ಸಿಲ್ವರ್‌ಗೋಲ್ಡ್ ಮೆಟಾಲಿಕ್‌ ವರ್ಕ್‌ ನಿಂದ ಸುಸಜ್ಜಿತಗೊಂಡ ಡೂಪಿಯನ್‌ ಸಿಲ್ಕ್ ಫ್ಯಾಬ್ರಿಕ್‌ ನ ಈ ಬ್ರೈಡಲ್ ಲೆಹಂಗಾ ಚೋಲಿ ಹಬ್ಬದ ಸಡಗರ ಹೆಚ್ಚಿಸುವಲ್ಲಿ ಪೂರಕ.

ಕಾಶ್ಮೀರಿ ಕಸೂತಿ ಹಾಗೂ ಕರಕುಶಲತೆಯಿಂದ ಸುಸಜ್ಜಿತಗೊಂಡ ಈ ವಿಕ್ಟೋರಿಯನ್‌ ಮೋಟಿಫ್‌ ನ ಸುರಸುಂದರ ಲೆಹಂಗಾ ಚೋಲಿ, ಮೊದಲ ಬಾರಿಗೆ ಯುಗಾದಿಗೆ ಬಂದ ವಿವಾಹಿತ ಮಗಳಿಗೆ ಅಚ್ಚುಕಟ್ಟಾಗಿ ಹೊಂದುತ್ತದೆ.

ಫರ್‌ ನಿಂದ ಸುಸಜ್ಜಿತಗೊಂಡ, ಪಿಂಕ್‌ ದುಪ್ಪಟ್ಟಾದಿಂದ ಜೊತೆಗೂಡಿದ ಅತ್ಯಾಕರ್ಷಕ ಬೇಜ್‌ ಕಲರ್‌ ನ ಈ ಲೆಹಂಗಾ ಚೋಲಿ, ಮೊದಲ ಬಾರಿ ಅತ್ತೆಮನೆಯಲ್ಲಿ ಯುಗಾದಿ ಆಚರಿಸುವ ನವ ವಧುವಿಗೆ ಅತ್ಯಂತ ಸೂಕ್ತವಾಗಿ ಹೊಂದುತ್ತದೆ.

fashion-saroj-A

ಇಲ್ಲಿವೆ ನೋಡಿ, ಯುಗಾದಿಯ ಸಡಗರ ಸಂಭ್ರಮ ಹೆಚ್ಚಿಸಿಕೊಳ್ಳಲೆಂದು ಅಕ್ಕತಂಗಿಯರೆಲ್ಲ ಸೇರಿ ತೊಟ್ಟಿರುವ ಒಂದೇ ಬಗೆಯ ದೇವಜೂರ್‌ ಕಲೆಕ್ಷನ್‌ ನ ರೆಡ್‌ ಸಿಗ್ನೇಚರ್‌ ಲೆಹಂಗಾ!

ನಾಟ್‌ ವರ್ಕ್‌ ನಿಂದ ಸಿಂಗರಿಸಲ್ಪಟ್ಟ, ಮಲ್ಬರಿ ಸಿಲ್ಕ್ ನ ಫ್ಯಾಬ್ರಿಕ್‌ ವುಳ್ಳ ಈ ಪೇಸ್ಟಲ್ ಕಲರ್‌ ನ ಲೆಹಂಗಾ ಚೋಲಿ, ಹಬ್ಬದ ನೆಪದಲ್ಲಿ ಹೊರಗಿನ ಓಡಾಟಕ್ಕೂ ಒಪ್ಪುತ್ತದೆ.

fashion-saroj-B

ಫರ್‌ ನಿಂದ ಅಲಂಕರಿಸಲಾದ ಗೋಲ್ಡನ್‌ ವರ್ಕ್‌ ವುಳ್ಳ ಈ ಬ್ರೈಡಲೆ ಲೆಹಂಗಾ, ಯುಗಾದಿ ಹಬ್ಬಕ್ಕಾಗಿ ಬೇವುಬೆಲ್ಲ ಹಂಚಲು ಸಿದ್ಧಗೊಳ್ಳುತ್ತಿರುವ ಹಿರಿಕಿರಿ ಸೊಸೆಯರಿಬ್ಬರಿಗೂ ಹೇಳಿ ಮಾಡಿಸಿದಂತಿದೆ!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ