ಸೆಲೆಬ್ರಿಟಿ ಅನ್ನಿಸಿಕೊಂಡ ಅದೆಷ್ಟೋ ನಟ, ನಟಿಯರು ಬೇರೆ ಬೇರೆ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ತಾನೇ ಇದ್ದಾರೆ. ಅವರ ನೇಮು, ಫೇಮ್ಗೆ ತಕ್ಕಂತೆ.. ಅವರ ಅಂಗಸೌಷ್ಠಕ್ಕೆ ತಕ್ಕಂತೆ.. ಅವರ ಲುಕ್ಗೆ ಮ್ಯಾಚ್ ಆಗುವಂತಹ ಜಾಹೀರಾತುಗಳನ್ನೇ ಸಂಬಂಧಪಟ್ಟ ಕಂಪನಿಗಳು ಕೊಡ್ತಾ ಇರ್ತವೆ ಮತ್ತು ಆ ಕಂಪನಿಗಳು ಅವರನ್ನೇ ರಾಯಭಾರಿಯನ್ನಾಗಿ ಮಾಡಿಕೊಳ್ತವೆ.
ಬಟ್ಟೆ, ಸುಗಂಧದ್ರವ್ಯ, ಮೊಬೈಲ್, ಲ್ಯಾಪ್ಟಾಪ್ಗಳು, ಕಂಪ್ಯೂಟರ್ಗಳು, ಟಿವಿಗಳು, ಬೈಕ್, ಕಾರು ಹೀಗೆ ಹತ್ತಾರು ವಸ್ತುಗಳಿಗೆ ಹೆಚ್ಚು ನಟ, ನಟಿಯರೇ ಬ್ರಾಂಡ್ ಅಂಬಾಸಿಡರ್ ಆಗಿರುತ್ತಾರೆ. ಇದರ ಜೊತೆಗೆ ಕಾಂಡೋಮ್ಗಳ ಜಾಹೀರಾತಿಗೂ ನಟ, ನಟಿಯರನ್ನೇ ಬಳಸಿಕೊಂಡಿದ್ದನ್ನ ನೋಡಿದ್ದೀರಿ.
ಇತ್ತೀಚೆಗೆ ನಾವು ಟಿವಿಗಳಲ್ಲಿ ನೋಡ್ತಿರುವಾಗ ಖ್ಯಾತ ಬಾಲಿವುಡ್ ನಟಿ.. ಮಾದಕ ಮತ್ತು ಮೋಹಕತೆಗೆ ಹೆಸರುವಾಸಿಯಾಗಿರೋ ಸನ್ನಿ ಲಿಯೋನ್ ಕೂಡ ಕಾಂಡೋಮ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದಲ್ಲದೇ ನಟ ಕಾರ್ತಿಕ್ ಆರ್ಯನ್ ಕೂಡ ಇದರಲ್ಲಿ ನಟಿಸಿ ಎಲ್ಲರ ಆಕರ್ಷಣೆ ಆಗಿದ್ದು. ಇದೀಗ ಮತ್ತೊಬ್ಬ ನಟಿ ಮತ್ತು ನಟನ ಜೋಡಿ ಬೆಸ್ಟ್ ಅನ್ನೋ ಮಾತು ಕೇಳಿಬರ್ತಿದೆ. ಈ ಮಾತನ್ನ ಬೇರೆ ಯಾರೂ ಹೇಳಿಲ್ಲ.. ಖುದ್ದು ಕಾಂಡೋಮ್ ಕಂಪನಿ ಸಹಸಂಸ್ಥಾಪಕರೇ ತಿಳಿಸಿದ್ದು, ಈ ಹೇಳಿಕೆ ಸಖತ್ ವೈರಲ್ ಆಗಿದೆ.
ಇತ್ತೀಚೆಗೆ ನಡೆದ ಮಾಧ್ಯಮವೊಂದರ ಸಂದರ್ಶನದಲ್ಲಿ ಮ್ಯಾನ್ಫೋರ್ಸ್ ಕಾಂಡೋಮ್ ಕಂಪನಿಯ ಎಂಡಿ ಹಾಗೂ ಸಹ ಸಂಸ್ಥಾಪಕ ರಾಜೀವ್ ಜುನೇಜಾ ಮಾತನಾಡುತ್ತಿದ್ದರು. ಹಾಗೆ ಮಾತನಾಡುವಾಗ ಕಂಪನಿಯ ಕಾಂಡೋಮ್ ಜಾಹೀರಾತಿಗೆ ಮೊದಲು ಸನ್ನಿ ಲಿಯೋನ್ ಪ್ರಚಾರದ ರಾಯಭಾರಿಯನ್ನಾಗಿ ಮಾಡಲಾಗಿತ್ತು. ಬಳಿಕ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರನ್ನು ಆರಿಸಲಾಗಿತ್ತು. ಇವರಿಬ್ಬರನ್ನೂ ಬಿಟ್ಟು ಬೇರೆ ಯಾರು ಸೂಕ್ತ ಅಂತಾ ಪ್ರಶ್ನೆ ಕೇಳಲಾಯ್ತು.
ಆಗ ನಟಿ ಜಾನ್ವಿ ಕಪೂರ್ ಹಾಗೂ ನಟ ರಣಬೀರ್ ಕಪೂರ್ ಹೆಸರನ್ನು ರಾಜೀವ್ ಜುನೇಜಾ ಹೇಳಿದ್ರು. ‘ಜಾನ್ವಿ ಕಪೂರ್ ಅವರು ಕಾಂಡೋಮ್ ಆಡ್ಗೆ ಬೆಸ್ಟ್.. ಅವರೇ ಸೂಪರ್ ಸೆಲೆಕ್ಷನ್. ಇನ್ನು ಪುರುಷರಲ್ಲಿ ರಣಬೀರ್ ಕಪೂರ್ ಉತ್ತಮ’ ಅನ್ನೋ ಹೇಳಿಕೆ ಈಗ ಬಾಲಿವುಡ್ ಅಷ್ಟೇ ಅಲ್ಲ, ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.
ಆದ್ರೆ, ಕಾಂಡೋಮ್ ಜಾಹೀರಾತು ವಿಷಯದಲ್ಲಿ ಹೀಗೆ ಹೇಳಿಕೆ ಕೊಟ್ಟಿರೋದನ್ನ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅವರವರ ಬ್ಯುಸಿನೆಸ್ ವಿಷ್ಯ ಅಂತಾನೂ ಹೇಳಿದ್ದಾರೆ. ಒಂದು ಕಂಪೆನಿ ತನ್ನ ಪ್ರಾಡಕ್ಟ್ಗಳನ್ನ ಸೇಲ್ ಮಾಡಬೇಕು ಅಂದ್ರೆ, ಅದರ ಪ್ರಚಾರಕ್ಕೆ ಯಾರು ಉತ್ತಮ ಅನ್ನೋದು ಅವರ ಆಯ್ಕೆ.
ಇದು ಆ ಕಂಪೆನಿ ಎಂಡಿಯ ಪರ್ಸನಲ್ ಒಪಿನಿಯನ್.. ಇದರಲ್ಲಿ ಅಸಹ್ಯಪಡಬೇಕಾದ ಸಂಗತಿ ಏನೂ ಇಲ್ಲ ಅಂತಾ ಕೆಲ ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಅದೇನೇ ಇದ್ರೂ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿರೋ ಜಾನ್ವಿ ಕಪೂರ್ ಮತ್ತೆ ಮಾದಕತೆಯ ಸುದ್ದಿಯಲ್ಲಿರೋದು ಸೋಷಿಯಲ್ ಮೀಡಿಯಾದ ಮಸಾಲೆ ಸುದ್ದಿಗೆ ಮತ್ತೊಂದು ಸುದ್ದಿ ಸೇರಿದಂತಾಗಿದೆ.