ಜಾಗೀರ್ದಾರ್*

‘ನಾಯಗನ್’ ಚಿತ್ರದ ಮೂಲಕ ಬೆಳ್ಳಿತೆರೆಗೆ ಹೊಸ ಇತಿಹಾಸ ಬರೆದ ಮಣಿರತ್ನಂ ಕಮಲ್ ಹಾಸನ್ ಜೋಡಿ ಮತ್ತೆ ಒಂದಾಗಿದೆ… ಚಿತ್ರದ ಹೆಸರು ಥಗ್ ಲೈಫ್..

life 2

ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ಆರ್. ಮಹೇಂದ್ರನ್, ಮದ್ರಾಸ್ ಟಾಕೀಸ್ ಮತ್ತು ಶಿವ ಅನಂತ್ ನಿರ್ಮಾಣದಲ್ಲಿ ಸಿನಿಮಾ ತಯಾರಾಗಿದೆ. ಚಿತ್ರದ ತಾರಾಗಣ ಕಮಲ್ ಹಾಸನ್, ಸಿಲಂಬರಸನ್ ಟಿಆರ್, ತ್ರಿಷಾ, ಅಶೋಕ್ ಸೆಲ್ವನ್, ಐಶ್ವರ್ಯ ಲಕ್ಷ್ಮಿ, ಜೋಜು ಜಾರ್ಜ್, ಅಭಿರಾಮಿ ಮತ್ತು ನಾಸರ್ ಮತ್ತಿತರ ನಟರನ್ನು ಒಳಗೊಂಡಿದೆ. ಈ ಬಹು ನಿರೀಕ್ಷಿತ ಚಿತ್ರಕ್ಕೆ ದಿಗ್ಗಜ ಎ.ಆರ್. ರೆಹಮಾನ್ ಅವರ ಸಂಗೀತವಿದೆ.
ಈ ಚಿತ್ರದ ಕತೆ, ಚಿತ್ರಕತೆಯನ್ನು ಮಣಿರತ್ನಂ ಮತ್ತು ಕಮಲ್ ಹಾಸನ್ ಬರೆದಿದ್ದು, ಮಣಿರತ್ನಂ ನಿರ್ದೇಶನದಲ್ಲಿ ರವಿ ಆರ್ ಚಂದ್ರನ್ ಅವರ ಸಿನಿಮಾಟೋಗ್ರಫಿ, ಅನ್ಬರಿವ್ ಅವರ ಆ್ಯಕ್ಷನ್ ಕೋರಿಯಾಗ್ರಫಿ ಈ ಚಿತ್ರಕ್ಕಿದೆ. ಥಗ್‌ ಲೈಫ್‌ ಚಿತ್ರದ ಒಟಿಟಿ ಹಕ್ಕು ನೆಟ್‌ ಫ್ಲಿಕ್ಸ್‌ ಪಾಲಾಗಿದ್ದು, ಆಡಿಯೋ ಹಕ್ಕನ್ನು ಸರೆಗಮ ತನ್ನದಾಗಿಸಿಕೊಂಡಿದೆ.

life 1

ವಿತರಣಾ ಪಾಲುದಾರರು*

ಥಗ್ ಲೈಫ್ ಸಿನಿಮಾವನ್ನು ತಮಿಳುನಾಡಿನಲ್ಲಿ ರೆಡ್ ಜೈಂಟ್ ಮೂವೀಸ್ ವಿತರಣೆ ಜವಾಬ್ದಾರಿ ಹೊತ್ತುಕೊಂಡಿದೆ. ಓವರ್‌ ಸೀಸ್‌ ನಲ್ಲಿ ಹೋಮ್ ಸ್ಕ್ರೀನ್ ಎಂಟರ್‌ಟೈನ್‌ಮೆಂಟ್ ಸಹಯೋಗದೊಂದಿಗೆ ಎಪಿ ಇಂಟರ್‌ನ್ಯಾಷನಲ್ ವಿತರಣೆ ಮಾಡುತ್ತಿದ್ದು, ಉತ್ತರ ಭಾರತದಲ್ಲಿ ಪೆನ್ ಮರುಧರ್ ಸಿನಿ ಎಂಟರ್‌ಟೈನ್‌ಮೆಂಟ್, ಆಂಧ್ರಪ್ರದೇಶ ಮತ್ತು ತೆಲಂಗಾಣನಲ್ಲಿ ಶ್ರೇಷ್ಠ್ ಮೂವೀಸ್ ಹಾಗೂ ಫೈವ್ ಸ್ಟಾರ್ ಸೆಂಥಿಲ್ ಕರ್ನಾಟಕದಲ್ಲಿ ಕಮಲ್‌ ಹಾಸನ್ ಚಿತ್ರ ವಿತರಣೆ ಮಾಡಲಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ