ಅಂಡರ್‌ ಆರ್ಮ್ಸ್ ಅಥವಾ ಕಂಕುಳ ನಮ್ಮ ದೇಹದ ಅತಿ ನಾಜೂಕಾದ ಸಂವೇದನಾಶೀಲ ಭಾಗವಾಗಿದೆ. ಹೀಗಾಗಿ ನಮ್ಮ ದೇಹದ ಇತರ ಅಂಗಾಂಗಗಳನ್ನು ಸಂರಕ್ಷಿಸುವ ಹಾಗೆ ಈ ಭಾಗವನ್ನೂ ಜೋಪಾನವಾಗಿ ನೋಡಿಕೊಳ್ಳಬೇಕು.

ಸಾಮಾನ್ಯವಾಗಿ ಮಹಿಳೆಯರು ಈ ಭಾಗವನ್ನು ಸರಿಯಾಗಿ ಗಮನಿಸಿಕೊಳ್ಳುವುದಿಲ್ಲ ಹಾಗೂ ದೇಹದ ಈ ಭಾಗ ಹೆಚ್ಚು ನಿರ್ಲಕ್ಷ್ಯಕ್ಕೆ ಒಳಗಾಗುತ್ತದೆ. ಆದ್ದರಿಂದ ಈ ಭಾಗಕ್ಕೆ ಸೋಂಕು ತಗುಲುವ ಸಾಧ್ಯತೆ ಇದ್ದೇ ಇರುತ್ತದೆ.

ಗಮನಿಸತಕ್ಕ ಅಂಶಗಳು

ಸಾಮಾನ್ಯವಾಗಿ ಮಹಿಳೆಯರು ತಮ್ಮ ಕಂಕುಳನ್ನು ಶೇವ್ ‌ಮಾಡಿಕೊಳ್ಳುತ್ತಾರೆ, ಇದರಿಂದ ಆ ಭಾಗದ ಚರ್ಮದ ಮೇಲೆ ಕೆಟ್ಟ ಪ್ರಭಾವ ಆಗುತ್ತದೆ. ಇದರಿಂದ ಆ ಭಾಗದ ಕೂದಲು ಅಲ್ಲೇ ಮೊಂಡಾಗಿ, ಚೂಪಿನ ಕಾರಣ ಚುಚ್ಚುವ ಸಾಧ್ಯತೆಗಳಿವೆ. ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ರೇಝರ್‌ ನಿಂದ ಆ ಸೂಕ್ಷ್ಮ ಭಾಗದ ಚರ್ಮಕ್ಕೆ ಹಾನಿ ತಪ್ಪಿದ್ದಲ್ಲ.

ಯಾವ ಮಹಿಳೆಯರ ಕಂಕುಳಲ್ಲಿ ಹೆಚ್ಚಿನ ಬೆವರು ಹರಿಯುತ್ತದೋ, ಅವರಿಗೆ ಫಂಗಲ್ ಇನ್‌ ಫೆಕ್ಷನ್‌ ಆಗುವ ಸಾಧ್ಯತೆಗಳು ಹೆಚ್ಚು. ಇದರಿಂದ ತಪ್ಪಿಸಿಕೊಳ್ಳಲು, ಸದಾ ಕಾಟನ್‌ ಉಡುಗೆಗಳನ್ನೇ ಧರಿಸಬೇಕು. ಏಕೆಂದರೆ ರೇಷ್ಮೆ ಅಥವಾ ಸಿಂಥೆಟಿಕ್‌ಬಟ್ಟೆಗಳು ಬೆವರನ್ನು ಹೀರಿಕೊಳ್ಳಲಾರವು.

ತಪ್ಪಾದ ರೀತಿಯಲ್ಲಿ ಮಾಡಿದ ವ್ಯಾಕ್ಸಿಂಗ್‌ ಸಹ ಕಂಕುಳಲ್ಲಿ ಕೆಂಪು ಕಲೆಗಳು ಹಾಗೂ ನವೆ, ಕೆರೆತದ ಸಮಸ್ಯೆಯನ್ನು ತಂದೊಡ್ಡುತ್ತವೆ. ಹೀಗಾಗಿ ನುರಿತ ಬ್ಯೂಟೀಷಿಯನ್‌ ರಿಂದಲೇ ವ್ಯಾಕ್ಸಿಂಗ್‌ ಮಾಡಿಸಿ.

ಯಾವುದೇ ಹೊಸ ಬಗೆಯ ಸ್ಪ್ರೇ ಅಥವಾ ಡಿಯೋಡರೆಂಟ್‌ ಬಳಸುವ ಮೊದಲು, ಅದನ್ನು ಮಣಿಕಟ್ಟಿನ ಮೇಲೆ ಸಿಂಪಡಿಸಿಕೊಂಡು ಏನೂ ಅಲರ್ಜಿ ಇಲ್ಲ ತಾನೇ ಎಂದು ಖಾತ್ರಿಪಡಿಸಿಕೊಳ್ಳಿ. ಏಕೆಂದರೆ ಇವುಗಳಲ್ಲಿ ಆಲ್ಕೋಹಾಲ್ ‌ನ ಪ್ರಮಾಣ ಬಹಳ ಜಾಸ್ತಿ ಇರುತ್ತದೆ. ನಿಮ್ಮ ಚರ್ಮ ಬಹಳ ಸಂವೇದನಾಶೀಲ ಎನಿಸಿದರೆ ಇಂಥವನ್ನು ಎಚ್ಚರಿಕೆಯಿಂದ ಬಳಸಿ.

ನಿಮ್ಮ ಕಂಕುಳನ್ನು ಹೇರ್‌ ರಿಮೂವರ್‌ ಕ್ರೀಮಿನಿಂದ ಎಂದೂ ಶುಚಿಗೊಳಿಸಲು ಹೋಗಬೇಡಿ, ಏಕೆಂದರೆ ಅದರಿಂದ ಆ ಭಾಗದ ಚರ್ಮ ಕಪ್ಪಾಗುವ ಸಾಧ್ಯತೆಗಳು ಹೆಚ್ಚು.

ನಿಮ್ಮ ಕಂಕುಳಲ್ಲಿ ಯಾವಾಗ ನವೆ, ಕೆರೆತ, ತುರಿಕೆ, ರಾಶೆಸ್‌, ಉರಿ ಇತ್ಯಾದಿ ಕಂಡಬಂದರೆ ಸೂಕ್ತ ಚರ್ಮ ತಜ್ಞರನ್ನು ಭೇಟಿಯಾಗಿ.

ಕಂಕುಳಲ್ಲಿ ಒಸರುವ ಬೆವರು ಆ ಭಾಗದ ದುರ್ಗಂಧಕ್ಕೆ ಮೂಲ. ಆದ್ದರಿಂದ ಸ್ನಾನ ಮಾಡುವ ಮುನ್ನ, 1 ಬಕೆಟ್‌ ನೀರಿಗೆ ಯೂಡಿಕೊಲೋನ್‌, ಡೆಟಾಲ್ ‌ಹಾಗೂ ನಿಂಬೆರಸದ ಹಲವು ಹನಿ ಬೆರೆಸಿಕೊಂಡು ಸ್ನಾನ ಮಾಡಿ.

ಈ ಭಾಗದ ದುರ್ಗಂಧ ಹೋಗಲಾಡಿಸಲು ತುಳಸಿ ಎಣ್ಣೆ ಅಥವಾ ತುಳಸಿ ಪೌಡರ್‌ ನ್ನು ಆ ಭಾಗಕ್ಕೆ ಹಚ್ಚಬೇಕು ಅಥವಾ ಆ್ಯರೋಮಾ ಥೆರಪಿಯ ಇನ್ನಿತರ ಎಣ್ಣೆ, ಪೌಡರ್‌ ಗಳನ್ನೂ ಬಳಸಬಹುದು.

ವ್ಯಾಕ್ಸಿಂಗ್‌ ಅನಗತ್ಯ ಕೂದಲನ್ನು ತೊಲಗಿಸುವ ಉತ್ತಮ ಉಪಾಯಗಳಲ್ಲಿ ಒಂದು ಎಂಬುದೇನೋ ನಿಜ, ಆದರೆ ಇದು ತಾತ್ಕಾಲಿಕ ಮಾತ್ರ, ಶಾಶ್ವತ ಪರಿಹಾರವಲ್ಲ. ಈ ಅನಗತ್ಯ ಕೂದಲನ್ನು ಫೋಲ್ಡ್ಸ್ ಲೈಟ್‌ ಮೂಲಕ ಶಾಶ್ವತವಾಗಿಯೂ ನಿವಾರಿಸಿಕೊಳ್ಳಬಹುದು. ಇದಕ್ಕಾಗಿ ತಿಂಗಳಲ್ಲಿ 1-2 ಸಿಟ್ಟಿಂಗ್‌ ನ ಅಗತ್ಯ ಬೀಳಬಹುದು ಹಾಗೂ 4-5 ಸಿಟ್ಟಿಂಗ್ಸ್ ನಲ್ಲಿ ಕೂದಲು ಖಂಡಿತಾ ಹೋಗಿರುತ್ತದೆ. ಇದಕ್ಕಾಗಿ 25 ಸಾವಿರ ಖರ್ಚಾಗಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ