ರಂಗಿತರಂಗ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡಿದ ನಾಯಕ ನಟಿ ರಾಧಿಕಾ ನಾರಾಯಣ್  ಈಗಾಗಲೇ ಒಂದಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿದ್ದು ಆನಂತರ ನಟಿಸಿದ್ದ ಚಿತ್ರಗಳು ಆಕೆಗೆ ಅಂತಹ ಹೇಳಿ ಕೊಳ್ಳುವ ಯಶಸ್ಸು ತಂದು ಕೊಟ್ಟಿರಲಿಲ್ಲ . ‘ಯು ಟರ್ನ್’ ಮತ್ತು’ ದಿ ವಿಲ್ಲನ್’ ಚಿತ್ರಗಳಲ್ಲಿ ಅತಿಥಿ ಪಾ ತ್ರಗಳನ್ನು ನಿಭಾಯಿಸಿದ ಈ ಗುಳಿ ಕೆನ್ನೆ ಚೆಲುವೆಗೆ ಇತ್ತೀಚೆಗೆ ಹೆಸರು ತಂದು ಕೊಟ್ಟ ಸಿನಿಮಾಗಳೆಂದರೆ ಶಿವಾಜಿ ಸುರತ್ಕಲ್ ಸೀರಿಸ್ ಗಳು.

1000391600

ಈ ಎರಡು ಚಿತ್ರಗಳನ್ನು ನಿರ್ದೇಶಿಸಿದ ಡೈರೆಕ್ಟರ್ ಆಕಾಶ್ ಶ್ರೀವತ್ಸ  ಇತ್ತೀಚಿಗೆ ‘ದೈಜಿ ‘ ಚಿತ್ರದ ಮುಹೂರ್ತವನ್ನು ಸದ್ದಿಲ್ಲದೆ ನೆರವೇರಿಸಿದ್ದಾರೆ.ತಮ್ಮ ಈ ಹಿಂದಿನ ಎರಡು ಯಶಸ್ವಿ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ ರಮೇಶ್ ಅರವಿಂದ್ ಜೊತೆ ತಮ್ಮ ಮೂರನೇ ಚಿತ್ರಕ್ಕೆ ಚಾಲನೆ ನೀಡಿದ್ದು, ಈ ಚಿತ್ರದ ನಾಯಕಿಯಾಗಿ ರಾಧಿಕಾ ನಾರಾಯಣ್ ಅವರನ್ನು ಮತ್ತೆ ಆಯ್ಕೆ ಮಾಡಿದ್ದಾರೆ. ವಿಶೇಷವೆಂದರೆ ರಮೇಶ್ ಅವರಂತೆ ಈಕೆಗೆ ಕೂಡ ಆಕಾಶ್ ಶ್ರೀವತ್ಸ ಜೊತೆ ಇದು ಹ್ಯಾಟ್ರಿಕ್ ಸಿನಿಮಾ.

ಉಡುಪಿ ಮೂಲದ ರಾಧಿಕಾ ನಾರಾಯಣ್ ಕಥಕ್ ಡಾನ್ಸ್ ಕಲಿತಿದ್ದು,ಅತ್ಯುತ್ತಮ ಡ್ಯಾನ್ಸರ್ ಕೂಡ.ಕಳೆದ ತಿಂಗಳು ಬಿಗ್ ಬಾಸ್ ಖ್ಯಾತಿಯ ಕಿಶನ್ ಜೊತೆ ಹಿಂದಿ ಹಾಡಿಗೆ ಮಾದಕ ನೃತ್ಯ ಮಾಡಿದ್ದ ವಿಡಿಯೋ ಅಂತೂ ಸಕತ್ ವೈರಲ್ ಆಗಿತ್ತು.

1000391593

ಫಿಟ್ನೆಸ್ ಫ್ರೀಕ್ ಕೂಡ ಆಗಿರುವ ಈ ನೀಳಕಾಯದ ಚೆಲುವೆ ಅನೇಕರಿಗೆ ಯೋಗ ಹೇಳಿಕೊಡುವ ಗುರುವಾಗಿ ಕೂಡ ಕೆಲಸ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರಾಧಿಕಾ ಯೋಗಾಸನದ ವಿಡಿಯೋಗಳನ್ನು ತಮ್ಮ ಅಕೌಂಟ್ ನಲ್ಲಿ ಆಗಾಗ ಶೇರ್ ಮಾಡುತ್ತಿರುತ್ತಾರೆ.

ರಾಧಿಕಾ ಅಭಿನಯಿಸಿರುವ ದಿಗಂತ್ ನಾಯಕನಾಗಿ ನಟಿಸಿರುವ  ‘ಎಡಗೈ ಅಪಘಾತಕ್ಕೆ ಕಾರಣ’ ಬಿಡುಗಡೆ ಸಿದ್ದವಿದ್ದು, ಹೊಸ ಸಿನಿಮಾ ‘ದೈಜಿ ‘  ಚಿತ್ರೀಕರಣ ಕೆಲವೇ ದಿನಗಳಲ್ಲಿ ಆರಂಭ ಗೊಳ್ಳಲಿದೆ.

 

-ಶರತ್ ಚಂದ್ರ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ