-  ರಾಘವೇಂದ್ರ ಅಡಿಗ ಎಚ್ಚೆನ್.

ಚಂದ್ರಹಾಸ ಕಾಮಿಡಿ ಕಿಲಾಡಿ ವಿನ್ನರ್‌ ಹರೀಶ್‌ ಹಿರಿಯೂರ್ ಅಭಿನಯದ ಸಿನಿಮಾ .. ಚಂದ್ರಹಾಸ ಸಿನಿಮಾದ ಮೊದಲ ಹಾಡು ಬಿಡುಗಡೆ ಆಗಿದ್ದು ಇತ್ತೀಚಿಗಷ್ಟೇ ನಿರ್ಮಾಪಕಿ ಶೈಲಜಾ ನಾಗ್‌ ಚಂದ್ರಹಾಸ ಸಿನಿಮಾದ ಮೊದಲ ಹಾಡನ್ನು ಬಿಡುಗಡೆ ಮಾಡಿಕೊಟ್ಟರು..ಹೊಸ ಕಲಾವಿದರೇ ಸೇರಿ ಮಾಡಿರುವ ಚಂದ್ರಹಾಸ ಸಿನಿಮಾವನ್ನ ಆನಂದ್‌ ಎಸ್‌ ಕಲಕಬಂಡಿ ನಿರ್ದೇಶನ ಮಾಡಿದ್ದಾರೆ

1001642724

ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿರೋ ಚಂದ್ರಹಾಸ ಸಿನಿಮಾದ ಮೊದಲ ಹಾಡಿಗೆ ಯೋಗರಾಜ್‌ ಭಟ್‌ ಸಾಹಿತ್ಯ ಬರೆದಿದ್ದಾರೆ..  ಚಡ್ಡಿ ಬಡ್ಡಿ ಅಂತ ಇರೋ ಈ ಹಾಡು ಸ್ನೇಹಿತರ ಮಧ್ಯೆ ಇರೋ ಬಾಂದವ್ಯದ ಮೇಲೆ ರಚಿಸಲಾಗಿದೆ…ಈ ಚಡ್ಡಿ ಬಡ್ಡಿ ಹಾಡನ್ನ ನಟ ಶರಣ್‌ ಹಾಗೂ ಗಾಯಕ ನವೀನ್‌ ಸಜ್ಜು ಹಾಡಿರೋದು ವಿಶೇಷ. ಇದೇ ಮೊದಲ ಬಾರಿಗೆ ಇಬ್ಬರು ಜೊತೆಯಾಗಿ ಹಾಡನ್ನ ಹಾಡಿದ್ದಾರೆ .

1001642715

ಚಂದ್ರಹಾಸ ಸಿನಿಮಾವನ್ನ ಬಸವಂತಗೌಡ ಪಾಟೀಲ್‌ ನಿರ್ಮಾಣ ಮಾಡಿದ್ದು ಬಸಣ್ಣ ಕಮತ್ತರ್‌ ಸಹ ನಿರ್ಮಾಪಕರಾಗಿದ್ದಾರೆ…ಡಿಬೀಟ್ಸ್‌ ಯೂಟ್ಯೂಬ್‌ ಚಾನೆಲ್‌  ನಲ್ಲಿ ಚಂದ್ರಹಾಸ ಚಿತ್ರದ ಚಡ್ಡಿಬಡ್ಡಿ ಹಾಡು ಬಿಡುಗಡೆ ಆಗಿದೆ. ಚಂದ್ರಹಾಸ ಚಿತ್ರದಲ್ಲಿ  ಹರೀಶ ಹಿರಿಯೂರು ನಾಯಕನಾಗಿ ಅಭಿನಯ ಮಾಡಿದ್ದು , ಛಾಯಾಶ್ರೀ ಉಮೇಶ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ ಸ್ನೇಹಿತನ ಪಾತ್ರದಲಗಲಿ ನಿಂಗರಾಜು ಮಂಡ್ಯ ಅಭಿನಯಿಸಿದ್ದು  ಸಂತೋಶ್‌ ಕೆರಿ , ಸೂರ್ಯಕಲ, ಜ್ಯೂತಿ ಮಂಗಳೂರು, ಕಳಕಪ್ಪ ತಲವಾರ್‌ ಇನ್ನು ಅನೇಕರು ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ…

1001642712

ಚಂದ್ರಹಾಸ ಧ್ವನಿ ಸುರಳಿ ಕಾರ್ಯಕ್ರಮಕ್ಕೆ  ಕಾಮಿಡಿ ಕಿಲಾಡಿ ಶೋ ನ ಕಲಾವಿದರಾದ ಅಪ್ಪಣ್ಣ, ಜಗಪ್ಪ, ಸುಷ್ಮಿತಾ, ನಯನಾ, ಇನ್ನೂ ಅನೇಕರು ಬಂದು ಸ್ನೇಹಿತನಿಗೆ ಸಾಥ್‌ ನೀಡಿದ್ರು..ಚೇತನ್‌ ಶರ್ಮ ಕ್ಯಾಮೆರಾ ವರ್ಕ್‌ ಇರೋ ಚಂದ್ರಹಾಸ ಸಿನಿಮಾಗೆ ವಿ ಗಿರೀಶ್‌ ಎಂ ಸಿ ಹಳ್ಳಿ ಸಂಕಲನ ಮಾಡಿದ್ದಾರೆ..1001642721

ಸದ್ಯ ಮೊದಲ ಹಾಡಿನಿಂದ ಗಮನ ಸೆಳೆಯುತ್ತಿರೋ ಚಂದ್ರಹಾಸ ಸಿನಿಮಾ ಶೀಘ್ರದಲ್ಲಿಯೇ ಪ್ರೇಕ್ಷಕರ ಮುಂದೆ ಬರಲಿದೆ.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ