ಜೇಮ್ಸ್ ಬಾಂಡ್‌ ಚಿತ್ರಗಳ ತಾಜಾ ಹೀರೋ ಡೇನಿಯಲ್ ಕ್ರೆಗ್‌ ಇತ್ತೀಚಿನ ಒಂದು ಸಂದರ್ಶನದಲ್ಲಿ ಹೇಳಿದ್ದೆಂದರೆ, ತಾನು ನಟ ನೆಯಿಂದ ಗಳಿಸಿದ ಸಿರಿ ಸಂಪತ್ತನ್ನು ಪೂರ್ತಿಯಾಗಿ ತನ್ನ ಸಾವಿನ ನಂತರ ಮಕ್ಕಳಿಗೆ ಬರೆಯುವುದಿಲ್ಲವಂತೆ! ಉಳಿದದ್ದನ್ನು ಧರ್ಮದ ಹೆಸರಲ್ಲಿ ದಾನ ಮಾಡುತ್ತಾನಂತೆ!

ಈತನಿಗೆ ಪ್ರತಿ ಚಿತ್ರದಲ್ಲೂ ಕೋಟ್ಯಂತರ ಡಾಲರ್‌ ಸಂಭಾವನೆ ಸಿಗುತ್ತದೆ. ಮಕ್ಕಳಿಗೆ ಅಪ್ಪ ಮಾಡಿಟ್ಟ ಆಸ್ತಿಗಿಂತ ಖುದ್ದು ತಾವಾಗಿ ದುಡಿದು ಗಳಿಸುವುದೇ ಶ್ರೇಷ್ಠ ಎಂದು ಗೊತ್ತಾಗಬೇಕು. 29ರ ಮಗ ಹಾಗೂ 2 ವರ್ಷದ ಮಗಳು ಈತನ ಮಕ್ಕಳು.ಇದೇ ತರಹ ಕೆಲವು ವರ್ಷಗಳ ಹಿಂದೆ ಆ್ಯಂಡ್ರೂ ಕಾರ್ನೆಗಿ ತನ್ನ ಆಸ್ತಿಯಲ್ಲಿನ ಸುಮಾರು 11 ಮಿಲಿಯನ್‌ ಡಾಲರ್‌ ಹಣವನ್ನು `ಕಾರ್ನೆಗಿ ಫೌಂಡೇಶನ್‌' ರೂಪಿಸಿ ದಾನ ಮಾಡಿದ.

ತಂದೆಯ ಆಸ್ತಿ ಮಕ್ಕಳಿಗೆ ಹೋಗಬೇಕು ಎಂಬುದು ಅನಿವಾರ್ಯವೇನಲ್ಲ. ಇಂದಿನ ಕಾನೂನು ಸಹ ಇದನ್ನೇ ಸಾರುತ್ತದೆ, ನಮ್ಮ ಸಮಾಜ ಇದನ್ನೇ ಬಯಸುತ್ತದೆ. ಮಕ್ಕಳು ಹುಟ್ಟಿದಾಗಿನಿಂದ ಏನೊಂದೂ ಕಷ್ಟಪಡದೆ, ತಂದೆಯ ಆಸ್ತಿ ಹಣ ಕರಗಿಸ ತೊಡಗುತ್ತಾರೆ. ಸಮಾಜದಲ್ಲಿನ ಕೆಟ್ಟು ಹೋದ ಯುವಜನತೆ ಇವರೇ ಆಗಿರುತ್ತಾರೆ. ಬಾಲ್ಯದಿಂದ ಮನಸೋ ಇಚ್ಛೆ ಖರ್ಚು ಮಾಡಲು ಮನೆಯಲ್ಲಿ ಹಣ ಸಿಗುತ್ತಿರುವಾಗ, ಇವರು ಚಿಂತಿಸಬೇಕೇಕೆ?

ಮಕ್ಕಳಿಗೆ ಪಿತ್ರಾರ್ಜಿತಾಗಿ ಮನೆ, ಮನೆತನದಿಂದ ಉತ್ತಮ ಶಿಕ್ಷಣ, ಕಲಿಕೆ, ಸಂಸ್ಕಾರ, ಬುದ್ಧಿ, ಕೌಶಲ್ಯ, ಸೂಕ್ತ ಮಾರ್ಗದರ್ಶನ ಕೊಡುವುದೇ ಸರಿ. ಅದು ಬಿಟ್ಟು ಸದಾ ಹಣದ ಬಂಡಲ್ ಅವರ ಮುಂದೆ ಸುರಿಯಬಾರದು. ಆದರೆ ತಾಯಿ ತಂದೆಯರು ತಮ್ಮ ಪ್ರತಿಷ್ಠೆಯ ಸಲುವಾಗಿ ಮೊದಲಿನಿಂದಲೂ ಇದನ್ನೇ ಅಭ್ಯಾಸ ಮಾಡಿಸಿಬಿಡುತ್ತಾರೆ. ತಾಯಿ ತಂದೆ ಮಕ್ಕಳಿಗೆ ಆಸ್ತಿ ಬರೆಯುವ ಬದಲು ಧರ್ಮದ ಹೆಸರಲ್ಲಿ ದಾನ ಮಾಡಿದವರಂತೆ ಎಂಬುದನ್ನು ಕೇಳಿಲಿಕ್ಕೇನೋ ಚೆನ್ನಾಗಿರುತ್ತದೆ, ಆದರೆ ಯೋಗ್ಯತೆ ಇಲ್ಲದ ಮಕ್ಕಳು ಅದೇ ಲೈಫ್‌ ಸ್ಟೈಲ್ ಮುಂದುವರಿಸಲು ಸಾಧ್ಯವೇ? ಇಲ್ಲಿ ಏಳುವ ಪ್ರಶ್ನೆ, ದಾನವಾಗಿ ಪಡೆಯುವ ದೊಡ್ಡ ಮೊತ್ತದ ಹಣವನ್ನು ಆ ದಾನಿ ಗಳಿಸಿದ್ದು ಹೇಗೆ? ಅವರಿಗೂ ಅದು ಪಿತ್ರಾರ್ಜಿತವೋ ಅಲ್ಲವೋ? ಎಲ್ಲರೂ ಕ್ರೆಗ್‌ ಆಗಲು ಸಾಧ್ಯವಿಲ್ಲ.

ಸಾಮಾಜಿಕ ಸಂಘ ಸಂಸ್ಥೆಗಳಿಗೆ ದಾನವಾಗಿ ಆಸ್ತಿ ಹಂಚಿ ಹೋಯಿತು ಎಂಬುದನ್ನು ಕೇಳಲೇನೋ ಚೆನ್ನಾಗಿರುತ್ತದೆ. ಅತಿ ಶ್ರೀಮಂತನೊಬ್ಬ ಸತ್ತ ನಂತರ, ಅವನ ಹಣವನ್ನು ಹೀಗೆ ವಿಲೇವಾರಿ ಮಾಡುವವರಿಗೆ ಆ ಆಸ್ತಿಯ ಮೇಲೆ ಆಸಕ್ತಿ ಇದ್ದೀತೇ? ಹೀಗೆ ಹಂಚುವವರು ಸಹ ಯಾವ ಪರಿಶ್ರಮ ಪಟ್ಟಿರುವುದಿಲ್ಲ. ಯಾರದೋ ಹಣವನ್ನು ಯಾರಿಗೋ ಹಂಚಲು ಕಷ್ಟವೇನು? ತಾನು ಗಳಿಸದೆ ಯಾರದೋ ಹಣವನ್ನು ಹೀಗೆ ಹಂಚಲು ಅಂಥವರಿಗೆ ಒಂದು ಅವಕಾಶ ಸಿಗುತ್ತದೆ. ಆತ ದಾನಿ ಎನಿಸುತ್ತಾನೆಯೇ?

ಭಾರತದಲ್ಲಿ ಇತ್ತೀಚೆಗಷ್ಟೆ ರಮೇಶ್‌ ಚೌಹಾನ್‌ ತಮ್ಮ ಬಿಸ್ಲೆರಿ ಕಂಪನಿಯನ್ನು ಮಾರಿದರು. ಏಕೆಂದರೆ ಅವರ ಒಬ್ಬಳೇ ಮಗಳಿಗೆ ಆ ಬಿಸ್‌ ನೆಸ್‌ ಮುಂದುವರಿಸುವಲ್ಲಿ ಯಾವುದೇ ಆಸಕ್ತಿ ಇರಲಿಲ್ಲ. ವೃದ್ಧರಾದ ಅವರು ಒಬ್ಬರೇ ಆ ಬಿಸ್ಲೆರಿ ಸಾಮ್ರಾಜ್ಯದ ಹೊರೆ ಹೊರಲು ಸಾಧ್ಯವಾಗಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ