ಸೌಂದರ್ಯ ಎಂಬುದು ಪ್ರತಿಯೊಬ್ಬ ಯುವತಿಯನ್ನು ಇನ್ನೊಬ್ಬರ ದೃಷ್ಟಿಯಲ್ಲಿ ಪ್ರಶಂಸೆಗೆ ಪಾತ್ರರಾಗಿಸಿದರೆ, ಅದು ಅವಳಿಗೆ ಅಷ್ಟೇ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತದೆ. ಹೀಗಾಗಿ ಯುವತಿಯರು ತಮ್ಮ ಸೌಂದರ್ಯ ಸಂರಕ್ಷಣೆಗಾಗಿ ಒಂದೆಡೆ ಮನೆಮದ್ದು ಮಾಡಿಕೊಂಡು ಸಜ್ಜಾದರೆ, ಇನ್ನೊಂದೆಡೆ ಅತ್ಯಾಧುನಿಕ ಪಾರ್ಲರ್ ಗಳಿಗೆ ಹೋಗಿ ಹೊಸ ಹೊಸ ಬ್ಯೂಟಿ ಪ್ರಾಡಕ್ಟ್ಸ್ ಗೆ ಶರಣಾಗುತ್ತಾರೆ.
ಆದರೆ ಎಲ್ಲಾ ಯುವತಿಯರೂ ಸೌಂದರ್ಯಪ್ರಜ್ಞೆಯ ಬಗ್ಗೆ ಜಾಗೃತರಾಗಿರುವುದಿಲ್ಲ. ಕೆಲಉರಿಗಷ್ಟೇ ಈ ಕಲೆ ಕರಗತವಾಗಿದ್ದರೆ, ಎಷ್ಟೋ ಮಂದಿ ಇದರ ಕುರಿತಾಗಿ ನಿರ್ಲಕ್ಷ್ಯದಿಂದಿರುತ್ತಾರೆ. ಬನ್ನಿ, ಇಂದಿನ ಕಾಲಕ್ಕೆ ತಕ್ಕಂತೆ ನೀವು ಬ್ಯೂಟಿ ಗ್ಲಾಮರ್ ಬಗ್ಗೆ ಎಷ್ಟು ಜಾಗೃತರಾಗಿರುವಿರಿ ಎಂದು ಈ ಪ್ರಶ್ನಾವಳಿ ಗಮನಿಸಿ ತಿಳಿದುಕೊಳ್ಳೋಣ :
- ನಿಮ್ಮನ್ನು ನೋಡಿದ ತಕ್ಷಣ ಜನ ಹೇಳುವುದೆಂದರೆ
ಅ. ನಿಮ್ಮ ಸುಂದರ ತ್ವಚೆ ಗಮನಿಸಿದರೆ ನಿಮ್ಮ ವಯಸ್ಸು ಎಷ್ಟೆಂದೇ ಹೇಳಲಾಗುವುದಿಲ್ಲ.
ಆ. ನೀವು ಎಂಥ ಕ್ರೀಂ ಬಳಸುತ್ತೀರಿ?
ಇ. ನೀವು ನಿಮ್ಮ ತ್ವಚೆಯ ಕುರಿತಾಗಿ ಏಕೆ ಏನನ್ನೂ ಮಾಡುತ್ತಿಲ್ಲ?
- ಒಮ್ಮೆ ಬೆಳಗ್ಗೆ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುವಾಗ ಎಲ್ಲೋ ಒಂದು ಸುಕ್ಕು ಕಾಣಿಸಿದರೆ
ಅ. ಗಾಬರಿಗೊಂಡು ತಕ್ಷಣ ಟ್ರೀಟ್ ಮೆಂಟ್ ಪಡೆಯಲು ನಿರ್ಧರಿಸುತ್ತೀರಿ.
ಆ. ಸಮಯ ಸಿಕ್ಕಾಗ ಅದಕ್ಕೆ ಮನೆಮದ್ದು ಮಾಡುವಿರಿ.
ಇ. `ಇದು ವಯಸ್ಸಿನ ಪ್ರಭಾವ, ತಂತಾನೇ ಸರಿಹೋಗಬಹುದು,' ಎಂದು ನಿಶ್ಚಿಂತರಾಗುವಿರಿ.
- ಮನೆಯಿಂದ ಹೊರಗೆ ಹೊರಡುವ ಸಂದರ್ಭದಲ್ಲಿ
ಅ. ಸನ್ ಸ್ಕ್ರೀನ್ಲೋಶನ್ ಹಚ್ಚಿಕೊಳ್ಳಲು ಮರೆಯುವುದಿಲ್ಲ.
ಆ. ನೆನಪು ಬಂದಾಗ ಹಚ್ಚಿಕೊಳ್ಳುವಿರಿ.
ಇ. `ಇದರಿಂದ ಏನು ಮಹಾ ವ್ಯತ್ಯಾಸವಾಗುತ್ತದೆ?' ಎಂದುಕೊಳ್ಳುವಿರಿ.
- ಟಿ.ವಿ. ಅಥವಾ ಪತ್ರಿಕೆಗಳಲ್ಲಿ ಬ್ಯೂಟಿ ಪ್ರಾಡಕ್ಟ್ಸ್ ಕುರಿತು ಜಾಹೀರಾತು ಗಮನಿಸಿದಾಗ
ಅ. ಅದನ್ನು ಕೊಳ್ಳುವ ಮೊದಲು ಬ್ಯೂಟಿ ಎಕ್ಸ್ ಪರ್ಟ್ಸ್ ನ್ನು ಸಲಹೆ ಕೇಳುತ್ತೀರಿ.
ಆ. ಕೊಳ್ಳಲು ನಿರ್ಧರಿಸುತ್ತೀರಿ.
ಇ. `ಇದೆಲ್ಲ ಅನಗತ್ಯ ದುಬಾರಿ ಖರ್ಚು' ಎಂದುಕೊಳ್ಳುತ್ತಾ ಜಾಹೀರಾತನ್ನು ನಿರ್ಲಕ್ಷಿಸುತ್ತೀರಿ.
- ನಿಮ್ಮ ದೃಷ್ಟಿಯಲ್ಲಿ ಬ್ಯೂಟಿ ಗ್ಲಾಮರ್
ಅ. ಟೋಟಲ್ ಫಿಟ್ ನೆಸ್, ಅತ್ಯಗತ್ಯ.
ಆ. ಬಾಹ್ಯ ಸೌಂದರ್ಯ ಸರಿ ಇದ್ದರಾಯ್ತು.
ಇ. `ಏನೋ ಒಂದು, ಅದರ ಗೊಡವೆ ಏಕೆ?' ಎಂದುಕೊಳ್ಳುವಿರಿ.
- ನೀವು ನಿಮ್ಮ ಗೆಳತಿಯ ಒಂದು ಪಾರ್ಟಿಗೆ ಹೋಗಬೇಕಿದೆ. ಆಗ
ಅ. ಅಚ್ಚುಕಟ್ಟಾಗಿ ಸಿಂಗರಿಸಿಕೊಂಡು, ಟಿಪ್ ಟಾಪಾಗಿ ಹೊರಡುವಿರಿ.
ಆ. ಚೆನ್ನಾಗಿ ಸಜ್ಜಾಗಲು ಪ್ರಯತ್ನಿಸುವಿರಿ.
ಇ. ಹೇಗೋ ಒಂದಿಷ್ಟು ರೆಡಿಯಾಗಿ ಪಾರ್ಟಿಗೆ ಹೋಗುವಿರಿ.
- ನಿಮ್ಮ ಚರ್ಮಕ್ಕೆ ಅಲರ್ಜಿ ಆದಾಗ ನೀವು
ಅ. ತಕ್ಷಣ ಹೋಗಿ ವೈದ್ಯರನ್ನು ಸಂಪರ್ಕಿಸುವಿರಿ.
ಆ. ತಿಳಿದಿರುವ ಮನೆಮದ್ದು ಮಾಡಿಕೊಳ್ಳುವಿರಿ.
ಇ. `ಈಗ ಟೈಮಿಲ್ಲ.... ಆಮೇಲೆ ನೋಡಿಕೊಂಡರಾಯ್ತು,' ಎಂದು ನಿರ್ಲಕ್ಷಿಸುವಿರಿ.
- ನಿಮಗೆ ಮಾರ್ಕೆಟ್ ನಲ್ಲಿರುವ ಲೇಟೆಸ್ಟ್ ಬ್ಯೂಟಿ ಪ್ರಾಡಕ್ಟ್ಸ್ ಬಗ್ಗೆ ಎಷ್ಟು ಮಾಹಿತಿ ಇದೆ?
ಅ. ಎಲ್ಲವೂ ಗೊತ್ತಿದೆ.
ಆ. ಸುಮಾರಾಗಿ ಗೊತ್ತಿದೆ.
ಇ. ಅದರಿಂದ ಏನೂ ಆಗಬೇಕಿಲ್ಲ.
- ನಿಮ್ಮ ಸೌಂದರ್ಯ ಸಂವರ್ಧನೆಗಾಗಿ ನೀವು
ಅ. ಹೊಸ ಹೊಸ ಸಂಶೋಧನೆಗಳ ಬಗ್ಗೆ ಮಾಹಿತಿ ಪಡೆಯುವಿರಿ.
ಆ. ಜಾಹೀರಾತುಗಳನ್ನು ಅವಲಂಬಿಸುತ್ತೀರಿ.
ಇ. ಹೊಸದಾಗಿ ಅದರ ಬಗ್ಗೆ ಚಿಂತಿಸಬೇಕಿಲ್ಲ.
- ಯಾರಾದರೂ ಸುಂದರ ಗ್ಲಾಮರಸ್ ನಟಿಯನ್ನು ಗಮನಿಸಿದಾಗ
ಅ. ಅಂತಹ ಆಕರ್ಷಕ ಮೈಕಟ್ಟು, ಕಾಂತಿ ಪಡೆಯಲು ಯತ್ನಿಸುವಿರಿ.
ಆ. ಅವಳನ್ನು ಒಂದಿಷ್ಟು ಹೊಗಳಿ ಮರೆಯುವಿರಿ.
ಇ. `ಅವಳಿಂದ ಯಾರಿಗೆ ಏನಾಗಬೇಕಿದೆ?' ಎಂದು ಸುಮ್ಮನಾಗುವಿರಿ.