ಕಥೆ - ಶುಭಾ ಶ್ರೀನಾಥ್

ಕತ್ತಲೆಯಲ್ಲಿ ದೀಪದಂತೆ, ಗುಡಿಗೆ ಕಲಶದಂತೆ ಗೃಹಿಣಿಯೇ ಮನೆಯ ಕೇಂದ್ರಬಿಂದು. ಅವಳ ಜೀವನ ಯಾವುದೋ ಕಾರಣಕ್ಕೆ ಅಸ್ತವ್ಯಸ್ತವಾದಾಗ, ಅದನ್ನು ತಾನಾಗಿ ಸರಿಪಡಿಸಿಕೊಂಡು, ತನ್ನದು ನೆಮ್ಮದಿಯ ಸಂಸಾರ ಎಂಬಂತೆ ಮಾಡಿಕೊಳ್ಳುವುದು ಹೇಗೆ......?

ಬೆಳಗ್ಗೆ ಅಲಾರಂ ಹೊಡೆದಾಗ, ಭುವನಾಳಿಗೆ ಕಣ್ಣು ಬಿಡಲು ಕಷ್ಟ ಅನಿಸುತ್ತಿತ್ತು. ಆದರೆ ಏಳಲೇ ಬೇಕಲ್ಲ, ಏಳದಿದ್ದರೆ ಆಗದು, ಕಣ್ಣು ಕೀಳಲು ಆಗುತ್ತಿರಲಿಲ್ಲ. ಆದರೆ ಮಾಡಬೇಕಾದ ಕೆಲಸಗಳನ್ನು ನೆನೆದಾಗ ಏಳಲೇ ಬೇಕು ಅನ್ನಿಸಿತು.

ಕರಾಗ್ರೇ ಸತೇ ಲಕ್ಷ್ಮಿ ಹೇಳಿಕೊಂಡು, ನಿತ್ಯ ಕರ್ಮಗಳನ್ನು ಮುಗಿಸಿ, ಅಂಗಳಕ್ಕೆ ಬಂದು ಕಸ ಗುಡಿಸಿ, ನೀರು ಹಾಕಿ ಬಾಗಿಲಿಗೆ ರಂಗೋಲಿ ಎಳೆ ಬಿಟ್ಟಳು. ತಾನು ತವರಿನಲ್ಲಿ ಎಷ್ಟೊಂದು ರಂಗೋಲಿ ಹಾಕುತ್ತಿದ್ದೆ...... ಎಂಟನೇ ತರಗತಿಯಲ್ಲಿದ್ದಾಗ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದೆ. ಆದರೆ ಈಗ ಆ ರಂಗೋಲಿಗಳು ಹಾಕಲು ಪುರಸತ್ತಿಲ್ಲ, ಒಂದೆರಡು ಗೆರೆ ಎಳೆದರೆ ಸಾಕು, ಕರ್ತವ್ಯ ಮುಗಿಯಿತು ಅನಿಸುತ್ತದೆ. ಅತ್ತೆಯವರು ದೊಡ್ಡ ರಂಗೋಲಿ ಹಾಕುವುದಿಲ್ಲ ಎಂದು ಒಂದೆರಡು ಸಾರಿ ಸಿಡಿಮಿಡಿ ಮಾಡಿದರು. ಆದರೆ ಏನು ಮಾಡುವುದು..... ದೊಡ್ಡ ರಂಗೋಲಿ ಹಾಕಲು ಟೈಮ್ ಇರುವುದಿಲ್ಲ.

ಯೋಚನೆಗಳ ಲಹರಿಯಿಂದ ಹೊರಬಂದ ಭುವನಾ, ಸ್ನಾನ ಮುಗಿಸಿದವಳೇ ನೇರ ಅಡುಗೆಮನೆಗೆ ಬಂದು ಕಾಫಿ ಮಾಡಲು ಡಿಕಾಕ್ಷನ್‌ ಗೆ ನೀರಿಟ್ಟು, ಹಾಲು ಕಾಯಿಸಿ, ತರಕಾರಿ ಹೆಚ್ಚಿಕೊಂಡು ಕುಕ್ಕರ್‌ ಜೋಡಿಸಿದಳು. ಎಲ್ಲರಿಗೂ ಒಂದೊಂದು ಬಗೆಯ ಕಾಫಿ. ಅತ್ತೆಗೆ ಸಕ್ಕರೆ ರಹಿತ ಕಾಫಿ, ಮಾವನಿಗೆ ಕೃತಕ ಸಕ್ಕರೆ ಹಾಕಿ ಕಾಫಿ, ಯಜಮಾನರಿಗೆ ಸಕ್ಕರೆ ಹಾಕಿ ಕಾಫಿ, ಮಕ್ಕಳಿಬ್ಬರಲ್ಲಿ ಒಬ್ಬರಿಗೆ ಬೋರ್ನ್‌ ವಿಟಾ, ಒಬ್ಬರಿಗೆ ಹಾರ್ಲಿಕ್ಸ್ ಬೆರೆಸಿ ಮಕ್ಕಳನ್ನು ಎಬ್ಬಿಸಿದಳು. ಮಕ್ಕಳಿಬ್ಬರು ಬರುವಷ್ಟರಲ್ಲಿ ಬೆಳಗಿನ ಕಾಫಿ ಸಮಾರಾಧನೆ ಮುಗಿದಿತ್ತು. ಆರಾಮವಾಗಿ ಕುಳಿತು ಹದವಾಗಿ ಹಾಲು, ಸಕ್ಕರೆ ಬೆರೆಸಿದ ನೊರೆ ನೊರೆ ಕಾಫಿ ಕುಡಿಯಲು ಇಷ್ಟ. ಆದರೆ ಹಾಗೆ ಕುಡಿಯಲು ಸಮಯವಾದರೂ ಎಲ್ಲಿದೆ? ಸ್ವಲ್ಪ ಉಳಿದಿದ್ದ ಸಕ್ಕರೆ ರಹಿತ ಕಾಫಿಯನ್ನು ಕುಡಿದು ಬೆಳಗಿನ ಕಾಫಿ ಸಮಾರಾಧನೆಯನ್ನು ಮುಗಿಸಿದಳು.

ಇನ್ನು ತಿಂಡಿಗಾಗಿ ಅವಲಕ್ಕಿ ಒಗ್ಗರಣೆಗೆ ಈರುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು, ನಿಂಬೆಹಣ್ಣು ಎಲ್ಲವನ್ನೂ ಸಿದ್ಧ ಮಾಡಿ ಮಧ್ಯಾಹ್ನದ ಊಟಕ್ಕೆ ಚಪಾತಿ ಹಿಟ್ಟು ಕಲಸಿದ ನಂತರ ಪಲ್ಯಕ್ಕೆ ಹೀರೇಕಾಯಿಯನ್ನು ಹೆಚ್ಚಿ ಚಿಕ್ಕ ಕುಕ್ಕರ್‌ ನಲ್ಲಿ ಬೇಯಲು ಇಟ್ಟು ಅವಲಕ್ಕಿ ಒಗ್ಗರಣೆ ಮುಗಿಸಿ ಮಕ್ಕಳಿಗೆ, ಯಜಮಾನರಿಗೆ, ಅತ್ತೆ ಮಾವಂದಿರಿಗೆ ಡೈನಿಂಗ್‌ ಟೇಬಲ್ ಮೇಲಿಟ್ಟು, ನಂತರ ಒಂದು ಕಡೆ ಚಪಾತಿ ಮತ್ತೊಂದು ಕಡೆ ಪಲ್ಯ ಮಾಡಿ ಡಬ್ಬಿಗಳಿಗೆ ತುಂಬಿಸಿದಳು.

ನಂತರ ಕುಕ್ಕರ್‌ ತೆಗೆದು ಹುಳಿ ಕುದಿಸಿ ಯಜಮಾನರ ಡಬ್ಬಿಗಳಿಗೆ ಚಪಾತಿ ಪಲ್ಯ, ಅನ್ನ ಸಾರು, ಮೊಸರು, ಹಸಿ ತರಕಾರಿ ಸಲಾಡ್‌, ಉಪ್ಪಿನಕಾಯಿ, ಚಟ್ನಿ ಪುಡಿ, ಬಾಳೆಹಣ್ಣು ತುಂಬಿಸಿ ಕೊಟ್ಟ ನಂತರ ಮಕ್ಕಳಿಗೆ ಶಾರ್ಟ್‌ ಬ್ರೇಕ್‌ ನಲ್ಲಿ ತಿನ್ನಲು ಹಣ್ಣುಗಳನ್ನು ತೊಳೆದು ಹೆಚ್ಚಿ ಡಬ್ಬಿಗಳಿಗೆ ತುಂಬಿಸಿ, ನಂತರ ಅವರ ನೀರಿನ ಬಾಟಲ್ ಗಳನ್ನು ತುಂಬಿಸಿದಳು. ನಡುವೆ ಮಕ್ಕಳಿಬ್ಬರ ಸ್ನಾನಕ್ಕೆ ಟವೆಲ್, ಸಮವಸ್ತ್ರ ಎಲ್ಲವನ್ನೂ ಕೊಟ್ಟಿದ್ದಾಯ್ತು. ನಂತರ ಮಗಳು ಒಂದೇ ಸಮನೆ ಗಲಾಟೆ ಶುರು ಹಚ್ಚಿದ್ದಳು. ಅಮ್ಮ ಜಡೆ ಹಾಕು, ಟೈಮ್ ಆಯ್ತು ಎಂದು ಒಂದೇ ಸಮನೆ ಕೂಗಿಕೊಳ್ಳುತ್ತಿದ್ದಳು. ಎರಡು ಜಡೆ ಹಾಕಿ ರಿಬ್ಬನ್‌ ಕಟ್ಟುವ ಹೊತ್ತಿಗೆ ಸಾಕಾಯಿತು. ಉದ್ದನೆಯ ಕೂದಲನ್ನು ಬಾಬ್‌ ಕಟ್‌ ಮಾಡಿಸಿ ಬಿಡೋಣ ಎಂದರೆ ಕತ್ತರಿಸುವುದು ಬೇಡ ಎಂದು ಮಗಳು ಹಠ ಮಾಡುತ್ತಿದ್ದಳು. ಖಾಸಗಿ ಶಾಲೆಯಲ್ಲಿ ಬಹಳ ಕಟ್ಟುನಿಟ್ಟಾಗಿ ಬಾಚಿ ಎರಡು ಜಡೆ ಹಾಕಿ ಮೇಲೆ ಕಟ್ಟಬೇಕು, ಇಲ್ಲದಿದ್ದರೆ ಡೈರಿಯಲ್ಲಿ ಬರೆದು ಕಳಿಸುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ