ಸಿನಿಮಾ ಕ್ಷೇತ್ರ ಅತ್ಯಂತ ಸೃಜನಾತ್ಮಕವಾದ ಕ್ಷೇತ್ರವಾಗಿದ್ದು ಇಲ್ಲಿ ಎಲ್ಲವೂ ನಾನೇ ನನ್ನಿಂದಲೇ ಎನ್ನುವುದಕ್ಕಿಂತಲೂ ಇಲ್ಲಿ ನಾವು ನಮ್ಮಿಂದ ಎಂದು ಎಲ್ಲರೂ ಒಟ್ಟಾಗಿ ಸೇರಿಕೊಂಡು ಕೆಲಸ ಮಾಡುವಂತಹ ಕ್ಷೇತ್ರವಾಗಿದೆ. ಕಥೆ, ಚಿತ್ರಕಥೆ, ಹಾಡು ಸಂಭಾಷಣೆ, ಸಂಗೀತ ನಿರ್ದೇಶನ, ಛಾಯಾಗ್ರಹಣ, ನಟ, ನಟಿಯರು, ಸಹಕಲಾವಿದರುಗಳಲ್ಲದೇ, ತೆರೆಯ ಮರೆಯಲ್ಲಿ ಎಲೆ ಮರೆಕಾಯಿಯಂತೆ ದುಡಿಯುವ ನೂರಾರು ತಂತ್ರಜ್ಣರೆಲ್ಲರನ್ನು ಒಗ್ಗೂಡಿಸಿ ನಿರ್ದೇಶಕ Captain of the Ship ಎನ್ನುವಂತೆ ಮನ್ನಡೆಸಿಕೊಂಡು ಹೋಗುತ್ತಾನೆ. ಕನ್ನಡ ಚಿತ್ರರಂಗದಲ್ಲಿ ಎಪ್ಪತ್ತು ಮತ್ತು ಎಂಭತ್ತರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಿದ್ದಲ್ಲದೇ ಕನ್ನಡ ಚಿತ್ರಪ್ರೇಮಿಗಳನ್ನು ಕುಣಿಸಿದ ಜೋಡಿಯಾದ ದೊರೈ-ಭಗವಾನ್ (ಬಿ. ದೊರೈರಾಜು-ಎಸ್. ಕೆ. ಭಗವಾನ್‌) ಜೋಡಿಯ ಕೊನೆಯ ಕೊಂಡಿಯಾಗಿದ್ದ  ಕನ್ನಡ ಚಿತ್ರರಂಗದ ಅತ್ಯಂತ ಹಿರಿಯ ನಿರ್ದೇಶಕ  ಶ್ರೀ ಎಸ್. ಕೆ. ಭಗವಾನ್ ಅವರ ವ್ಯಕ್ತಿ, ವ್ಯಕ್ತಿತ್ವ ಮತ್ತು ಸಾಧನೆಗಳ ಪರಿಚಯವನ್ನು ನಮ್ಮ  ಕನ್ನಡದ ಕಲಿಗಳು ಮಾಲಿಕೆಯಲ್ಲಿ ತಿಳಿಯೋಣ ಬನ್ನಿ.

ಮೂಲತಃ ಮೈಸೂರಿನ ಮೂಲದವರಾದ ಶ್ರೀ ಬಿ.ದೊರೈರಾಜ್ ಚಿಕ್ಕಂದಿನಿಂದಲೂ ಸಂಗೀತ ಚಿತ್ರ ಕಲೆ,ಕ್ರೀಡೆಯಲ್ಲಿ ಆಸಕ್ತರಾಗಿ, ಅಂತಿಮವಾಗಿ ಚಲನಚಿತ್ರಗಳ ಬಗ್ಗೆ ಆಸಕ್ತಿ ಹೊಂದಿ ಮೈಸೂರಿನಲ್ಲಿ ಆರಂಭವಾದ ನವಜ್ಯೋತಿ ಸ್ಟುಡಿಯೋ ದಲ್ಲಿ ಸಹಾಯಕರಾಗಿ ಸೇರಿ ಕೊಂಡು ನಂತರ ಮುಂಬೈನಲ್ಲಿ ಏನ್.ಜಿ.ರಾವ್ ಬಳಿ ಕ್ಯಾಮರಾ ಸಹಾಯಕರಾಗಿ ಕೆಲಸವನ್ನು ಕಲಿತುಕೊಂಡ ನಂತರ ಮಲಯಾಳಂ ಚಿತ್ರದ ಮೂಲಕ ಸ್ವತಂತ್ರವಾಗಿ ಛಾಯಾಗ್ರಾಕರಾದ ನಂತರ, ವರನಟ ರಾಜಕುಮಾರರ ಸೋದರಿ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಛಾಯಾಗ್ರಾಹಕರಾಗಿ ಪಾದಾರ್ಪಣೆ ಮಾಡಿದ ನಂತರ ಅನೇಕ ಕನ್ನಡ ಚಿತ್ರಗಳಲ್ಲಿ ಯಶಸ್ವಿ ಛಾಯಾಗ್ರಾಹಕರಾಗಿ ಗುರುತಿಸಿಕೊಳ್ಳುತ್ತಾರೆ. ರಾಜಕುಮಾರರ ಜಗಜ್ಯೋತಿ ಬಸವೇಶ್ವರ ಚಿತ್ರೀಕರಣ ಸಂದರ್ಭದಲ್ಲಿ, ಎಸ್.ಕೆ.ಭಗವಾನ್ ಅವರನ್ನು ಮೊತ್ತ ಮೊದಲಬಾರಿಗೆ ಭೇಟಿಯಾಗುತ್ತಾರೆ.

bhagavan7

ಮೈಸೂರಿನ ಸಾಂಪ್ರದಾಯಕ ಕುಟುಂಬದಲ್ಲಿ ಜನಿಸಿದ ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಆವರಿಗೆ ಬಾಲ್ಯದಿಂದಲೂ ರಂಗಭೂಮಿಯತ್ತ ಆಸಕ್ತಿ ಇದ್ದ ಕಾರಣ, ಮೈಸೂರು ಮತ್ತು ಸುತ್ತಮುತ್ತಲು ಎಲ್ಲೇ ನಾಟಕಗಳು ನಡೆದರೂ ಅಲ್ಲಿ ಬಾಲಕ ಭಗವಾನ್ ಹಾಜರಿರುತ್ತಾರೆ. ಅದೇ ರೀತಿ ಓದಿನಲ್ಲಿಯೂ ಚುರುಕಾಗಿದ್ದ ಭಗವಾನ್ ಕೇವಲ ಪಠ್ಯಪುಸ್ತಕಗಳಲ್ಲದೇ ಅಂದಿನ ಕಾಲದ ಬಹುತೇಕ ಕನ್ನಡದ ಸಾಹಿತಿಗಳ ಕಾದಂಬರಿಗಳನ್ನು ಓದುತ್ತಲೇ ಚಿತ್ರರಂಗದತ್ತ ಹರಿಸುತ್ತಾರೆ ತಮ್ಮ ಚಿತ್ತ. ಆರಂಭದಲ್ಲಿ ಸಿನಿಮಾ ರೆಪ್ರೆಸೆಂಟೆಟಿವ್ ಆಗಿ ಇಡೀ ರಾಜ್ಯವನ್ನು ಸುತ್ತಾಡಿದ ಎಸ್.ಕೆ. ಭಗವಾನ್ 1956ರ ವೇಳೆಗೆ ಕಣಗಾಲ್ ಪ್ರಭಾಕರ್ ಶಾಸ್ತ್ರಿಗಳಿಗೆ ಭಾಗ್ಯೋದಯ ಚಿತ್ರದಲ್ಲಿ ಸಹಾಯಕರಾಗಿ ಸೇರಿಕೊಳ್ಳುತ್ತಾರೆ. ಅಂದೆಲ್ಲಾ ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಚಿತ್ರಗಳು ಮದರಾಸಿನಲ್ಲಿ ನಡೆಯುತ್ತಿದ್ದ ಕಾರಣ ಮದರಾಸಿಗೆ ಹೋಗಿ ಅಲ್ಲಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಗ, ಅದಾಗಲೇ ಛಾಯಾಗ್ರಾಹಕರಾಗಿ ಸುಪ್ರಸಿದ್ಧರಾಗಿದ್ದ ದೊರೈ ಅವರ ಪರಿಚಯವಾಗುತ್ತದೆ.

ಹೀಗೆ ಪರಿಚಯವಾದ ಇವರಿಬ್ಬರು ದೊರೈ-ಭಗವಾನ್ ಎಂಬ ಎರಡು ದೇಹ ಒಂದೇ ಆತ್ಮವಾದ ಕಥೆ ನಿಜಕ್ಕೂ ರೋಚಕವಾಗಿದೆ. ಚಿತ್ರಂರಂಗದಲ್ಲಿ ಸಾಧನೆ ಮಾಡುವ ಸಲುವಾಗಿ ದೂರದ ಮದರಾಸಿನಲ್ಲಿ ಕೆಲಸಕ್ಕಾಗಿ ಅಲೆಯುತ್ತಿದ್ದ ಭಗವಾನ್ ಅವರಿಗೆ ಅದೊಮ್ಮೆ ಕೈಯ್ಯಲ್ಲಿ ಕಾಸಿಲ್ಲದೇ ಒಂದು ಹೊತ್ತಿನ ಊಟಕ್ಕಾಗಿ ಪರಿತಪಿಸುತಿದ್ದ ಕಾಲವಾಗಿತ್ತು. ಕನ್ನಡ ಚಿತ್ರಗಳು ಚಿತ್ರೀಕರಣವಾಗುತ್ತಿದ್ದ ಸ್ಟುಡಿಯೋಗಳ ಬಳಿ ಕೆಲಸಕ್ಕಾಗಿ ಕಾಯುತ್ತಿದ್ದಲ್ಲದೇ, ಊಟ ಮತ್ತು ತಿಂಡಿಯ ಸಮಯದಲ್ಲಿ ಹತ್ತಿರಲ್ಲೇ ಇದ್ದ ಹೋಟೇಲ್ ಬಳಿ ಹೋಗಿ ನಿಂತು ಯಾರಾದರೂ ಪರಿಚಯದವರು ಬಂದರೆ ಅವರಿಗೆ ನಮಸ್ಕಾರ ಹಾಕಿ ಅವರೇನಾದರೂ ಮನಸ್ಸು ಮಾಡಿ ತಿಂಡಿ, ಊಟ ಕೊಡಿಸಿದರೆ ಉಂಟು, ಇಲ್ಲದಿದ್ದರೆ ಹೊಟ್ಟೆಗೆ ತಣ್ಣೀರು ಬಟ್ಟೆಯನ್ನು ಕಟ್ಟಿಕೊಂಡು ನಿದ್ರಿಸುತ್ತಿದಂತಹ ಕಾಲವಾಗಿರುತ್ತದೆ, ಅದೊಮ್ಮೆ ಎರಡು ದಿನಗಳ ಕಾಲ ಪರಿಚಿತರು ಯಾರೂ ಸಹಾ ಸಿಗದೇ ನಿತ್ರಾಣರಾಗಿದ್ದ ಭಗವಾನರಿಗೆ ಹೋಟೆಲ್ ಬಳಿ ದೊರೈ ಅವರು ಸಿಗುತ್ತಾರೆ. ಅಲ್ಪ ಸ್ವಲ್ಪ ಪರಿಚಯವಿದ್ದ ಕಾರಣ, ತಮ್ಮ ಸ್ವಾಭಿಮಾನವನ್ನೆಲ್ಲಾ ಬದಿಗಿಟ್ಟು, ಊಟ ಮಾಡಿ ಎರಡು ದಿನಗಳಾಗಿವೆ ಸ್ವಲ್ಪ ಹಣ ಇದ್ದರೆ ಕೊಡಿ ನಂತರ ಹಿಂದಿರುಗಿಸುತ್ತೇನೆ ಎಂದು ಕೇಳಿದ ತಕ್ಷಣ ಒಂದು ಕ್ಷಣವೂ ಯೋಚಿಸದ ದೊರೈ ಅವರು ತಮ್ಮಲ್ಲಿದ್ದ 50 ಪೈಸೆ ಹಣವನ್ನು ಕೊಟ್ಟು ಸರಸರನೆ ಹೊರಟು ಹೋಗುತ್ತಾರೆ. ಬದುಕಿದೆಯಾ ಬಡ ಜೀವ ಎಂದು ದೊರೈ ಅವರು ನೀಡಿದ್ದ ಹಣದಲ್ಲಿ ಭಗವಾನ್ ಅವರು ಹೊಟ್ಟೆ ತುಂಬಾ ಊಟ ಮಾಡುತ್ತಾರೆ. ಈ ಪ್ರಸಂಗವಾದ ಕೆಲವು ದಿನಗಳ ನಂತರ ಅವರಿಗೆ ತಿಳಿದು ಬಂದ ವಿಷಯವೆಂದರೆ, ಅಂದು ದೊರೈ ಅವರ ಬಳಿಯೂ ಕೇವಲ 50 ಪೈಸೆ ಇದ್ದಿದ್ದು, ಅದನ್ನು ಭಗವಾನ್ ಅವರಿಗೆ ಕೊಟ್ಟು ತಾವು ಉಪವಾಸ ಮಾಡಿರುತ್ತಾರೆ. ಹೀಗೆ ಎಂಟಾಣೆಯೊಂದಿಗೆ ಆರಂಭವಾದ ಅವರಿಬ್ಬರ ಗೆಳೆನ ಮುಂದೆ ಸುಮಾರು ಮೂರು ದಶಕಗಳ ಕಾಲ ಮುಂದುವರೆದಿದ್ದು ಈಗ ಇತಿಹಾಸ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ