ಭಾರತ ಎಂದರೆ ಹಾವಾಡಿಗರ ದೇಶ, ಹಿಂದೂಗಳು ಎಂದರೆ ಮೂಢ ನಂಬಿಕೆಯ ಜನರು ಎಂದು ಇಡೀ ಜಗತ್ತೇ ಮೂದಲಿಸುತ್ತಿದ್ದಾಗ ವಿಶ್ವ ಧರ್ಮಗಳ ಸಂಸತ್ತು 11 ಸೆಪ್ಟೆಂಬರ್ 1893 ರಂದು ಚಿಕಾಗೋದಲ್ಲಿ ಐತಿಹಾಸಿಕ ದಿಕ್ಸೂಚಿ ಭಾಷಣವನ್ನು ಮಾಡಿ ಜಗತ್ತೇ ಭಾರತ ಮತ್ತು ಹಿಂದೂ ಧರ್ಮದತ್ತ ಬೆಚ್ಚಿ ಬೀಳುವಂತೆ ಮಾಡುವ ಮುನ್ನಾ ದೇಶಾದ್ಯಂತ ಪರಿವಾಜ್ರಕರಾಗಿ ಪರ್ಯಟನೆ ಮಾಡುತ್ತಿದ್ದಂತಹ ಸಮಯದಲ್ಲಿ, 24 ಡಿಸೆಂಬರ್ 1892 ರಂದು ಸ್ವಾಮೀ ವಿವೇಕಾನಂದರು ಕನ್ಯಾಕುಮಾರಿಯನ್ನು ತಲುಪಿದ್ದರು. ಸಮುದ್ರದ ದಂಡೆಯಲ್ಲೇ ಇರುವ ದೇವಿಯ ದರ್ಶನ ಪಡೆದು ಹಿಂದೂಮಹಾಸಾಗರ, ಅರಬ್ಬೀ ಸಮುದ್ರ ಮತ್ತು ಬಂಗಾಳಕೊಲ್ಲಿಗಳ ಸಂಗಮದಲ್ಲಿ ಸಮುದ್ರ ತಟದಿಂದ ಸುಮಾರು 500ಮೀ ದೂರ ಇರುವ ಬಂಡೆಯನ್ನು ನೋಡಿ ಅಲ್ಲಿಗೆ ಕರೆದೊಯ್ಯುವಂತೆ ಅಲ್ಲಿಯೇ ಇದ್ದ ದೋಣಿಯವರನ್ನು ಕೇಳಿಕೊಳ್ಳುತ್ತಾರೆ. ಆ ಸಮಯದಲ್ಲಿ ಭೋರ್ಗರೆಯುತ್ತಿದ್ದ ಸಮುದ್ರ ಅಲೆಗಳನ್ನು ಕಂಡು ಈ ಸಮಯದಲ್ಲಿ ದೋಣಿಯನ್ನು ಚಲಾಯಿಸುವುದು ಅಪಾಯಕರ ಎಂದಾಗ, ಅಲ್ಲಿನ ನಾವಿಕರ ಎಚ್ಚರಿಕೆಗೂ ಗಮನ ಹರಿಸದೇ, ತಾವೇ ಧೈರ್ಯದಿಂದ ಸಮುದ್ರಕ್ಕೆ ದುಮುಕಿ ಈಜಿಕೊಂಡು ಆ ಬೃಹತ್ ಬಂಡೆಯನ್ನು ತಲುಪುತ್ತಾರೆ. ಅಲ್ಲಿನ ಪ್ರಶಾಂತ ವಾತಾವರಣದಲ್ಲಿ ಸುಮಾರು 3 ದಿನಗಳ ಕಾಲ ಹಸಿವು, ನಿದ್ರೆ ನೀರಡಿಕೆಯಿಲ್ಲದೇ, ಧ್ಯಾನವನ್ನು ಮಾಡಿ, ಜ್ಞಾನೋದಯವನ್ನು ಪಡೆದು, ಮಾನವೀಯತೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಡುವ ಸಂಕಲ್ಪವನ್ನು ತೆಗೆದುಕೊಳ್ಳುತ್ತಾರೆ.

vk8
vk9

ಆ ರೀತಿ ಸಂಕಲ್ಪ ಮಾಡಿದ ಸ್ವಾಮಿ ವಿವೇಕಾನಂದರು 1893 ರ ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ, ನನ್ನ ಅಮೇರಿಕಾದ ಸಹೋದರ ಸಹೋದರಿಯರೇ ಎಂದು ಭಾಷಣವನ್ನು ಆರಂಭಿಸಿ ಅಲ್ಲಿ ನೆರೆದಿದ್ದ ಸಭಿಕರನ್ನೆಲ್ಲಾ ಮಂತ್ರ ಮುಗ್ಧರನ್ನಾಗಿಸಿ ಭಾರತ, ಹಿಂದೂ ಧರ್ಮ, ಯೋಗ, ವೇದಾಂತದ ಮತ್ತು ಭಾರತೀಯ ತತ್ವಶಾಸ್ತ್ರಗಳನ್ನು ಪಾಶ್ಚಿಮಾತ್ಯ ದೇಶಗಳಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜನವರಿ 1962 ರಲ್ಲಿ, ಸ್ವಾಮೀಜಿಯವರ ಜನ್ಮ ಶತಮಾನೋತ್ಸವದ ಸಮಯದಲ್ಲಿ ಅವರು ಜ್ಞಾನೋದಯ ಪಡೆದ ಕನ್ಯಾಕುಮಾರಿಯ ಆ ಬೃಹತ್ ಬಂಡೆಯ ಮೇಲೆ ಸ್ವಾಮೀಜಿಯವರ ಸ್ಮಾರಕವೊಂದನ್ನು ಸ್ಥಾಪಿಸುವ ಸಂಕಲ್ಪವನ್ನು ಮಾಡಿದರು. ಈ ರೀತಿಯ ಮಹಾಸಂಕಲ್ಪವನ್ನು ನೆರೆವೇರಿಸಲು ಅಂದಿನ ಮದ್ರಾಸಿನ ಶ್ರೀ ರಾಮಕೃಷ್ಣ ಮಿಷನ್ ಅವರು ಸ್ಥಳ ಪರಿಶೀಲನೆಗೆ ಬಂದಾಗ ಈ ಸುಂದರ ಪರಿಕಲ್ಪನೆಯ ವಿರುದ್ಧ ಸ್ಥಳೀಯ ಕ್ಯಾಥೊಲಿಕ್ ಮೀನುಗಾರರ ಸಂಘವು ಉಗ್ರವಾಗಿ ಪ್ರತಿಭಟನೆ ನಡೆಸಿತಲ್ಲದೇ, ಆ ಬಂಡೆಯ ಮೇಲೊಂದು ದೊಡ್ಡದಾದ ಶಿಲುಬೆಯನ್ನು ಪ್ರತಿಷ್ಟಾಪನೆ ಮಾಡಲು ಹೊಂಚು ಹಾಕಿತು. ಇದರಿಂದ ಕೆಲ ಸಮಯ ಆ ಪ್ರದೇಶದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ನರ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾದ ಕಾರಣ ಆ ಸ್ಥಳವನ್ನು ನಿಷೇಧಿತ ಸ್ಥಳವೆಂದು ಗುರುತಿಸಿ, ಶಸ್ತ್ರಸಜ್ಜಿತ ಕಾವಲುಗಾರರನ್ನು ಅಲ್ಲಿಗೆ ಗಸ್ತು ಹಾಕುವಂತರ ಪರಿಸ್ಥಿತಿ ಬಂದೊದಗಿತ್ತು. ಹಿಂದೂಗಳ ಸತತ ಹೋರಾಟದ ಫಲವಾಗಿ ಜನವರಿ 17, 1963 ರಂದು ಸರ್ಕಾರವು ಅಲ್ಲಿಗೆ ಸ್ವಾಮಿ ವಿವೇಕಾನಂದರ ಸ್ಮಾರಕವನ್ನು ನಿರ್ಮಿಸಲು ಅನುಮತಿ ಕೊಡಲಾಯಿತು.

vk7

ನಿಜ ಹೇಳಬೇಕೆಂದರೆ, ಈ ಹೋರಾಟ ಮತುತ್ ಸ್ಮಾರಕದ ಹಿಂದಿನ ಸಂಪೂರ್ಣ ಶ್ರೇಯ ಶ್ರೀ ಏಕನಾಥ ರಾಮಕೃಷ್ಣ ರಾನಡೆ ಅವರಿಗೆ ಸಲ್ಲ ಬೇಕು ಎಂದರೆ ತಪ್ಪಾಗಲಾರದು. ಶ್ರೀ ಏಕನಾಥ ರಾನಡೆಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಹಿರಿಯ ಪ್ರಚಾರಕರಾಗಿದ್ದಲ್ಲದೇ,ಸ್ವಾಮೀಜಿಗಳ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದ ಅವರೊಬ್ಬ ಪ್ರಖ್ಯಾತ ಭಾರತೀಯ ಸಾಮಾಜಿಕ ಮತ್ತು ಆಧ್ಯಾತ್ಮಿಕ ಸುಧಾರಕರಾಗಿದ್ದರು. ಅವರ ನೇತೃತ್ವದಲ್ಲೇ, ವಿವೇಕಾನಂದ ರಾಕ್ ಮೆಮೋರಿಯಲ್ ಆರ್ಗನೈಸಿಂಗ್ ಕಮಿಟಿಯನ್ನು ಸ್ಥಾಪಿಸಲಾಯಿತು. ವಿವೇಕಾನಂದ ಶಿಲಾ ಸ್ಮಾರಕವು ರಾಷ್ಟ್ರೀಯ ಸ್ಮಾರಕ ಎಂದೇ ಜನರ ಮುಂದೆ ಬಿಂಬಿಸಿದ ಶ್ರೀ ರಾನಡೆಯವರು ಇದರ ನಿರ್ಮಾಣಕ್ಕೆ ಪ್ರತಿಯೊಬ್ಬ ಭಾರತೀಯರ ಕೊದುಗೆ ಇರಬೇಕೆಂದು ನಿರ್ಧರಿಸಿ, ಪ್ರತೀ ರಾಜ್ಯ ಸರ್ಕಾರವನ್ನು ಸಂಪರ್ಕಿಸಿದ್ದಲ್ಲದೇ, ಇನ್ನೂ ಹೆಚ್ಚಿನ ಧನಸಹಾಯಕ್ಕಾಗಿ ಒಂದು ರೂಪಾಯಿಯ ಪೋಸ್ಟ್ ಕಾರ್ಡ್ ಮಾದರಿಯನ್ನು ಅಚ್ಚು ಹಾಕಿಸಿ ದೇಶಾದ್ಯಂತ ಜನಸಾಮಾನ್ಯರಿಂದ ದೇಣಿಗೆಗಳನ್ನು ಸಂಗ್ರಹಿಸಿದರು. ಇಂತಹ ಪವಿತ್ರ ಕಾರ್ಯಕ್ಕಾಗಿ ಮೊದಲ ದೇಣಿಗೆಯನ್ನು ವಿಶ್ವಹಿಂದೂಪರಿಷತ್ತಿನ ಸ್ಥಾಪಕರಾದ ಪೂಜ್ಯ ಶ್ರೀ ಚಿನ್ಮಯಾನಂದರಿಂದ ಸಂಗ್ರಹಿಸುವ ಮೂಲಕ ಅಭಿಯಾನವನ್ನು ಆರಂಭಿಸಲಾಯಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ