ವಯಸ್ಸು ಹೆಚ್ಚಾಗುತ್ತಿದ್ದಂತೆ ತ್ವಚೆಯ ಬಿಗಿ ಕಡಿಮೆಯಾಗುತ್ತಾ ಹೋಗುತ್ತದೆ. ಜೊತೆಗೆ ಅದರ ಕೊರತೆಗಳೆಲ್ಲಾ ಕಣ್ಣಿಗೆ ಬೀಳುವಂತಾಗುತ್ತವೆ. ಆದರೆ ಸರಿಯಾದ ಮೇಕಪ್‌ನಿಂದ ನಿಮ್ಮ ತ್ವಚೆಯ ಕುಂದು ಕೊರತೆಗಳನ್ನು ದೂರ ಮಾಡಲು, ಆಯಾಸ ಪರಿಹರಿಸಲು ಮತ್ತು ತ್ವಚೆಯ ಬಣ್ಣವನ್ನು ಹಿಂತಿರುಗಿಸುವ ಜೊತೆ ಜೊತೆಗೆ ನಿಮ್ಮ ಬಣ್ಣ ಮತ್ತು ರೂಪದಲ್ಲಿ ಕಾಂತಿ ತರಬಹುದು.

ಅದಕ್ಕೆ, ಎಲ್ಲಕ್ಕೂ ಮೊದಲು ತೆಳುವಾದ ಕವರೇಜ್‌ ಫೌಂಡೇಶನ್‌ ಆರಿಸಿ. ಅದು ನಿಮ್ಮ ತ್ವಚೆಯ ಟೋನ್‌ಗೆ ಮ್ಯಾಚ್‌ ಆಗಬೇಕು ಮತ್ತು ನಿಮ್ಮ ಮುಖದ ಮೇಲಿನ ಡಾರ್ಕ್‌ ಸ್ಪಾಟ್‌ಗಳನ್ನು ಅಡಗಿಸುವಂತಿರಬೇಕು. ನಿಮ್ಮ ಇಡೀ ಮುಖದ ಮೇಲೆ ಮೇಕಪ್‌ ಹಚ್ಚಿ. ಆದರೆ ಜಾ ಲೈನ್‌ ಮತ್ತು ಗದ್ದದ ಬಳಿ ತೆಳುವಾದ ಮೇಕಪ್‌ ಮಾಡಿ. ಏಕೆಂದರೆ ಇದರ ಬಣ್ಣ ನಿಮ್ಮ ಕುತ್ತಿಗೆಯ ಬಣ್ಣಕ್ಕಿಂತ ಭಿನ್ನವಾಗಿ ಕಾಣಿಸಬಾರದು.

ಮುಖದ ಮೇಲೆ ಎಲ್ಲಿಯಾದರೂ ಭಿನ್ನವಾಗಿ ಕಾಣುವಂತಹ ಮೇಕಪ್‌ನ್ನು ತೆಳುವಾಗಿ ಮಾಡಲು ಒಳ್ಳೆಯ ವಿಧಾನ ಸ್ಪಂಜ್‌.

ಮೇಕಪ್‌ ಹೆಚ್ಚು ಹೊತ್ತು ಅಂಟಿಕೊಂಡಿರಲು ಟ್ರ್ಯಾನ್ಸ್ ಲೂಸೆಂಟ್‌ ಪೌಡರ್‌ ಹಚ್ಚಿ. ಅದನ್ನು ಹಚ್ಚಿದ ಕೂಡಲೇ ನಿಮ್ಮ ವಯಸ್ಸು 10 ವರ್ಷ ಕಡಿಮೆ ಆದಂತೆ ಅನ್ನಿಸುತ್ತದೆ. ಆದರೆ ಇದನ್ನು ಕಡಿಮೆ ಪ್ರಮಾಣದಲ್ಲಿ ಹಚ್ಚಿ. ಇಲ್ಲದಿದ್ದರೆ ವಯಸ್ಸು ಹೆಚ್ಚಾಗುತ್ತಿದ್ದಂತೆ ತ್ವಚೆಯಲ್ಲಿ ಶುಷ್ಕತನ ಹೆಚ್ಚಾಗುತ್ತದೆ. ಚಳಿಗಾಲದಲ್ಲಿ ಶುಷ್ಕ ತ್ವಚೆಯ ಮೇಲೆ ಹೆಚ್ಚು ಪೌಡರ್‌ ಹಾಕುವುದರಿಂದ ಮುಖದಲ್ಲಿ ನೆರಿಗೆಗಳು ಕಾಣುತ್ತವೆ.

ಗ್ಲೋಯಿಂಗ್‌ ಸ್ಕಿನ್‌ ಪಡೆಯಿರಿ

40ನೇ ವಯಸ್ಸಿಗೆ ಬಂದಾಗ ತ್ವಚೆ ತನ್ನ ಬಣ್ಣ ಕಳೆದುಕೊಳ್ಳುತ್ತದೆ ಮತ್ತು ಗ್ಲೋಯಿಂಗ್‌ ಸ್ಕಿನ್‌ ಇಲ್ಲದಿದ್ದಾಗ ನಿಮಗೆ ಒತ್ತಡ ಉಂಟಾಗುತ್ತದೆ. ಅದು ಸ್ಕಿನ್‌ಗೆ ಇನ್ನಷ್ಟು ಹಾನಿದಾಯಕವಾಗುತ್ತದೆ. ಕೆನ್ನೆಯ ಮೇಲೆ ಕೊಂಚ ಕಲರ್‌ ಹಾಕಿದ ಕೂಡಲೇ ಮುಖಕ್ಕೆ ಗ್ಲೋ ಬರುತ್ತದೆ. ವಿಂಟರ್‌ನಲ್ಲಿ ಚರ್ಮದ ಮೇಲೆ ಶುಷ್ಕತನ ಬರುತ್ತದೆ. ಅದರಿಂದ ಪಾರಾಗಲು ಪೌಡರ್‌ ಬದಲು ಚೀಕ್‌ ಕಲರ್ ಪಡೆಯಲು ಕ್ರೀಂ ಅಥವಾ ಜೆಲ್ ‌ಉಪಯೋಗಿಸಿ.

ಐ ಬ್ಯೂಟಿ

ಈ ವಯಸ್ಸಿನಲ್ಲಿ ಶರೀರದಲ್ಲಿ ಕೊಲೋಜನ್‌ ಉತ್ಪಾದನೆ ಕಡಿಮೆಯಾಗತೊಡಗುತ್ತದೆ. ಅದರಿಂದಾಗಿ ರೆಪ್ಪೆಗಳ ಬಳುಕುವಿಕೆ ನಿಂತು ಅವು ಬಾಗತೊಡಗುತ್ತವೆ. ಆಗ ಪಲರ್‌ ಲ್ಯಾಶಸ್‌ ನಿಮ್ಮ ರೆಪ್ಪೆಗಳಿಗೆ ಅಪ್‌ ಲಿಫ್ಟಿಂಗ್‌ ಪ್ರಭಾವ ಹಾಗೂ ಬಾಗಿದ ರೆಪ್ಪೆಗಳಿಗೆ ಒಳ್ಳೆಯ ಸಪೋರ್ಟ್‌ ಕೊಡುತ್ತದೆ. ಲೆಂಥ್‌ನಿಂಗ್‌ ಮಸ್ಕರಾದ 2 ಕೋಟ್‌ ಹಚ್ಚಿ ಮತ್ತು ನಿಮ್ಮ ರೆಪ್ಪೆಗಳ ಅಂಚಿನಲ್ಲಿ ಕಾಜಲ್ ಪೆನ್ಸಿಲ್‌ನಿಂದ ಚೆನ್ನಾಗಿ ಕಾಜಲ್ ಹಚ್ಚಿ. ಕಣ್ಣುಗಳ ಹತ್ತಿರದ ಭಾಗಕ್ಕೆ ತೆರೆದ ಅನುಭವ ಕೊಡಲು ನಿಮ್ಮ ಹುಬ್ಬುಗಳ ಮೇಲೆ ತೆಳು ಸ್ಕಿನ್ ಟೋನ್‌ನ ಶಾಂಪೇನ್‌ ಶೇಡ್‌ನಿಂದ ಹೈಲೈಟ್‌ ಮಾಡಿ. ಒಂದು ವೇಳೆ ತ್ವಚೆ ಶ್ಯಾಮಲವರ್ಣದ್ದಾಗಿದ್ದರೆ ಬ್ರಾಂಝ್ ಶೇಡ್‌ನಿಂದ ಹೈಲೈಟ್‌ ಮಾಡಿ. ಐ ಲಿಡ್‌ಬಳಿ ಬ್ರೈಟ್‌ ಕಲರ್‌ ಉಪಯೋಗಿಸಬೇಡಿ. ಬ್ರೈಟ್‌ ಕಲರ್‌ನ ಐ ಶ್ಯಾಡೋ ಉಪಯೋಗಿಸಬೇಡಿ.

ಏಕೆಂದರೆ ಅದನ್ನು ಹಚ್ಚಿದರೆ ಮುಖದ ನೆರಿಗೆಗಳು ಹೆಚ್ಚು ಕಂಡುಬರುತ್ತವೆ. ಲಿಪ್‌ ಕೇರ್‌ ಹೆಚ್ಚುತ್ತಿರುವ ವಯಸ್ಸಿನ ಜೊತೆ ತುಟಿಗಳ ಬಣ್ಣ ಹೋಗುತ್ತಿರುತ್ತದೆ. ಅವುಗಳ ತುದಿಗಳಲ್ಲಿ ಶುಷ್ಕತನ ಉಂಟಾಗುತ್ತದೆ. ಆಗ ತುಟಿಗಳಿಗೆ ಲಿಪ್‌ ಪೆನ್ಸಿಲ್‌‌ನ ಸಹಾಯದಿಂದ ಲೈನ್‌ ಎಳೆದು ತುಂಬುವುದು ಉತ್ತಮ. ಪೆನ್ಸಿಲ್ ಕಲರ್‌ ನಿಮ್ಮ ತುಟಿಗಳ ಗುಲಾಬಿ ಬಣ್ಣಕ್ಕೆ ಹೊಂದುವಂತಿರಲಿ. ಲಿಪ್‌ ಲೈನರ್ ಮೇಲೆ ಗ್ಲಾಸ್‌ ಅಥವಾ ಬಾಮ್ ನ ಕೋಟ್‌ ಹಚ್ಚಿದರೆ ಅದು ಹೆಚ್ಚು ತಾಜಾ ಆಗಿ ಕಂಡುಬರುತ್ತದೆ. ಅದರಿಂದ ಲಿಪ್‌ ಕಲರ್ ಹರಡುವುದೂ ಇಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ