–ಶರತ್ ಚಂದ್ರ
1987 ರಲ್ಲಿ ಬಿಡುಗಡೆಯಾದ ಅಬ್ಬಯ್ಯ ನಾಯ್ಡು ನಿರ್ಮಾಣದ ‘ತಾಯವ್ವ ‘ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ ಸುದೀಪ್, ಅದೇ ಹೆಸರಿನ ಹೊಸ ಚಿತ್ರದ ಹಾಡುಗಳ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.
ಈ ಹಿಂದೆ ಸುದೀಪ್ ನಟನೆಯ ‘ತಾಯವ್ವ ‘ ಚಿತ್ರದಲ್ಲಿ ತಾಯವ್ವನ ಭೂಮಿಕೆಯನ್ನು ನಿಭಾಯಿಸಿದ್ದ ಉಮಾಶ್ರೀಯವರು ಕಳೆದ ತಿಂಗಳು ಟೈಟಲ್ ಲಾಂಚ್ ಮಾಡಿ ಕೊಟ್ಟಿದ್ದರು.
ಈ ಸಿನಿಮಾದ ನಿರ್ಮಾಣ ಹಂತದಿಂದಲೂ ಬೆನ್ನೆಲುಬಾಗಿ ನಿಂತಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾದ ಬಾ . ಮಾ.ಹರೀಶ್ ಅವರ ಸ್ನೇಹಕ್ಕೆ ಕಟ್ಟು ಬಿದ್ದು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಾಗಿ ತಿಳಿಸಿದ ಸುದೀಪ್, ಬಾ. ಮಾ. ಹರೀಶ್ ಹೊಸದಾಗಿ ಆರಂಭಿಸಿದ ಆಡಿಯೋ ಕಂಪನಿ ಗೆ ಶುಭ ಹಾರೈಸಿದರು.
ಬಾ. ಮಾ. ಹರೀಶ್ ಮಾತನಾಡಿ ನಮ್ಮಲ್ಲಿ ಎಷ್ಟೋ ನಿರ್ಮಾಪಕರು ಆಡಿಯೋ ರೈಟ್ಸ್ ಮಾರಾಟ ಮಾಡಲು ವಿಫಲರಾಗಿರುವುದರಿಂದ ಒಳ್ಳೆಯ ಹಾಡುಗಳು ಬೆಳಕಿಗೆ ಬರ್ತಾ ಇಲ್ಲ. ಅಂತಹ ನಿರ್ಮಾಪಕರಿಗೆ ತಮ್ಮ ಸಂಸ್ಥೆ ಒಳ್ಳೆ ಫ್ಲಾಟ್ ಫಾರ್ಮ್ ಆಗಲಿದೆಯೆಂದು ತಿಳಿಸಿದರು.
ಚಿತ್ರದಲ್ಲಿ ಒಟ್ಟು 11 ಬಿಟ್ ಹಾಡುಗಳಿದ್ದು ಸಂಗೀತ ನಿರ್ದೇಶಕ ಅನಂತ್ ಆರ್ಯನ್ ಎಲ್ಲಾ ಹಾಡುಗಳನ್ನು ನಾಯಕಿ ಗೀತಾ ಪ್ರಿಯಾ ಅವರ ಕೈಲ್ಲಿ ಹಾಡಿಸಿದ್ದಾರೆ. ಎಲ್ಲಾ ಹಾಡುಗಳು ಜನಪ್ರಿಯ ಜಾನಪದ ಹಾಡುಗಳನ್ನು ಒಳಗೊಂಡಿದೆ.
ಸೂಲಗಿತ್ತಿಯೊಬ್ಬಳು ಎದುರಿಸುವ ಸವಾಲುಗಳು, ಹೆಣ್ಣು ಬ್ರೂಣ ಹತ್ಯೆಯಂತಹ ಜ್ವಲಂತ ಸಮಸ್ಯೆಯ ಕುರಿತಾದ ಈ ಚಿತ್ರವನ್ನು ಪದ್ಮಾವತಿ ಚಂದ್ರಶೇಖರ್ ನಿರ್ಮಿಸುತ್ತಿದ್ದಾರೆ.
ತಾಯವ್ವನ ಪಾತ್ರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಮಾಡಿರುವ ಗೀತಾ ಪ್ರಿಯಾ ನಟಿಸಿ ದ್ದಾರೆ. ಸಿನಿಮಾ ಸೆನ್ಸರ್ ಆಗಿದ್ದು ಸದ್ಯದಲ್ಲೇ ಬಿಡುಗಡೆಯಾಗಲಿದೆ