ಬಾಲಿವುಡ್ ನಟಿ ನೋರಾ ಫತೇಹಿಅಭಿನಯಿಸಿರುವ ‘ಸರ್ಸೆ ಸರ್ಸೆ’ ಹಾಡು ಸದ್ಯ ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆ ಅವರು ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದಾರೆ.

‘ಕೆಡಿ: ದಿ ಡೆವಿಲ್’ ಚಿತ್ರದ ಈ ಹಾಡಿನಲ್ಲಿ ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆ ಆಯೋಗ ನಟಿಗೆ ಸಮನ್ಸ್ ಜಾರಿ ಮಾಡಿತ್ತು.

ಗುರುವಾರ ದೆಹಲಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ (NCW) ಕಚೇರಿಗೆ ಹಾಜರಾದ ನೋರಾ ಫತೇಹಿ, ವಿವಾದಿತ ಹಾಡಿನ ಬಗ್ಗೆ ತಮ್ಮ ಸ್ಪಷ್ಟನೆ ನೀಡಿದ್ದಾರೆ. ಮಹಿಳೆಯರ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶ ತಮಗಿಲ್ಲ. ಸಮಾಜದ ಮುಂದೆ ತಮಗೆ ಇರುವ ಜವಾಬ್ದಾರಿಯನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಹೇಳಿದ್ದು, ಲಿಖಿತ ರೂಪದಲ್ಲಿಯೂ ಕ್ಷಮೆಯಾಚಿಸಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

“ನಾನು ಆಯೋಗದ ಮುಂದೆ ಹಾಜರಾಗಿ ಕ್ಷಮೆಯಾಚಿಸಿದ್ದೇನೆ. ಕಲಾವಿದೆಯಾಗಿ ನನ್ನ ಜವಾಬ್ದಾರಿಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಯಾರ ಭಾವನೆಗೂ ನೋವುಂಟು ಮಾಡುವ ಉದ್ದೇಶ ಇರಲಿಲ್ಲ. ಈ ವಿಷಯದಲ್ಲಿ ನಾವು ಎಲ್ಲವನ್ನೂ ಲಿಖಿತವಾಗಿ ಸಲ್ಲಿಸಿದ್ದೇವೆ,” ಎಂದು ನೋರಾ ಹೇಳಿದ್ದಾರೆ.

ಈ ವಿವಾದ ಆರಂಭವಾದಾಗಲೇ ನೋರಾ ಫತೇಹಿ, ತಾವು ಕೇವಲ ಕನ್ನಡ ಆವೃತ್ತಿಗೆ ಮಾತ್ರ ಚಿತ್ರೀಕರಣ ಮಾಡಿದ್ದೇನೆ, ನಂತರ ಅದನ್ನು ಹಿಂದಿಗೆ ಡಬ್ ಮಾಡುವ ವೇಳೆ ತಮ್ಮ ಅನುಮತಿ ಪಡೆಯಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಕನ್ನಡ ಭಾಷೆ ಸಂಪೂರ್ಣವಾಗಿ ಅರ್ಥವಾಗದ ಕಾರಣ ಸಾಹಿತ್ಯದ ಅರ್ಥ ತಿಳಿದಿರಲಿಲ್ಲ ಎಂದು ಕೂಡ ಅವರು ತಿಳಿಸಿದ್ದಾರೆ.

ಈ ಹಾಡು ವಿವಾದಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟ ಸಂಜಯ್‌ ದತ್ ಕೂಡ ರಾಷ್ಟ್ರೀಯ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದರು. ಅವರು ಸಹ ವಿಷಾದ ವ್ಯಕ್ತಪಡಿಸಿ ಲಿಖಿತ ಕ್ಷಮೆಯಾಚನೆ ಸಲ್ಲಿಸಿದ್ದರು. ಅಲ್ಲದೆ, ಪ್ರಾಯಶ್ಚಿತ್ತವಾಗಿ 50 ಬುಡಕಟ್ಟು ಹೆಣ್ಣುಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದಾಗಿ ಘೋಷಿಸಿದ್ದರು. ಮುಂದಿನ ದಿನಗಳಲ್ಲಿ ಮಹಿಳೆಯರ ಘನತೆಗೆ ಧಕ್ಕೆ ಬಾರದಂತೆ ಸಿನಿಮಾಗಳಲ್ಲಿ ಕಾನೂನುಬದ್ಧ ಮುನ್ನೆಚ್ಚರಿಕೆ ವಹಿಸುವುದಾಗಿ ಅವರು ಭರವಸೆ ನೀಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ