ನೀವು ಸಹ ಫ್ರಿಜ್ ಕೊಳ್ಳಲಿದ್ದೀರಾ? ಅದಕ್ಕೆ ಮೊದಲು ಈ ಸಲಹೆಗಳತ್ತ ಒಮ್ಮೆ ಕಣ್ಣಾಡಿಸಿ….
ಮಾರುಕಟ್ಟೆಯಲ್ಲಿ ಇದೀಗ ಫ್ರಿಜ್ ಕೇವಲ ಒಂದು ಕೂಲಿಂಗ್ ಮಿಶನ್ ಆಗಿ ಉಳಿದಿಲ್ಲ. ಬದಲಿಗೆ ಇದು ನಿಮ್ಮ ಕಿಚನ್ನಿನ ಎಲ್ಲಕ್ಕೂ ಸ್ಮಾರ್ಟ್ ಗ್ಯಾಜೆಟ್ ಎನಿಸಿದೆ. ಹೀಗಾಗಿ ಅದು ಒಂದು ಕಿಚನ್ ಅಪ್ಲೈಯೆನ್ಸ್ ಮಾತ್ರವಲ್ಲದೆ, ಬದಲಿಗೆ ಒಂದು ಅಗತ್ಯದ ಇನ್ ವೆಸ್ಟ್ ಮೆಂಟ್ ಆಗಿಹೋಗಿದೆ. ದೊಡ್ಡ ಕುಟುಂಬಕ್ಕೆ 2 ಡೋರ್ ಫ್ರಿಜ್, ಈಗೆಲ್ಲ 3 ಡೋರ್ ಸಹ ಲಭ್ಯ. ಚಿಕ್ಕ ಕುಟುಂಬಕ್ಕೆ ಕಾಂಪ್ಯಾಕ್ಟ್ ಸಿಂಗಲ್ ಡೋರ್ ಈಗಲೂ ಲಭ್ಯ. ನಿಮ್ಮ ಬಜೆಟ್ ಗೆ ಅನುಸಾರ ಆರಿಸಿಕೊಳ್ಳಿ.
ಹಲವು ಟಾಪ್ ಬ್ರಾಂಡ್ ಗಳ ಲೇಟೆಸ್ಟ್ ಟೆಕ್ನಿಕ್ ನ ಫ್ರಿಜ್ ಈಗ ಎಲ್ಲೆಡೆ ಲಭ್ಯ. ಇವೆಲ್ಲ ವಿಶೇಷತೆ ಬೇರೆ ಬೇರೆ ಇರುತ್ತದೆ. ಇದರಲ್ಲಿ ನಿಮಗೆ ಬೆಸ್ಟ್ ಯಾವುದೋ, ನಿಮ್ಮ ಅಗತ್ಯಕ್ಕೆ ತಕ್ಕಂತೆ ನೋಡಿ ಆರಿಸಿ. ನಿಮ್ಮದು ಚಿಕ್ಕ ಕುಟುಂಬವಾದರೆ ಸಿಂಗಲ್ ಡೋರ್ ಸಾಕು (ಎಷ್ಟು ಲೀ. ಪ್ರಮಾಣ ಎಂಬುದನ್ನು ನೀವೇ ನಿರ್ಧರಿಸಿ) ಜೊತೆಗೆ ಫ್ರಿಜ್ ಮೇಲೆ ಗುರುತಿಸಿರುವ ಸ್ಟಾರ್ ರೇಟಿಂಗ್ ಏನು ಹೇಳುತ್ತದೆ ನೋಡಿ ತಿಳಿಯಿರಿ.
ಸಿಂಗಲ್ ಡೋರ್ ಫ್ರಿಜ್ : ಇದರಲ್ಲಿ ಒಂದೇ ಬಾಕ್ಸ್ ಇರುತ್ತದೆ. ಅಂದ್ರೆ ಇದನ್ನು ತೆರೆಯಲು ಒಂದೇ ಕದ ಇರುತ್ತದೆ. ಇದರಲ್ಲಿ ನಿಮ್ಮ ಡೀಪ್ ಫ್ರೀಝರ್‌ಐಸ್ ಬಾಕ್ಸ್ ಫಿಟ್ ಆಗುತ್ತದೆ. 2-3 ಸದಸ್ಯರಿರುವರ ಚಿಕ್ಕ ಕುಟುಂಬಕ್ಕೆ ಇದು ಸಾಕು. ಇದು ತೀರಾ ದುಬಾರಿಯಲ್ಲ, ಹೆಚ್ಚಿನ ಜಾಗ ಬೇಡ.

ಇದು ಯಾರಿಗೆ ಹೆಚ್ಚು ಸೂಕ್ತ? : ಯಾರ ಮನೆ ಅತಿ ಚಿಕ್ಕದಿದೆಯೋ ಅವರಿಗೆ ಇದು ಹೆಚ್ಚು ಸೂಕ್ತ. ನಿಮ್ಮ ಕಿಚನ್ ಚಿಕ್ಕದಾಗಿದ್ದರೆ ಸಿಂಗಲ್ ಡೋರ್ ದನ್ನೇ ಆರಿಸಿ. ಉಳಿದಕ್ಕೆ ಹೆಚ್ಚಿನ ಜಾಗ ಬೇಕು.
ಇದರ ಸಾಮರ್ಥ್ಯ 150-250 ಲೀ. ಹೀಗಾಗಿ ಚಿಕ್ಕ ಕುಟುಂಬಕ್ಕೆ ಇದೇ ಸರಿ. ಹೆಚ್ಚಿನ ಮಂದಿ ಇರುವ ಮನೆಗೆ 2/3 ಡೋರ್ ನ ದೊಡ್ಡ ಫ್ರಿಜ್ ಬೇಕಾಗುತ್ತದೆ.
ಇದು ನಿಮ್ಮ ಬಜೆಟ್ ಗೆ ಸುಲಭವಾಗಿ ಒಪ್ಪುತ್ತದೆ. ಅದೇ 2/3 ಡೋರ್ ಫ್ರಿಜ್ ನಲ್ಲಿ ಹೆಚ್ಚಿನ ಕೂಲಿಂಗ್ ಫೀಚರ್ಸ್ ಇರುತ್ತವೆ. ಇದಕ್ಕೆ 5 ಸ್ಟಾರ್ ವರೆಗಿನ ಎನರ್ಜಿ ರೇಟಿಂಗ್ ಇದ್ದು, ಕರೆಂಟ್ ಖರ್ಚು ಕಡಿಮೆ.
ಇದರಲ್ಲಿ ಸಿಂಗಲ್ ಸ್ಪೀಡ್‌ಇನ್ ವರ್ಟರ್ ಕಂಪ್ರೆಸರ್ ಎರಡೂ ಇವೆ, ನಿಮ್ಮ ಅಗತ್ಯಕ್ಕೆ ತಕ್ಕಂತೆ ನೋಡಿ ಆರಿಸಿ. ಮನೆಯ ಇನ್ ವರ್ಟರ್ ಇದ್ದರೂ ಸಾಕು.
ಕರೆಂಟ್ ಉಳಿಸುವುದರಲ್ಲಿ ಮುಂದು : ನೀವು ಕರೆಂಟ್ ಖರ್ಚನ್ನು ಉಳಿಸಲು ಆದ್ಯತೆ ನೀಡುವಿರಾದರೆ, ಇದು ನಿಮಗೆ ಬೆಸ್ಟ್. ಇದರಲ್ಲಿ ಒಂದೇ ಡೋರ್ ಹಾಗೂ ಒಂದೇ ಕೂಲಿಂಗ್ ಸಿಸ್ಟಂ ಇದ್ದು, ಕರೆಂಟ್ ಖರ್ಚು ತಗ್ಗುತ್ತದೆ. ಉದಾ : 3 ಸ್ಟಾರ್ ಸಿಂಗ್ ಡೋರ್ ಫ್ರಿಜ್ ಗೆ ವರ್ಷಕ್ಕೆ ಸುಮಾರು 180-220 ಯೂನಿಟ್ ಬೇಕು. ಅದೇ ಡಬ್ಬಲ್ ಡೋರಿಗೆ 250-350 ಯೂನಿಟ್ ಬೇಕು. ಹೀಗಾಗಿ ನಿಮ್ಮ ಕರೆಂಟಿನ ಬಜೆಟ್ ಗೆ ತಕ್ಕಂತೆ ಆರಿಸಿ.
ಸಿಂಗಲ್ ಡೋರ್ ಬಜೆಟ್ ನಲ್ಲೇ ಲಭ್ಯ : ಇದು ನಿಮಗೆ 8-18 ಸಾವಿರದ ಒಳಗೇ ಸಿಗುತ್ತದೆ. ಅದೇ ಡಬ್ಬಲ್ ಡೋರಿಗೆ 287-080 ಸಾವಿರ ಆದೀತು! ನೀವು ಕಡಿಮೆ ಖರ್ಚಿನಲ್ಲಿ ಉತ್ತಮ ಫ್ರಿಜ್ ಬಯಸಿದರೆ ಸಿಂಗಲ್ ಡೋರ್ ಸಾಕು. ಒಟ್ಟಾರೆ ಹೇಳುವುದಾದರೆ, ಸಿಂಗಲ್ ಡೋರ್ ಚಿಕ್ಕ ಕುಟುಂಬ, ಲಿಮಿಟೆಡ್ ಬಜೆಟ್ ನವರಿಗೆ ಹೆಚ್ಚು ಲಾಭಕರ. ಅದೇ ಡಬ್ಬಲ್ ಡೋರ್, ದೊಡ್ಡ ಕುಟುಂಬ, ಹೆಚ್ಚಿನ ಫೀಚರ್ಸ್, ತುಸು ಅಧಿಕ ಬಜೆಟ್ ಓಕೆ ಎನ್ನುವವರಿಗೆ ಸರಿ. ಹೀಗಾಗಿ ಯೋಚಿಸಿ, ನಿರ್ಧರಿಸಿ. ಇದೀಗ ಯಾವ ಫ್ರಿಜ್ ಬೆಟರ್ ಅಂತೀರಾ?

ಗೋದ್ರೆಜ್ ಬ್ರಾಂಡ್ : ಇದು 244 ಲೀ. ಕೆಪಾಸಿಟಿಯಲ್ಲಿ ಲಭ್ಯ. 2-3 ಸದಸ್ಯರಿರುವ ಮನೆಗೆ ಇದು ಸಾಕು. ಅದೇ ಡಬಲ್ ಡೋರ್ ಕೊಂಡರೆ, ರಾಕ್ ಮೇಲೆ ಐಸ್ ಕಟ್ಟಿಕೊಳ್ಳದಂತೆ ಆಟೋ ಡೀಫ್ರಾಸ್ಟ್ ಫಂಕ್ಷನ್ ಇದೆ. ಇದರಲ್ಲಿ ಕೂಲ್ ಬ್ಯಾಲೆನ್ಸ್ ಟೆಕ್ನಿಕ್ ಜೊತೆ ಇನ್ವರ್ಟರ್ ಕಂಪ್ರೆಸರ್ ಸಹ ಇರುತ್ತದೆ. ಇದು ಇಡೀ ಫ್ರಿಜ್ ನ್ನು ಸಮಾನವಾಗಿ ಕೂಲ್ ಮಾಡುತ್ತದೆ. ಇದರ ಡಬ್ಬಲ್ ಡೋರ್ ನಲ್ಲಿ ನ್ಯಾನೋ ಶೀಲ್ಡ್ ಟೆಕ್ನಾಲಜಿ ಇದ್ದು, ಫ್ರಿಜ್ ಒಳಭಾಗದಲ್ಲಿ ಒಂದು ತೆಳು ಪದರ ಮೂಡಿಸಿ, ಹಾನಿಕಾರಕ ಕೀಟಾಣು ಹೆಚ್ಚದಂತೆ ತಡೆಯುತ್ತದೆ. ಇದರಿಂದ ಅದರೊಳಗಿನ ಆಹಾರ ಪದಾರ್ಥ ಸುರಕ್ಷಿತವಾಗುತ್ತದೆ.
6 ಇನ್ 1 ಕನ್ವರ್ಟೆಬಲ್ ಮೋಡ್ ಜೊತೆಗೆ ಬರುವ ಇದನ್ನು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಫ್ರೀಝರ್ ಬಳಸುತ್ತಾ, 6 ಬೇರೆ ಬೇರೆ ವಿಧದಲ್ಲಿ ಬಳಸಿಕೊಳ್ಳಬಹುದು. ಇದು ನಿಮ್ಮ ಹಣ್ಣು ತರಕಾರಿಯನ್ನು 30 ದಿನಗಳವರೆಗೂ ತಾಜಾ ಆಗಿಡಬಲ್ಲದು. ಗೋದ್ರೆಜ್ ನ ಹಲವು ಮಾಡೆಲ್ಸ್ ನಲ್ಲಿ ಶೆಲ್ಫ್ ನ ನೇರ ಮೇಲೆಯೇ ಸಣ್ಣ ಸಣ್ಣ ರಂಧ್ರಗಳಿವೆ. ಫ್ರಿಜ್ ನ ಪ್ರತಿ ಮೂಲೆಯಲ್ಲೂ ಒಂದೇ ಸಮನಾಗಿ ಕೂಲಿಂಗ್ ಎಫೆಕ್ಟ್ ಇರುತ್ತದೆ. ಗೋದ್ರೆಜ್ ಫ್ರಿಜ್ ನ ಬಾಡಿ ಪೇಂಟ್ ಕ್ವಾಲಿಟಿ ಬಲು ಸಶಕ್ತ ಸುಪರ್ಬ್. ಸದ್ದಿಲ್ಲದ, ಹೆಚ್ಚು ಕರೆಂಟ್‌ಖರ್ಚು ತಾರದ ಫ್ರಿಜ್ ಇದು.

ಹೈರ್ ಫ್ರಿಜ್ : 1 ಗಂಟೆಯ ಐಸಿಂಗ್ ಟೆಕ್ನಿಕ್ಸ್ ನ ಈ ಸಿಂಗಲ್ ಡೋರ್ ಫ್ರಿಜ್, ಬೇಗ ಬೇಗ ಐಸ್ ಜಮೆ ಮಾಡುತ್ತದೆ. ಇದರಲ್ಲಿ ಲಾಕ್‌ಕೀ ಸೌಲಭ್ಯ ಇದೆ. ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗ್ಯಾಸ್ಕೆಟ್ ಇದ್ದು, ಬ್ಯಾಕ್ಟೀರಿಯಾ ಪ್ರವೇಶಕ್ಕೆ ಅಡ್ಡಿಪಡಿಸುತ್ತದೆ. ಸಾಮಾನ್ಯವಾಗಿ ಹೈರ್‌ಕಂಪನಿಯ ಈ ಫ್ರಿಜ್ ವರ್ಕ್ ಮಾಡಲು ಸ್ಟೆಬಿಲೈಝರ್ ನ ಅಗತ್ಯ ಇಲ್ಲ. ನೀರಿನ ಬಾಟಲಿ ಇರಿಸಲು ಸಾಕಷ್ಟು ದೊಡ್ಡ ರಾಂಕ್ಸ್ ಇವೆ. ಇದು 5 ಸ್ಟಾರ್ ರೇಟಿಂಗ್ ನ ಜೊತೆ ಬರುತ್ತದೆ. ಹೀಗಾಗಿ ಹೆಚ್ಚು ಕರೆಂಟ್ ಖರ್ಚಿನ ಟೆನ್ಶನ್ ಇಲ್ಲ. ವರ್ಲ್ ಪೂಲ್ ಫ್ರಿಜ್ : ಈ ಫ್ರಿಜ್ ತನ್ನ ಹನಿಕೋಂಬ್ ಮಾಯಿಶ್ಚರ್ ಲಾಕ್ ಟೆಕ್ನಿಕ್ ಕಾರಣ ಭಾರತೀಯರ ಮನೆ ಮನೆಗಳಲ್ಲಿ ಲಭ್ಯ. ತರಕಾರಿ ಡಬ್ಬದ ಮೇಲೆ ಈ ಟೆಕ್ನಿಕ್ ಒಂದು ಸ್ಪೆಷಲ್ ನೆಟೆಡ್ ಮುಚ್ಚಳದ ತರಹ ಕೆಲಸ ಮಾಡುತ್ತದೆ, ಅದು ಆರ್ದ್ರತೆಯನ್ನು ಹೀರಿ, ವಾಪಸ್ಸು ಹನಿ ಹನಿಯಾಗಿ ಉರುಳಲು ಬಿಡದೆ ಲಾಕ್ ಮಾಡುತ್ತದೆ.

ವರ್ಲ್ ಪೂಲ್ ನ ಹಲವು ಮಾಡೆಲ್ಸ್ ಗಳಲ್ಲಿ ಸಿಕ್ತ್ ಸೆನ್ಸ್ ಡೀಪ್ ಫ್ರೀಝಿ ಟೆಕ್ನಾಲಜಿ ಬಂದಿದೆ. ಇದು ಸ್ಪೆಷಲ್ ಸೆನ್ಸಾರ್ ಟೆಕ್ನಾಲಜಿ ಆಗಿದ್ದು, ಫ್ರೀಝರ್ ಒಳಗಿನ ಗಾಳಿಯ ಚಲನೆಯನ್ನು ನಿಯಂತ್ರಿಸುತ್ತದೆ. ಹೀಗಾಗಿ ಇಲ್ಲಿ ಐಸ್ ಬೇಗ ಸೆಟ್ ಆಗುತ್ತದೆ. ಐಸ್ ಕ್ರೀಮ್ ನಂಥ ವಸ್ತು ಖಂಡಿತಾ ಬೇಗ ಕರಗದು. ತರಕಾರಿ ಬಾಸ್ಕೆಟ್ ನಲ್ಲಿ ಒಂದು ವಿಶೇಷ ಆ್ಯಂಟಿಮೈಕ್ರೋಬಿಯಲ್ ಅಂಶವಿದ್ದು, ಇದು ಬ್ಯಾಕ್ಟೀರಿಯಾ ಬೆಳೆಯದಂತೆ 99% ತಡೆಗಟ್ಟುತ್ತದೆ. ಇದು 3 ಸ್ಟಾರ್ ರೇಟಿಂಗ್ ಹೊಂದಿದೆ.

ಸ್ಯಾಮ್ ಸಂಗ್ ಫ್ರಿಜ್ : ಬಹುತೇಕ ಸಿಂಗಲ್ ಡೋರ್ ಫ್ರಿಜ್ ಗಳಲ್ಲಿ ಸಾಧಾರಣ ಕಂಪ್ರೆಸರ್ ಇರುತ್ತದೆ, ಇದು ಆನ್/ ಆಫ್ ಕೆಲಸ ಮಾತ್ರ ಮಾಡುತ್ತದೆ. ಆದರೆ ಸ್ಯಾಮ್ ಸಂಗ್ ನ ಡಿಜಿಟಲ್ ಇನ್ ವರ್ಟರ್ ಕಂಪ್ರೆಸರ್ ಕೂಲಿಂಗ್ ನ ಅಗತ್ಯಕ್ಕೆ ತಕ್ಕಂತೆ ತನ್ನ ಸ್ಪೀಡ್ ನ್ನು ಕಡಿಮೆ ಯಾ ಹೆಚ್ಚು ಮಾಡಿಕೊಳ್ಳುತ್ತದೆ. ಇದರಿಂದ ಸದ್ದಿನ ಜಂಜಾಟವಿಲ್ಲ, ಕರೆಂಟ್ ಖರ್ಚಿನ ರೇಜಿಗೆ ಇಲ್ಲ. ಕಂಪ್ರೆಸರ್ ನ ಆಯುಷ್ಯ ಹೆಚ್ಚು (ಹೀಗಾಗಿ ಇದಕ್ಕೆ 20 ವರ್ಷಗಳ ವಾರಂಟಿ ಇದೆ).
ಇದರಲ್ಲಿ ನೇರವಾಗಿ ಇನ್ವರ್ಟರ್ ಕಂಪ್ರೆಸರ್ ಸಿಗುತ್ತದೆ. ಇದು ಪರ್ಫೆಕ್ಟ್ ಕೂಲಿಂಗ್ ನೀಡುವುದರ ಜೊತೆ ಕರೆಂಟ್ ಖರ್ಚನ್ನು ಉಳಿಸುವುದಕ್ಕೂ ಸಹಾಯಕ. ಇದರ ದಾವೆ ಪ್ರಕಾರ, ಇದರ ಟೆಕ್ನಿಕಲ್ ಆಹಾರವನ್ನು 15 ದಿನಗಳವರೆಗೂ ತಾಜಾ ಆಗಿಡುವುದರಲ್ಲಿ ಸಹಾಯಕ. ಕರೆಂಟ್ ಹೋದಾಗ ಸಹ ಈ ಫ್ರಿಜ್ ನಲ್ಲಿರುವ `ಕೂಲ್ ವೇವ್’ ಫೀಚರ್ ಆಹಾರವನ್ನು ಗಂಟೆಗಳ ಕಾಲ ತಣ್ಣಗಿಡಬಲ್ಲದು, ಇದರಿಂದ ಯಾವ ವಸ್ತು ಬೇಗ ಕೆಡುವುದಿಲ್ಲ. ಇದು ಚಿಕ್ಕ ಕುಟುಂಬ, ಪ್ರೊಫೆಶನಲ್ಸ್ ಗೆ ಬಲು ಸೂಕ್ತ. ಲೋ ಬಜೆಟ್, ಪ್ರೀಮಿಯಂ ಫೀಚರ್ಸ್ ಹಾಗೂ ಸುದೀರ್ಘ ಬಾಳಿಕೆಯ ಗ್ಯಾರಂಟಿ ಇದೆ.
– ಶೀಲಾ ಜೈನ್
ಸ್ಟಾರ್ ರೇಟಿಂಗ್‌ನ ಮಹತ್ವ
ಫ್ರಿಜ್ ಮೇಲೆ ಅಂಟಿಸಲಾದ `ಸ್ಟಾರ್ ರೇಟಿಂಗ್` 39, ಎಂಬ ಈ ಸ್ಟಿಕರ್ ಅಸಲಿಗೆ ಆದರ ಕರೆಂಟ್ ಉಳಿತಾಯದ ಸಾಮರ್ಥ್ಯದ ಅಳತೆಯಾಗಿದೆ. ಭಾರತದಲ್ಲಿ ಈ ರೇಟಿಂಗ್ಸ್(ಬ್ಯೂರೋ ಎನರ್ಜಿ ಎಫಿಶಿಯೆನ್ಸಿ) ಅಂದ್ರೆ ಇಂಧನ ದಕ್ಷತೆಯ ಬ್ಯೂರೋ ಮೂಲಕ, ನೀಡಿರುವುದಾಗಿದೆ. 15 ರವರೆಗಿನ ಈ ರೇಟಿಂಗ್, ಈ ಫ್ರಿಜ್ ಎಷ್ಟು ಪ್ರಮಾಣದ ಕರೆಂಟ್‌ಉಳಿತಾಯ ಮಾಡಬಲ್ಲದು ಎಂದು ಖಚಿತಪಡಿಸುತ್ತದೆ. ಎಷ್ಟು ಸ್ಟಾರ್ಸ್ ಹೆಚ್ಚಿದ್ದರೆ, ಅಂದ್ರೆ 5 ಸ್ಟಾರ್, 4 ಸ್ಟಾರ್ ಹೆಚ್ಚು ಅಷ್ಟು ಹೆಚ್ಚು ವಿದ್ಯುತ್ ಉಳಿತಾಯ. ಅಂದ್ರೆ ಕರೆಂಟ್ ಬಿಲ್ ಕಡಿಮೆ ಅಂತ. ಈ ಕಾರಣದಂದಲೇ ಜನ ತಮ್ಮ ಅಗತ್ಯಕ್ಕೆ ತಕ್ಕಂತೆ, ಬೇಕಾದ ಸ್ಟಾರ್ ರೇಟಿಂಗ್ ನೋಡಿ ಆರಿಸಿಕೊಳ್ಳುತ್ತಾರೆ.





