ದೊಡ್ಮನೆಯ ನಟ ವಿನಯ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾದ ಘೋಷಣೆ ನಡೆದಿದೆ. ‘ಮಾಚಿಸ್’ ಎಂಬ ಟೈಟಲ್‌ನ ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಪೋಸ್ಟರ್‌ನಲ್ಲಿ ವಿನಯ್ ರಾಜ್‌ಕುಮಾರ್ ಸಂಪೂರ್ಣ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಪಾತ್ರದ ಬಗ್ಗೆ ಭಾರಿ ಕುತೂಹಲ ಮೂಡಿಸಿದೆ.

ಪೋಸ್ಟರ್ ಜೊತೆ ಬಂದಿರುವ ಟ್ಯಾಗ್‌ಲೈನ್ ಕೂಡ ಗಮನ ಸೆಳೆಯುತ್ತಿದೆ. “ಕಳೆದುಕೊಳ್ಳಲು ಏನೂ ಇಲ್ಲದ ವ್ಯಕ್ತಿಯೇ ಈ ಜಗತ್ತಿನ ಅತ್ಯಂತ ಶಕ್ತಿಶಾಲಿ” ಎಂಬ ಅರ್ಥದ ಸಾಲು ಚಿತ್ರದ ಕಥೆಯ ತೀವ್ರತೆಯನ್ನು ಸೂಚಿಸುತ್ತಿದೆ. ಬಾಯಲ್ಲಿ ಬೀಡಿ, ಮುಖದಲ್ಲಿ ಕೋಪ, ಕಣ್ಣಲ್ಲಿ ಕಿಚ್ಚು — ಈ ಎಲ್ಲದರ ಮೂಲಕ ವಿನಯ್ ಅವರ ಹೊಸ ಶೈಲಿ ಇಲ್ಲಿ ಅನಾವರಣವಾಗಿದೆ.

ಈ ಚಿತ್ರವನ್ನು ನಿರ್ದೇಶಕ ಬಿ.ಎಸ್. ಪಿ. ವರ್ಮ ನಿರ್ದೇಶಿಸುತ್ತಿದ್ದು, ಸುರೇಶ್ ಗೌಡ ಹೆಣ್ಣೂರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ‘ಮಾಚಿಸ್’ ಸಿನಿಮಾ ಆಕ್ಷನ್ ಮತ್ತು ಎಮೋಶನ್ ಮಿಶ್ರಣವಾಗಿರುವ ಕಥೆ ಹೊಂದಿರಬಹುದು ಎನ್ನುವ ನಿರೀಕ್ಷೆ ಮೂಡಿದೆ.

FB_IMG_1778210009745

ಇದೀಗ ವಿನಯ್ ರಾಜ್‌ಕುಮಾರ್ ಅವರ ಸಿನಿ ಪಯಣದಲ್ಲಿ ವಿಭಿನ್ನ ಪಾತ್ರಗಳ ಆಯ್ಕೆ ಗಮನ ಸೆಳೆಯುತ್ತಿದೆ. ವಿಶೇಷವಾಗಿ ಸಿಟಿ ಲೈಟ್ಸ್ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿರುವ ಪಾತ್ರ ಈಗಾಗಲೇ ಸಿನಿಪ್ರೇಮಿಗಳ ಕುತೂಹಲ ಹೆಚ್ಚಿಸಿದೆ. ನಿರ್ದೇಶಕ ವಿಜಯ್ ಅವರು ವಿನಯ್ ಅವರನ್ನು ಹೊಸ ಶೈಲಿಯಲ್ಲಿ ತೆರೆ ಮೇಲೆ ತರುತ್ತಿದ್ದಾರೆ ಎನ್ನಲಾಗುತ್ತಿದೆ.

‘ಸಿಟಿ ಲೈಟ್ಸ್’ ಚಿತ್ರದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲೂ ವಿನಯ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ನಟ ದುನಿಯಾ ವಿಜಯ್, ನಾಯಕಿ ಮೋನಿಷಾ ವಿಜಯ್ ಕುಮಾರ್ ಸೇರಿದಂತೆ ಚಿತ್ರತಂಡದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೇಕ್ ಕಟ್ ಮಾಡಿ ಶುಭ ಹಾರೈಸಿದರು.

ಇದರ ಜೊತೆಗೆ ಗ್ರಾಮಾಯಣ ಚಿತ್ರತಂಡವೂ ವಿನಯ್ ಜನ್ಮದಿನದ ಪ್ರಯುಕ್ತ ಹೊಸ ಪೋಸ್ಟರ್ ಬಿಡುಗಡೆ ಮಾಡಿ ಶುಭಾಶಯ ಕೋರಿದೆ.

ಒಟ್ಟಿನಲ್ಲಿ ‘ಗ್ರಾಮಾಯಣ’, ‘ಸಿಟಿ ಲೈಟ್ಸ್’ ಮತ್ತು ಇದೀಗ ‘ಮಾಚಿಸ್’ — ಈ ಮೂರು ಸಿನಿಮಾಗಳ ಮೂಲಕ ವಿನಯ್ ರಾಜ್‌ಕುಮಾರ್ ವಿಭಿನ್ನ ಕಥೆಗಳು ಮತ್ತು ಪಾತ್ರಗಳತ್ತ ಹೆಚ್ಚು ಗಮನ ಹರಿಸುತ್ತಿರುವುದು ಸ್ಪಷ್ಟವಾಗುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ