ಮಾಲಿವುಡ್ನ ಮಿಸ್ ಪರ್ಫೆಕ್ಷನಿಸ್ಟ್ ಅಂದ್ರೆ ಅದು ನಟಿ ಸಾಯಿ ಪಲ್ಲವಿ ಮಾತ್ರ. ಹೆಚ್ಚು ಮೇಕಪ್ ಇಲ್ಲದೇ, ಹೆಚ್ಚು ಹಾರಾಟ ಅಬ್ಬರವಿಲ್ಲದೇ, ಓವರ್ ಆಕ್ಟಿಂಗ್ ಇಲ್ಲದೇ ನ್ಯಾಚುರಲ್ ಆಗಿ ನಟಿಸೋ.. ಅತ್ಯದ್ಭುತವಾಗಿ ನೃತ್ಯ ಮಾಡೋ ಏಕೈಕ ನಟಿ ಈ ಸಾಯಿ ಪಲ್ಲವಿ. ಡ್ಯಾನ್ಸ್ ಪ್ರೋಗ್ರಾಮ್ನಿಂದಲೇ ಕಿರುತೆರೆಯಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ನಟಿ ಸಾಯಿ ಪಲ್ಲವಿ ನಂತರ ಅದೇ ಕಲೆಯಿಂದಲೇ ಹಿರಿತೆರೆಗೆ ಎಂಟ್ರಿ ಕೊಟ್ಟಿದ್ದರು.
ಡ್ಯಾನ್ಸ್ ಜೊತೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಮಲೆಯಾಳಂ ಚಿತ್ರರಂಗದಲ್ಲಿ ಬಹುಬೇಡಿಕೆಯ ನ್ಯಾಚುರಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಅದರ ಜೊತೆಗೆ ತೆಲುಗಿನಲ್ಲೂ ಹಲವು ಸಿನಿಮಾಗಳಲ್ಲಿ ಖ್ಯಾತನಾಮರ ಜೊತೆ ನಟಿ ‘ದಿ ಬೆಸ್ಟ್ ಆಕ್ಟ್ರೆಸ್’ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಸಾಯಿ ಪಲ್ಲವಿಯ ವಿಶೇಷ ನಟನೆಗೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ ನಾನಿ ಜೊತೆ ನಟಿಸಿದ್ದ ‘ಶ್ಯಾಮಸಿಂಗ ರಾಯ್’ ಸಿನಿಮಾ. ನಟ ನಾಗಚೈತನ್ಯ ಜೊತೆಗೂ ‘ಲವ್ ಸ್ಟೋರಿ’ ಅನ್ನೋ ಚಿತ್ರದಲ್ಲಿ ನಟಿಸಿದ್ದ ಸಾಯಿ ಪಲ್ಲವಿ, ಇದೀಗ ಮತ್ತೆ ಜೊತೆಯಾಗಿದ್ದಾರೆ.
‘ತಾಂಡೆಲ್’ ಅನ್ನೋ ಸಿನಿಮಾದಲ್ಲಿ ಮನೋಜ್ಞ ಅಭಿನಯ ನೀಡಿದ್ದು, ರಿಲೀಸ್ಗೆ ಸಜ್ಜಾಗಿದೆ. ತುಂಬಾನೇ ನಿರೀಕ್ಷೆ ಇಟ್ಟುಕೊಂಡಿರೋ ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಮತ್ತು ನಾಗಚೈತನ್ಯ ರೊಮ್ಯಾಂಟಿಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇಷ್ಟೆಲ್ಲಾ ನೇಮು-ಫೇಮು ಪಡೆದಿರೋ ನಟಿ ಸಾಯಿ ಪಲ್ಲವಿಗೆ ‘ತಾಂಡೆಲ್’ ಸಿನಿಮಾದ ನಟನೆಗೆ ಪಡೆದ ಸಂಭಾವನೆ ಎಷ್ಟು ಅನ್ನೋದು ಎಲ್ಲರ ಕುತೂಹಲವಾಗಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದೆ.
‘ತಾಂಡೆಲ್’ ಸಿನಿಮಾಗಾಗಿ ಸಾಯಿ ಪಲ್ಲವಿ ಬರೋಬ್ಬರಿ 5 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಅಂತಾ ತಿಳಿದು ಬಂದಿದೆ. ಮತ್ತೊಂದು ಅಚ್ಚರಿ ಅಂದ್ರೆ, ನಟ ನಾಗಚೈತನ್ಯ 15 ಕೋಟಿ ಪೇಮೆಂಟ್ ಪಡೆದಿದ್ದು, ಇದು ಅವರ ಕರಿಯರ್ನಲ್ಲಿ ಅತ್ಯಧಿಕ ಮೊತ್ತ ಅಂತಾ ಹೇಳಲಾಗ್ತಿದೆ.
ಬಹುನಿರೀಕ್ಷಿತ ಸಿನಿಮಾ ‘ತಾಂಡೆಲ್’ ಇದೇ ತಿಂಗಳ 7ನೇ ತಾರೀಖಿನಂದು ರಿಲೀಸ್ ಆಗ್ತಿದೆ. ತೆಲುಗು, ಹಿಂದಿ, ತಮಿಳು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಸಾಯಿ ಪಲ್ಲವಿ ನಟನೆಯನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.