ಚಾಯ್ಸ್ ಯಾ ಕಂಪಲ್ಶನ್ಆಧುನಿಕ ಕಾಲದಲ್ಲಿ ಹಬ್ಬಗಳ ಆಚರಣೆ ಸಲುವಾಗಿ ಇಂದಿನ ಮಾಡಲ್ ಜೆನ್ಪೀಳಿಗೆಗೆ ಸೀರೆ ಉಡುವುದು ಅವಶ್ಯಕವೇ ಅಥವಾ ಅದು ಹಾಬಿ, ಕಂಪಲ್ಶನ್ ಆದೀತೇ....?
ಸೀರೆ! ಭಾರತೀಯ ಹೆಣ್ಣಿನ ಸಂಸ್ಕೃತಿಯ ಹೆಗ್ಗುರುತು. ಆದರೆ ಈ ಆಧುನಿಕ ಕಾಲದಲ್ಲಿ ಹಬ್ಬಗಳ ಆಚರಣೆಗಾಗಿ, ಇಂದಿನ ಮಾಡಲ್ ಜೆನ್ ಪೀಳಿಗೆಗೆ ಇದು ಅನಿವಾರ್ಯವೇ? ಹಾಬಿ ಯಾ ಕಂಪಲ್ಶನ್ ಅಲ್ಲಷ್ಟೇ....? 5-7 ಗಜಗಳ ಸುದೀರ್ಘ (ಇಂದಿನವರ ಲೆಕ್ಕಕ್ಕೆ) ಸೀರೆಯನ್ನು ಮೈತುಂಬಾ ಸುತ್ತಿಕೊಳ್ಳುವುದು.... ಅಬ್ಬಬ್ಬಾ! ಹಿಂಸೆ ಎಂದುಬಿಡುತ್ತಾರೆ. ಇದು ಚಳಿಗಾಲದ ಕಷ್ಟ ನೀಗಿಸುವುದು ಮಾತ್ರವಲ್ಲದೆ, ಭಾರತೀಯ ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳ ದರ್ಪಣ ಹೌದು. ನಿಧಾನವಾಗಿ ಇದು ನಮ್ಮ ಹೆಣ್ಣುಮಕ್ಕಳ ಫ್ಯಾಷನ್ ವ್ಯಾಖ್ಯಾನದೊಂದಿಗೆ ಬೆರೆತು ಒಂದಾಗಿ ಹೋಯಿತು. ಇಂದಿನ ಆಧುನಿಕರ ನಿಟ್ಟಿನಲ್ಲಿ ಇದು ಅತ್ಯಾವಶ್ಯಕವಾಗಿ ಉಳಿದಿಲ್ಲ. ಈ ಕುರಿತಾಗಿ ಪರ V/S ವಿರೋಧದ ಚರ್ಚೆ ನಿತ್ಯ ನೂತನ! ಕೆಲವರಿಗೆ ಇದು ಅನಿವಾರ್ಯವಾದರೆ, ಹಲವರು ಇದನ್ನು ಇಷ್ಟಪಟ್ಟು ಉಡುತ್ತಾರೆ, ಉಳಿದವರಿಗೆ ......?
ಇತಿಹಾಸ : ಭಾರತದಲ್ಲಿ ಸೀರೆಯ ಇತಿಹಾಸ ಸುಮಾರು 5 ಸಾವಿರ ವರ್ಷಗಳಷ್ಟು ಹಳೆಯದು. ಆಗಮ, ವೇದ, ಉಪನಿಷತ್ತುಗಳ ಅತಿ ಪ್ರಾಚೀನ ಕಾಲದಲ್ಲೇ ಉಲ್ಲೇಖಿತಗೊಂಡು, ರಾಮಾಯಣ ಮಹಾಭಾರತದ ಯುಗಗಳನ್ನೂ ದಾಟಿಕೊಂಡೇ ಬಂದಿದೆ. ಮಧ್ಯಕಾಲೀನ ಭಾರತದಲ್ಲಿ ಇದರ ಚಾಲನೆ ಅತಿ ತೀವ್ರವಾಗಿತ್ತು. ಕ್ರಮೇಣ ಭಾರತೀಯ ಹೆಣ್ಣಿನ ದೈನಂದಿನ ಜೀವನದಲ್ಲಿ ಎಷ್ಟು ಬೆರೆತುಹೋಯಿತೆಂದರೆ, ಈ ಸೀರೆ ನಮ್ಮ ಭಾರತೀಯ ಹೆಣ್ಣುಮಕ್ಕಳ ಅವಿಭಾಜ್ಯ ಅಂಗವೇ ಆಗಿಹೋಯಿತು!
ಸೀರೆಗಳ ಕುರಿತಾದ ಸವಾಲು : ಇಂದಿನ ಆಧುನಿಕ ಕಾಲದಲ್ಲಿ ಗೃಹಿಣಿಯೇ ಇರಲಿ, ಹೊರಗಿನ ಕೆಲಸಕ್ಕೆ ಧಾವಿಸುವ ಉದ್ಯೋಗಸ್ಥ ವನಿತೆ ಇರಲಿ, ನಮ್ಮ ಭಾರತೀಯ ಹೆಣ್ಣುಮಕ್ಕಳ ಮಾಮೂಲಿ ಲೈಪ್ ಸ್ಟೈಲಿಗೆ ಸೀರೆ ಒಂದು ಆರಾಮದಾಯಕ ಪೋಷಾಕು ಎನ್ನಬಹುದು, ಇದು ನಿರ್ವಿವಾದ ಕೂಡ. ಆದರೆ ಮಾರ್ಕೆಟಿಂಗ್ ಹೆಸರಿನಲ್ಲಿ ಸದಾ ಹೊರಗೆ ಗಾಡಿ ಮೇಲೆ ಸುತ್ತಾಡಬೇಕಾದ ಹೆಂಗಸರಿಗೂ ಇದು ಆರಾಮದಾಯಕವೇ? ಇಂದಿನ ಪಾರ್ಟಿ, ಇವೆಂಟ್, ಮಾಡಲ್ ಲೈಫ್ ಸ್ಟೈಲ್ ಗೆ ಇದು ಹೊಂದುತ್ತದೆಯೇ....? ಹೀಗೆಯೇ ಇದನ್ನು ನಿರಾಕರಿಸುವವರ ಚರ್ಚೆಗೇನೂ ಕಡಿಮೆ ಇಲ್ಲ.
ಉದ್ಯೋಗಸ್ಥ ವನಿತೆ ಹಾಗೂ ಸೀರೆ : ಕಾಲ ಸರಿದಂತೆ ಫ್ಯಾಷನ್ ಲೋಕಕ್ಕೆ ಲಗ್ಗೆಯಿಟ್ಟ ಇತರ ಆಧುನಿಕ ಉಡುಗೆಗಳು, ಉ. ಭಾರತದ ಉಡುಗೆಗಳು ದಕ್ಷಿಣದಲ್ಲೂ ಅತಿ ಪ್ರಭಾವಶಾಲಿ ಎನಿಸಲು, ಸೀರೆಗಿದ್ದ ಜನಪ್ರಿಯತೆ ಮಂಕಾಗತೊಡಗಿತು. ದಿನೇದಿನೇ ಹೆಚ್ಚುತ್ತಿರುವ ಭಾರತೀಯರ ಜನಸಂಖ್ಯೆ, ಯುವ ಪೀಳಿಗೆಗೆ ನಡುವೆ ಅದರಲ್ಲೂ ಜೆನ್ತರುಣಿಯರು ಇದನ್ನು ಹಿಂದೆ ಸರಿಸುತ್ತಿದ್ದಾರೆ. ಇತರ ಉಡುಗೆಗಳ ಆಕರ್ಷಣೆ ಅಷ್ಟೇ ಹೆಚ್ಚುತ್ತಿದೆ.
ಆಧುನಿಕರು ಎಲ್ಲಾ ವಿಭಿನ್ನ ಕ್ಷೇತ್ರಗಳಲ್ಲೂ ಪಾದಾರ್ಪಣೆ ಮಾಡುತ್ತಾ ತಮ್ಮ ಹೊಸ ಐಡೆಂಟಿಟಿ ಸ್ಥಾಪಿಸಿಕೊಳ್ಳುತ್ತಿದ್ದಾರೆ. ಇದು ಅವರ ಯಶಸ್ಸಿನ ದ್ಯೋತಕ ಹೌದು. ಗಂಟೆಗಟ್ಟಲೇ ಮೀಟಿಂಗ್, ಹೊರಗಿನ ಸುತ್ತಾಟದ ಕಾರ್ಯಕ್ರಮ, ಬೆಳಗ್ಗಿನಿಂದ ಸಂಜೆಯವರೆಗಿನ ಮಾರ್ಕೆಟಿಂಗ್ ಕೆಲಸ, ಡೋರ್ ಟು ಡೋರ್ ಸೇಲ್ಸ್, ಮೆಟ್ರೋ ಬಸ್ಸುಗಳ ನೂಕುನುಗ್ಗಲಲ್ಲಿ ಪ್ರಯಾಣ, ಓಡೋಡುತ್ತಾ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ, ಕನ್ ಸ್ಟ್ರಕ್ಷನ್ ಸೈಟ್ ಗಳಲ್ಲಿ ಸೂಪರ್ ವಿಶನ್, ಡಾಮರು ರಸ್ತೆ ಕೆಲಸದಿಂದ ಕಷ್ಟಕರ ಕೂಲಿಕೆಲಸ.... ಇತ್ಯಾದಿ ಏನೇ ಇರಲಿ, ಇಂದಿನ ಉದ್ಯೋಗಸ್ಥ ವನಿತೆಗೆ 108 ಸಮಸ್ಯೆ ತಪ್ಪಿದ್ದಲ್ಲ. ಇಂಥವರಿಗೆ ಸೀರೆ ಉಟ್ಟು ಸಲೀಸಾಗಿ ಈ ಎಲ್ಲಾ ಕೆಲಸ ನಿಭಾಯಿಸುವುದು ಒಂದು ಸವಾಲೇ ಸರಿ.





