ಶೂಟಿಂಗ್‌ ಅಖಾಡದಲ್ಲಿ ಮಿಂಚು ಹರಿಸಿ, 57ರ ಹರೆಯದಲ್ಲಿ ಬೆಳ್ಳಿ ಪದಕ ಗೆದ್ದ `ನವರಸ ನಾಯಕಿ' ಡಾ. ಪರಿಮಳಾ ಜಗ್ಗೇಶ್‌ ತಮ್ಮ ಸಾಧನೆಗಳಿಂದ ಯಾವ ಮಟ್ಟಕ್ಕೆ ಏರಿದ್ದಾರೆ ಎಂದು ತಿಳಿಯೋಣವೇ.....?

`ವಯಸ್ಸು ಕೇವಲ ಮನುಷ್ಯನ ಮನಸ್ಸಿನ ಮಿತಿಯಷ್ಟೇ ಹೊರತು ಸಾಧನೆಯ ಹಾದಿಗಲ್ಲ,' ಎಂಬುದನ್ನು ಖ್ಯಾತ ನಟ ಜಗ್ಗೇಶ್‌ ರ ಧರ್ಮಪತ್ನಿ, ಹೆಸರಾಂತ ಆಹಾರ ತಜ್ಞೆ ಡಾ. ಪರಿಮಳಾ ಜಗ್ಗೇಶ್‌ ಅಕ್ಷರಶಃ ಸಾಬೀತುಪಡಿಸಿದ್ದಾರೆ.

ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಶೂಟಿಂಗ್‌ ಚಾಂಪಿಯನ್‌ ಶಿಪ್‌ ನಲ್ಲಿ ಬೆಳ್ಳಿ ಪದಕ ಗೆಲ್ಲು ಮೂಲಕ ಅವರು ಕನ್ನಡಿಗರ ಹೆಮ್ಮೆಯ ಸಾಧಕಿಯಾಗಿ ಹೊರಹೊಮ್ಮಿದ್ದಾರೆ.

ಅದ್ಭುತ ಕ್ರೀಡಾ ಸಾಧನೆ ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್‌ ವತಿಯಿಂದ ಬೆಂಗಳೂರಿನ `ಸ್ಪೋರ್ಟ್ಸ್ ಅಥಾರಿಟಿ ಆಫ್‌ ಇಂಡಿಯಾ' ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ `3ನೇ ನಾಗರಾಜ ರಾವ್ ಜಗದಾಳೆ ಶೂಟಿಂಗ್‌ ಸ್ಪರ್ಧೆ ಮತ್ತು ಚಾಂಪಿಯನ್‌ ಶಿಪ್‌' ರಲ್ಲಿ ಪರಿಮಳಾ ಪಾಲ್ಗೊಂಡಿದ್ದರು.

ವಿಭಾಗ : 10 ಮೀಟರ್‌ ಏರ್‌ ಪಿಸ್ತೂಲ್‌ ಚಾಂಪಿಯನ್‌ ಶಿಪ್‌.

ಸಾಧನೆ : ಮಾಸ್ಟರ್‌ ವುಮೆನ್‌ ಇಂಡಿ ವಿಜುವಲ್ ‌ವಿಭಾಗದಲ್ಲಿ 3424.

ಅಮೋಘ ಸ್ಕೋರ್‌ ಮಾಡುವ ಮೂಲಕ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ.

ಮಧುಮೇಹ ಮೆಟ್ಟಿ ನಿಂತ ಮನೋಬಲ

1994ರಿಂದಲೂ ಮಧುಮೇಹದಿಂದ ಬಳಲುತ್ತಿರುವ ಡಾ. ಪರಿಮಳಾರಿಗೆ ಕ್ರೀಡಾ ಲೋಕಕ್ಕೆ ಕಾಲಿಡುವುದು ಸುಲಭದ ಮಾತಾಗಿರಲಿಲ್ಲ. ಶೂಟಿಂಗ್‌ ಎನ್ನುವುದು ಅತ್ಯಂತ ಏಕಾಗ್ರತೆ ಮತ್ತು ದೈಹಿಕ ಸ್ಥಿರತೆಯನ್ನು ಬೇಡುವ ಕ್ರೀಡೆ. ಸಕ್ಕರೆ ಪ್ರಮಾಣ ಏರುಪೇರಾದಾಗ ಕೈಗಳು ನಡುಗುವ ಸಾಧ್ಯತೆ ಇರುತ್ತದೆ. ಇಂತಹ ದೈಹಿಕ ಸವಾಲನ್ನು ಗೆಲ್ಲಲು ಅವರು ಕಟ್ಟುನಿಟ್ಟಾದ ಆಹಾರ ಪದ್ಧತಿ ಹಾಗೂ `ರಿಕವರಿ ಪ್ಲಾನ್‌' ರೂಪಿಸಿಕೊಂಡು ಅಭ್ಯಾಸ ನಡೆಸಿದ್ದರು.

ParimalaJggesh

ತರಬೇತಿ ಮತ್ತು ಶಿಸ್ತು

ಅವರು `ಗೋಲ್ಡನ್‌ ಏಸ್‌ ಶೂಟಿಂಗ್‌ ಸ್ಪೋರ್ಟ್ಸ್ ಅಕಾಡೆಮಿ'ಯ ಪ್ರಸಿದ್ಧ ಕೋಚ್‌ ಸಂತೋಷ್‌ ಬಿ.ಎನ್‌. ಅವರಿಂದ ಕೇವಲ ಕೆಲವೇ ತಿಂಗಳುಗಳ ಹಿಂದೆ ತರಬೇತಿ ಆರಂಭಿಸಿದ್ದರು. ಒಬ್ಬ ಉದ್ಯಮಿಯಾಗಿ ಸಂಸ್ಥೆಯ ಜವಾಬ್ದಾರಿ ಮತ್ತು ಕುಟುಂಬದ ನಿರ್ವಹಣೆಯ ನಡುವೆಯೂ, ಪ್ರತಿದಿನ ಮುಂಜಾನೆ 4 ಗಂಟೆಗೆ ಎದ್ದು ಶೂಟಿಂಗ್‌ ರೇಂಜ್‌ ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಅವರ ಈ ನಿರಂತರ ಪರಿಶ್ರಮವೇ ಇಂದು ಪದಕದ ರೂಪದಲ್ಲಿ ಫಲ ನೀಡಿದೆ.

ಶಿಕ್ಷಣ ಕ್ಷೇತ್ರದ ಅದಮ್ಯ ಚೇತನ

ಡಾ. ಪರಿಮಳಾರವರ ಶೈಕ್ಷಣಿಕ ಹಾದಿ ಪ್ರತಿಯೊಬ್ಬ ಮಹಿಳೆಗೂ ಒಂದು ಪಾಠ. ಮದುವೆಯಾದಾಗ 10ನೇ ತರಗತಿಯಲ್ಲಿದ್ದ ಅವರು, ಸಂಸಾರದ ನಡುವೆಯೇ ಗಳಿಸಿದ ಪದವಿಗಳು ಇಲ್ಲಿವೆ.

ಸರ್ಟಿಫೈಡ್‌ ಕೋಚ್‌ : ಮಕ್ಕಳು ಜನಿಸಿದ ಮೇಲೂ ಓದು ಮುಂದುವರಿಸಿ ಅಂತಾರಾಷ್ಟ್ರೀಯ ಕೋಚಿಂಗ್‌ ಫೆಡರೇಶನ್‌  ಸರ್ಟಿಫೈಡ್‌ ಕೋಚ್‌ ಆದರು.

IMG-20260205-WA0082

ಅಂತಾರಾಷ್ಟ್ರೀಯ ಮಾನ್ಯತೆ : ಅಮೆರಿಕನ್‌ ಕೌನ್ಸಿಲ್ ಆನ್‌ ಎಕ್ಸರ್‌ ಸೈಜ್‌ ಮತ್ತು ನ್ಯಾಶನಲ್ ಅಕಾಡೆಮಿ ಆಫ್‌ ಸ್ಪೋರ್ಟ್ಸ್ ಮೆಡಿಸಿನ್‌ ನಿಂದ ತೂಕ ನಿರ್ವಹಣೆ ತಜ್ಞೆಯಾಗಿ ಗುರುತಿಸಿಕೊಂಡಿದ್ದಾರೆ.

ಸೈಕಾಲಜಿ ತಜ್ಞೆ :  ಇವರು ಪ್ರಾಮಾಣೀಕೃತ `ಪಾಸಿಟಿವ್ ‌ಸೈಕಾಲಜಿ ಕೋಚ್‌' ಕೂಡ ಹೌದು.

ಡಾಕ್ಟರೇಟ್‌ ಪದವಿ : ಮಧುಮೇಹ ನಿಯಂತ್ರಣದ ಕುರಿತಾದ ಅವರ ಸುದೀರ್ಘ ಸಂಶೋಧನೆಗಾಗಿ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ