ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. ಅವರು ಕಲಾವಿದರು ಮತ್ತು ಸೃಜನಶೀಲರನ್ನು ಗೌರವಿಸುವ ನಿಜವಾದ ಮುತ್ಸದ್ದಿ ಮತ್ತು ದೂರದೃಷ್ಟಿ ಹೊಂದಿರುವವರು ಎಂದು ಬಣ್ಣಿಸಿದ್ದಾರೆ.

ಕೇಂದ್ರ ಸರ್ಕಾರದ ‘ಮೈಗೌಇಂಡಿಯಾ’ ನಾಗರಿಕ ಸಂವಹನ ವೇದಿಕೆಯ ಜಿಡಿಪಿ@ಮೈಗೌ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಮೋಹನ್ ಲಾಲ್ ಈ ಹೇಳಿಕೆ ನೀಡಿದ್ದಾರೆ.

ಮೋದಿ ಅವರನ್ನು ಹಲವಾರು ಬಾರಿ ಭೇಟಿ ಮಾಡುವ ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎಂದಿರುವ ಮೋಹನ್ ಲಾಲ್, ಪ್ರತಿ ಭೇಟಿಯಲ್ಲೂ ನಿಜವಾದ ಮುತ್ಸದ್ದಿ ಹಾಗೂ ದೃಢ ಮತ್ತು ದೂರದೃಷ್ಟಿಯುಳ್ಳ ನಾಯಕನನ್ನು ಭೇಟಿಯಾದ ಅನುಭವ ತಮಗಾಗಿದೆ ಎಂದು ತಿಳಿಸಿದ್ದಾರೆ.

ನಮ್ಮ ರಾಷ್ಟ್ರದ ಬಗ್ಗೆ ಅವರಿಗಿರುವ ಸಮರ್ಪಣಾ ಮನೋಭಾವ ನಿಜಕ್ಕೂ ಸ್ಫೂರ್ತಿದಾಯಕ. ಅವರ ಶಕ್ತಿ ಮತ್ತು ಸ್ಪಷ್ಟ ದೂರದೃಷ್ಟಿಯನ್ನು ನಾನು ಯಾವಾಗಲೂ ಪ್ರಶಂಶಿಸುತ್ತೇನೆ. ಭಾರತವನ್ನು ಮುನ್ನಡೆಸುವಲ್ಲಿ ಅವರ ವಿವೇಕ ಮತ್ತು ಸೌಜನ್ಯ ಶ್ಲಾಘನೀಯ ಎಂದು ಮೋಹನ್ ಲಾಲ್ ಹೇಳಿದ್ದಾರೆ.

ಪ್ರತಿ ಬಾರಿ ಬಿಕ್ಕಟ್ಟು ಎದುರಾದಾಗ ಅವರು ನಿರ್ವಹಿಸುವ ರೀತಿ ದೇಶವನ್ನು ಮುನ್ನಡೆಸುವ ವಿಧಾನವು ಪ್ರತಿಯೊಬ್ಬ ವ್ಯಕ್ತಿಯು ಕಲಿಯಬೇಕಾದ ಹಾಗೂ ತಿಳಿದುಕೊಳ್ಳಬೇಕಾದ ವಿಷಯ ಎಂದಿದ್ದಾರೆ.

ಪ್ರಧಾನಿ ನಿವಾಸದಲ್ಲಿ ಆತಿಥ್ಯ ವಹಿಸಿದ್ದಕ್ಕೆ ನನಗೆ ಹೆಮ್ಮೆಯಾಗುತ್ತದೆ ಮತ್ತು ಕಲಾವಿದರು ಮತ್ತು ಸೃಷ್ಟಿಕರ್ತರಿಗೆ ಅವರು ತೋರಿಸುವ "ಉತ್ಸಾಹ, ಕಾಳಜಿ ಮತ್ತು ಗೌರವ"ವನ್ನು ವೈಯಕ್ತಿಕವಾಗಿ ಅನುಭವಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ನೀವು ಅವರ ಹತ್ತಿರ ನಿಂತಾಗ, ನೀವು ಪ್ರೀತಿಯನ್ನು ಅನುಭವಿಸಬಹುದು, ಅವರು ರಾಷ್ಟ್ರಕ್ಕೆ ಬದ್ಧರಾಗಿದ್ದಾರೆ ಎಂದು ಬಣ್ಣಿಸಿದ ಅವರು, "ಅವರು ಒಬ್ಬ ನಾಯಕ. ಅವರು ರಾಜಕಾರಣಿಯಲ್ಲ, ಜನರು ಸಾಮಾನ್ಯವಾಗಿ ತಮ್ಮ ತಾಯಂದಿರಿಗೆ ಮೀಸಲಿಡುವ ಭಕ್ತಿಯಂತೆ ಪ್ರಧಾನಿ ದೇಶವನ್ನು ನಡೆಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಮೋದಿ ಶಾಂತ, ಬಹುತೇಕ ಆಧ್ಯಾತ್ಮಿಕ ಉಪಸ್ಥಿತಿಯನ್ನು ಹೊಂದಿದ್ದಾರೆ, ಅವರು ಯಾವಾಗಲೂ ಧ್ಯಾನಸ್ಥ ಸ್ಥಿತಿಯಲ್ಲಿರುತ್ತಾರೆ. ಅವರೊಬ್ಬ ಯೋಗಿ, ಪ್ರಧಾನಿ ಅಹಂ ಇಲ್ಲದೆ ಕಾರ್ಯನಿರ್ವಹಿಸುತ್ತಿರುವಂತೆ ಕಾಣುತ್ತಾರೆ ಎಂದು ಮೋಹನ್ ಲಾಲ್ ಶ್ಲಾಘಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ