ರಾಘವೇಂದ್ರ ಅಡಿಗ ಎಚ್ಚೆನ್.

ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ ಕಳೆದ 25 ವರ್ಷಗಳಿಂದ ಬಣ್ಣ ಹಚ್ಚುತ್ತಿದ್ದ ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ್ರು ಇಂದು ನಿಧನರಾಗಿದ್ದಾರೆ. ಅತ್ಯಂತ ಆಪ್ತರಲ್ಲಿ ಒಬ್ಬರಾದ ಹೊನ್ನೆಗೌಡರ ಅಕಾಲಿಕ ಸಾವಿಗೆ ನಟ ದರ್ಶನ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಹೊನ್ನೆಗೌಡರ ಫೋಟೋ ಜೊತೆ ಪೋಸ್ಟ್ ಮಾಡಿರುವ ನಟ ದರ್ಶನ್ ಅವರು ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಹೊನ್ನೆಗೌಡರ ಗುಣವನ್ನು ಕೊಂಡಾಡಿರುವ ದರ್ಶನ್, ಹೊನ್ನೆಗೌಡ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
25 ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿದ ಪ್ರಿಯ ಮೇಕಪ್ ಆರ್ಟಿಸ್ಟ್ ಹೊನ್ನೆಗೌಡ್ರು ಇಂದು ಅಗಲಿದ ಸುದ್ದಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ.
ಅವರ ಕಲೆ, ನಿಷ್ಠೆ ಮತ್ತು ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು. ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ. ಹೊನ್ನೆ ಗೌಡರ ಆತ್ಮಕ್ಕೆ ಶಾಂತಿ ದೊರೆಯಲಿ. ಓಂ ಶಾಂತಿ ಎಂದು ದರ್ಶನ್ ಪೋಸ್ಟ್ ಮಾಡಿದ್ದಾರೆ.
‘ಡೆವಿಲ್’ ಸಿನಿಮಾ ಕೆಲಸದಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಶೂಟಿಂಗ್ ಭರದಿಂದ ನಡೆಯುತ್ತಿದೆ. ಅವರೊಂದಿಗೆ ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಮಿಲನಾ ಪ್ರಕಾಶ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಹಿಂದೆ ದರ್ಶನ್ ನಟನೆಯ ‘ತಾರಕ್’ ಚಿತ್ರಕ್ಕೂ ಇವರೇ ನಿರ್ದೇಶನ ಮಾಡಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ