ಹುಡುಗಿಯೇ ಆಗಿರಬಹುದು ಅಥವಾ ಹುಡುಗ, ಇಬ್ಬರಿಗೂ ಮದುವೆಯ ದಿನ ವಿಶೇಷವಾಗಿರುತ್ತದೆ. ಆ ದಿನದಂದು ಅವರಿಬ್ಬರೂ ತಾವು ಎಲ್ಲರಿಗಿಂತ ಸುಂದರವಾಗಿ ಕಾಣಲು ಇಚ್ಛಿಸುತ್ತಾರೆ. ತಮ್ಮ ವ್ಯಕ್ತಿತ್ವವನ್ನು ಆಕರ್ಷಕಗೊಳಿಸಲು ಯತ್ನಿಸುತ್ತಾರೆ. ಇಂದು ವೈದ್ಯ ವಿಜ್ಞಾನದಲ್ಲಿ ಅದೆಷ್ಟೊ ಚಿಕಿತ್ಸೆಗಳು ಲಭ್ಯ ಇವೆ, ಅವು ನಿಮ್ಮನ್ನು ಈಗಿರುವುದಕ್ಕಿಂತ ಅದೆಷ್ಟೋ ಪಟ್ಟು ಹೆಚ್ಚು ಸುಂದರವಾಗಿ ಕಾಣಲು ನೆರವಾಗುತ್ತವೆ. ಆದರೆ ಯಾವುದೇ ಒಂದು ಚಿಕಿತ್ಸೆ ಪಡೆಯುವುದಕ್ಕಿಂತ ಮುಂಚೆ ನಿಮ್ಮ ಬಳಿ ಮೊದಲು ಎಷ್ಟು ದಿನ ಸಮಯ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ನೀವು ಮದುವೆಗೂ 5-6 ತಿಂಗಳ ಪೂರ್ವದಲ್ಲಿಯೇ ಕೆಲವು ವಿಶೇಷ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳಬಹುದು.

ಇನ್‌ವೇಸಿವ್‌ ಸರ್ಜಿಕಲ್ ಟ್ರೀಟ್‌ ಮೆಂಟ್ಸ್

ಮದುವೆಗೂ ಕೆಲವು ತಿಂಗಳು ಮುಂಚೆ ನೀವು ಕೆಳಕಂಡ ಕೆಲವು ಟ್ರೀಟ್‌ ಮೆಂಟ್‌ಗಳ ಬಗ್ಗೆ ಯೋಚಿಸಬಹುದು. ಉದಾಹರಣೆಗೆ, ಮೂಗಿನ ಆಕಾರ ಬದಲಿಸಲು ರೈನೋಪ್ಲಾಸ್ಟಿ ಮಾಡಿಸಿಕೊಳ್ಳಬಹುದು. ಒಂದು ವೇಳೆ ಮೂಗು ದೊಡ್ಡದಾಗಿದ್ದರೆ ಅದನ್ನು ಚಿಕ್ಕದಾಗಿ ಮಾಡಬಹುದು. ಚಿಕ್ಕದಿದ್ದರೆ ದೊಡ್ಡದು ಮಾಡಬಹುದು. ಮೂಗು ಚಪ್ಪಟೆಯಾಗಿದ್ದರೆ ಅದನ್ನು ಚೂಪಾಗಿ ಮಾಡಬಹುದು.

ಅಂದಹಾಗೆ ಸುಂದರ ಶೇಪ್‌ ಬರಲು ಸುಮಾರು 3-4 ತಿಂಗಳ ಸಮಯ ತಗಲಬಹುದು. ಈ ತೆರನಾದ ಆಪರೇಶನ್‌ಗಳಿಗೆ 1 ರಿಂದ 2 ಗಂಟೆ ಸಮಯ ಬೇಕಾಗಬಹುದು. ಖರ್ಚು 35,000 ರೂ. ಗಳಿಂದ ಹಿಡಿದು 1 ಲಕ್ಷ ರೂ.ತನಕ ಆಗಬಹುದು.

ಬ್ರೆಸ್ಟ್ ಆಗ್ಮೆಂಟೇಶನ್

bridal-beauty

ಬಹಳಷ್ಟು ಮಹಿಳೆಯರ ತಕರಾರು ಏನೆಂದರೆ, ತಮ್ಮ ಸ್ತನಗಳ ಗಾತ್ರ ಚಿಕ್ಕದು ಅಥವಾ ಅವುಗಳ ಬೆಳವಣಿಗೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದಾಗಿರುತ್ತದೆ. ಈ ಸಮಸ್ಯೆಯಿಂದ ಮುಕ್ತಿ ಕಂಡುಕೊಳ್ಳಲು ಬ್ರೆಸ್ಟ್ ಆಗ್ಮೆಂಟೇಶನ್‌ ಮಾಡಿಸಿಕೊಳ್ಳಬಹುದು. ಅದಕ್ಕಾಗಿ ಸಿಲಿಕಾನ್‌ ಇಂಪ್ಲಾಂಟ್ಸ್ ಅಳವಡಿಸಿಕೊಳ್ಳಬಹುದು.

ಈ ಶಸ್ತ್ರಚಿಕಿತ್ಸೆಗೆ 2-3 ಗಂಟೆ ಸಮಯ ಸಾಕು. ಖರ್ಚು 1 ರಿಂದ 2 ಲಕ್ಷ ರೂ. ಆಗುತ್ತದೆ. ಕೆಲವು ತಿಂಗಳುಗಳ ತನಕ ಎಚ್ಚರಿಕೆ ವಹಿಸಬೇಕಾಗುತ್ತದೆ. ಅಂದಹಾಗೆ ಈ ಶಸ್ತ್ರಚಿಕಿತ್ಸೆಯನ್ನು ಮದುವೆಗೂ 6-7 ತಿಂಗಳುಗಳ ಮುಂಚೆಯೇ ಮಾಡಿಸಿಕೊಳ್ಳಬೇಕು.

ಕೆಲವು ಪುರುಷರಿಗೆ `ಗೈನಿಕೊಮಾಸ್ಟಿಯಾ’ ಸಮಸ್ಯೆ ಮುಜುಗರಕ್ಕೆ ಕಾರಣವಾಗುತ್ತದೆ. ಅಂಥವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದರ ಮೂಲಕ ನಿರಾಳತೆ ಪಡೆದುಕೊಳ್ಳಬಹುದು. ಲೋಕಲ್ ಅನಸ್ತೇಶಿಯಾದಿಂದ ಉಬ್ಬಿರುವ ಎದೆ ಭಾಗವನ್ನು ಕಡಿಮೆ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡಿದ ಬಳಿಕ ಕೆಲವು ದಿನಗಳ ಕಾಲ ಯಾವುದೇ ವ್ಯಾಯಾಮ ಮಾಡದಿರಲು ಸಲಹೆ ನೀಡಲಾಗುತ್ತದೆ. ಅದೇ ರೀತಿ ಚೀಕ್‌ ಬೋನ್ಸ್ ಗೆ ವಾಲ್ಯೂಮ್ ಕೊಡಲು ಚೀಕ್‌ ಆಗ್ಮೆಂಟೇಶನ್‌ ಮಾಡಿಸಬಹುದು. ಇದಕ್ಕೆ 25,000 ರೂ.ಗಳಿಂದ 1 ಲಕ್ಷ ರೂ.ತನಕ ಖರ್ಚು ಬರಬಹುದು. ಮದುವೆಗೂ 3-4 ತಿಂಗಳ ಮುಂಚೆ ಈ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು.

ತ್ವಚೆಗೆ ಸುಂದರ ರೂಪ

ತ್ವಚೆಗೆ ಮೆರುಗು ಕೊಡಲು ಡೀಪ್‌ ಮೆಡಿಕಲ್ ಸ್ಕಾರ್‌ ರಿಮೂವ್ ‌ಟ್ರೀಟ್‌ ಮೆಂಟ್‌ಗಳಾದ ಸರ್ಜಿಕಲ್ ಡರ್ಮಾಬ್ರೇಶನ್‌ ಮಾಡಿಸಲು ಸಲಹೆ ನೀಡಲಾಗುತ್ತದೆ. ಡರ್ಮಾಬ್ರೇಶನ್‌ ಮೃತ ಚರ್ಮದ ಪದರುಗಳನ್ನು ನಿವಾರಿಸುತ್ತದೆ. ಅದರಿಂದ ಮಗುವಿನಂತಹ ಕೋಮಲ ತ್ವಚೆ ಮತ್ತು ಕಲೆರಹಿತ ಕಾಂತಿಯುತ ಚರ್ಮ ನಿಮ್ಮದಾಗುತ್ತದೆ. ತ್ವಚೆಯ ಪಸರಿಸುವ ಕಾರಣದಿಂದಾಗಿ ಸ್ಟ್ರೆಚ್‌ ಮಾರ್ಕ್ಸ್ ನ ಸಮಸ್ಯೆಯನ್ನು ಸರ್ಜಿಕಲ್ ಡರ್ಮಾಬ್ರೇಶನ್‌ನ ನೆರವಿನಿಂದ ನೀಗಿಸಬಹುದು.

ನೀವು ನಿಮ್ಮ ಯಾವುದಾದರೂ ಟ್ಯಾಟೂವನ್ನು ನಿವಾರಿಸಬೇಕೆಂದಿದ್ದರೆ, ಈ ಪ್ರಕ್ರಿಯೆಯನ್ನು 3 ತಿಂಗಳ ಮುಂಚೆಯೇ ಮಾಡಿಸಿಕೊಳ್ಳಬೇಕು. ಮದುವೆಯ ತನಕ ತ್ವಚೆಗೆ ನೈಸರ್ಗಿಕ ಬಣ್ಣ ಬರುತ್ತದೆ. ಈ ಟ್ರೀಟ್‌ ಮೆಂಟ್‌ಗೆ ಒಂದು ಸಲಕ್ಕೆ 70-80 ಸಾವಿರ ರೂ. ಖರ್ಚು ಬರುತ್ತದೆ.

ಲೇಸರ್‌ ಮುಖಾಂತರ ಕಲೆಗಳಿಗೆ ಚಿಕಿತ್ಸೆ

ಮೊಡವೆ ಕಲೆಗಳನ್ನು ನಿವಾರಿಸಲು ತ್ವಚೆಯ ಊತಕಗಳಲ್ಲಿ ಸುಧಾರಣೆ ತರಲು ಲೇಸರ್‌ ಪ್ರಕ್ರಿಯೆ ಇಂದು ಸಾಕಷ್ಟು ಜನಪ್ರಿಯವಾಗುತ್ತಿದೆ. ಲೇಸರ್‌ ಪ್ರಕ್ರಿಯೆ ನಿರಂತರವಾಗಿ ಅಭಿವೃದ್ಧಿ ಹೊಂದುತ್ತವೇ ಇದೆ. ಗಾಢ ವರ್ಣ ಹಾಗೂ ಸಂವೇದನಾಶೀಲ ತ್ವಚೆಯ ಸಮಸ್ಯೆಗಳ ಚಿಕಿತ್ಸೆಗೆ ಜನಪ್ರಿಯ ಪರ್ಯಾಯವಾಗಿದೆ. ಅಡ್ಡ ಪರಿಣಾಮಗಳು ಕೂಡ ಅಷ್ಟಾಗಿ ಗೋಚರಿಸುವುದಿಲ್ಲ. ಈ ಚಿಕಿತ್ಸೆಯ ನೆರವಿನಿಂದ ಮೊಡವೆಯ ಕಲೆಗಳು ನಿವಾರಣೆಯಾಗುತ್ತವೆ ಹಾಗೂ ತ್ವಚೆಯ ಬಣ್ಣ ಅಸಮಾನವಾಗಿರುವುದು ಏಕರೂಪವಾಗುತ್ತದೆ.

ಈ ಚಿಕಿತ್ಸೆಯನ್ನು ಮದುವೆಗೆ 3-4 ತಿಂಗಳ ಮುಂಚೆಯೇ ಮಾಡಿಸಿಕೊಳ್ಳಬೇಕು. ಪರಿಪೂರ್ಣ ಲಾಭಕ್ಕಾಗಿ 6-7 ಸಿಟ್ಟಿಂಗ್ಸ್ ತೆಗೆದುಕೊಳ್ಳಬೇಕು. 45-50 ನಿಮಿಷಗಳ ಒಂದು ಸಿಟಿಂಗ್ಸ್ ಗೆ 5-15 ಸಾವಿರ ರೂ. ಖರ್ಚು ಬರುತ್ತದೆ. ಮೊದಲ ಸಿಟ್ಟಿಂಗ್‌ನ 2 ವಾರಗಳ ಬಳಿಕ 2ನೇ ಸಿಟ್ಟಿಂಗ್‌ ತೆಗೆದುಕೊಳ್ಳಬೇಕು. ಡೀಪ್‌ ಮತ್ತು ಮೀಡಿಯಂ ಗ್ರೇಡ್‌ನ ಮೆಡಿಕಲ್ ಪೀಲ್ ‌ಪಿಗ್ಮೆಂಟೇಶನ್‌ನ ಸಮಸ್ಯೆಗಾಗಿ ಒಂದು ಉತ್ತಮ ಪರ್ಯಾಯ ಸೆಲ್ಯುಲೈಟ್‌ ಟ್ರೀಟ್‌ಮೆಂಟ್ಸ್, ಅಂದರೆ ಜಿಎಕ್ಸ್ 99 ಹಾಗೂ ಮೀರೋಥೆರಪಿ ನಿಮ್ಮ ತ್ವಚೆಯನ್ನು ಮೃದು ಹಾಗೂ ಆರೋಗ್ಯಕರವಾಗಿಸುತ್ತದೆ.

ಬೇಡವಾದ ಕೂದಲಿನಿಂದ ಮುಕ್ತಿ

dreamstime_l_185787991

ಲೇಸರ್‌ ಮುಖಾಂತರ ಬೇಡದ ಕೂದಲಿಗೆ ಖಾಯಂ ಮುಕ್ತಿ ಕೊಡಬಹುದು. ಲೇಸರ್‌ ಮುಖಾಂತರ ಬೆಳಕಿನ ಅತಿ ತೀಕ್ಷ್ಣ ಕಿರಣಗಳನ್ನು ದೇಹದ ಕೂದಲಿರುವ ಭಾಗದ ಮೇಲೆ ಬಿಡಲಾಗುತ್ತದೆ. ಅದು ಕೂದಲಿನ ಬುಡಭಾಗ ಅಂದರೆ ಫಾಲಿಕ್‌ನ್ನು ಹೀರಿಕೊಳ್ಳುತ್ತದೆ. ಆ ಬಳಿಕ ಕೂದಲು ಬೆಳೆಯುವ ಅದರ ಸಾಮರ್ಥ್ಯವೇ ಹೊರಟುಹೋಗುತ್ತದೆ. ಅಕ್ಕಪಕ್ಕದ ತ್ವಚೆಗೆ ಯಾವುದೇ ಹಾನಿ ಉಂಟಾಗದಿರಲು ಕೂಲಿಂಗ್‌ ಡಿವೈಸ್‌ನ್ನು ಉಪಯೋಗಿಸಲಾಗುತ್ತದೆ.

ಎಲೆಕ್ಟ್ರಾಲಿಸಿಸ್‌ಗಿಂತ ಲೇಸರ್‌ನ ಒಂದು ಉಪಯೋಗವೆಂದರೆ ಇದು ಬಹುದೊಡ್ಡ ಭಾಗವನ್ನು ಸ್ಕ್ಯಾನ್‌ ಮಾಡಬಹುದು. ಹೀಗಾಗಿ ಹೆಚ್ಚು ಸಿಟ್ಟಿಂಗ್ಸ್ ನ ಅವಶ್ಯಕತೆ ಉಂಟಾಗುವುದಿಲ್ಲ.

ಕಪ್ಪು ವರ್ತುಲಗಳಿಗೆ ಚಿಕಿತ್ಸೆ

Photofacial

ಕಾರ್ಬಾಕ್ಸಿ ಥೆರಪಿ ಸೆಷನ್‌ : ನೀವು ನಿಮ್ಮ ಕಣ್ಣಿನ ಕೆಳಭಾಗದಲ್ಲಿ ಕಪ್ಪು ವರ್ತುಲಗಳ ಸಮಸ್ಯೆಯಿಂದ ಬಳಲುತ್ತಿದ್ದರೆ, ಮದುವೆಗೂ ಮುಂಚೆ ಅವನ್ನು ನಿವಾರಿಸಿಕೊಳ್ಳಿ. ಅದಕ್ಕಾಗಿ ಕಾರ್ಬೊಕ್ಸಿ ಥೆರಪಿಗಿಂತ ಒಳ್ಳೆಯ ಉಪಾಯ ಮತ್ತೊಂದಿಲ್ಲ. ಈ ಚಿಕಿತ್ಸೆಯನ್ವಯ ಸ್ಕಿನ್‌ ಸರ್ಫೇಸ್‌ನ ಕೆಳಭಾಗದಲ್ಲಿ ಇಂಜೆಕ್ಷನ್‌ ಮುಖಾಂತರ ಕಾರ್ಬನ್‌ ಡೈ ಆಕ್ಸೈಡ್‌ ಗ್ಯಾಸ್‌ ಇಂಜೆಕ್ಟ್ ಮಾಡಲಾಗುತ್ತದೆ. ಅದರಿಂದ ರಕ್ತದ ಹರಿವು ಹೆಚ್ಚುತ್ತದೆ. ಕೊಲೋಜನ್‌ ತ್ವಚೆಯ ಬಣ್ಣವನ್ನು ಗೌರವರ್ಣವಾಗಿ ಪರಿವರ್ತಿಸುತ್ತದೆ.

ಈ ರೀತಿಯಾಗಿ ನೋವಿಲ್ಲದೆ, ಯಾವುದೇ ಅಪಾಯವಿಲ್ಲದೆ ಕೇವಲ 5-10 ನಿಮಿಷಗಳಲ್ಲಿ ಈ ಪ್ರಕ್ರಿಯೆ ಮುಗಿಯುತ್ತದೆ. ವಾರ ಬಿಟ್ಟು ವಾರ 6-7 ಸಿಟ್ಟಿಂಗ್ಸ್ ತೆಗೆದುಕೊಳ್ಳಬೇಕಾಗುತ್ತದೆ ಕಾರ್ಬಾಕ್ಸಿ ಥೆರಪಿಯ ಮುಖಾಂತರ ಕಣ್ಣಿನ ಕೆಳಭಾಗದ ಕಪ್ಪು ವರ್ತುಲಗಳು, ಏಕಸಮಾನವಾಗಿ ಕಾಣಿಸದಿರುವುದು, ಸ್ಟ್ರೆಚ್‌ ಮಾರ್ಕ್ಸ್ ಮುಂತಾದ ಸಮಸ್ಯೆಗಳನ್ನು ನಿವಾರಿಸಬಹುದು. ಒಂದು ಸಿಟ್ಟಿಂಗ್‌ಗೆ 3,000 ರೂ. ನಂತೆ ಖರ್ಚು ಬರುತ್ತದೆ. ನೀವು ಕೆಮಿಕಲ್ ಪೀಲಿಂಗ್‌ನ ಜೊತೆಗೆ ಈ ಚಿಕಿತ್ಸೆಯನ್ನು ಪಡೆದರೆ ಪ್ರತಿ ಸಿಟ್ಟಿಂಗ್‌ಗೆ 5,000 ರೂ. ಖರ್ಚಾಗಬಹುದು.

ಲೈಪೋಸಕ್ಷನ್

ಹೊಟ್ಟೆಯ ಕೊಬ್ಬು ಕರಗಿಸಲು ಲೈಪೊಸಕ್ಷನ್‌ನ ನೆರವು ಪಡೆದುಕೊಳ್ಳಲಾಗುತ್ತದೆ. ಇದರ ನೆರವಿನಿಂದ ಫ್ಯಾಟ್‌ ನಿವಾರಿಸಿ ದೇಹಕ್ಕೆ ಒಳ್ಳೆಯ ಆಕಾರ ಕೊಡಬಹುದು. ಇದಕ್ಕೆ 30,000 ರೂ.ಗಳಿಂದ ಹಿಡಿದು ಒಂದೂವರೆ ಲಕ್ಷ ರೂ. ಖರ್ಚು ಬರಬಹುದು. ಪ್ರತಿಯೊಂದು ಸಿಟ್ಟಿಂಗ್‌ಗೆ 1 ಗಂಟೆಯಿಂದ 2 ಗಂಟೆ ಸಮಯ ಬೇಕಾಗುತ್ತದೆ.

ನೀವು ನಿಮ್ಮ ತುಟಿ ಅಥವಾ ಚೀಕ್ಸ್ ಗೆ ವಾಲ್ಯೂಮ್ ಕೊಡಲು ಇಚ್ಛಿಸಿದರೆ ಅದಕ್ಕಾಗಿ ಸೇಫ್‌ ಫಿಲರ್ಸ್‌ ಇವೆ. ಅದಕ್ಕೆ ಯುಎಸ್‌ಎಫ್‌ಡಿಎ ಮುಖಾಂತರ ಮಾನ್ಯತೆ ಕೂಡ ಇದೆ. ಇದು ಔಟ್‌ ಪೇಶಂಟ್‌ ಪ್ರಕ್ರಿಯೆಯಾಗಿದ್ದು, ಒಂದು ಗಂಟೆ ಸಮಯ ತಗುಲುತ್ತದೆ.

ಕೆನ್ನೆಯ ಮೇಲೆ ಡಿಂಪಲ್ಸ್

lasermoleremoval

ಡಿಂಪಲ್ಸ್ ನಿಂದ ಮುಖದ ಸೌಂದರ್ಯ ಹೆಚ್ಚುತ್ತದೆ. ನೀವು ಕೂಡ ಅದನ್ನು ಅನುಸರಿಸಬಹುದು. ಅದಕ್ಕಾಗಿ ನುರಿತ ತಜ್ಞರ ಸಹಾಯದಿಂದ `ಡಿಂಪಲ್ ಪ್ಲಾಸ್ಟಿ’ ಮಾಡಿಸಿಕೊಳ್ಳಬಹುದು. ಇದು ಒಂದು ಸಾಧಾರಣ ಹಾಗೂ ಸುರಕ್ಷಿತ ಶಸ್ತ್ರಚಿಕಿತ್ಸೆಯಾಗಿದೆ. ಅದರ ಮುಖಾಂತರ ನಿಮ್ಮ ಕೆನ್ನೆಯ ಮೇಲೆ ಡಿಂಪಲ್ಸ್ ಮೂಡಿಸಿಕೊಳ್ಳಬಹುದು.

ಡಿಂಪಲ್ಸ್ ಸರ್ಜರಿ ಎಂತಹ ತಂತ್ರಜ್ಞಾನವೆಂದರೆ, ಅದರ ಮುಖಾಂತರ ಅತ್ಯಂತ ಸುರಕ್ಷಿತ ರೀತಿಯಲ್ಲಿ ವ್ಯಕ್ತಿಯೊಬ್ಬನ ಮುಖದಲ್ಲಿ ಡಿಂಪಲ್ಸ್ ಬರುವಂತೆ ಮಾಡಲಾಗುತ್ತದೆ. ಅದು ನೈಸರ್ಗಿಕ ಡಿಂಪಲ್ಸ್ ನಂತೆಯೇ ಇರುತ್ತದೆ.

– ಗಿರಿಜಾ ಶಂಕರ್‌

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ