್.

ಅನಾರೋಗ್ಯ ಪೀಡಿತರನ್ನು ಗುಣಪಡಿಸಲು ಡಿಸ್ಪೋಸೆಬಲ್ ಕೈಗವಸುಗಳು ಕೂಡ ನಿಮ್ಮ ಜೊತೆ ಇರಲಿ.

ಉರಿಯಿಂದ ರಕ್ಷಿಸಿಕೊಳ್ಳಲು ಕೋಲ್ಡ್ ಕಂಪ್ರೆಸ್‌.

ಪೇನ್‌ ಕಿಲ್ಲರ್‌ ಅಂದರೆ ನೋವು ನಿವಾರಕಗಳು.

ಆ್ಯಂಟಿ ಸೆಪ್ಟಿಕ್‌ ವೈಪ್ಸ್ ನ ಪ್ಯಾಕೆಟ್‌, ಅದರಿಂದ ಗಾಯಗೊಂಡ, ತರಚಿದ ಜಾಗವನ್ನು ಸ್ಪಚ್ಛಗೊಳಿಸಲು ಸಾಧ್ಯವಾಗುವಂತಿರಬೇಕು.

ರೋಲರ್‌ ಬ್ಯಾಂಡೇಜ್‌. ಅದರಿಂದ ಡ್ರೆಸ್ಸಿಂಗ್‌ನ್ನು ಸರಿಯಾಗಿ ಕಾಯ್ದುಕೊಂಡು ಹೋಗಲು ಸಾಧ್ಯವಾಗಬೇಕು.

ಬಟ್ಟೆಯ ಪಟ್ಟಿ ಕೂಡ ಇರಲಿ. ಅದರಿಂದ ಬ್ಯಾಂಡೇಜ್‌ ಅಥವಾ ಗಾರ್‌ನ್ನು ಸುರಕ್ಷಿತಗೊಳಿಸಲು ಅನುಕೂಲವಾಗುತ್ತದೆ.

ಓವರ್‌ ಥರ್ಮಾಮೀಟರ್‌, ಅದರಿಂದ ಜ್ವರದ ಪ್ರಮಾಣ ಅರಿಯಲು ಸಾಧ್ಯವಾಗುತ್ತದೆ.

ಡಯೇರಿಯಾಗಾಗಿ ಒಂದು ಬಗೆಯ ಓವರ್‌ ದಿ ಕೌಂಟರ್‌ ಔಷಧಿಯನ್ನು ಇಡಿ.

ನೀವು ನಿಮ್ಮ ಕಿಟ್‌ನ್ನು ಸುರಕ್ಷಿತ ಸ್ಥಳದಲ್ಲಿ ಮಕ್ಕಳ ಕೈಗೆ ಸಿಗದಂತೆ ಇಡಿ. ಬಹಳಷ್ಟು ಜನರು ತಮ್ಮ ಕಾರಿನಲ್ಲೂ ಒಂದು ಎಮರ್ಜೆನ್ಸಿ ಕಿಟ್‌ ಇಟ್ಟುಕೊಳ್ಳುತ್ತಾರೆ.

– ಡಾ. ಆಶಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ