ಕಥೆ ಸಂಧ್ಯಾ ಸುರೇಂದ್ರ

ರಮಾಕಾಂತನಿಗೆ ಮಗಳು ಭವ್ಯಾಳನ್ನು DNA ಪರೀಕ್ಷಿಸಬೇಕಾದ ಅಗತ್ಯ ಏನು ಬಂತು? ಭವ್ಯಾ ಯಾರು? ಕುರಿತು ರಿಪೋರ್ಟ್ಬಂದ ನಂತರ ನಡೆದದ್ದೇನು.....?

ಅಂದು ಪೇಪರ್‌ ನಲ್ಲಿ ಬಂದಿದ್ದ ಒಂದು ವರದಿಯನ್ನು ಓದಿ ಯಾಕೋ ಭವ್ಯಾಳ ಪ್ರಪಂಚ ಒಂದೇ ದಿನಕ್ಕೆ ಕಾಲಡಿ ಕುಸಿದು ಹೋಯಿತು. ತನ್ನನರ ಮಧ್ಯೆ ಭವ್ಯಾ ಇದ್ದಕ್ಕಿದ್ದಂತೆ ಪರಕೀಯಳಾಗಿ ಹೋದಳು.

ನೋಡಲಿಕ್ಕೇನೋ ಈಗಲೂ ಎಲ್ಲ ಮೊದಲಿನಂತೆಯೇ ಇತ್ತು, ಆದರೆ ದೃಷ್ಟಿಯಲ್ಲಿ ಮಾತ್ರವಲ್ಲದೆ, ಹಲವರ ಮನದಲ್ಲೂ ಈಗ ಭೇದಭಾವ ಸ್ಪಷ್ಟ ಗೋಚರಿಸುತ್ತಿತ್ತು. ತಾಯಿಯ ಸ್ಪರ್ಶದಿಂದಲೂ ಭವ್ಯಾಳಿಗೆ ಈ ವ್ಯತ್ಯಾಸ ಗೊತ್ತಾಗುತ್ತಿತ್ತು. ತಾಯಿಯ ಸ್ಪರ್ಶದಲ್ಲಿ ಇದೀಗ ಅರಿಯದ ಸಂಕೋಚ, ಮುಜುಗರಗಳಿದ್ದವು.

ಭವ್ಯಾಳ ಅಸ್ತಿತ್ವವೇ ಒಂದು ಪ್ರಶ್ನಾರ್ಹ ಚಿಹ್ನೆಯಾಗಿ ಹೋಗಿತ್ತು. ಆದರೆ ಇದರಲ್ಲಿ ಅವಳ ತಪ್ಪಾದರೂ ಏನು? ತಾನು ಹುಟ್ಟಿದ ಆ ಘಳಿಗೆಯಲ್ಲಿ ಎಲ್ಲಿ ಏನು ನಡೆಯಿತು, ಎಂಥ ಎಡವಟ್ಟಾಯಿತು ಎಂದು ಆ ಸಣ್ಣ ಜೀವಕ್ಕೆ ತಿಳಿಯಬೇಕಾದರೂ ಹೇಗೆ? ಅಂದು ಪೇಪರ್‌ ನಲ್ಲಿ ಪ್ರಕಟಗೊಂಡಿದ್ದ ವರದಿ 7 ವರ್ಷದ ಭವ್ಯಾಳನ್ನು ತನ್ನ ಮನೆಯಲ್ಲಿಯೇ ಅಪರಿಚಿತಳನ್ನಾಗಿಸಿತ್ತು. ಹೊರಗಿನ ಒಂದು ನರ್ಸಿಂಗ್‌ ಹೋಮಿನ ಸ್ಕ್ಯಾಂಡ್‌ ನಿಂದಾಗಿ ಅದರ ನಿರ್ವಾಹಕರು, ಸಿಬ್ಬಂದಿ ಎಲ್ಲರನ್ನೂ ಹಿಡಿದು ಪೊಲೀಸರು ಸೆರೆಗೆ ಹಾಕಿದ್ದರು. ಆ ನರ್ಸಿಂಗ್‌ ಹೋಮಿನಲ್ಲಿ ಡೆಲಿವರಿಗೆಂದು ಬಂದಿದ್ದ ಒಬ್ಬ ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ತಮ್ಮ ಬಲವಾದ ಕಾರ್ಯಾಚರಣೆ ನಡೆಸಿದ್ದರು.

ದೂರು ನೀಡಿದ ಗಿರಿಜಾಳ ಆರೋಪವೆಂದರೆ, ಆ ನರ್ಸಿಂಗ್‌ ಹೋಮಿನಲ್ಲಿ ಆಗ ತಾನೇ ಅವಳ ಹೆರಿಗೆಯಾಗಿದ್ದ 1-2 ದಿನಗಳ ಮಗುವನ್ನು ಬದಲಾಯಿಸಲಾಗಿತ್ತಂತೆ! ತಾನು ಹೆತ್ತಿದ್ದು ಒಂದು ಗಂಡು ಮಗು, ಅದಕ್ಕೆ ಹಾಲೂಡಿಸಿದ್ದೂ ನೆನಪಿದೆ, ಮಾರನೇ ಬೆಳಗ್ಗೆ ನೋಡಿದರೆ ತನ್ನ ಮಗ್ಗುಲಲ್ಲಿ ಅಲ್ಲಿನ ಸಿಬ್ಬಂದಿ ಒಂದು ಹೆಣ್ಣುಮಗು ಮಲಗಿಸಿದ್ದಾರೆ, ತನಗೆ ತನ್ನ ಮಗುವೇ ಬೇಕು ಎಂದು ಹೋರಾಡುತ್ತಿದ್ದಳು. ಈ ಕುಕೃತ್ಯದಲ್ಲಿ ತನ್ನ ಹೆರಿಗೆ ಮಾಡಿಸಿದ್ದ ಇಬ್ಬರು ನರ್ಸುಗಳ ಕೈವಾಡ ಖಂಡಿತಾ ಇದೆ ಎಂದು ತಿಳಿಸಿದ್ದಳು.

ಆಕೆಯ ದೂರಿನ ಪ್ರಕಾರ, ತಮ್ಮ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ಆ ಇಬ್ಬರು ನರ್ಸುಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡು, ಮಹಿಳಾ ಪೊಲೀಸರಿಂದ ಅವರದೇ ಭಾಷೆಯಲ್ಲಿ ಗದರಿಸಿ, ತದುಕಿದಾಗ, ಅವರು ತಮ್ಮ ತಪ್ಪು ಒಪ್ಪಿಕೊಂಡದ್ದಲ್ಲದೆ, ಅಲ್ಲಿ ನಡೆಯುತ್ತಿದ್ದ ಘನಘೋರ ಹಗರಣಗಳ ಬಗ್ಗೆಯೂ ತಿಳಿಸಿದರು.

ಅದನ್ನು ನಡೆಸುತ್ತಿದ್ದ ಒಡತಿ ನಕಲಿ ವೈದ್ಯೆ, ಅವಳ ಬಳಿಯಿದ್ದ ಸರ್ಟಿಫಿಕೇಟ್‌ ಎಲ್ಲವೂ ನಕಲಿ ಎಂದು ಖಾತ್ರಿಯಾಯಿತು. ಹೀಗಾಗಿ ಪೊಲೀಸರು ಸಾರಾಸಗಟಾಗಿ ಎಲ್ಲರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ಕಳೆದ 15 ವರ್ಷಗಳಿಂದ ನಡೆಯುತ್ತಿದ್ದ ಈ ಆಸ್ಪತ್ರೆ, ಇಂಥ ಅದೆಷ್ಟು ನೀಚ ಕುಕೃತ್ಯಗಳನ್ನೆಸಗಿ ಸಣ್ಣ ಕೂಸುಗಳನ್ನು ಮಾರಿಕೊಂಡಿವೆಯೋ ಗೊತ್ತಿಲ್ಲ ಎಂದು ಪೊಲೀಸರು ಕಂಡುಕೊಂಡರು. ಅಲ್ಲಿಗೆ ಬರುತ್ತಿದ್ದ ಅವಿವಾಹಿತ ಬಸುರಿಯರು, ಇವರು ಕೇಳಿದಷ್ಟು ಹಣ ತೆತ್ತು, ಗರ್ಭಪಾತ ಮಾಡಿಸಿಕೊಂಡು, ತಲೆ ಮರೆಸಿಕೊಳ್ಳುತ್ತಿದ್ದರು. ಇಂಥ ಅನೇಕಾನೇಕ ಕಾನೂನು ಬಾಹಿರ ಕುಕೃತ್ಯಗಳು ಹೊರಗೆ ಬಂದವು. ಕಾನೂನು ಬದ್ಧವಾಗಿ ಸಣ್ಣ ಕೂಸನ್ನು ದತ್ತು ತೆಗೆದುಕೊಳ್ಳಲು ಹೋದರೆ, ಕೋರ್ಟು ಕಛೇರಿಗೆ ಇನ್ನಿಲ್ಲದೆ ಅಲೆದಾಡಬೇಕಾದೀತೆಂದು, ಸಂತಾನಹೀನ ದಂಪತಿಗಳು ಇಲ್ಲಿಗೆ ಬಂದು, ಆಸ್ಪತ್ರೆಯವರಿಗೆ ದೊಡ್ಡ ಮೊತ್ತ ಮುಟ್ಟಿಸಿ, ಬೇಕಾದ ಮಕ್ಕಳನ್ನು ಪಡೆಯುತ್ತಿದ್ದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ