ಮೇಕಪ್‌ ನಲ್ಲಿ ಐ ಮೇಕಪ್‌ ಗೆ ಬಲು ಮುಖ್ಯ ಪಾತ್ರವಿದೆ. ಒಂದು ವಿಧದಲ್ಲಿ ಇಡೀ ಮೇಕಪ್‌ ನ ಆಧಾರ ಐ ಮೇಕಪ್‌ ಮೇಲೆಯೇ ನಿಂತಿದೆ ಎನ್ನಬಹುದು. ಇತ್ತೀಚಿನ ಆಧುನಿಕ ಮೇಕಪ್‌ ಟ್ರೆಂಡ್‌ ಪ್ರಕಾರ, ಇಡೀ ಮುಖಕ್ಕೆ ಮಾಡುವ ಮೇಕಪ್‌ ಗಿಂತ ಕಂಗಳ ಮೇಕಪ್‌ ಹೆಚ್ಚು ಹೆವಿ ಇರುತ್ತದೆ. ಕಣ್ಣುಗಳ ಮೇಕಪ್‌ ಗಾಗಿ ನೀವು ಹಲವಾರು ವಿಧಗಳನ್ನು ಅನುಸರಿಸಬಹುದು, ಮುಖ್ಯವಾಗಿ ಪಾರ್ಟಿಗಳಿಗೆ ಇವು ಸ್ಪೆಷಲ್ ಲುಕ್ಸ್ ಒದಗಿಸುತ್ತವೆ.

ಸ್ವರೋಸ್ಕಿ ಮೇಕಪ್

ಸ್ವರೋಸ್ಕಿ ಐ ಮೇಕಪ್‌ ನಲ್ಲಿ ಸ್ಟಡ್‌, ಸ್ಟೋನ್‌, ಸ್ವರೋಸ್ಕಿ, ಕುಂದಣ ಇತ್ಯಾದಿಗಳನ್ನು ಬಳಸಲಾಗುತ್ತದೆ. ಇದರಲ್ಲಿ ಹೆವಿ ಐ ಮೇಕಪ್‌ ಇರುತ್ತದೆ, ಹೀಗಾಗಿ ಇದು ನವ ವಧುವಿಗೆ ಹೆಚ್ಚು ಒಪ್ಪುತ್ತದೆ. ಬ್ರೈಡ್‌ ಮೇಕಪ್‌ ಮಾತ್ರವಲ್ಲದೆ, ಇದನ್ನು ರಾಂಪ್‌ ಮೇಕಪ್ ಆಗಿಯೂ ಬಳಸಬಹುದು.

ಐ ಮೇಕಪ್‌ ಮಾಡಿಕೊಳ್ಳಲು, ಮೊದಲು ಐ ಶ್ಯಾಡೋದಿಂದ ಆರಂಭಿಸಿ. ಸ್ವರೋಸ್ಕಿ ಥೀಂ ಅನುಸಾರ ನೀವು ಮೆಟಾಲಿಕ್‌ ಕಲರ್ಸ್ ಬಳಸಬಹುದು. ಉದಾ: ಆ್ಯಕ್ಸಿಸ್‌, ಕಾಪರ್‌ ಬ್ರೌನ್‌ ಇತ್ಯಾದಿ.

ಐ ಶ್ಯಾಡೋ ಹಚ್ಚಿದ ನಂತರ ಐ ಬ್ರೋಗಳ ಕೆಳಭಾಗವನ್ನು ಹೈಲೈಟ್‌ ಮಾಡಿ. ಇದಕ್ಕಾಗಿ ನೀವು ಗೋಲ್ಡನ್‌ ಅಥವಾ ಸಿಲ್ವರ್‌ ಶೇಡ್ಸ್ ಬಳಸಬಹುದು.

ಐ ಶ್ಯಾಡೋ ನಂತರ ಕಂಗಳಿಗೆ ಐ ಲೈನರ್‌ ಹಚ್ಚಿರಿ, ಇದು ಶಿಮ್ಮರ್‌ ನದಾಗಿದ್ದರೆ ಇನ್ನಷ್ಟು ಉತ್ತಮ. ಈಗೆಲ್ಲ ಪೆನ್ಸಿಲ್ ‌ಹಾಗೂ ಪೆನ್ನಿನ ಹಲವು ಬಗೆಯ ಶಿಮ್ಮರ್‌ ಯುಕ್ತ ಐ ಲೈನರ್‌ ಗಳು ಲಭಿಸುತ್ತವೆ, ಇವನ್ನು ಸುಲಭವಾಗಿ ಬಳಸಬಹುದಾಗಿದೆ.

ನಂತರ ಕಾಡಿಗೆ ಹಾಗೂ ಮಸ್ಕರಾ ಹಚ್ಚಿರಿ. ಕಂಗಳ ಕೆಳಭಾಗಕ್ಕೂ ಶಿಮ್ಮರ್‌ ಯುಕ್ತ ಕಲರ್‌ ಫುಲ್ ಪೆನ್ಸಿಲ್ ‌ನಿಂದ ಹೈಲೈಟ್‌ಮಾಡಿ.

ಹೀಗೆ ಐ ಮೇಕಪ್‌ ಪೂರ್ಣಗೊಂಡ ನಂತರ, ಕೊನೆಯಲ್ಲಿ ಕಂಗಳ ಅಂಚಿನಲ್ಲಿ ಸ್ವರೋಸ್ಕಿ ಅಥವಾ ಸ್ಟಡ್‌ ಅಂಟಿಸಿ. ಇದಾದ ಬಳಿಕ ಕಣ್ಣುಗುಡ್ಡೆಗಳ ಮೇಲೆ ತುಸು ಗೋಲ್ಡ್ ಡಸ್ಟ್ ಸಹ ಅಂಟಿಸಬಹುದು.

ಸ್ಮೋಕಿ ಮೇಕಪ್

ಸ್ಮೋಕಿ ಐ ಮೇಕಪ್‌ ನ್ನು ವಿಶೇಷ ಸಂದರ್ಭಗಳಲ್ಲಿ ನೈಟ್‌ ಪಾರ್ಟಿ ಅಥವಾ ಡಿಸ್ಕೋ ಪಾರ್ಟಿಗಳಿಗೆ ಬಳಸಬಹುದಾಗಿದೆ. ಆದರೆ ಈ ಮೇಕಪ್‌ ಪಾಶ್ಚಾತ್ಯ ಉಡುಗೆಗಳಿಗೆ ಮಾತ್ರ ವಿಶೇಷವಾಗಿ ಒಪ್ಪುತ್ತವೆಯೇ ಹೊರತು ಭಾರತೀಯ ಉಡುಪಿಗಲ್ಲ ಎಂಬುದನ್ನು ಮರೆಯಬಾರದು. ಇದನ್ನು ಗಮನಿಸಿಕೊಂಡು ಈ ಮೇಕಪ್‌ ಫಾಲೋ ಮಾಡಿ :

ಸ್ಮೋಕಿ ಐ ಮೇಕಪ್‌ ಗಾಗಿ ಐ ಶ್ಯಾಡೋನಲ್ಲಿ ಸ್ಟೋನ್‌, ರೆಡ್‌, ಆ್ಯಶ್‌ ಗ್ರೇ ಹಾಗೂ ಬರ್ನಿಂಗ್‌ ಆರೆಂಜ್‌ ಮುಂತಾದವನ್ನು ಬಳಸಬಹುದು.

ಕಂಗಳಿಗೆ ಸ್ಮೋಕಿ ಲುಕ್ಸ್ ನೀಡಲು 2-3 ಬಗೆ ಬಣ್ಣಗಳ ಐ ಶ್ಯಾಡೋ ಬಳಸಿ ಅವನ್ನು ಮರ್ಜ್‌ ಮಾಡಿ.

ಐ ಬ್ರೋಗಳ ಕೆಳಭಾಗಕ್ಕೆ ನ್ಯೂಟ್ರಲ್ ಶೇಡ್ಸ್ ನಿಂದ ಹೈಲೈಟ್‌ ಮಾಡಿ. ನ್ಯೂಟ್ರಲ್ ಶೇಡ್‌ ಅಂದರೆ ಲೈಟ್‌ ಶೇಡ್‌, ನಿಮ್ಮ ಸ್ಕಿನ್‌ಟೋನ್‌ ಗೆ ಮ್ಯಾಚ್‌ ಆಗುವಂತಿರಬೇಕು.

ಈ ಮೇಕಪ್‌ನಲ್ಲಿ ಐ ಲೈನರ್‌ ಹಚ್ಚುವ ವಿಧಾನ ಬೇರೆ ಐ ಮೇಕಪ್‌ ಗಳಿಗಿಂತ ವಿಭಿನ್ನವಾದುದು. ಇದರಲ್ಲಿ ಐ ಲೈನರ್‌ ನ ನೇರ ರೇಖೆ ಎಳೆಯುವ ಬದಲು ಅದನ್ನು ಸಮನವಾಗಿ ಹರಡಲಾಗುತ್ತದೆ, ಆಗ ಸ್ಮೋಕಿ ಅಥವಾ ಫೈರ್‌ ಲುಕ್‌ ಸಿಗುತ್ತದೆ.

ಇದಾದ ನಂತರ ಕಂಗಳ ಕೆಳಭಾಗಕ್ಕೆ ದಟ್ಟ ಕಾಡಿಗೆಯನ್ನು ಕಣ್ಣುಗಳಿಂದ ಹೊರಹೊಮ್ಮುತ್ತಿರುವಂತೆ ಹಚ್ಚಬೇಕು.

ಫ್ಲೇವರ್ ಮೇಕಪ್

trendy-I-makeup-3

ಟ್ರೆಂಡಿ ಲುಕ್ಸ್ ಪಡೆಯಲಿಕ್ಕಾಗಿ ಇತ್ತೀಚೆಗೆ ಪ್ಲೇವರ್‌ ಮೇಕಪ್‌ ಧಾರಾಳವಾಗಿ ಟ್ರೆಂಡ್‌ ಎನಿಸಿದೆ. ಇದರಲ್ಲಿ ಶೇಡಿಂಗ್‌ ಮಾತ್ರವಲ್ಲದೆ ಕಂಗಳ ಮೇಲೆ ಹಲವು ಬಗೆಯ ಡಿಸೈನ್ಸ್ ಸಹ ಮೂಡಿಸಬಹುದು. ಈ ತರಹದ ಮೇಕಪ್‌ ರಾಂಪ್‌, ಪಾರ್ಟಿ ಹಾಗೂ ಫ್ಯಾನ್ಸಿ ಡ್ರೆಸ್‌ಕಾಂಪಿಟಿಷನ್‌ ನಂಥ ಸಂದರ್ಭಗಳಿಗೆ ಹೆಚ್ಚು ಒಪ್ಪುತ್ತದೆ.

ಪ್ಲೇವರ್‌ ಐ ಮೇಕಪ್‌ ಗಾಗಿ ನೀವು ಪಿಂಕ್‌, ಆರೆಂಜ್‌, ಲೈಟ್‌ ಹಾಗೂ ಗ್ರೀನ್‌ ಮುಂತಾದ ಬ್ರೈಟ್‌ ಕಲರ್ಸ್‌ ಆರಿಸಬಹುದು.

ಥೀಂ ಅನುಸಾರ ಐ ಶ್ಯಾಡೋವನ್ನು ಸಾಧಾರಣವಾಗಿ ಹಚ್ಚುವುದರ ಬದಲು, ಯಾವುದಾದರೂ ಡಿಸೈನ್‌ ಪ್ರಕಾರ ಹಚ್ಚಬೇಕು. ಉದಾ : ಶೇಡೆಡ್‌ ಫ್ಲವರ್‌, ಝೀಬ್ರಾ ಪ್ರಿಂಟ್‌ ಅಥವಾ ಡ್ರೆಸ್‌ ನಿಂದ ಯಾವುದೇ ಪ್ರಿಂಟ್‌ ಇತ್ಯಾದಿ.

ಈ ತರಹದ ಮೇಕಪ್‌ ಜೊತೆ ಕಲರ್‌ ಫುಲ್ ಐ ಲೈನರ್ಸ್‌ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತವೆ. ಹೀಗಾಗಿ, ನೀವು ಬ್ಲೂ, ಗ್ರೀನ್ ಅಥವಾ ಗ್ರೇ ಬಣ್ಣಗಳ ಐ ಲೈನರ್ಸ್‌ ಬಳಸಬಹುದು. ಡಬಲ್ ಕಲರ್‌ ನ ಐ ಲೈನರ್‌ ಸಹ ಬಳಸಬಹುದು.

ಕಂಗಳ ಕೆಳಗಿನ ಭಾಗವನ್ನು ಹೈಲೈಟ್‌ ಮಾಡಲು ಮೊದಲು ದಟ್ಟ ಕಾಡಿಗೆ ಹಚ್ಚಿರಿ, ಅದರ ಕೆಳಗೆ ಕಲರ್‌ ಫುಲ್ ಪೆನ್ಸಿಲ್‌ ತೀಡಿರಿ.

ಮೆರೀನ್ ಮೇಕಪ್

trendy-I-makeup-4

ನೀವು ನಿಮ್ಮ ಕಂಗಳಿಗೆ ನ್ಯಾಚುರಲ್ ಲುಕ್ಸ್ ನೀಡಲು ಮೆರೀನ್‌ ಐ ಮೇಕಪ್‌ ಟ್ರೈ ಮಾಡಬಹುದು. ಇದರಲ್ಲಿ ವಾಟರ್‌ ಬೇಸ್ಡ್ ಮೇಕಪ್‌ ಬಳಸಲಾಗುತ್ತದೆ. ಈ ತರಹದ ಮೇಕಪ್‌ ಮಳೆಗಾಲದ ದಿನಗಳಿಗೆ ಹೆಚ್ಚು ಹೊಂದಿಕೊಳ್ಳುತ್ತದೆ.

ಮೆರೀನ್‌ ಐ ಮೇಕಪ್‌ ಗಾಗಿ ಆ್ಯಕ್ವಾ ಕಲರ್ಸ್‌ ಬಳಸಿರಿ. ಉದಾ : ಆ್ಯಕ್ವಾ ಬ್ಲೂ ಅಥವಾ ಸೀ ಗ್ರೀನ್‌ ಇತ್ಯಾದಿ.

ಎಲ್ಲಕ್ಕೂ ಮೊದಲು ಕಣ್ಣುಗುಡ್ಡೆಗಳ ಮೇಲೆ ಆ್ಯಕ್ವಾ ಕಲರ್‌ ಹಚ್ಚಿದ ನಂತರ ಅದನ್ನು ಮರ್ಜ್‌ ಗೊಳಿಸಲು ಯತ್ನಿಸಿ.

ನಂತರ ಐ ಬ್ರೋಸ್‌ ನ ಕೆಳಗಿನ ಭಾಗವನ್ನು ಡಾರ್ಕ್‌ ಶೇಡ್‌ ನಿಂದ ಹೈಲೈಟ್‌ ಗೊಳಿಸಿ. ಇದಕ್ಕಾಗಿಯೂ ಆ್ಯಕ್ವಾ ಕಲರ್ಸ್ ಬಳಸಬಹುದು.

ಇದಾದ ನಂತರ ಬ್ಲೂ ಅಥವಾ ಗ್ರೀನ್‌ ಕಲರ್‌ ನ ತೆಳು ಐ ಲೈನರ್‌ ಹಚ್ಚಿಕೊಳ್ಳಿ, ನಂತರ ಮಸ್ಕರಾ ಹಚ್ಚಬೇಕು.

ಮೆರೀನ್‌ ಐ ಮೇಕಪ್‌ ಮಾಡಿಕೊಳ್ಳುವ ಜೊತೆ, ಗ್ರೀನ್‌ ಅಥವಾ ಬ್ಲೂ ಕಲರ್‌ ನ ಐ ಲ್ಯಾಶೆಸ್‌ ಬಳಸುವುದರಿಂದ ಇನ್ನಷ್ಟು ಗ್ಲಾಮರಸ್‌ ಗೆಟಪ್‌ ಬರುತ್ತದೆ.

ರೇನ್‌ ಬೋ ಐ ಮೇಕಪ್‌ ಇದು ಮಲ್ಟಿಕಲರ್ಡ್‌ ಡ್ರೆಸ್‌ಗೆ ಒಪ್ಪುತ್ತದೆ.

ರೇನ್‌ ಬೋ ಐ ಮೇಕಪ್‌ ಗಾಗಿ ಐ ಬಾಲ್ ‌ಮೇಲೆ 5-7 ಬಗೆಯ ವಿಭಿನ್ನ ಶೇಡ್‌ ಗಳ ರೇಖೆಗಳನ್ನು ಎಳೆಯಬೇಕು. ಇದನ್ನು ಮಾಡಿಕೊಳ್ಳುವ ಸಮಯದಲ್ಲಿ, ಪ್ರತಿರೇಖೆಯೂ ಬೇರೆ ಬೇರೆಯಾಗಿಯೇ ಕಂಡುಬರಬೇಕೆಂಬುದು ಅತ್ಯಗತ್ಯ. ಇದು ಪರಸ್ಪರ ಮರ್ಜ್‌ ಆಗದಂತೆ ಎಚ್ಚರವಹಿಸಿ.

ಐ ಬಾಲ್ ‌ನ ಮೇಲ್ಭಾಗವನ್ನು ಲೈಟ್‌ ಗೊಳಿಸಲು, ಲೈಟ್‌ ಶೇಡ್ಸ್ ನ ಹೈಲೈಟರ್‌ ಬಳಸಬೇಕು.

ಐ ಮೇಕಪ್‌ ನಲ್ಲಿ ಸಮತೋಲನ ಕಾಯ್ದುಕೊಳ್ಳಲು, ಡಾರ್ಕ್‌ ಶೇಡ್‌ ನ ಐ ಲೈನರ್‌ ಮತ್ತು ಕಾಡಿಗೆ ಬಳಸಿರಿ. ಕಾಡಿಗೆ ಮತ್ತು ಐ ಲೈನರ್ಸ್‌ ಹೆಚ್ಚು ಗಾಢ ಅಥವಾ ತೆಳುವಾಗದೆ ಮೀಡಿಯಂ ಆಗಿರುವಂತೆ ನೋಡಿಕೊಳ್ಳಿ.

ಮಸ್ಕರಾ ಬಳಸುವಿರಾದರೆ ಬ್ಲ್ಯಾಕ್‌ ಶೇಡ್‌ ನದನ್ನೇ ಆರಿಸಿಕೊಳ್ಳಿ. ಅಗತ್ಯವೆನಿಸಿದರೆ ನೀವು ಕಲರ್‌ ಫುಲ್ ಐ ಲೆನ್ಸ್ ಸಹ ಬಳಸಬಹುದು.

ನಿರ್ಮಲಾ ಜೈನ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ