ಕಾಡಿಗೆ ತೀಡಿದಾಗ ನೀವು ತುಸು ತಪ್ಪು ಮಾಡಿದರೂ ನಿಮ್ಮ ಇಡೀ ಲುಕ್ಸ್ ನ್ನು ಹಾಳು ಮಾಡಬಲ್ಲದು. ಹೀಗಾಗಿ ಈ ಸಲಹೆಗಳನ್ನು ಅಗತ್ಯ ಅನುಸರಿಸಿ, ಕಾಡಿಗೆಯಿಂದ ನಿಮ್ಮ ಕಂಗಳ ಸೌಂದರ್ಯ ಇಮ್ಮಡಿಸಿಕೊಳ್ಳಿ.

ಕಾಡಿಗೆ ಅಥವಾ ಇನ್ನಿತರ ಯಾವುದೇ ಬ್ಯೂಟಿ ಪ್ರಾಡಕ್ಟ್ಸ್ ಇರಲಿ, ಎಂದೂ ಅದರ ಗುಣಮಟ್ಟದಲ್ಲಿ ಚೌಕಾಶಿ ಬೇಡ, ಅಗ್ಗದ ಮೂಲ ಬೇಡವೇ ಬೇಡ! ಇದರಿಂದ ನಿಮ್ಮ ಮೇಕಪ್‌ ಹಾಳಾಗುವುದೇ ಅಲ್ಲದೆ, ಕಂಗಳಿಗೂ ಹಾನಿ ತಪ್ಪಿದ್ದಲ್ಲ. ಹೀಗಾಗಿ ನಿಮ್ಮ ಕಂಗಳ ಸೆನ್ಸಿವಿಟಿಗೆ ತಕ್ಕಂತೆ ಬ್ರಾಂಡೆಡ್‌ ಕಾಜಲ್ ಮಾತ್ರ ಕೊಂಡುಕೊಳ್ಳಿ. ಇಂದಿನ ಮಾರುಕಟ್ಟೆಯಲ್ಲಿ ನಿಮಗೆ ಹರ್ಬಲ್, ಜೆಲ್ ‌ಬೇಸ್ಡ್, ಗುಲಾಬಿ, ಆರ್ಗ್ಯಾನಿಕ್‌ ಕಾಜಲ್ ಗಳು ಸಿಗುತ್ತವೆ. ಇದು ನಿಮ್ಮ ಕಂಗಳ ಹಿತದೃಷ್ಟಿಗೆ ಅತ್ಯಗತ್ಯ.

ನಿಮ್ಮ ಕಾಡಿಗೆಯಲ್ಲಿ ಕರ್ಪೂರ, ಬಾದಾಮಿ, ಶ್ರೀಗಂಧದ ಎಣ್ಣೆ ಬೆರೆತಿದ್ದರೆ ಇದು ನಿಮ್ಮ ಕಣ್ಣೆವೆಗಳ ಬೆಳವಣಿಗೆ ಜೊತೆ, ಕಂಗಳ ದೃಷ್ಟಿ ಚುರುಕುಗೊಳಿಸಿ, ಅದರ ಕೋಮಲತೆ ಹೆಚ್ಚಿಸುತ್ತದೆ. ಇಂಥ ಕಾಜಲ್ ದೀರ್ಘ ಬಾಳಿಕೆ ಬರುವುದಲ್ಲದೆ, ತಂತಾನೇ ಬಿಸಿಲಿಗೆ ಹರಡಿಕೊಳ್ಳುವ ಹಿಂಸೆಯೂ ಇರುವುದಿಲ್ಲ.

ಕಂಗಳ ಸುತ್ತಲೂ ಗಮನಿಸಿ

ನೀವು ಯಾವಾಗ ಐ ಮೇಕಪ್‌ ಗೆ ಸಜ್ಜಾದರೂ, ಅದರ ಸುತ್ತಮುತ್ತಲಿನ ಸ್ಕಿನ್‌ ಕ್ಲೀನ್‌ ಮಾಡಿ. ಅದನ್ನು ಕ್ಲೀನ್‌ ಮಾಡಿದ ನಂತರ ನಿಮ್ಮ ಸ್ಕಿನ್‌ ನಲ್ಲಿ ಜಿಡ್ಡಿನಂಶ ಉಳಿದಿದ್ದರೆ, ನಿಮ್ಮ ಕಂಗಳ ಕೆಳಗೆ ಬೆರಳ ಸಹಾಯದಿಂದ ಪೌಡರ್‌ ಲೇಪಿಸಿ. ಇದರಿಂದ ನಿಮ್ಮ ಕಾಡಿಗೆ ದೀರ್ಘ ಕಾಲ ಉಳಿಯುವುದಲ್ಲದೆ, ಅನಗತ್ಯವಾಗಿ ಹರಡುವುದಿಲ್ಲ.

ಕಾಡಿಗೆ ಹಚ್ಚುವುದು ಹೇಗೆ?

ನಿಮ್ಮ ಕಂಗಳ ಆಕಾರಕ್ಕೆ ತಕ್ಕಂತೆಯೇ ಕಾಡಿಗೆ ಹಚ್ಚಬೇಕು. ಆಗ ಅದು ನಿಮ್ಮ ಐ ಮೇಕಪ್‌ ನ ಲುಕ್ಸ್ ಸುಧಾರಿಸುತ್ತದೆ. ನಿಮ್ಮ ಕಂಗಳು ಚಿಕ್ಕದಾಗಿದ್ದು ಅದನ್ನು ದೊಡ್ಡದಾಗಿಸಲು ನೀವು ಯತ್ನಿಸಿದರೆ, ಆಗ ನೀವು ಕಾಜಲ್ ನ್ನು ವಾಟರ್‌ ಲೈನ್‌ ಮೇಲೆ ಒಳಗಡೆಯಿಂದ ಹೊರಗೆ ಎಳೆಯುತ್ತಾ, ತುದಿಯಿಂದ ಅದನ್ನು ಹೆಚ್ಚು ಹೈಲೈಟ್‌ ಮಾಡಿ ಅಥವಾ ಲೇಯರಿಂಗ್‌ ನಿಂದ ಕಂಗಳನ್ನು ಅರಳಿರುವಂತೆ ಮಾಡಬಹುದು, ಉತ್ತಮ ಲುಕ್ಸ್ ಒದಗಿಸಬಹುದು.

ಇದೇ ತರಹ ನಿಮ್ಮ ಕಂಗಳು ದೊಡ್ಡದಾಗ್ದಿದರೆ, ಲೇಯರಿಂಗ್‌ ನಿಂದ ಅದನ್ನು ಹಿಗ್ಗಿಸಬಹುದು ಅಥವಾ ಸಿಂಗಲ್ ಸ್ಟ್ರೋಕ್‌ ನಿಂದ ನಿಮ್ಮ ಕಂಗಳು ಗಾರ್ಜಿಯಸ್‌ ಲುಕ್ಸ್ ಹೊಂದುತ್ತವೆ. ಆದಷ್ಟೂ ಲಾಂಗ್‌ ಲಾಸ್ಟಿಂಗ್‌ ಕಾಜಲ್ ನ್ನು ಅಪ್ಲೈ ಮಾಡುವುದಕ್ಕೇ ಪ್ರಯತ್ನಿಸಿ, ಆಗ ಮಾತ್ರ ನಿಮ್ಮ ಕಂಗಳು ದೀರ್ಘಕಾಲ ಬ್ಯೂಟಿಫುಲ್ ಆಗಿರುತ್ತವೆ.

ಸ್ಮೋಕಿ ಐಸ್‌ ಗಾಗಿ ಇತ್ತೀಚೆಗೆ ಸ್ಮೋಕಿ ಐ ಲುಕ್ಸ್ ಹೆಚ್ಚಿನ ಬೇಡಿಕೆ  ಹೊಂದಿವೆ. ಆದರೆ ಇದರಲ್ಲಿ ಬಣ್ಣದ ಆಯ್ಕೆಯಲ್ಲಿ ನೀವು ತಪ್ಪು ಮಾಡದಿದ್ದಾಗ ಮಾತ್ರ, ಇದು ಉತ್ತಮ ರಿಸಲ್ಟ್ ನೀಡಬಲ್ಲದು. ಆಯ್ದ ಬಣ್ಣಗಳನ್ನು ಚೆನ್ನಾಗಿ ಬ್ಲೆಂಡ್‌ ಮಾಡಿ, ಆಗ ನಿಮ್ಮ ಮೇಕಪ್ ಪ್ಯಾಚಿ ಎನಿಸುವುದಿಲ್ಲ. ಇದಕ್ಕಾಗಿ ನೀವು ಎಲ್ಲಕ್ಕೂ ಮೊದಲು, ನಿಮ್ಮ ಕಂಗಳ ಮೇಲೆ ಐ ಶ್ಯಾಡೋ ಪ್ರೈಮರ್‌ ಹಚ್ಚುವ ಅಗತ್ಯವಿದೆ. ನಂತರ ಅದನ್ನು ಬ್ರಶ್ಶಿನಿಂದ ಸೆಟ್‌ ಮಾಡಿ, ಆಗ ಅದು ಚೆನ್ನಾಗಿ ಬ್ಲೆಂಡ್‌ ಆಗುತ್ತದೆ. ನಂತರ ಇದರ ಮೇಲೆ ನಿಧಾನವಾಗಿ ಟ್ರಾನ್ಸಿಶನ್‌ ಕಲರ್‌ ಅಪ್ಲೈ ಮಾಡಿ, ಬ್ಲೆಂಡ್‌ ಮಾಡಬೇಕು.

ಆಮೇಲೆ ಇದರ ಮೇಲೆ ಬ್ಲ್ಯಾಕ್‌ ಸ್ಮೋಕಿ ಐಗಾಗಿ, ಬ್ಲ್ಯಾಕ್‌ ಬೇಸ್‌ ಕಲರ್‌ ಬಳಸಿರಿ, ನಂತರ ಚೆನ್ನಾಗಿ ಬ್ಲೆಂಡ್‌ ಮಾಡಿ. ಇದು ಎಂದೂ ಪ್ಯಾಚಿ ಆಗಿ ಕಾಣಬಾರದು. ಇದಕ್ಕಾಗಿ ಕ್ರೀಸ್‌ ಬಳಿ ನೀವು ಚೆನ್ನಾಗಿ ಬ್ಲೆಂಡ್‌ ಮಾಡಬೇಕು. ಇದಾದ ಮೇಲೆ ಮತ್ತೆ ಟ್ರಾನ್ಸಿಶನ್‌ ಕಲರ್‌ ನಿಂದ ಕ್ರೀಸ್‌ ಮೇಲೆ ತೀಡಬೇಕು. ನಂತರ ಐ ಲಿಡ್ಸ್ ಮೇಲೆ ಪೆಲ್ವಿಕ್ ಲುಕ್ಸ್ ಇರಬಾರದು. ನಂತರ ವಾಟರ್ ಲೈನ್‌ ಮೇಲೆ ಬ್ಲ್ಯಾಕ್‌ ಕಾಜಲ್ ಹಚ್ಚಿ, ಕೆಳಗಿನ ಔಟರ್‌ ಲೈನ್‌ ಮೇಲೆ ಬ್ಲ್ಯಾಕ್‌ ಕಾಜಲ್ ಹಚ್ಚಿ, ಕೆಳಗಿನ ಔಟರ್‌ ಲೈನ್‌ ಮೇಲೆ ಬ್ಲ್ಯಾಕ್‌ ಐ ಶ್ಯಾಡೋ ತೀಡಿ, ಚೆನ್ನಾಗಿ ಬ್ಲೆಂಡ್‌ ಮಾಡಿ ಕೊನೆಯಲ್ಲಿ ಇನ್ನರ್‌ ಕಾರ್ನರ್ಸ್‌ ನ್ನು ಹೈ ಲೈಟ್‌ ಗೊಳಿಸಲು, ಗೋಲ್ಡ್ ಐ ಶ್ಯಾಡೋ ಬಳಸಿಕೊಂಡು, ಉತ್ತಮ ಸ್ಮೋಕಿ ಐ ಲುಕ್ಸ್ ಪಡೆಯಿರಿ.

ನಿಮಗೆ ಗ್ರೀನ್‌ ಸ್ಮೋಕಿ ಐಸ್‌ ಬೇಕಿದ್ದರೆ, ನೀವು ಗ್ರೀನ್‌ ಬೇಸನ್ನೇ ಬಳಸಬೇಕೆಂದು ಗಮನಿಸಿಕೊಳ್ಳಿ. ಅದೇ ತರಹ ಬ್ಲೂಗಾಗಿ, ಬ್ಲೂ ಬೇಸ್‌ ಕಲರ್‌ ಬಳಸಬೇಕು. ನಿಮ್ಮ ಆಯ್ಕೆಯಂತೆ ನಿಮ್ಮ ಕಂಗಳಿಗೆ ಬ್ಲ್ಯಾಕ್‌, ಬ್ಲೂ, ಗ್ರೀನ್‌ ಸ್ಮೋಕಿ ಲುಕ್ಸ್ ನೀಡಬಹುದು.

ಸಲಹೆಗಳನ್ನು ಗಮನಿಸಿ

ಬ್ಯೂಟಿ ಪ್ರಾಡಕ್ಟ್ಸ್ ನಲ್ಲಿ ಅದರಲ್ಲೂ ವಿಶೇಷವಾಗಿ ಲಿಪ್‌ ಸ್ಟಿಕ್‌, ಲಿಪ್‌ ಗ್ಲಾಸ್‌, ಕಾಜಲ್ ಲೈನರ್‌ ನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಏಕೆಂದರೆ ಇದರಿಂದ ಬ್ಯಾಕ್ಟೀರಿಯಾ ಹರಡುವ ಸಂಭವವಿದೆ. ಇದರಿಂದ ಕಂಗಳಿಗೆ ಸೋಂಕು ತಗುಲಬಹುದು. ಅದರಿಂದ ನಿಮ್ಮ ಕಂಗಳ ಸೌಂದರ್ಯಕ್ಕೆ ಹೆಚ್ಚಿನ ಹಾನಿ ತಪ್ಪಿದ್ದಲ್ಲ.

ಪಿ. ಪವಿತ್ರಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ