ಸೋನಾಳಿಗೆ ಯಾರಾದರೂ ಪಾರ್ಟ್ ನರ್ ಸಿಕ್ಕಿದರೆ?

ಸೋನಾ ಬೇಬಿ ಇತ್ತೀಚೆಗೆ ತನ್ನ ರಿಂಗ್‌ ಫಿಂಗರ್‌ ಹೈಲೈಟ್‌ ಗೊಳಿಸುತ್ತಾ ಒಂದು ಫೋಟೋವನ್ನು FB‌ಗೆ ಪೋಸ್ಟ್ ಮಾಡಿದ್ದಳು. ಅವಳ ಅಳಿದುಳಿದ ಫ್ಯಾನ್ಸ್ ಗೆ ತುಸು ಗಾಬರಿಯಾಗಿ, ಇವಳಿಗೆ ಯಾರಾದರೂ ಲೈಫ್‌ ಫಾರ್ಟ್‌ ನರ್‌ ಸಿಕ್ಕಿಬಿಟ್ಟರೆ ಎಂದು ಗಾಬರಿಗೊಂಡಿದ್ದರು. ಅವಳು ತನ್ನ ರಿಂಗ್‌ ಫಿಂಗರ್‌ ಗೆ ಲಕ್ಷಣವಾಗಿ ವಜ್ರದುಂಗುರ ಧರಿಸಿರುವುದು ಕಾಣಿಸುತ್ತಿದೆ, ಇದರಿಂದ ಇವಳು ಗುಟ್ಟುಗುಟ್ಟಾಗಿ ಎಂಗೇಜ್‌ ಮೆಂಟ್‌, ಮಾಡಿಕೊಂಡಳೇ ಎಂದು ಎಲ್ಲರೂ ಊಹಿಸುವುದರಲ್ಲಿ ತಪ್ಪೇನಿಲ್ಲ. ಇವಳಿಗೆ ಈಗಾಗಲೇ ಬಾಲಿವುಡ್‌ ನಿಂದ ಸೋಡಾ ಚೀಟಿ ದೊರಕಿರುವುದರಿಂದ ಇನ್ನಾದರೂ ಸಂಸಾರ ಕಟ್ಟಿಕೊಳ್ಳೋಣ ಎಂದು ಅವಳು ನಿರ್ಧರಿಸಿದ್ದರೆ ಅದಕ್ಕಾಗಿ ಬೇರೆಯವರೇಕೆ ಕಂಗಾಲಾಗಬೇಕು....?

ಆಶ್ರಮ ಸೇರಿದ ಈಶಾಳ ಸಾಹಸ

Esha

ಇದೇನಪ್ಪಾ, ಈಶಾಳಿಗೆ ಇಷ್ಟು ಬೇಗ ಆಶ್ರಮ ಸೇರುವಂಥದ್ದೇನಾಯಿತು ಅಂದುಕೊಂಡಿರಾ? ಹಾಗೇನಿಲ್ಲ, ಅವಳೀಗ ವೆಬ್ ಸೀರೀಸ್‌ `ಆಶ್ರಮ್'ನ 3ನೇ ಸೀಸನ್‌ ನಲ್ಲಿದ್ದಾಳೆ. ಇತ್ತೀಚೆಗಷ್ಟೆ, ಬಿಡುಗಡೆಗೊಂಡ ಇದರ ಟ್ರೇಲರ್‌ ನೋಡಿ ವೀಕ್ಷಕರು ಬೆಕ್ಕಸ ಬೆರಗಾದರು. ತನ್ನ ಬೋಲ್ಡ್ ಸೀನ್‌ ಗಳಿಗೆ ಖ್ಯಾತಳಾದ ಈಶಾಳಿಗೆ ಈ ಚಿತ್ರದಲ್ಲಿ ಒಂದೆರಡಲ್ಲ, 6 ಬೋಲ್ಡ್ ಸೀನ್ಸ್ ಇವೆ! ಇತ್ತ ಈಶಾ ಬೋಲ್ಡ್ ನೆಸ್‌ ಹೆಚ್ಚಿಸಿಕೊಳ್ಳುತ್ತಿದ್ದಂತೆ ಅತ್ತ ಪ್ರಕಾಶ್‌ ರ, ಬಾಬಿ ಈ ಆಶ್ರಮದ ತಾಪಮಾನ ಹೆಚ್ಚಿಸಿದರು. ಈ ಸೆಕ್ಸೀ ಬೋಲ್ಡ್‌ ನೆಸ್‌ ಗೆ ಬದಲಾಗಿ ಈ ಚಿತ್ರದಲ್ಲಿ ಬೇರೇನಾದರೂ ಹೂರಣವಿದೆಯೇ ಎಂದು ಕಾದು ನೋಡಬೇಕಿದೆ. ನಮ್ಮ ದೇಶದಲ್ಲಿ ಇಂಥ ಬೋಲ್ಡ್ ನೆಸ್‌ ಮೆರೆದ ಎಷ್ಟೋ ಆಶ್ರಮಗಳು ಬಂದ್‌ ಆಗಿವೆ, ಅದರ ಬಾಬಾಗಳು ಜೇಲು ಸೇರಿದ್ದಾರೆ!

ಮರಳಿ ಬರುತ್ತಿದ್ದಾನೆ ಗುಡ್ಡು ಭೈಯಾ

Guddu

`ಮಿರ್ಜಾಪುರ್‌' ಚಿತ್ರದ ಭೈಯಾಗಳ ಲೋಕವೇ ಅತಿ ವಿಚಿತ್ರ ಅದು ಮುನ್ನಾ, ಕಾಲೀನ್‌, ಗುಡ್ಡು ಭೈಯಾ ಯಾರೇ ಆಗಿರಲಿ..... ಈ ಸಲ ಬಾಂಬ್‌ ಸ್ಛೋಟಿಸಿರುವುದು ಗುಡ್ಡು. ಅಲಿ ಫಸ್‌ ಅಂದ್ರೆ ಗುಡ್ಡು, FB‌ನಲ್ಲಿ ಒಂದು ಫೋಟೋ ಪೋಸ್ಟ್ ಮಾಡಿ ಬರೆದಿದ್ದು ಏನೆಂದರೆ, `ಬರಲಿದ್ದಾನೆ..... ಗುಡ್ಡು ಭೈಯಾ, ಎಚ್ಚರ! ಇದೀಗ ಕೇಡಿಗರಿಗೆ ಬೂಟಿನೇಟು, ಗುಂಡಿನ ಸುರಿಮಳೆ ತಪ್ಪಿದ್ದಲ್ಲ!' ಇದನ್ನು ಗಮನಿಸಿದ ವೀಕ್ಷಕರ ಉತ್ಸಾಹ ಮೇರಿ ಮೀರಿದೆ. ಹೀಗಾಗುವುದು ಸಹಜ, ಸ್ವಾಭಾವಿಕ. ದೇಶದಲ್ಲಿ ಈಗ ಒಂದು ನಕಾರಾತ್ಮಕ ವಿಚಾರ ಹರಿದಾಡುತ್ತಿದೆ, ಅದರ ಕಾರಣ ಈಗ ಎಲ್ಲೆಡೆ ಹಿಂಸೆ, ಹತ್ಯಾಕಾಂಡಗಳು ಹರಡುತ್ತಿವೆ.

ಟ್ರೆಕ್ಕಿಂಗ್‌..... ಫ್ಯಾಷನ್ಸಾಹಸ

tracking

ಸಾರಾ ಅಲಿ ಖಾನ್‌ ಇದೀಗ ಹಾಲಿಡೇ ಮೂಡ್‌ ನಲ್ಲಿ ಕಾಶ್ಮೀರದ ಬೆಟ್ಟಗುಡ್ಡಗಳನ್ನು ಏರುತ್ತಿದ್ದಾಳೆ. FB‌ನಲ್ಲಿ ರಾರಾಜಿಸುತ್ತಿರುವ ಇವಳ ಚಿತ್ರಗಳು, ಟ್ರೆಕ್ಕಿಂಗ್‌ ಎಷ್ಟು ಮಜವಾಗಿರುತ್ತೆ ಎಂದು ಸಾರುತ್ತಿವೆ, ಅದೀಗ ಫ್ಯಾಷನ್‌ ಸಹ ಆಗಿದೆ. ವೀಕ್ಷಕರು ಸಹ ಇವಳಿಂದ ಬೇಕಾದಷ್ಟು ಕಲಿಯಬಹುದು. ಟ್ರೆಕ್ಕಿಂಗ್‌ ಗೆ ಮೊದಲು ಧಾರಾಳ ಶಾಪಿಂಗ್‌ ಮಾಡಿ, ನಿಮ್ಮಿಷ್ಟದ ಬೆಟ್ಟಗುಡ್ಡ ಅರಸಿ ಹೊರಡಿ. ಸಾರಾಳಿಗೆ ಬಂದಷ್ಟು ಲೈಕ್ಸ್ ನಿಮ್ಮ ಮುಸುಡಿಗೆ ಬರದಿರಬಹುದು, ಆದರೆ ಆರೋಗ್ಯ ಸುಧಾರಿಸಿ, ಮೂಡ್ ಸರಿಹೋಗುವುದಂತೂ ಗ್ಯಾರಂಟಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ