ಶರತ್ ಚಂದ್ರ 

ಈಗಾಗಲೇ ಸಾಮಾಜಿಕ ಕಳಕಳಿಯಿರುವ ‘ತಾಯವ್ವ ‘ಚಿತ್ರ ನಿರ್ಮಿಸಿರುವ ತಂಡದಿಂದ ಇನ್ನೊಂದು ಚಿತ್ರ ಬರಲಿದೆ. ರಾಗಿಣಿ ದ್ವಿವೇದಿ ನಾಯಕಿಯಾಗಿ ನಟಿಸಲಿರುವ ಹೊಸ ಚಿತ್ರಕ್ಕೆ ‘ನ್ಯಾಯ ಬೆಲೆ ಅಂಗಡಿ ಸೋಮನಹಳ್ಳಿ ‘ಎಂದು ಹೆಸರಿಡಲಾಗಿದೆ.

ಈ ಚಿತ್ರಕ್ಕೆ ಕೂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನಿಕಟ ಪೂರ್ವ ಅಧ್ಯಕ್ಷರಾದ ಬಾ. ಮಾ. ಹರೀಶ್ ಬೆಂಬಲವಾಗಿ ನಿಂತಿದ್ದಾರೆ.ಮಹಿಳಾ ಪ್ರಧಾನ ಕಥೆಯುಳ್ಳ ಈ ಚಿತ್ರಕ್ಕೆ ತೇಜು ಮೂರ್ತಿ ಮತ್ತು ಎಸ್. ಪದ್ಮಾವತಿ ಚಂದ್ರಶೇಖರ್ ನಿರ್ಮಾಪಕಿ ಯರಾಗಿರುವುದು ವಿಶೇಷ.

1000412671

ಈ ಚಿತ್ರದ ಹಾಡುಗಳ ಧ್ವನಿ ಮುದ್ರಣ ಪೂಜೆಯು ಇದೇ ಭಾನುವಾರ ವಿಜಯನಗರದ ಆದಿಚುಂಚನಗಿರಿ ಮಠದ ದೇವಸ್ಥಾನದಲ್ಲಿ ನೆರವೇರಿತು. ಈ ಹಿಂದೆ’ ತಾಯವ್ವ ‘ಚಿತ್ರಕ್ಕೆ ಸಂಗೀತ ನೀಡಿದ್ದ ಅನಂತ ಆರ್ಯನ್ ಅವರೇ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ..

ಮಾಲಾಶ್ರೀ ನಟಿಸಿರುವ ‘ರಾಣಿ ಮಹಾರಾಣಿ’ ಸೇರಿದಂತೆ ಮಹಿಳಾ ಪ್ರಧಾನ ಭೂಮಿಕೆ ಇರುವ ಚಿತ್ರಗಳನ್ನು ನಿರ್ದೇಶಿಸಿರುವ ಬಿ ರಾಮಮೂರ್ತಿ ದಶಕದ ನಂತರ ಚಿತ್ರವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ. ಚಿತ್ರಕ್ಕೆ ಕಥೆ ಮತ್ತು ಸಂಭಾಷಣೆ ಬರೆದಿರುವ ಬಿ. ರಾಮಮೂರ್ತಿ ಹಳ್ಳಿಯಲ್ಲಿ ಇರುವಂತಹ ನ್ಯಾಯ ಬೆಲೆ ಅಂಗಡಿಗೆ ಸಂಬಂಧ ಪಟ್ಟ ವಿಷಯಗಳು, ರೇಷನ್ ಅಂಗಡಿಯಲ್ಲಿ ನಡೆಯುವ ಅವ್ಯವಹಾರ ಹಾಗೂ ಹಳ್ಳಿಯಲ್ಲಿ ಸಹಜವಾಗಿ ನಡೆಯುವ ಘಟನೆಗಳ ಕುರಿತು ಕಥೆ ಹೆಣೆದಿದ್ದಾರೆ.

1000412693

ಚಿತ್ರದ ಛಾಯಾಗ್ರಾಹಕರು ಕೂಡ ಆಗಿರುವ ನಿರ್ದೇಶಕ ಸಾತ್ವಿಕ್ ಪವನ್ ಕುಮಾರ್ ಮಾತನಾಡಿ ಇದೊಂದು ಬ್ರಿಡ್ಜ್ ಸಿನಿಮಾ ಮಾದರಿಯ ಸಿನಿಮಾ, ರಾಗಿಣಿಯವರು ಈ ಹಿಂದೆ ಮಾಡದೇ ಇರುವ ಪಾತ್ರ ಈ ಚಿತ್ರದಲ್ಲಿರುತ್ತೆ ಅಂತ ತಿಳಿಸಿದರು.

ರಾಗಿಣಿ ದ್ವಿವೇದಿ ಮಾತನಾಡಿ ನಾನೊಬ್ಬ ಫೆಮಿನಿಸ್ಟ್, ಮಹಿಳಾ ನಿರ್ಮಾಪಕಿಯರ ಚಿತ್ರದಲ್ಲಿ ಅಭಿನಯಿಸುತ್ತಿರುವುದು ಖುಷಿ ತಂದಿದೆ ಎಂದು ತಿಳಿಸಿದರು. ತಾನು ಯಾವಾಗಲೂ ಚಾಲೆಂಜಿಂಗ್ ಪಾತ್ರ ಮಾಡಲು ಹಿಂಜರಿಯುವುದಿಲ್ಲ, ಬಾ. ಮಾ. ಹರೀಶ್ ಮತ್ತು ಬಾ. ಮಾ. ಗಿರೀಶ್ ಕಥೆ ಹೇಳಿದ ಕೂಡಲೇ ಇಷ್ಟ ಪಟ್ಟು ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

1000412686

ಕಾರ್ಯಕ್ರಮದಲ್ಲಿ ತಾಯವ್ವ ಚಿತ್ರದ ನಾಯಕಿ ಶ್ರೀಮತಿ ಗೀತಾಪ್ರಿಯಾ, ಬಾ. ಮಾ. ಹರೀಶ್ ಬಾ. ಮಾ. ಗಿರೀಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಚಿತ್ರ ತಂಡಕ್ಕೆ ಶುಭ ಕೋರಿದರು.

ಚಿತ್ರದ ಮೂಹೂರ್ತ ಸದ್ಯದಲ್ಲೇ ನಡೆಯಲಿದ್ದು ಶೀಘ್ರದಲ್ಲೇ ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಆರಂಭಗೊಳ್ಳಲಿದೆ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ