ಶರತ್ ಚಂದ್ರ

ಕೊನೆಗೂ ಡಾರ್ಲಿಂಗ್ ಕೃಷ್ಣ ಲವ್ ಮಾಕ್‌ಟೈಲ್ 3
ಚಿತ್ರ ಅನೌನ್ಸ್ ಮಾಡಿದ್ದಾರೆ. ಲವ್ ಮಾಕ್‌ಟೈಲ್ 2 ಚಿ ತ್ರದ ಯಶಸ್ಸಿನ ಬಳಿಕ ಡಾರ್ಲಿಂಗ್ ಕೃಷ್ಣ ಈ ಫ್ರ್ಯಾಂಚಿಸ್ ನ ಮೂರನೇ ಭಾಗವನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಹರಿದಾಡುತ್ತಿತ್ತು.

1000578471

ಬಹುಶಃ ಈ ಬಾರಿ ತಂದೆ ಮತ್ತು ಮಗಳ ಬಾಂಧವ್ಯದ ಕುರಿತಾದ ಕಥೆ ಇರಬಹುದು ಎಂದು ಊಹಿಸಲಾಗುತ್ತಿದೆ. ಇದಕ್ಕೆ ಕಾರಣ ಇತ್ತೀಚಿಗೆ ಡಾರ್ಲಿಂಗ್ ಕೃಷ್ಣ ಜಾಹೀರಾತು ಒಂದನ್ನು ನೀಡಿ ತಮ್ಮ ಚಿತ್ರಕ್ಕೆ 5 ರಿಂದ 8 ವರ್ಷದೊಳಗಿನ      ಬಾಲ ಕಲಾವಿದೆಯ ಹುಡುಕಾಟ ದಲ್ಲಿದ್ದಾರೆಂದು ತಿಳಿದು ಬಂದಿದೆ.

1000578461

ಲವ್ ಮಾಕ್‌ಟೈಲ್ 2 ಕ್ಲೈಮಾಕ್ಸ್ ನಲ್ಲಿ ನಾಯಕ ಹೆಣ್ಣು ಮಗುವನ್ನು ದತ್ತು ತೆಗೆದುಕೊಳ್ಳುವ ಮೂಲಕ ಸಿನಿಮಾ ಕೊನೆಗೂಳ್ಳುತ್ತದೆ. ಕಳೆದ ವರ್ಷ ಹೆಣ್ಣು ಮಗುವಿನ ತಂದೆಯಾಗಿರುವ ಸಂಭ್ರಮದಲ್ಲಿರುವ ಡಾರ್ಲಿಂಗ್ ಕೃಷ್ಣ, ಇಂತಹ ಒಂದು ಕಥಾ ವಸ್ತುವನ್ನು ಆಯ್ಕೆ ಮಾಡಿರುವ ಸಾಧ್ಯತೆ ಇದೆ. ತಂದೆ ಮಗಳ ಈ ಜರ್ನಿಯಲ್ಲಿ ಬಹುಶಃ ನಿಧಿಮಾ ಕೂಡ ಪಾಲ್ಗೊಳ್ಳುವ ಸಾಧ್ಯತೆ.

2020 ರಲ್ಲಿ ಬಂದ ಲವ್ ಮಾಕ್‌ಟೈಲ್ ಚಿತ್ರ ಡಾರ್ಲಿಂಗ್ ಕೃಷ್ಣ, ನಟನಾಗಿ ಮತ್ತು ನಿರ್ದೇಶಕನಾಗಿ ಅವರ ವೃತ್ತಿ ಜೀವನದಲ್ಲಿ ತಿರುವು ನೀಡಿದ ಚಿತ್ರ.ಈ ಚಿತ್ರದಲ್ಲಿ  ನಾಯಕಿಯಾಗಿ ನಟಿಸಿದ ಮಿಲನಾ ನಾಗರಾಜ್ ಅವರ ನಿಜ ಜೀವನದಲ್ಲಿ ಕೂಡ ಬಾಳ ಸಂಗಾತಿಯಾಗಿ ಕಾಲಿಟ್ಟಿದ್ದರು.

1000578467

ಈ ಜೋಡಿ ನಟಿಸಿದ ಲವ್ ಮಾಕ್‌ಟೈಲ್2 ಕೂಡ ಸೂಪರ್ ಹಿಟ್ ಆಗಿತ್ತು.ಚಿತ್ರಾಭಿಮಾನಿಗಳಿಗೆ ನಿಜ ಜೀವನದ ಈ ಜೋಡಿಯ ಚಿತ್ರಗಳು ಇಷ್ಟವಾಗಿದೆ. ಇದಕ್ಕೆ ಇವರಿಬ್ಬರು ಈ ಹಿಂದೆ ನಟಿಸಿದ್ದ ‘ಕೌಶಲ್ಯ ಸುಪ್ರಜಾ ರಾಮ ‘ ಚಿತ್ರದ ಯಶಸ್ಸೇ ಸಾಕ್ಷಿ.

ಹೊಸ ಚಿತ್ರದ ಪ್ರಿ -ಪ್ರೊಡಕ್ಷನ್ನಲ್ಲಿ ವ್ಯಸ್ತರಾಗಿರುವ ಡಾರ್ಲಿಂಗ್  ಚಿತ್ರದ ಅಪ್ಡೇಟ್ಸ್ ನೀಡುವವರೆಗೆ ಕಾಯಬೇಕಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ