ಸಿನಿಮಾ ಅಂದ್ರೆ ನಮ್ಮ ಜೀವನದ ಕೈಗನ್ನಡಿ. ಜೀವನದ ವಿವಿಧ ಘಟನಾವಳಿಗಳೇ ಸಿನಿಮಾಗೆ ಮೂಲ. ಈ ಜೀವನದಲ್ಲಿ ಯಾವಾಗ ಏನು ಘಟಿಸುತ್ತದೋ ಹೇಳಲಾಗದು. ಪ್ರತಿಯೊಬ್ಬರೂ ಸುರಕ್ಷಿತವಾಗಿ ತಮ್ಮ ಗುರಿ ಮುಟ್ಟಲು ಬಯಸುತ್ತಾರೆ. ಕೆಲವರಿಗೆ ಈ ಪಯಣದಲ್ಲಿ ಸುಖ ಸಿಕ್ಕರೆ, ಹಲವರಿಗೆ ದುಃಖ ತಪ್ಪಿದ್ದಲ್ಲ. ಹೀಗೆ ಜೀವನದ ವೈವಿಧ್ಯತೆ ತೋರಿಸುತ್ತಲೇ ಸಿನಿಮಾ ಜನಮಾನಸದಲ್ಲಿ ಯಶಸ್ವೀ ಎನಿಸುತ್ತದೆ. ಎಂದಿನಂತೆ ಈ ಸಲ ಓದುಗರಿಗೆ ಸಪ್ತ ಭಾಷೆಗಳ ಸಿನಿಮಾ ಕುರಿತು ಮಾಹಿತಿ ಇದೆ, ಓದಿ ನಿಮ್ಮ ಅಭಿಪ್ರಾಯ ತಿಳಿಸಿ!

06_Kannad-Movie_KD-The-Devil (1)

ಕನ್ನಡ :  KD : ದಿ ಡೆವಿಲ್

ಕನ್ನಡದ ` KD : ದಿ ಡೆವಿಲ್  ಯಶಸ್ವೀ ಎನಿಸಿದೆ. ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ರಿಲೀಸ್‌ ಆಗಬೇಕಿದ್ದ ಈ ಚಿತ್ರ, ಕೊನೆಯ ಕ್ಷಣದಲ್ಲಿ ಕನ್ನಡ ವರ್ಷನ್‌ ಮಾತ್ರ ರಿಲೀಸ್‌ ಆಗಿದೆ. 15 ದಿನಗಳ ನಂತರ ತೆಲುಗಿನಲ್ಲೂ ತೆರೆಕಂಡಿತು. ನಿರ್ದೇಶಕ ಜೋಗಿ ಪ್ರೇಮ್ ಹಾಗೂ ಧ್ರುವ ಸರ್ಜಾ ಕಾಂಬಿಯ ಈ ಚಿತ್ರ 100 ಕೋಟಿ ರೂ. ಬಜೆಟ್‌ ಮೀರಿದೆ. ` KD ' ಅಂದ್ರೆ ಇಲ್ಲಿ ವಿಲನ್‌ ಎಂದು ಭಾವಿಸಬಾರದು. ಆದರೆ ಚಿತ್ರದ ಪ್ರಕಾರ ಇದು ಕಾಳಿದಾಸ. 1980ರ ಕಾಲಘಟ್ಟದ ಚಿತ್ರವಿದು. ಆಗ ಬೆಂಗಳೂರಿನಲ್ಲಿ ಡಾಕ್‌ ದೇವ್ ‌ನದ್ದೇ ಹವಾ. ಈತನನ್ನು ಪೊಲೀಸರು ಮಟ್ಟಹಾಕದೇ ಹೋಗುತ್ತಾರೆ. ಶಾಲೆ ಮೇಷ್ಟ್ರು ಧರ್ಮ, ಅವನ ತಮ್ಮ ಕಾಳಿದಾಸ, ಸೀಮೆಎಣ್ಣೆ ಮಾರುತ್ತಿದ್ದವನು ಮುಂದೆ KD ಆದದ್ದು ಹೇಗೆ ಎಂಬುದೇ ಚಿತ್ರದ ಉಳಿದಾರ್ಧ. ಈ ಚಿತ್ರದಲ್ಲಿ ಧ್ರುವ ಜೊತೆ ರೀಷ್ಮಾ, ಶಿಲ್ಪಾ ಶೆಟ್ಟಿ, ಸಂಜಯ್‌ ದತ್ತ್, ರಮೇಶ್‌, ರವಿಚಂದ್ರನ್‌, ಪಿ. ರವಿಶಂಕರ್‌ ಸೇರಿದಂತೆ ದೊಡ್ಡ ತಾರಾಗಣವಿದೆ. ಈ ಚಿತ್ರಕ್ಕೆ ಸಂಗೀತ ನೀಡಿದರು ಅರ್ಜುನ್‌ ಜನ್ಯ. ಈ ಚಿತ್ರದ ಒಟ್ಟಾರೆ ಕಲೆಕ್ಷನ್‌ ಬಗ್ಗೆ KD ಪ್ರೊಡಕ್ಷನ್‌ ಯೂನಿಟ್‌ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಒಟ್ಟಾರೆ ಕರ್ನಾಟಕದಾದ್ಯಂತ ಹಾಗೂ ತೆಲುಗು ವರ್ಷನ್‌ ಸೇರಿ ಭಾರಿ ಕಲೆಕ್ಷನ್ ಆಗಿದೆ.

02_Telugu-Movie_Thimmarajupalli-TV (1)

ತೆಲುಗು : ತಿಮ್ಮರಾಜುಪಲ್ಲಿ TV

ಇದೊಂದು ಅಪ್ಪಟ ಗ್ರಾಮೀಣ ಚಿತ್ರ. 80ರ ದಶಕದಲ್ಲಿ ಮೊದ ಮೊದಲು TV ನೋಡಿ ಪ್ರಭಾವಿತಗೊಂಡವರಿಗೆ ಈ ಚಿತ್ರ ಹೆಚ್ಚು ಆಪ್ತವಾಗುತ್ತದೆ. 1990ರ ಕಥಾಹಂದರ ಈ ಚಿತ್ರದಲ್ಲಿ ಮುಖ್ಯ ತಾರಾಗಣದ ಜೊತೆ ಸುಮಾರು 50ಕ್ಕೂ ಹೆಚ್ಚಿನ ಹಳ್ಳಿ ಪಾತ್ರಧಾರಿಗಳಿದ್ದಾರೆ. ರಾಯಲಸೀಮಾ ಜಿಲ್ಲೆಯ ತಿಮ್ಮರಾಜುಹಳ್ಳಿಯಲ್ಲಿ TV ವೀಕ್ಷಣೆಯೇ ಒಂದು ಸಂಭ್ರಮ! ಶಿವರಾತ್ರಿ ಹಬ್ಬದಂದು ಇಡೀ ಹಳ್ಳಿಯವರೆಲ್ಲ ಸೇರಿ ಅದರಲ್ಲಿ ಸಿನಿಮಾ ನೋಡುವುದು ದೊಡ್ಡ ಪ್ರೆಸ್ಟೀಜ್‌ ಆಗಿತ್ತು. ಹಳ್ಳಿಯವರು ಅದಕ್ಕಾಗಿ ಚಂದಾ ವಸೂಲಿ ಸಹ ಮಾಡುತ್ತಿದ್ದರು. ಆ ಊರಿನ ಪ್ರಮುಖ ರಾಜಪ್ಪ ಈ ಕ್ರಮ ಅನುಸರಿಸುವಾಗ, ಎಲ್ಲರೂ ಅವನ ಮನೆಗೆ TV ನೋಡಲು ಹೋಗುತ್ತಿದ್ದರು. ಹಾಗೆ ಆತನ ತಂಗಿ ಜೊತೆ ನಾಯಕನ ಪ್ರೇಮಾಂಕುರ. ಇದನ್ನು ವಿರೋಧಿಸುವ ರಾಜಪ್ಪನಿಗೆ, ನಾಯಕ TV ಇಲ್ಲವಾಗಿಸುತ್ತೇನೆ ಎಂದು ಸವಾಲೊಡ್ಡುತ್ತಾನೆ. ದುರಾದೃಷ್ಟಕ್ಕೆ ಮರುದಿನವೇ ಆ TV ಕಾಣೆಯಾಗುತ್ತದೆ! ಅದನ್ನು ಕದ್ದವರು ಯಾರು? ನಾಯಕ ನಿರ್ದೋಷಿ ಎಂದು ಸಾಬೀತಾಯಿತೇ? ಪ್ರೇಮಿಗಳು ಒಂದಾದರೆ ಎಂಬುದೇ ಚಿತ್ರದ ಉಳಿದಾರ್ಧ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ