ಕಥೆ ಉಷಾ ಭಾರದ್ವಾಜ್

ಒಡಹುಟ್ಟಿದವರಾದ ಮೌನಾ ಮೀಣಾರಲ್ಲಿ ಅಜಗಜಾಂತರ ವ್ಯತ್ಯಾಸವಿತ್ತು. ಸರಳತೆಯ ಸಾಕಾರಮೂರ್ತಿ ಮೌನಾ ಸದಾ ಕಷ್ಟದಲ್ಲೇ ಕಾಲ ಕಳೆದಳು. ಇವಳ ತದ್ವಿರುದ್ಧ ಸ್ವಭಾವದ ವೀಣಾ ಅಹಂಕಾರದಲ್ಲಿ ಮೆರೆದಳು. ಆಕಸ್ಮಿಕವಾಗಿ ಅಕ್ಕ ಮೌನಾಳಿಗಿಂತ ತಂಗಿ ವೀಣಾಳ ಮದುವೆಯೇ ಮೊದಲು ನಡೆಯಿತು. ಮುಂದೆ ಮೌನಾಳ ಭವಿಷ್ಯವೇನು.......?

ಗಂಗಮ್ಮ ಬಸಪ್ಪ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡವಳು ಮೌನಾ, ಹೆಸರಿಗೆ ತಕ್ಕಂತೆ ಮೌನಗೌರಿಯೇ. ಇವಳು ಹುಟ್ಟಿದ ಘಳಿಗೆ ತುಂಬ ಬಡತನದಲ್ಲಿದ್ದ ಗಂಗಮ್ಮ ಬಸಪ್ಪನವರ ಅದೃಷ್ಟ ಖುಲಾಯಿಸಿ, ಸ್ವಲ್ಪ ಹೊಲ, ತೋಟ, ಒಂದು ಹಸು ಕೊಂಡರು. ಮೌನಾ ಅದಕ್ಕೆ ಗೌರಿ ಎಂದು ಹೆಸರಿಟ್ಟು ಯಾವಾಗಲೂ ಅದರೊಟ್ಟಿಗೆ ಆಟವಾಡುತ್ತಾ, ನಗುನಗುತ್ತಾ ಇರತೊಡಗಿದಳು. ಮೌನಾ ನೋಡಲು ಕಪ್ಪು, ಆದರೂ ಮನೆಯವರ ಕಣ್ಮಣಿಯಾಗಿ ಬೆಳೆದಳು.

ಇವಳು ಹುಟ್ಟಿದ ಎರಡು ವರ್ಷಕ್ಕೆ ಹುಟ್ಟಿದವಳೇ ವೀಣಾ. ವೀಣಾ ನಕ್ಕರೆ, ಮಾತನಾಡಿದರೆ ವೀಣೆ ನುಡಿಸಿದಂತಹ ಸ್ವರ ಅವಳದ್ದು. ಇವಳು ಹುಟ್ಟುವವರೆಗೂ ಮೌನಾ ಮನೆ ಮಂದಿಯ ಮುದ್ದಿನ ಕೂಸಾಗಿದ್ದಳು. ಕ್ರಮೇಣ ವೀಣಾಳ ಆಗಮನದಿಂದ ಎಲ್ಲರ ಗಮನ ಅವಳ ಮೇಲೆ ಹೆಚ್ಚಾಗತೊಡಗಿತು. ಹಾಲು ಬಿಳುಪಿನ ವೀಣಾ ನೋಡಲು ಸುಂದರವಾಗಿದ್ದಳು. ಎಲ್ಲದರಲ್ಲೂ ಚುರುಕು, ತಾನು ಏನು ಕೇಳಿದರೂ ಇಲ್ಲವೆನ್ನದ ತಾಯ್ತಂದೆಯರು. ಅವಳು ನಕ್ಕಾಗ ಕೆನ್ನೆಯಲ್ಲಿ ಬೀಳುವ ಗುಳಿಯಿಂದಾಗಿ ಇನ್ನೂ ಮುದ್ದಾಗಿ ಕಾಣುತ್ತಿದ್ದಳು. ವೀಣಾ ಚಿಕ್ಕವಳಾದ್ದರಿಂದ ಅಪ್ಪ ಅಮ್ಮ ಅವಳ ಮೇಲೆ ಹೆಚ್ಚಿನ ಕಾಳಜಿ ತೋರುತ್ತಿದ್ದರು.

ಚಿಕ್ಕಂದಿನಿಂದಲೂ ಈ ತಾರತಮ್ಯಕ್ಕೆ ಹೊಂದಿಕೊಂಡ ಮೌನಾ, ಮನೆ ಚಾಕರಿಯಲ್ಲಿ ಎತ್ತಿದ ಕೈ. ಮನೆಗೆ ಎಷ್ಟೇ ಜನ ಬರಲಿ ಬೇಸರಿಸದೇ ಎಲ್ಲರ ಚಾಕರಿ ಮಾಡುವ ಅಸಹಾಯಕಳು. ಯಾವಾಗಲೂ ಪೆದ್ದಿ ಎಂಬ ಬಿರುದು ಹೊತ್ತು ಹೈಸ್ಕೂಲ್ ‌ಕೂಡ ದಾಟಲಾಗಲಿಲ್ಲ. ಆದರೆ ತಂಗಿ ವೀಣಾ ಓದಿನಲ್ಲೂ ಸೈ. ಆಟ ಪಾಠ, ಭಾಷಣ, ಚರ್ಚಾಸ್ಪರ್ಧೆ, ನಾಟಕ, ಹಾಡು, ಹಸೆ ಎಲ್ಲದರಲ್ಲೂ ಎತ್ತಿದ ಕೈ.

ಮೌನಾ ತನಗೆ ಬೇಸರ, ದುಃಖವಾದಾಗೆಲ್ಲಾ ಅದನ್ನು ಮರೆಯಲು ಗೌರಿಯ ಬಳಿ ತೆರಳಿ ಅವಳ ಮೈದಡವುತ್ತಾ, ಮುದ್ದು ಮಾಡುತ್ತಾ ಸಮಾಧಾನವಾಗುತ್ತಿದ್ದಳು. ಮೌನಾ ಬಂದರೆ ಗೌರಿ `ಅಂಬಾ....ಅಂಬಾ....' ಎಂದು ಕೂಗುತ್ತಾ ತನ್ನ ಪ್ರೀತಿಯನ್ನು ತೋರಿಸುತ್ತಿತ್ತು.

ಮೌನಾ ಮತ್ತು ವೀಣಾರ ನಡುವೆ ಎರಡು ವರ್ಷ ಅಂತರವಿದ್ದರೂ, ಮೌನಾ ಸ್ವಲ್ಪ ಕುಳ್ಳಿ, ವೀಣಾ ಎತ್ತರದ ಹುಡುಗಿ. ನೋಡ ನೋಡುತ್ತಲೇ ಇಬ್ಬರ ಬಾಲ್ಯ ಕಳೆದು ಯೌವನಾವಸ್ಥೆಗೆ ಕಾಲಿಟ್ಟರು. ಹೆತ್ತವರಿಗೆ ಚಿಂತೆ ಶುರುವಾಯಿತು. ಬಂದವರೆಲ್ಲಾ ವೀಣಾಳ ಮಾತಿಗೆ, ಚುರುಕುತನಕ್ಕೆ, ಸೊಬಗಿಗೆ ಮಾರುಹೋಗಿ, ಅವಳೊಂದಿಗೆ ಮದುವೆ ಮಾಡಿಕೊಡುವಂತೆ ದುಂಬಾಲು ಬೀಳುತ್ತಿದ್ದರು.

ಇದು ಹೆತ್ತವರಿಗೆ ನುಂಗಲಾರದ ತುತ್ತಾಗತೊಡಗಿತು. ಮೌನ ಮೌನವಾಗಿ ದುಃಖವನ್ನು ನುಂಗಿ, ಗೌರಿಯಿದ್ದೆಡೆಗೆ ಹೋಗಿ ಕುಳಿತುಬಿಡುತ್ತಿದ್ದಳು. ಹೀಗೇ ಮೂರು ವರ್ಷ ಕಳೆಯಿತು. ಇತ್ತೀಚೆಗೆ ವೀಣಾ ಮೌನಾಳನ್ನು ಕಂಡರೆ  ಸಿಡಿಮಿಡಿ ಎನ್ನತೊಡಗಿದಳು. ಬಂದಂಥ ಒಳ್ಳೊಳ್ಳೆ ಸಂಬಂಧಗಳು ಕೈತಪ್ಪ ತೊಡಗಿದಾಗ ಮೌನಾ, ಮೌನ ಮುರಿದು ಮೊದಲು ತಂಗಿಯ ಮದುವೆ ನಡೆಯಲಿ. ಇದರ ಬಗ್ಗೆ ತನ್ನದೇನೂ ಅಭ್ಯಂತರ ಇಲ್ಲ. ನನ್ನ ಹಣೆಯಲ್ಲಿ ಮದುವೆಯ ಯೋಗವಿದ್ದರೆ ಆಗೇ ಆಗುತ್ತದೆ. ನನ್ನಿಂದಾಗಿ ವೀಣಾಳನ್ನು ಕಾಯಿಸುವುದು ಯಾವ ನ್ಯಾಯ? ನನಗಾಗಿ ಗಂಡು ಹುಟ್ಟಿದ್ದರೆ ಇಂದಲ್ಲಾ ನಾಳೆ ನನ್ನ ಮದುವೆ ಆಗುವುದೆಂದು ದೃಢ ವಿಶ್ವಾಸದಲ್ಲಿ ಹೇಳಿ ತಾಯಿ ತಂದೆಯರನ್ನು ಒಪ್ಪಿಸಿದಳು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ