ಗ್ಲಾಮರ್ಅಲ್ಲ…. ಕೆಲಸ ಗಮನಿಸಿ! : ಅಮೆರಿಕಾದಲ್ಲಿ ಅನೇಕ ದಶಕಗಳಿಂದ ನೈಜೀರಿಯನ್ಸ್ ನೆಲೆಸಿದ್ದಾರೆ. ಅಲ್ಲಿನ ಕರಿಯರಿಗಿಂತ ಅವರು ಬಲು ಶ್ರೀಮಂತರು. ನಮ್ಮಲ್ಲಿನ ವೈದ್ಯರು, ಐಟಿ ಎಕ್ಸ್ ಪರ್ಟ್ಸ್ ತರಹ. ಅವರಲ್ಲಿನ ಒಂದು ಕಂಪನಿ ಒಂದು ಖಾಸಗಿ ವಾಹಿನಿಯನ್ನೂ ನಿಭಾಯಿಸುತ್ತಿದೆ. ಅದು ಇದೀಗ ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿದೆ. ಅದು ಡಿಸೈನ್‌ ಮಾಡಿರುವ ವೈಬ್ರೆಂಟ್‌ ಕಲರ್ಸ್‌ ಅಲ್ಲಿ ಎಲ್ಲರ ಮನಗೆದ್ದಿದೆ! ಇದನ್ನೇ ಅಸಲಿ ಗ್ಲೋಬಲೈಸೇಷನ್‌ ಎನ್ನುವುದು. ಅಮೆರಿಕಾದ ಒಂದು ಸನ್ನಡತೆ ಎಂದರೆ, ಅಲ್ಲಿ ಕೆಲಸಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ, ಸ್ಕಿನ್‌ ಕಲರ್‌ ಯಾ ಬರ್ತ್‌ ಕನೆಕ್ಷನ್‌ ಗೆ ಅಲ್ಲ! ನಮ್ಮಲ್ಲಂತೂ ಖುಲ್ಲಂಖುಲ್ಲ ಯಾರ ಕೆಲಸ ಬಾಯ್‌ ಕಾಟ್‌ ಮಾಡಬೇಕೆಂದು ಚರ್ಚೆ ನಡೆಯುತ್ತಿರುತ್ತದೆ. ಈ ಡಿಸೈನ್ಸ್ ಗಮನಿಸಿ, ಪ್ರತಿಭೆ ಹುಟ್ಟಿನಿಂದಲ್ಲ, ಕುಶಾಗ್ರ ಬುದ್ಧಿಗೆ ಸಂಬಂಧಿಸಿದ್ದು ಎಂಬುದು ಸ್ಪಷ್ಟವಾಗುತ್ತದೆ!

family

ಸುಖದ ಕೀಲಿಕೈ : ಕುಟುಂಬದ ಸುಖ ಪಡೆಯಲಿಕ್ಕೂ ಕೇಳಿಕೊಂಡು ಬಂದಿರಬೇಕು. ಇದಕ್ಕಾಗಿ ಅಗತ್ಯ ಪಾಠ ಕಲಿಯಬೇಕಾದುದೂ ಇದೆ. ಯಾವ ಪರಿವಾರ ಟೆನ್ಶನ್‌ ನಲ್ಲಿ ಇರುತ್ತದೋ, ಅವರೊಂದಿಗಿನ ತೊಂದರೆ ಎಂದರೆ, ಅವರು ಒಗ್ಗಟ್ಟಾಗಿರುವ ಗುಟ್ಟು ಅರಿತಿಲ್ಲ ಎಂಬುದು. ಅಮೆರಿಕಾದ `ಯುವರ್‌ ಕಾನ್ಶಿಯಸ್‌ ಕನೆಕ್ಟ್’ ಹೆಸರಿನ ತಂಡ ತನ್ನ ಮೇಲರ್ಸ್‌ ಮೂಲಕ ಬದುಕುವ ಇಂಥ ಕಲೆ ಕಲಿಸುತ್ತಿದೆ. ಅವರ ತಜ್ಞರ ಪ್ರಕಾರ, ಮನೆ ಯಾ ಆಫೀಸ್‌ ಇರಲಿ, ಸರಿಯಾದ ಕಮ್ಯುನಿಕೇಶನ್‌ರೈಟ್‌ ಎಕ್ಸ್ ಪೆಕ್ಟೇಶನ್ ಮಾತ್ರವೇ ಸುಖದ ಕೀಲಿಕೈ!

cross-device

ಕಲೆಯ ಗೌರವಾದರ : `ಶೇನ್‌ ಯನ್‌’ ಒಂದು ಬಗೆಯ ಚೀನೀ ನೃತ್ಯಕಲೆ. ಚೀನಾದಲ್ಲಿ ಕಮ್ಯೂನಿಸ್ಟ್ ಪಕ್ಷ ಇದನ್ನು ನಿಲ್ಲಿಸಿಬಿಟ್ಟಿತ್ತು. ಅಮೆರಿಕಾ ಇದಕ್ಕೆ ಮರುಜೀವ ನೀಡಿದೆ. ಕಲರ್‌, ರಿದಮ್, ಹ್ಯೂಮನ್‌ ಫಾರ್ಮೇಶನ್‌, ಮ್ಯೂಸಿಕ್‌ ನ ಐ ಪಾಪಿಂಗ್‌ ಪೆಲ್ ರಿಸೆಂಟೇಶನ್‌ ಎಷ್ಟು ಚೆನ್ನಾಗಿ ಮೇಳೈಸಿದೆ ಎಂದರೆ, ಈ ನೃತ್ಯದ ಟಿಕೆಟ್‌ ಬುಕ್ಕಿಂಗ್‌ ಸದಾ ಹೌಸ್‌ ಫುಲ್! ಕಲೆ, ವಿಚಾರಧಾರೆ, ವೈರಸ್‌ ಗಳು ಇದೀಗ ಕೇವಲ ಆಯಾ ದೇಶದ ಗಡಿಗಷ್ಟೇ ಸೀಮಿತ ಎಂದೇನಿಲ್ಲ!

Cancer-Song-23-PR

ಶ್ಲಾಘನೀಯ ಕಾರ್ಯ : 2000ದ ಇಸವಿಯಲ್ಲಿ ಫೆಬ್ರವರಿಯಲ್ಲಿ `ವಿಶ್ವ ಕ್ಯಾನ್ಸರ್‌ ದಿನಾಚರಣೆ’ಗೆ ಮೊದಲಿಟ್ಟಿತು. ಕಳೆದ 4 ವರ್ಷಗಳಿಂದ ಈ ಸಂದರ್ಭದಲ್ಲಿ `ದಿ ಬೆಲ್ ‌ಜಂಸ್ಕಿ ಫೌಂಡೇಶನ್‌’ನ ಸಿಲ್ವಿ ಬೆಲ್ ‌ಜಂಸ್ಕಿ ಎಂಬಾಕೆ, ತನ್ನ ಸೇಫ್‌ಸೌಂಡ್‌ ಆಗಿ ನಿಭಾಯಿಸುತ್ತಿದ್ದಾಳೆಂದು ಗೈಡ್‌ ಸ್ಟಾರ್‌ ಅವಾರ್ಡ್‌ ನೀಡಿ ಪುರಸ್ಕರಿಸಲಾಗುತ್ತಿದೆ. ಕ್ಯಾನ್ಸರ್‌ ಕುರಿತಾಗಿ ಇನ್ನೂ ಎಷ್ಟೋ ರಿಸರ್ಚ್ ನಡೆಯಬೇಕಿದೆ. ಈಗೀಗ ಇದು ವೈರಸ್‌ ಗಿಂತಲೂ ಬೇಗ ಹರಡಿಕೊಳ್ಳುತ್ತಿದೆ ಹಾಗೂ ವಿಶ್ವಾದ್ಯಂತ ಕ್ಯಾನ್ಸರ್‌ ಆಸ್ಪತ್ರೆಗಳು ರೋಗಿಗಳಿಂದ ತುಂಬಿಹೋಗುತ್ತಿವೆ. ಈಕೆಯ ಸಂಸ್ಥೆ ಮೆಟಾಸ್ಟಾಟಿಕ್‌ ಸೇಲ್ಸ್ ಕುರಿತಾಗಿ ಕೆಲಸ ನಿರ್ವಹಿಸುತ್ತಿದೆ. ಕ್ಯಾನ್ಸರ್‌ ಗೆ ಸಂಬಂಧಿಸಿದ ರಿಸರ್ಚ್‌ ನ ಪರಿಣಾಮಗಳು ಅಗ್ಗವಾಗಿ ಸಿಗಬೇಕೆಂಬುದೇ ಈಕೆಯ ಆಶಯ. ಆಗ ಮಾತ್ರವೇ ಎಲ್ಲೆಡೆ ಕ್ಯಾನ್ಸರ್ ರೋಗಕ್ಕೆ ಅಗ್ಗದ ಚಿಕಿತ್ಸೆ ಸಾಧ್ಯ.

BBEAtl_0145

ಡಸ್ಕಿ ಬ್ಯೂಟಿಯ ಝಮಾನಾ  : ಈ ಬ್ಯೂಟಿಫುಲ್ ಹುಡುಗಿಯರು ಮದುವೆಗಾಗಿ ಸುಖಾಸುಮ್ಮನೆ ರೆಡಿ ಆಗುತ್ತಿಲ್ಲ, ಇವರು ಅಮೆರಿಕಾದ ಅಟ್ಲಾಂಟಾ ನಗರದಲ್ಲಿ ನಡೆಯಲಿರುವ ಬ್ಲ್ಯಾಕ್‌ ಬ್ಯೂಟಿ ಎಕ್ಸ್ ಪೋಗಾಗಿ ತಯಾರಾಗುತ್ತಿದ್ದಾರೆ. ನಮ್ಮಲ್ಲಿ ದಲಿತರ ಕಪ್ಪು ಹುಡುಗಿಯರನ್ನು ಕೀಳಾಗಿ ಕಾಣುವಂತೆ, ಅಲ್ಲಿ ಆಫ್ರಿಕಾ ಮೂಲದ ಕಪ್ಪು ಹುಡುಗಿಯರನ್ನು ಕೀಳಾಗಿ ಕಾಣುತ್ತಾರೆ. ಅಲ್ಲಿ ಸುಮಾರು 150 ವರ್ಷಗಳ ಹಿಂದೆಯೇ ಗುಲಾಮಗಿರಿ ಕೊನೆಗೊಂಡಿದ್ದರೂ, ಈಗಲೂ ಕರಿಯರ ಸ್ಥಿತಿಯಲ್ಲಿ ಸುಧಾರಣೆ ಇಲ್ಲ. ಈ ಬ್ಲ್ಯಾಕ್‌ ಬ್ಯೂಟಿಯರ ಬೆಡಗಿನ ಮುಂದೆ ವೈಟ್‌ ಬ್ಯೂಟಿಯರ ಗ್ಲಾಮರ್‌ ಮಣ್ಣು ಮುಕ್ಕುತ್ತಿದೆ!

sylvie-beljanski2-(1)

ಬರರ್ ಫಂಡಾ : ಇಂದಿನ ಪ್ರಪಂಚದಲ್ಲಿ ಯಾವುದೇ ಒಂದು ದೇಶ, ಭೂಗೋಳ ಅಥವಾ ಧರ್ಮದ ಹೆಸರಿನಡಿ, ಒಂದು ಲಿಮಿಟೆಡ್‌ ಸ್ಪೇಸ್‌ ನಡಿ ಬರಲು ಸಾಧ್ಯವೇ ಇಲ್ಲ. ಚೀನೀ ಡಿಜಿಟಲ್ ಕಂಪನಿಗಳು ಇದೀಗ ತಮ್ಮ ಬಾಗಿಲನ್ನು ಅಮೆರಿಕಾಗಾಗಿ ತೆರೆಯಲು ಆರಂಭಿಸಿವೆ. ಆನ್‌ ಡಿಮಾಂಡ್‌ ಚೀನಾ ಈಗ ತನ್ನ ಕಂಟೆಂಟ್‌ ನ್ನು ಅಮೆರಿಕನ್ನರಿಗೆ ತಲುಪಿಸುತ್ತಿದೆ. ಜನವರಿ 23 ರಂದು ಈ ಕೆಲಸ ವೇಗವಾಗಿ ನಡೆಯಿತು. ಇವರು ಅಮೆರಿಕಾದಲ್ಲಿ ನೆಲೆಸಿರುವ ಚೀನಿಯರಿಗಾಗಿ ಮಾತ್ರ ಈ ಅವಕಾಶ ತೆರೆದಿಡದೆ, ಅಲ್ಲಿನ ಬಿಳಿಯರಿಗೂ ಮುಕ್ತ ಆಫರ್‌ ನೀಡುತ್ತಿದ್ದಾರೆ. ಇಲ್ಲಿಗೆ ಟಿಕ್‌ ಟಾಕ್‌ ಬಂದಂತೆ ಮುಂದೊಂದು ದಿನ ಇದೂ ಸಹ ಬರಬಹುದು.

lost-culture-bg-taller.a2e81577acd5e5ad85ed

ಯೋಚಿಸುವ ಪರಿ ಬದಲಾಗಬೇಕು : ಸಾಲ್ಟ್ ಲೇಕ್‌ ಸಿಟಿಯ ಮ್ಯೂಸಿಕ್‌ ಫೆಸ್ಟಿವಲ್ ‌ನಲ್ಲಿ, ಸುಖಶಾಂತಿ ಸಮೃದ್ಧಿಗಾಗಿ ವಿಶ್ವವಿಡೀ ಸಾಂಸತಿಕ ಕಾರ್ಯಕ್ರಮಗಳು ಆನ್‌ ಲೈನ್‌ ಈವೆಂಟ್ಸ್ ನಲ್ಲಿ ಪ್ರಸಾರವಾಗುತ್ತಿದೆ. ವಿಶ್ವ ಹಿಂದಿನ ಇತಿಹಾಸವನ್ನು ಮರೆಯಲು ಬಯಸುತ್ತಿಲ್ಲ, ಆದರೆ ನಮ್ಮಲ್ಲಿರುವಂತೆ ಒಂದೇ ಕಲ್ಚರ್‌, ಇತಿಹಾಸಕ್ಕೂ ಅಂಟಿ ಕೂರುವುದಿಲ್ಲ. ನಿಧಾನವಾಗಿ ನಮ್ಮಲ್ಲಿಯೂ ತಾಲೀಬಾನಿ ಕಲ್ಚರ್‌ ನ ಸಂಚು ಹರಡುತ್ತಿದ್ದು, ಅದು ಇರಾನ್‌, ಪಾಕಿಸ್ತಾನ, ಆಫ್ಘಾನಿಸ್ತಾನಗಳ ತರಹ ಆಗಿಹೋಗಿ ವಿನಾಶಕ್ಕೆ ಕಾರಣವಾದೀತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ