ಸಾಮಾನ್ಯವಾಗಿ ಸ್ತ್ರೀ ಮಗುವಿಗೆ ಜನ್ಮವಿತ್ತಾಗ, ತಾಯಿ ಆಗುವುದರ ಸುಖದೊಂದಿಗೆ, ಬೇಗ ಬೇಗ ಕೂದಲು ಬೆಳ್ಳಗಾಗುವ ಅಥವಾ ಉದುರುವ ಸಮಸ್ಯೆ ಎದುರಿಸಬೇಕಾದೀತು. ಸಾಮಾನ್ಯವಾಗಿ ಇದು 26-30ರ ಒಳಗೆ ಆದೀತು. ಅದರಲ್ಲೂ ಯಾರ ಕೂದಲು ಸಿಲ್ಕಿ, ಸ್ಮೂತ್ ಅಲ್ಲವೇ ಅವರಿಗೆ ಈ ಕಷ್ಟ ತಪ್ಪಿದ್ದಲ್ಲ. ಆದರೆ ಬಹಳ ಡ್ರೈ, ನಿರ್ಜೀವ ಆಗಿರದಿದ್ದರೂ ಈ ಬಾಧೆ ತಪ್ಪದು. ಸಾಮಾನ್ಯವಾಗಿ ಮಗು ಹುಟ್ಟು ಮೊದಲು ಹೆಂಗಸರು ತಮ್ಮ ತಲೆಗೂದಲಲ್ಲಿ ಇಣುಕುವ 1-2 ಬಿಳಿಗೂದಲನ್ನು ಮೆಹಂದಿ, ಕಾಫಿ, ಮೊಸರು, ಮೊಟ್ಟೆಗಳ ಪ್ಯಾಕ್ ಹಚ್ಚಿ ಮ್ಯಾನೇಜ್ ಮಾಡುತ್ತಾರೆ.
ಆದರೆ ಮಗು ಆದ ನಂತರ, ಇದೇನೂ ವರ್ಕ್ ಔಟ್ ಆಗದೆ, ಕೂದಲಿನ ಕಲರಿಂಗ್ ಪ್ರಕ್ರಿಯೆ ಆರಂಭಿಸುತ್ತಾರೆ. ಆರಂಭದಲ್ಲಿ ಎಲ್ಲವೂ ಸರಿಯಾಗೇ ಇರುತ್ತದೆ. ಆದರೆ 1 ವರ್ಷ ಕಳೆಯುವಷ್ಟರಲ್ಲಿ ಕೂದಲಿನ ಡ್ರೈನೆಸ್ ಹೆಚ್ಚುತ್ತದೆ, ಕ್ರಮೇಣ ಕೂದಲು ಉದುರಲಿಕ್ಕೆ ಆರಂಭ. ಹೀಗೆ 2 ವರ್ಷ ಕಳೆಯುವುದರಲ್ಲಿ ತಲೆಗೂದಲು ಅರ್ಧ ಆಗಿರುತ್ತದೆ.
ಯಾರು ಯಾರೋ ಸಲಹೆ ನೀಡಿ, ಕೊನೆಗೆ ಹೇರ್ ಕಲರಿಂಗ್ ಒಂದೇ ದಾರಿ ಆದಾಗ, ಮತ್ತೆ ಕೂದಲಿಗೆ ಮೆಹಂದಿ ಹಚ್ಚು ಕಡೆ ಗಮನ ಹರಿಯುತ್ತದೆ. ಆಗ ಹೆಚ್ಚಿನ ಮೆಹಂದಿ ಬಳಕೆಯಿಂದ ಕೂದಲಿನ ಡ್ರೈನೆಸ್ ಹೆಚ್ಚುತ್ತದೆ. 30+ ಹೆಂಗಸಿಗೆ ಮನೆ, ನೌಕರಿ, ಮಕ್ಕಳನ್ನು ಸಂಭಾಳಿಸುತ್ತಾ ಬಿಡುವಾಗಿ ಮೆಹಂದಿ ಹಚ್ಚಿಕೊಳ್ಳಲು ಪುರಸತ್ತಾದರೂ ಎಲ್ಲಿ?
ಈ ಗೊಂದಲದಲ್ಲಿ ಬಹಳಷ್ಟು ಜನ ಮೆಹಂದಿ, ಕಲರಿಂಗ್ ಎರಡೂ ಬೇಡ ಎಂದು ಬಿಟ್ಟುಬಿಡುತ್ತಾರೆ. 34 ತರುಣಿಯರು ಇವರನ್ನು ಆಕಸ್ಮಿಕವಾಗಿ ಭೇಟಿಯಾದಾಗ, ಗೆಟಪ್ ಲುಕ್ಸ್ ಗಮನಿಸಿ, ಇವರನ್ನು ಆಂಟಿ ಎಂದರೆ ಮನಸ್ಸಿಗೆ ಕಸಿವಿಸಿ ತಪ್ಪಿದ್ದಲ್ಲ. ಮನೆಗೆ ಹೋಗಿ ಕನ್ನಡಿ ನೋಡಿಕೊಂಡರೆ, ಆ ತರುಣಿಯರು ಹೇಳಿದ್ದರಲ್ಲಿ ತಪ್ಪಿಲ್ಲವಲ್ಲ ಅನಿಸುತ್ತದೆ. ಮೆಹಂದಿ ಬಿಟ್ಟ 4-5 ತಿಂಗಳಲ್ಲೇ ನರೆಗೂದಲು ಹೆಚ್ಚಾಗಿತ್ತು. ಒಮ್ಮೆಲೇ 10 ವರ್ಷ ವಯಸ್ಸು ಏರಿದಂತೆ ಅನಿಸುತ್ತದೆ.
ಹೀಗೆ ಗೊಂದಲದಲ್ಲಿದ್ದಾಗ ಮತ್ತೊಮ್ಮೆ ಬಾಲ್ಯ ಗೆಳತಿ ಯಾರಾದರೂ ಸಲಹೆ ನೀಡುತ್ತಾರೆ. ಅವಳ ಸುಂದರ ತಲೆಗೂದಲು ನೋಡಿ ಅಸೂಯೆ ಹೆಚ್ಚುತ್ತದೆ. ಆಗ ಅವಳು ತಾನು ಕಳೆದ 10 ವರ್ಷಗಳಿಂದ ಹೇರ್ ಕಲರ್ ಹಚ್ಚುತ್ತಿದ್ದೇನೆ. ಕೆಲವು ಅಗತ್ಯ ಸಲಹೆ ಅನುಸರಿಸಿ ಈ ಕಲರ್ಡ್ ಕೂದಲಿನ ಆರೈಕೆ ಮಾಡುತ್ತೇನೆ ಎಂದು ವಿವರಿಸುತ್ತಾಳೆ.
ಬಾಹ್ಯ ಮತ್ತು ಆಂತರಿಕ ಎರಡೂ ತರಹದ ಸಲಹೆ ಅನುಸರಿಸಿ, ಅವಳು ತನ್ನ ಕಲರ್ಡ್ ಕೂದಲನ್ನು ಮೇಂಟೇನ್ ಮಾಡುತ್ತಿದ್ದಳಂತೆ.
ಫಿಲ್ಟರ್ಡ್ ನೀರಿನಿಂದ ಮಾತ್ರ ತಲೆ ತೊಳೆಯಿರಿ : ನೀವು ನಿಮ್ಮ ಕೂದಲಿಗೆ ಮಾಡಿರುವ ಕಲರಿಂಗ್ ದೀರ್ಘ ಕಾಲ ಬಾಳಿಕೆ ಬರಬೇಕು ಎಂದು ಬಯಸಿದರೆ, ಅದನ್ನು ವಾರದಲ್ಲಿ 1 ಸಲ ಮಾತ್ರ ತೊಳೆಯಿರಿ. ಬಹಳ ಸೆಖೆ ಅಥವಾ ಚಳಿ ಪ್ರದೇಶದಲ್ಲಿ ಇರುವವರಾದರೆ ವಾರಕ್ಕೆ 2 ಸಲ ಕೂದಲು ತೊಳೆಯಿರಿ. ನಿಮಗೆ ಪ್ರತಿದಿನ ತಲೆಕೂದಲು ತೊಳೆಯುವ ಅಭ್ಯಾಸವಿದ್ದರೆ, ವಾರದ ಇತರ ದಿನಗಳಲ್ಲಿ ಡ್ರೈ ಶಾಂಪೂ ಮಾತ್ರ ಬಳಸಿರಿ. ಮತ್ತೆ ಮತ್ತೆ ತಲೆ ತೊಳೆಯುವುದರಿಂದ ಕಲರ್ಡ್ ಕೂದಲು ಬಹಳ ಡ್ರೈ ಆಗಿಹೋಗುತ್ತದೆ. ಈ 1-2 ಸಲದ ತಲೆ ಸ್ನಾನಕ್ಕೆ, ಅಕ್ವಾಗಾರ್ಡ್ ನ ಫಿಲ್ಟರ್ಡ್ ವಾಟರ ನ್ನೇ ಬಳಸಿರಿ! ಇದು ಆಗದ ಕೆಲಸ ಎನಿಸಿದರೆ, ಕನಿಷ್ಠ ತಲೆ ಸ್ನಾನ ಮುಗಿಸಿದ ಕೊನೆಯಲ್ಲಿ 1-2 ಮಗ್ ಆದರೂ ಫಿಲ್ಟರ್ಡ್ ವಾಟರ್ ಖಂಡಿತಾ ಬಳಸಲೇಬೇಕು.