ಜೀವನದಲ್ಲಿ ಕೆಲವೊಂದು ಸಂಬಂಧಗಳನ್ನು ವರ್ಣಿಸಲು ಸಾಧ್ಯವಿರದೇ, ಅದನ್ನು ಕೇವಲ ಅನುಭವಿಸಿಯೇ ತೀರಬೇಕು ಅಂತಹ ಸಂಬಂಧಗಳಲ್ಲಿ ತಾಯಿ ಮಗನ ಸಂಬಂಧವೂ ಹೌದು. ಹತ್ತು ತಿಂಗಳುಗಳ ಕಾಲ ಹೊತ್ತು ಹೆತ್ತು, ಸಾಕಿ ಸಲಹಿ, ವಿದ್ಯೆ ಬುದ್ಧಿಯ ಜೊತೆಗೆ ಒಳ್ಳೆಯ ಸಂಸ್ಕಾರವಂತನಾಗಿ ಮಾಡುವುದು ನಿಜಕ್ಕೂ ಅಧ್ಭುತವೇ ಸರಿ. ಹಾಗಾಗಿಯೇ ಆಂಗ್ಲಭಾಷೆಯಲ್ಲಿ mother is a fact father is assumption or mother is a truth father is a belief ಎಂಬ ನಾಣ್ಣುಡಿ ಇದೆ. ಅಂದರೆ, ಈ ಜಗತ್ತಿನಲ್ಲಿ ತಾಯಿ ಮಕ್ಕಳ ಕರುಳು ಸಂಬಂಧ ಎನ್ನುವುದು ಸತ್ಯ. ಅದೇ ತಂದೆಯ ವಿಷಯದಲ್ಲಿ ಅದು ಕೇವಲ ನಂಬಿಕೆ ಎನಿಸಿಕೊಳ್ಳುತ್ತದೆ. ತಾಯಿ ತೋರಿಸುವವರೇ ತಂದೆೆ ಎನಿಸಿಕೊಳ್ಳುತ್ತಾರೆ. (ಇತ್ತೀಚಿನ ದಿನಗಳಲ್ಲಿ ಆಧುನಿಕತೆ ಬೆಳೆದಂತೆಲ್ಲಾ ತಂತ್ರಜ್ಞಾನದಿಂದ DNA ಪರೀಕ್ಷೆಯ ಮೂಲಕ ನಿಜವಾದ ತಂದೆಯನ್ನೂ ಸಹಾ ಕಂಡುಕೊಳ್ಳಬಹುದಾಗಿದೆ).

ಪುರಾಣದಲ್

1949ರಲ್ಲಿ ಶಂಕರ್ ಸಿಂಗ್ ಅವರ ನಾಗಕನ್ನಿಕ ಚಿತ್ರದಲ್ಲಿ ಸಖಿಯ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಲೀಲಾವತಿಯವರು ನಂತರ ನೋಡ ನೋಡುತ್ತಿದ್ದಂತೆಯೇ ನಾಯಕಿಯಾಗಿ ಭಡ್ತಿ ಪಡೆದು ನೂರಾರು ಚಿತ್ರಗಳಲ್ಲಿ ನಟಿಸಿ, ವಯಸ್ಸಿನ ಅನುಗುಣವಾಗಿ ತಾಯಿ, ಅತ್ತೆ, ಅಜ್ಜಿ ಮುಂತಾದ ಪೋಷಕ ಪಾತ್ರಗಳಲ್ಲಿಯೂ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದು ನಿಜಕ್ಕೂ ಅದ್ಭುತವೇ ಸರಿ. ಕನ್ನಡದಲ್ಲಿ ಸುಮಾರು 400 ಚಿತ್ರಗಳಲ್ಲದೇ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಸುಮಾರು 200 ಚಿತ್ರಗಳು ಸೇರಿದಂತೆ ಒಟ್ಟು 600 ಚಿತ್ರಗಳಲ್ಲಿ ನಟಿಸುವ ಮೂಲಕ ಒಂದು ಕಾಲದಲ್ಲಿ ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದದ್ದು ಈಗ ಇತಿಹಾಸ. ಕನ್ನಡ ಮೇರು ನಟ ಡಾ. ರಾಜಕುಮಾರ್ ಅವರೊಂದಿಗೆ ಸುಮಾರು 46 ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆ ನಟಿ ಲೀಲಾವತಿ ಅವರದ್ದಾಗಿದೆ.
1937ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಅತ್ಯಂತ ಬಡತನದ ಕುಟುಂಬವೊಂದರಲ್ಲಿ ಜನಿಸಿದ್ದ ಲೀಲಾ ಕಿರಣ್ ಬಾಲ್ಯದಲ್ಲಿ ಸೇಂಟ್ ಜೋಸೆಫ್ ಎಲಿಮೆಂಟರಿ ಶಾಲೆಯಲ್ಲಿ ಓದುತ್ತಿರುವಾಗಲೇ ತಮ್ಮ ತಂದೆ ಮತ್ತು ತಾಯಿಯರನ್ನು ಕಳೆದು ಕೊಂಡು ಅನಾಥರಾಗಿದ್ದಲ್ಲದೇ, ಅವರು ಎರಡನೇ ತರಗತಿಯಲ್ಲಿ ಓದುತ್ತಿರುವಾಗಲೇ, ಕೊತ ಕೊತನೆ ಎಣ್ಣೆ ಕುದಿಯುತ್ತಿದ್ದ ಬಾಣಲೆಯಲ್ಲಿ ಅಚಾನಕ್ಕಾಗಿ ಕಾಲು ಹಾಕಿ ಕಾಲು ಸುಟ್ಟ ಕಾರಣ ಹಲವು ತಿಂಗಳು ಶಾಲೆಗೆ ಹೋಗಲಾಗದೇ, ಕಲಿಯುವ ಹಪಾ ಹಪಿ ಇದ್ದರೂ, ತಂದೆ ತಾಯಿಯರನ್ನು ಕಳೆದುಕೊಂಡು ತಬ್ಬಲಿಯಾದ ಕಾರಣ, ಅವರ ಶಿಕ್ಷಣ ಅಲ್ಲಿಗೇ ಕೊನೆಯಾಗಿದ್ದಲ್ಲದೇ, ಜೀವನೋಪಾಯಕ್ಕಾಗಿ, ಕ್ರಿಶ್ಚಿಯನ್ ದಂಪತಿಗಳ ಮನೆಯಲ್ಲಿ ಸಾಕು ಮಗುವಾಗಿ ಬೆಳೆದಿದ್ದಲ್ಲದೇ, ಆ ಮನೆಯಲ್ಲೇ ಕಸಗುಡಿಸುವ, ಮುಸುರೆ ತಿಕ್ಕವ ಕೆಲಸವಲ್ಲದೇ, ಆ ಮನೆಯ ಯುಜಮಾನಿಯ ತಲೆಯ ಹೇನು ಹೆಕ್ಕುವ ಕೆಲಸವನ್ನೂ ಮಾಡ ಬೇಕಾದಂತಹ ಅನಿವಾರ್ಯ ಅವರಿಗಿತ್ತು.





