– ರಾಘವೇಂದ್ರ ಅಡಿಗ ಎಚ್ಚೆನ್.

16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ ಪ್ರದಾನ ಸಮಾರೋಪ ಸಮಾರಂಭ ಶನಿವಾರ (ಮಾರ್ಚ್‌ 8)ದಂದು ಅದ್ಧೂರಿಯಾಗಿ ನಡೆದಿದೆ. ಫಿಲ್ಮ್‌ ಫೆಸ್ಟ್‌ ಕೊನೆಯ ದಿನದ ಈ ಕಾರ್ಯಕ್ರಮವನ್ನು ಸುಲೋಚನಾ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ 2025ನೇ ಸಾಲಿನ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ಪ್ರದಾನ ಸಂಭ್ರಮದಲ್ಲಿ ಸಂತೋಷ್ ಎಸ್‌ಲಾಡ್, ಪಿಸಿ ಮೋಹನ್, ನಟ ಕಿಶೋರ್, ಸಾಧು ಕೋಕಿಲ, ಫಿಲ್ಮ್‌ ಚೇಂಬರ್ ಅಧ್ಯಕ್ಷ ಸರಸಿಂಹಲು, ಬಿಬಿ ಕಾವೇರಿ ಮತ್ತು ಅರುಂಧತಿ ನಾಗ್ ಭಾಗಿಯಾಗಿದ್ದರು.

FB_IMG_1741522974477

2025ನೇ ಸಾಲಿನ ಫಿಲ್ಮ್‌ ಫೆಸ್ಟ್‌ನಲ್ಲಿ ಬೆಸ್ಟ್‌ ಏಷಿಯನ್‌ ಸಿನಿಮಾ ಅವಾರ್ಡ್ಸ್‌, ಬೆಸ್ಟ್‌ ಇಂಡಿಯನ್‌ ಸಿನಿಮಾ ಅವಾರ್ಡ್ಸ್‌ ಮತ್ತು ಬೆಸ್ಟ್‌ ಕನ್ನಡ ಸಿನಿಮಾ ಸೇರಿದಂತೆ ಮೂರು ಕ್ಯಾಟೆಗರಿಯಲ್ಲಿ ಅವಾರ್ಡ್‌ ವಿತರಿಸಲಾಗಿದೆ. ಇದರ ಜೊತೆಗೆ ಖ್ಯಾತ ಬಹುಭಾಷಾ ನಟಿ, ಆರು ಬಾರಿ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಶಬಾನಾ ಆಜ್ಮಿ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿದೆ. ಶಬಾನಾ ಅವರ ಪರವಾಗಿ ಅವಾರ್ಡ್‌ ಪಡೆದ ಅರುಂಧತಿ ನಾಗ್‌, “ಶಬಾನಾ ಅತ್ಯುತ್ತಮ ನಟಿ. ಬರಿ ನಟಿ ಅಷ್ಟೇ ಅಲ್ಲ ಸಾಕಷ್ಟು ಹೋರಾಟವನ್ನು ಮಾಡಿದ್ದಾರೆ. ನನ್ನ ರೋಲ್‌ ಮಾಡೆಲ್‌ ಅವರು” ಎಂದು ಶಬಾನಾ ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ.

FB_IMG_1741522971820

ಅಂತಿಮವಾಗಿ 2025ನೇ ಸಾಲಿನ 16ನೇ ಬೆಂಗಳುರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮನೋಹರ ಕೆ ಅವರ ನಿರ್ದೇಶನದ ʻಮಿಕ್ಕ ಬಣ್ಣದ ಹಕ್ಕಿʼ ಸಿನಿಮಾಗೆ ಕನ್ನಡದ ಬೆಸ್ಟ್‌ ಫಿಲ್ಮ್ ಗರಿ ಸಿಕ್ಕಿದೆ. ಎರಡನೇ ಸ್ಥಾನ ತುಳು ಭಾಷೆಯ ʻಪಿದಾಯಿʼ ಮತ್ತು ಮೂರನೇ ಸ್ಥಾನ ತುಳು ಭಾಷೆಯ ʻದಸ್ಕತ್‌ʼ ಸಿನಿಮಾಗೆ 2025ನೇ ಸಾಲಿನ 16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ವದ ಪ್ರಶಸ್ತಿ ಸಿಕ್ಕಿದೆ.

FB_IMG_1741522953896

ಇದೇ ವೇಳೆ 16ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿ ನಟ ಕಿಶೋರ್‌ ಮಾತನಾಡಿ, “ನಮಗೆಲ್ಲಾ ಇತಿಹಾಸದ ಬಗ್ಗೆ ಮತ್ತು ಐತಿಹಾಸಿಕ ವ್ಯಕ್ತಿಗಳ ಬಗ್ಗೆಯೂ, ಮತ್ತು ಬದಲಾವಣೆಯ ಹರಿಕಾರರ ಬಗ್ಗೆಯೂ ಬಹಳ ಹೆಮ್ಮೆ ಇದೆ. ಆ ಧಾವಂತದಲ್ಲಿ ನಮ್ಮ ಆತ್ಮ ವಿಮರ್ಶೆ ಮಾಡಿಕೊಳ್ಳುವುದನ್ನು ಮರೆತು ಹೋಗುತ್ತಿದ್ದೇವೆ. 100-200 ವರ್ಷಗಳ ಹಿಂದಿನ ವಿಷಯಗಳು ಇವತ್ತಿಗೂ ಪ್ರಸ್ತುತ ಎನ್ನುವುದಾದರೆ, ನಾವಿನ್ನೂ ಹಾಗೆಯೇ ಇದ್ದೇವೆ” ಎಂದಿದ್ದಾರೆ.

FB_IMG_1741522948957

, “ಜಗತ್ತು ಇಷ್ಟು ಬದಲಾದ್ರು ಹಿಂದೇನೆ ಉಳಿದಿದ್ದೀವಿ. ʻಬೇಡರ ಕಣ್ಣಪ್ಪʼ ಸಿನಿಮಾದಲ್ಲಿ ದೇವಸ್ಥಾನದಲ್ಲಿ ಮಾಂಸ ತಿಂದು ದೇವರನ್ನು ಹೊಲಿಸಿಕೊಂಡ. ಆದರೆ ಸಿದ್ದರಾಮಯ್ಯ ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತೀನಿ ಅಂದ್ರೆ ಚರ್ಚೆ ಆಗ್ತಿದೆ. ಆಹಾರ ಪದ್ಧತಿ ಈಗಲೂ ಶ್ರೇಷ್ಠ, ಕೀಳು ಮೇಲೆ ನಿಂತಿದೆ. ಡಾ.ರಾಜ್‌ಕುಮಾರ್‌ ಅವರನ್ನು ಬರೀ ಚಪ್ಪಾಳೆಗೆ ಸೀಮಿತ ಮಾಡದೇ, ಅದರಾಚೆಗೆ ನೋಡಿ.ʻಸನಾದಿ ಅಪ್ಪಣ್ಣʼ ಕುಲುದಲ್ಲಿ ಕೀಳ್ಯಾವುದೋ ಹಾಡುಗಳಲ್ಲೇ ದೊಡ್ಡ ಸಂದೇಶವಿದೆ” ಎಂದು ನಟ ಕಿಶೋರ್‌ ಹೇಳಿಕೆ ನೀಡಿದ್ದಾರೆ.

FB_IMG_1741522966492

ಏಷಿಯನ್‌ ಬೆಸ್ಟ್‌ ಸಿನಿಮಾ ಅವಾರ್ಡ್ಸ್‌ : ಮೊದಲನೇ ಸ್ಥಾನ ʻಇನ್‌ ದಿ ಲ್ಯಾಂಡ್‌ ಆಫ್‌ ಬ್ರದರ್ಸ್‌ʼ, ಎರಡನೇ ಸ್ಥಾನ ʻರೇಡಿಂಗ್‌ ಲೊಲಿತಾ ಇನ್‌ ಟೆಹ್ರಾನ್‌ʼ, ಮೂರನೇ ಸ್ಥಾನ ʻಸಬಾʼ.
ಭಾರತೀಯ ಬೆಸ್ಟ್‌ ಸಿನಿಮಾ ಅವಾರ್ಡ್ಸ್‌ : ʻಮೊದಲನೇ ಸ್ಥಾನ ಹ್ಯೂಮನ್ಸ್‌ ಇನ್‌ ದಿ ಲೂಪ್‌ʼ , ಎರಡನೇ ಸ್ಥಾನ ʻಲೆವೆಲ್‌ ಕ್ರಾಸ್‌ʼ , ಮೂರನೇ ಸ್ಥಾನ ʻಸ್ವಾಹಾʼ

ಕನ್ನಡ ಬೆಸ್ಟ್‌ ಸಿನಿಮಾ ಅವಾರ್ಡ್ಸ್‌ : ಮೊದಲನೇ ಸ್ಥಾನ ʻಮಿಕ್ಕ ಬಣ್ಣದ ಹಕ್ಕಿʼ , ಎರಡನೇ ಸ್ಥಾನ ತುಳು ಭಾಷೆಯ ʻಪಿದಾಯಿʼ , ಮೂರನೇ ಸ್ಥಾನ ತುಳು ಭಾಷೆಯ ʻದಸ್ಕತ್‌ʼ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ