ಸಪ್ತವರ್ಣಗಳ ಕಾಮನಬಿಲ್ಲಿನ ಮೆರವಣಿಗೆ

ನಮ್ಮ  ಭಾರತೀಯ ಚಿತ್ರಗಳು ಎಂದರೆ, ಕೇವಲ ಆಕಾಶದಲ್ಲಿ ಮಾತ್ರವಲ್ಲದೆ ಆ ಸಪ್ತವರ್ಣಗಳ ಕಾಮನಬಿಲ್ಲು ಬೆಳ್ಳಿತೆರೆಯ ಮೇಲೆ ಮೆರವಣಿಗೆ ಮಾಡಿದಂತೆ! ಸಪ್ತ ಪ್ರಾಂತೀಯ ಭಾಷೆಗಳ ಈ ಚಿತ್ರಗಳು ಬೆಳ್ಳಿತೆರೆಯಲ್ಲಿ ಇಂದ್ರಧನುಸ್ಸನ್ನೇ ಇಳಿಸಿದಂತಿವೆ. ಇದನ್ನು ಮೆಚ್ಚಿ ಬರುವ ಪ್ರೇಕ್ಷಕರು ಈ ರಂಗಿನೋಕುಳಿಯಲ್ಲಿ ಮಿಂದೆದ್ದು ಬಣ್ಣ ತುಂಬಿಸಿಕೊಂಡಿದ್ದಾರೆ. ನಿಜಕ್ಕೂ ಈ ವಿವಿಧ ಪ್ರಾಂತೀಯ ಭಾಷೆಗಳು ತಮ್ಮ ವಿಭಿನ್ನ ವಿಚಾರಧಾರಿ, ಸಾಂಸ್ಕೃತಿಕ ರೂಪುರೇಷೆ, ಕಲೆಯ ವೈವಿಧ್ಯತೆಗಳಿಂದ ಜನರಿಗೆ ಸುಸಮೃದ್ಧ ಮನರಂಜನೆ ಒದಗಿಸುತ್ತಿವೆ. ಇದು ಅವರ ಮನಸ್ಸಿಗೆ ಭಾವೈಕ್ಯತೆಯ ಸಂಚಾರ ಒದಗಿಸಿದೆ. ನೀವು ಈ ವಿಭಿನ್ನ ವೈಚಾರಿಕ ಚಿತ್ರಗಳ ಕುರಿತು ತಿಳಿಯಬಯಸುತ್ತೀರಲ್ಲವೇ....?

ಕನ್ನಡ : ಕಾಂತಾರ ಚಾಪ್ಟರ್‌-1

ಹೊಂಬಾಳೆ ಫಿಲಮ್ಸ್ ನಿರ್ಮಾಣದ `ಕಾಂತಾರ ಚಾಪ್ಟರ್‌-1' 23 ದಿನಗಳಿಗೆ ಈ ಸಿನಿಮಾ ವಿಶ್ವಾದ್ಯಂತ 818 ಕೋಟಿ ರೂ. ಹಣವನ್ನು ಬಾಚಿಕೊಂಡಿದೆ. ಆ ಮೂಲಕ ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದೆ. (ಈ ಲೇಖನ ಅಚ್ಚಿಗೆ ಹೋಗುವ ಹೊತ್ತಿಗೆ) ವರದಿಗಳ ಪ್ರಕಾರ, ಈ ಚಿತ್ರ ವಿದೇಶಗಳಲ್ಲಿ, ವಿಶೇಷವಾಗಿ ಆಸ್ಟ್ರೇಲಿಯಾದಲ್ಲಿ ಅತ್ಯುತ್ತ ಪ್ರದರ್ಶನ ಕಂಡಿದೆ. ಸ್ಥಿರವಾದ ಕಲೆಕ್ಷನ್‌ ಗಳು ಮತ್ತು ಹೌಸ್‌ ಫುಲ್ ಪ್ರದರ್ಶನಗಳು ಈ ವರ್ಷ ಬಿಡುಗಡೆಯಾದ ಇತರೆ ಭಾರತೀಯ ಚಲನಚಿತ್ರಗಳ ಪೈಕಿ `ಕಾಂತಾರ ಚಾಪ್ಟರ್‌-1' ಚಿತ್ರವನ್ನು ಅಗ್ರಸ್ಥಾನದಲ್ಲಿ ಇರಿಸಿದೆ.

ಇನ್ನು ಈ ಚಿತ್ರ ಸಾವಿರ ಕೋಟಿ ಕಲೆಕ್ಷನ್‌ ಮಾಡುವ ನಿರೀಕ್ಷೆ ಚಿತ್ರತಂಡಕ್ಕಿದೆ. ಚಿತ್ರ ಒಟಿಟಿ ಹಕ್ಕುಗಳನ್ನು ಅಮೆಜಾನ್‌ ಪ್ರೈಮ್ 125 ಕೋಟಿ ರೂ. ಕೊಟ್ಟು ಖರೀದಿಸಿದ್ದರೆ, ಸ್ಯಾಟಲೈಟ್‌ ಹಕ್ಕುಗಳನ್ನು ಝೀ ಕನ್ನಡ ವಾಹಿನಿ ಬಹುದೊಡ್ಡ ಮೊತ್ತ ಕೊಟ್ಟು ತನ್ನದಾಗಿಸಿಕೊಂಡಿದೆ.

images1

ಇಷ್ಟೆಲ್ಲಾ ಯಶಸ್ವಿಯಾಗಿರುವ ಈ ಚಿತ್ರದ ಕಥೆ ಏನು ಎಂದು ಕೇಳಿದರೆ, ಬಾಂಗ್ರಾ ರಾಜ ಮನೆತನ ಹಾಗೂ ಈಶ್ವರ ಹೂದೋಟದ ಜನರ ನಡುವಿನ ಯುದ್ಧವನ್ನೇ ಪ್ರಧಾನವಾಗಿಟ್ಟುಕೊಂಡು ಮಾಡಿರುವ ಕಥೆ. ಈಶ್ವರ ಹೂದೋಟದ ಮುಂಚೂಣಿಯ ಯುವ ನಾಯಕ ಬೆರ್ಮೆಲ್ ಆಗಿ ನಟ ರಿಷಬ್‌ ಕಾಣಿಸಿಕೊಂಡರೆ, ಬಾಂಗ್ರಾ ರಾಜ ಮನೆತನದ ಅರಸರಾಗಿ ಜಯರಾಮ್ (ರಾಜಶೇಖರ) ಮತ್ತು ಗುಲ್ಶನ್‌ ದೇವಯ್ಯ (ಕುಲಶೇಖರ), ರುಕ್ಮಿಣಿ ವಸಂತ್‌ (ಕನಕವತಿ) ಕಾಣಿಸಿಕೊಂಡಿದ್ದಾರೆ. ಇವರ ನಡುವಿನ ಸಮಯದಲ್ಲಿ ದೈವದ ಪಾತ್ರವೇನು? ದೈವಕ್ಕೂ ಹೂದೋಟಕ್ಕೂ ಯಾವ ನಂಟು ಎಂಬುದನ್ನು ತೆರೆಮೇಲೆ ಅತ್ಯದ್ಭುತ ಮೇಕಿಂಗ್ ನೋಡಬಹುದಾಗಿದೆ.

ಕಾಂತಾರ ಮತ್ತೊಮ್ಮೆ ಬಹುದೊಡ್ಡ ಸಕ್ಸಸ್‌ ಕಂಡ ಹಿನ್ನೆಲೆಯಲ್ಲಿ ಡಿವೈನ್‌ ಸ್ಟಾರ್‌, ಉತ್ತರ ಪ್ರದೇಶದ ವಾರಾಣಸಿಗೆ ಭೇಟಿ ನೀಡಿದ್ದಾರೆ. ದೇವರ ಆಶೀರ್ವಾದ ಪಡೆದ ರಿಷಬ್‌ ಶೆಟ್ಟಿ ಗಂಗಾ ಆರತಿಯಲ್ಲೂ ಪಾಲ್ಗೊಂಡಿದ್ದಾರೆ. ಇನ್ನು ಇದೇ ವೇಳೆ ಸಿನಿಮಾಗೆ ಅತ್ಯಂತ ದೊಡ್ಡ ಗೆಲುವು ಕೊಟ್ಟಿದ್ದಕ್ಕೆ ಎಲ್ಲ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

ಅಕ್ಟೋಬರ್‌ 2 ರಂದು ಬಿಡುಗಡೆಯಾದ ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ `ಕಾಂತಾರ ಚಾಪ್ಟರ್‌-1' ಚಿತ್ರದಲ್ಲಿ ರಿಷಬ್

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ