ಪ್ರಿನ್ಸಿಪಾಲ್‌, ಹಿಂದೂ ಕಾಲೇಜ್‌, ದೆಹಲಿ ಯೂನಿವರ್ಸಿಟಿ ಆ್ಯಲ್ ಕಾನ್‌

ವಿಷನರಿ ಲೀಡರ್‌ ಶಿಪ್‌ ಅವಾರ್ಡ್‌

“ಇಂದಿನ ಯುವಜನತೆ ಬಲು ವೇಗವಾಗಿ ಬದಲಾವಣೆಗಳ ಜೊತೆ ಮುನ್ನಡೆಯುತ್ತಿದ್ದಾರೆ, ಅವರನ್ನು ಅರ್ಥೈಸಿಕೊಂಡು ಮಾರ್ಗದರ್ಶನ ನೀಡಬೇಕಾದುದು ಅತ್ಯಗತ್ಯ….”

“ಇಂದು ತೀವ್ರವಾಗಿ ಬದಲಾಗುತ್ತಿರುವ ಡಿಜಿಟಲ್ ಟೆಕ್ನಿಕ್ಸ್ ಲೋಕದಲ್ಲಿ ನಮ್ಮ ಎಲ್ಲಕ್ಕಿಂತ ದೊಡ್ಡ ಜವಾಬ್ದಾರಿ ಎಂದರೆ, ಯುವ ಜನತೆಗೆ ಅವರಿಗೆ ತಕ್ಕಂತೆ ಸೂಕ್ತ ಮಾರ್ಗದರ್ಶನ ನೀಡುವುದು,” ಎನ್ನುತ್ತಾರೆ ಪ್ರೊ. ಅಂಜೂ ಶ್ರೀವಾಸ್ತವ್. ಈಕೆ ಹಿಂದೂ ಕಾಲೇಜಿನಲ್ಲಿ ಪ್ರಿನ್ಸಿಪಾಲರಾಗಿ ಸೇವೆ ಸಲ್ಲಿಸುತ್ತಾ, ಶಿಕ್ಷಣ ಹಾಗೂ ನೇತೃತ್ವಗಳೆರಡರಲ್ಲೂ ತಮ್ಮ ಸಶಕ್ತ ಐಡೆಂಟಿಟಿ ಸ್ಥಾಪಿಸಿಕೊಂಡಿದ್ದಾರೆ. ಈಕೆ ಕಾಲೇಜಿನಲ್ಲಿ ಶಿಕ್ಷಣದ ಮಟ್ಟ ಸುಧಾರಿಸಲು ಅಹರ್ನಿಶಿ ದುಡಿಯುತ್ತಾ, ಕ್ಯಾಂಪಸ್‌ ನ ವಿಕಾಸ ಹಾಗೂ ಆಧುನೀಕರಣಕ್ಕಾಗಿ ವಿಶೇಷ ಗಮನ ನೀಡುತ್ತಾರೆ.

ಇವರು ತಮ್ಮ ದಕ್ಷ ನೇತೃತ್ವದಿಂದ ಹಿಂದೂ ಕಾಲೇಜ್‌ ತನ್ನ ಶೈಕ್ಷಣಿಕ ಗುಣಮಟ್ಟ ಹಾಗೂ ರಾಷ್ಟ್ರೀಯ ಐಡೆಂಟಿಟಿಯನ್ನು ಸತತ ಸಶಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿದ್ಯಾರ್ಥಿಗಳು ಕೇವಲ ಡಿಗ್ರಿ ಗಳಿಸುವುದೊಂದೇ ಅಲ್ಲ ಬದಲಿಗೆ ಆತ್ಮವಿಶ್ವಾಸ, ಯೋಚಿಸುವ ಧಾಟಿ, ಜೀವನಮಟ್ಟ ಸುಧಾರಿಸಲು ಅತ್ಯಧಿಕ ಪ್ರೇರಣೆ ಹೊಂದಬೇಕೆಂಬಂಥ ಶಿಕ್ಷಣದಲ್ಲಿ ಇವರು ನಂಬಿಕೆ ಇರಿಸಿಕೊಂಡಿದ್ದಾರೆ.

ಸಾಂಪ್ರದಾಯಿಕ ಮೌಲ್ಯಗಳೊಂದಿಗೆ ಆಧುನಿಕ ವಿಚಾರಧಾರೆಯನ್ನು ಮೇಳೈಸುತ್ತಾ, ಅಂಜೂ ವಿದ್ಯಾರ್ಥಿಗಳಿಗಾಗಿ ಉತ್ತಮ ಅವಕಾಶ ಹಾಗೂ ಸಕಾರಾತ್ಮಕ ವಾತಾವರಣ ಕ್ರಿಯೇಟ್‌ ಮಾಡುವಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತಿದ್ದಾರೆ.

ವಿದ್ಯಾರ್ಥಿಯಿಂದ ಪ್ರಿನ್ಸಿಪಾಲ್ ವರೆಗಿನ ಜರ್ನಿ : ಹಿಂದೂ ಕಾಲೇಜಿನ ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಅಂಜೂ, ಇದೇ ಕಾಲೇಜಿನಲ್ಲಿ ಹಲವು ದಶಕಗಳ ಹಿಂದೆ ಕೆಮಿಸ್ಟ್ರಿ ವಿದ್ಯಾರ್ಥಿನಿ ಆಗಿದ್ದರು. ದೆಹಲಿಯಿಂದ ಮಾಸ್ಟರ್ಸ್‌ನಂತರ, ಆಕೆ ಕೆಲವು ಕಾಲಗಳಲ್ಲಿಯೂ ದುಡಿದಿದ್ದರು. ನಂತರ ಈ ಕಾಲೇಜಿನಲ್ಲಿ ಹಲವು ವರ್ಷ ಪ್ರೊಫೆಸರ್‌ ಆಗಿ ಸೇವೆ ಸಲ್ಲಿಸಿದರು. 2014ರಲ್ಲಿ ಇದೇ ಕಾಲೇಜಿನ ಪ್ರಿನ್ಸಿಪಾಲ್ ‌ಆಗಿ ಆದರ್ಶ ಹೆಸರು ಗಳಿಸಿದರು. ಅಂದಿನಿಂದ ವಿದ್ಯಾರ್ಥಿಗಳ ಉನ್ನತಿಗಾಗಿ ಸತತ ಶ್ರಮಿಸುತ್ತಿದ್ದಾರೆ. ತಮ್ಮ 12 ವರ್ಷಗಳ ಈ ಕಾಲಾವಧಿಯಲ್ಲಿ ಇರುವ ವಿದ್ಯಾರ್ಥಿಗಳ ಕರಿಕುಲಮ್ ನ್ನು ಮನರಂಜನೀಯವಾಗಿ ಬದಲಾಯಿಸಿದ್ದಲ್ಲದೆ, ವಿದ್ಯಾರ್ಥಿಗಳ ಹಾಲಿಸ್ಟಿಕ್‌ ಪರ್ಸನಾಲಿಟಿ ಅಭಿವೃದ್ಧಿಪಡಿಸಲು ಅಹರ್ನಿಶಿ ದುಡಿಯುತ್ತಿದ್ದಾರೆ.

ಸ್ಟಾರ್ಟ್‌ ಅಪ್‌, ಸಾಫ್ಟ್ ಸ್ಕಿಲ್ಸ್ ಹಾಗೂ ಅಪ್‌ ಸ್ಕಿಲಿಂಗ್‌ನ ಸದವಕಾಶಗಳು ವಿದ್ಯಾರ್ಥಿಗಳಿಗೆ ನೇರ ಲಾಭ ತರುವಂತೆ ಮಾಡಿದ್ದಾರೆ. ಸ್ಟಾರ್ಟ್‌ ಅಪ್ಸ್ ಮೂಲಕ ಇವರು ವಿದ್ಯಾರ್ಥಿಗಳಲ್ಲಿ ಕ್ರಿಯೇಟಿವ್ ‌ಥಿಂಕಿಂಗ್‌, ರಿಸ್ಕ್ ಟೇಕಿಂಗ್‌, ಅನೆಲಿಟಿಕ್‌ ಥಿಂಕಿಂಗ್ ಇತ್ಯಾದಿಗಳ ವಿಕಾಸಕ್ಕಾಗಿ ಹೆಚ್ಚು ಒತ್ತು ನೀಡುತ್ತಾರೆ. ಇದರಿಂದ ಆ ವಿದ್ಯಾರ್ಥಿಗಳು ಸಂಬಳಕ್ಕಾಗಿ ನೌಕರಿಗೆ ಸೇರದೆ, ಉನ್ನತ ಕೆರಿಯರ್‌ ರೂಪಿಸಿಕೊಳ್ಳಬಲ್ಲವರಾಗುತ್ತಾರೆ.

ಶಿಕ್ಷಣದ ಜೊತೆಗೆ ಕೌಶಲ ವಿಕಾಸದತ್ತ ವಿಶೇಷ ಪೋಕಸ್‌ : ಪ್ರೊ. ಅಂಜು ಪ್ರಕಾರ, ಕ್ಲಾಸ್‌ ರೂಮ್ ವರೆಗಷ್ಟೇ ಕಲಿಕೆ ಎಂಬ ಕಾಲ ಹೋಯಿತು, ಹೀಗಾಗಿ ವಿದ್ಯಾರ್ಥಿಗಳು ತಮ್ಮ ಕೌಶಲ ವಿಕಾಸಕ್ಕಾಗಿ ಅತ್ಯಧಿಕ ಶ್ರಮಿಸಬೇಕಿದೆ. ಇಂದು ವಿದ್ಯಾರ್ಥಿಗಳು ತಮ್ಮ ಸ್ಕಿಲ್ಸ್ ಸಶಕ್ತಗೊಳಿಸಿಕೊಳ್ಳಲು, ಹಾಗೂ ದಿನೇ ದಿನೇ ಹೊಸತನ್ನು ಕಲಿಯಲು ಪ್ರೇರಿತಗೊಳಿಸುತ್ತದೆ ಎಂದು ಅಂಜೂ ಹುರಿದುಂಬಿಸುತ್ತಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ