ಪೃಥ್ವಿಪತಿಯಾದ ರಾಜ ಯಯಾತಿಯ ಮಗಳಾದ ನಾನು ಮಾಧವಿ...! ಹೆಸರಿಗೆ ತಕ್ಕಂತೆ ಹೂವಿನ ಮಧುರ ಕಂಪನೆಲ್ಲ ಮೈಗೂಡಿಸಿಕೊಂಡು ಸೌಂದರ್ಯದ ಖನಿಯಾಗಿ ವಿವಾಹದ ವಯಸ್ಸಿಗೆ ಬಂದಿರುವ ವಿಷಯ ದೇಶದೆಲ್ಲೆಡೇ ಪಸರಿಸಿತ್ತು.

ಉದ್ಯಾನವನದಲ್ಲಿ ಕುಳಿತು ಸುಂದರ ಕನಸಿನ ಲೋಕದಲ್ಲಿ ತೇಲುತ್ತಾ ತಿಳಿಗೊಳದ ನೀರನ್ನು ತದೇಕ ಚಿತ್ತದಿಂದ ವೀಕ್ಷಿಸುತ್ತಿದ್ದ ನನಗೆ ನನ್ನದೇ ಪ್ರತಿಬಿಂಬವನ್ನು ಕಂಡು ಆಹಾ!!! ಎಂತಹ ಅಪರೂಪದ ಸೌಂದರ್ಯ ರಾಶಿ ನನ್ನದು ಇಂತಹ ಸುಗುಣೆಯ ಕೈ ಹಿಡಿವ ಕನಸಿನ ರಾಜಕುಮಾರ ಯಾರಿರಬಹುದು...!? ಎನ್ನುವ ಕಲ್ಪನೆ ಮೂಡುತ್ತಲೇ ಬಂಗಾರ ವರ್ಣದ ಮೀನೊಂದು ನೀರಿನಿಂದ ಮೇಲಕ್ಕೆ ಬಂದು ಮತ್ತೆ ನೀರಿಗಿಳಿದಾಗ ನನ್ನ ಪ್ರತಿಬಿಂಬವು ಒಂದರಿಂದ ನೂರಾಗಿ ಹರಡಿದ್ದನ್ನು ಕಂಡು ನನ್ನನ್ನು ನಾನು ಹುಡುಕುವ ವ್ಯರ್ಥ ಪ್ರಯತ್ನದಲ್ಲಿದ್ದೆ ಆಗ ಸಖಿಯಿಂದ ಬಂದ ಸಂದೇಶ ಮಹಾರಾಜರ ಆದೇಶದಂತೆ ರಾಜಸಭೆಗೆ ತುರ್ತಾಗಿ ಬರಬೇಕೆಂದು... ಹೀಗೆ ಆಹ್ವಾನಿಸಿದ್ದರ ಉದ್ದೇಶವೇನು...!! ಎಂಬ ಸಂದಿಗ್ಧದಲ್ಲಿ ಒಳಗೆ ಪ್ರವೇಶಿಸುತ್ತಿದ್ದಂತೆಯೇ ರಾಜಸಭೆ ಸ್ತಬ್ಧ ವಾದಂತೆ ಕಂಡಿತು. ಅಲ್ಲಿ ನಿಂತಿದ್ದ ಮುನಿಯೋರ್ವರ ದೃಷ್ಟಿ ನನ್ನ ಮೇಲೆಯೇ ಇರುವುದನ್ನು ಗಮನಿಸಿ ನಮಸ್ಕರಿಸಿದ ನಂತರ ನನ್ನ ಸ್ಥಾನದಲ್ಲಿ ಕುಳಿತುಕೊಂಡೆ. ಸಭೆ ಮುಂದುವರೆದಾಗ ತಿಳಿದದ್ದು ನಮ್ಮ ರಾಜ್ಯಕ್ಕೆ ಆಗಮಿಸಿದ ಈ ಮುನಿವರ್ಯ ಋಷಿ ವಿಶ್ವಾಮಿತ್ರ ರ ಪ್ರಿಯ ಶಿಷ್ಯನೆಂತಲೂ ಗುರುದಕ್ಷಿಣೆಯ ರೂಪದಲ್ಲಿ ಒಂದು ಕಿವಿ ಮಾತ್ರ ಕಪ್ಪಾಗಿರುವ ಎಂಟು ನೂರು ಶ್ವೇತಾಶ್ವಗಳನ್ನು ನೀಡಲು ಶಕ್ತನಲ್ಲನಾದ್ದರಿಂದ ದೇಹಿ ಅಂತ ಬಂದಿದ್ದಾನೆ. ಅಷ್ಟೊಂದು ಶ್ವೇತಾಶ್ವಗಳಿಲ್ಲವಾದ್ದರಿಂದ ಒಂದು ಪ್ರಸವದ ನಂತರ ಮತ್ತೆ ಕನ್ಯತ್ವ ಮರಳಿ ಪಡೆಯುವಂತಹ ವರವನ್ನು ಹೊಂದಿದ ಸರ್ವಗುಣ ಸಂಪನ್ನೆಯಾದ ತನ್ನ ರಾಜಕುಮಾರಿಯನ್ನು ದಾನವಾಗಿ ಸ್ವೀಕರಿಸಿ ಅವಳ ಮೂಲಕ ನಿಮಗೆ ಎಂಟು ನೂರು ಶ್ವೇತಾಶ್ವಗಳು ದೊರೆವಂತಾಗಲಿ ಎಂದು ರಾಜಾ ಯಯಾತಿ ಘೋಷಿಸಿದಾಗ ರಾಜಸಭೆಯಲ್ಲಿ ಜೋರಾದ ಜೈ ಕಾರ ಮೊಳಗಿದರೆ ನನ್ನೆದೆಯಲ್ಲಡಗಿದ ನೂರಾರು ಕನಸುಗಳು ಹೇಳ ಹೆಸರಿಲ್ಲದಂತೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದವು.

ಸಾವಿರಾರು ಸಭಿಕರ ಸಮ್ಮುಖದಲ್ಲಿ ಮನಮೆಚ್ಚಿದ ರಾಜಕುಮಾರನನ್ನು ವರಿಸಿ ಎಲ್ಲರ ಹಾರೈಕೆ ಮತ್ತು ಶುಭಾಶೀರ್ವಾದದೊಂದಿಗೆ ಮಡಿಲು ತುಂಬಿಸಿಕೊಂಡು ಹೊರಡಬೇಕಾದ ನನ್ನನ್ನು ಭಿಕ್ಷೆಗೆ ದಾನವಾಗಿ ಮುನಿಗೆ ನೀಡಿದ್ದ ನನ್ನಪ್ಪ ಇವರೇನಾ...!? ಹುಟ್ಟಿದಂದಿನಿಂದ ಇಂದಿನವರೆಗೂ ಕ್ಷಣ ಮಾತ್ರದಲ್ಲಿ ನನ್ನಿಚ್ಛೆಯನ್ನೆಲ್ಲಾ ಪೊರೈಸುತ್ತಿದ್ದ ನನ್ನ ತಂದೆಯ ಕಡೆಗೆ ದೃಷ್ಟಿ ಹಾಯಿಸಿದಾಗ ಕಂಡಿದ್ದು ರಾಜಾ ಯಯಾತಿ ಋಷಿಗಳ ಕೋಪದಿಂದ ಪಾರಾಗಲು ಚದುರಂಗದ ಕಾಯಿಯಂತೆ ನನ್ನನ್ನು ಬಳಸಿಕೊಂಡಿದ್ದು ಮಾತ್ರ. ಇಹ ಪ್ರಪಂಚದ ಅರಿವಾಗುವಷ್ಟರಲ್ಲಿ ಅದಾಗಲೇ ಗಾಲವನೊಂದಿಗೆ ರಾಜ್ಯದ ಪರಿಧಿಯನು ದಾಟಿಯಾಗಿತ್ತು. ಸ್ವಲ್ಪ ಸಮಯದ ಹಿಂದೆಯಷ್ಟೇ ನನ್ನ ಸೌಂದರ್ಯದ ಕುರಿತು ನನಗಿದ್ದ ಸುಂದರ ಕನಸುಗಳೆಲ್ಲವೂ ನುಚ್ಚು ನೂರಾಗಿ ಇಂತಹ ಜೀವನಕ್ಕಿಂತ ಸಾವೇ ಮೇಲು ಎಂದು ಜೋರಾಗಿ ಅಳುತ್ತಲೇ ಗಾಲವನ ಅಧೀನಳಾಗಿ ಬಿಟ್ಟಿದ್ದೆ. ತನ್ನ ಯೋಗ್ಯತೆಯನ್ನು ಮೀರಿ ಗುರುದಕ್ಷಿಣೆಯನ್ನು ಒತ್ತಾಯಪೂರ್ವಕವಾಗಿ ನೀಡುವ ಈ ಮುನಿವರ್ಯನ ಮಹದಾಸೆಗೆ ಬಲಿಪಶುವಾಗಿದ್ದ ನನ್ನನ್ನು ಕರೆದೊಯ್ದು ಇನ್ಯಾರಿಗೆ ಒಪ್ಪಿಸುತ್ತಾನೆಯೋ  ಏನೋ ಎಂಬ ನಿಟ್ಟುಸಿರಿನೊಂದಿಗೆ ಪಯಣವದು ಸಾಗಿತ್ತು...!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ