ಶರತ್ ಚಂದ್ರ 

ಯಶ್ ತಾಯಿ ಪುಷ್ಪ ಅರುಣ್ ಕುಮಾರ್ ಮತ್ತು ತಂದೆ ಅರುಣ್ ಕುಮಾರ್ ಸೇರಿ ಪಿ ಎ ಪ್ರೊಡಕ್ಷನ್ಸ್ ಎಂಬ ಪ್ರೊಡಕ್ಷನ್ ಹೌಸ್ ಆರಂಭಿಸಿರುವುದು ನಿಮಗೆಲ್ಲರಿಗೂ ಗೊತ್ತಿದೆ.ಈ ಸಂಸ್ಥೆಯ ಮೊದಲ ಚಿತ್ರ ‘ಕೊತ್ತಲವಾಡಿ ‘ ಚಿತ್ರದ ಟೀಸರ್ ನಿನ್ನೆ ಬಿಡುಗಡೆಯಾಗಿದೆ.

ಪೃಥ್ವಿ ಅಂಬರ್ ನಾಯಕನಾಗಿರುವ ಈ ಚಿತ್ರ ಪ್ಯಾನ್ ಇಂಡಿಯಾ ಚಿತ್ರವಾದರೂ ಕಡಿಮೆ ಬಜೆಟ್ ನಲ್ಲಿ ನಿರ್ಮಿಸಲಾಗುತ್ತಿದೆ.

ಆದರೆ ಟೀಸರ್ ನೋಡಿದರೆ ಯಾವುದೇ ಹೈ ಬಜೆಟ್ ಸಿನಿಮಾ ಕ್ಕೂ ಕಡಿಮೆಯಿಲ್ಲದೆ ರಿಚ್ ಆಗಿ ಮೂಡಿ ಬಂದಿದೆ.

ಚಿತ್ರದಲ್ಲಿ ಪ್ರಥ್ವಿ ಅಂಬರ್ ಈ ಹಿಂದೆ ಯಾವುದೇ ಚಿತ್ರದಲ್ಲಿ ಕಾಣದೆ ಇರುವ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರದ ಟೀಸರ್ ನಲ್ಲಿ ಗಮನ ಸೆಳೆಯುವ ಒಂದಷ್ಟು ಪಾತ್ರಗಳಲ್ಲಿ ನಾಯಕಿ ಪಾತ್ರ ಕೂಡ ಒಂದು.

1000535097

ಮೊದಲೇ ಚಿತ್ರದ ಟೈಟಲ್ ನೋಡಿದರೆ ಇದು ಹಳ್ಳಿಯ ಹಿನ್ನಲೆ ಇರುವ ಕಥೆ ಎಂದು ಗೊತ್ತಾಗಿದೆ. ಹಳ್ಳಿ ಹುಡುಗಿಯ ಪಾತ್ರದಲ್ಲಿ ಕಾವ್ಯ ಶೈವ ಳ ಫಸ್ಟ್ ಲುಕ್ ನಿಜಕ್ಕೂ ಗಮನ ಸೆಳೆಯುತ್ತಿದೆ.

1000535091

ಕಿರುತೆರೆಯಿಂದ ದೊಡ್ಡ ಪರದೆಗೆ ಎಂಟ್ರಿ ಕೊಟ್ಟ ಇನ್ನೊಂದು ಪ್ರತಿಭೆ ಕಾವ್ಯ. ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರವಾದ  ಭೂಮಿ ತಾಯಾಣೆ ಸೀರಿಯಲ್ ಮೂಲಕ ಅಭಿನಯ ಆರಂಭಿಸಿದ ಕಾವ್ಯ ಜನರಿಗೆ ತುಂಬಾ ಹತ್ತಿರ ವಾಗಿದ್ದು ಕೆಂಡ ಸಂಪಿಗೆ ಧಾರವಾಹಿ ಯ ಸುಮನಾ ಪಾತ್ರದ ಮೂಲಕ. ಈ ಮದ್ಯೆ   ಹಂಸ ಗೀತo ಎಂಬ    ತೆಲುಗು ಧಾರವಾಹಿ ಯಲ್ಲಿ ಕೂಡ ಅಭಿನಯಿಸಿದ ಕಾವ್ಯ ಉತ್ತಮ ಡ್ಯಾನ್ಸರ್ ಕೂಡ.

1000535894

ಕರ್ನಾಟಕ ದ ಜನಪ್ರಿಯ ಡಾನ್ಸ್ ರಿಯಾಲಿಟಿ ಶೋ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್(DKD) ನಲ್ಲಿ ಭಾಗವಹಿಸಿದ್ದಾಗ ಶಿವಣ್ಣ ಮತ್ತು ರಕ್ಷಿತಾ ರಿಂದ ಶಹಾಬ್ಬಾಸ್ ಗಿರಿ ಗಿಟ್ಟಿಸಿ ಕೊಂಡ ಕಾವ್ಯ ಶೈವ ಸ್ಯಾಂಡಲ್ ವುಡ್ ನಲ್ಲಿ  ಭವಿಷ್ಯದಲ್ಲಿ ಉತ್ತಮ ನಟಿಯಾಗಿ ಹೊರ ಹೊಮ್ಮವ ಸೂಚನೆ ನೀಡಿದ್ದಾಳೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ