ವಾಟ್ಸ್ ಆ್ಯಪ್‌ ಟ್ವಿಟರ್‌ ಹಿಂದಿನ ಹಾಗೇ ಮುಂದೆ ಇರುವುದಿಲ್ಲ. ಇವುಗಳಲ್ಲಿ ಖುಲ್ಲಂಖುಲ್ಲ ಹೇಟ್‌ ಸ್ಪೀಚ್‌ ಫೇಕ್‌ ನ್ಯೂಸ್‌ ನೀಡುವುದೇ ಆಗಿದೆ. ಕಂದಾಚಾರಿಗಳ ಒಂದು ದೊಡ್ಡ ದಂಡು ಈ ಸಮೂಹ ಮಾಧ್ಯಮವನ್ನು ತಮ್ಮಿಷ್ಟದಂತೆ ಜಾತಿವಾದ, ಧರ್ಮವಾದ, ಪುರುಷವಾದಗಳನ್ನು ಹರಡಲು ಬಳಸಿಕೊಳ್ಳುತ್ತಾ ವಿಜೃಂಭಿಸುತ್ತಿದೆ.

ಈ ಕುರಿತಾಗಿ ಸುಪ್ರೀಂ ಕೋರ್ಟ್‌ ಒಂದು ಪ್ರಕರಣದಲ್ಲಿ ಸ್ಪಷ್ಟವಾಗಿ ಹೇಳಿದ್ದೆಂದರೆ, ಹೇಟ್‌ ಸ್ಪೀಚ್‌ ನೀಡುವವರ ವಿರುದ್ಧ ಪೊಲೀಸರು ನೇರವಾಗಿ ಆ್ಯಕ್ಷನ್‌ ತೆಗೆದುಕೊಳ್ಳಲಿ. ವಾಟ್ಸ್ ಆ್ಯಪ್‌, ಟ್ವಿಟರ್‌, ಇನ್‌ ಸ್ಟಾಗ್ರಾಮ್, FB‌, U-ಟ್ಯೂಬ್‌ ಇತ್ಯಾದಿಗಳು ಇಂಥದ್ದೇ ಹೇಟ್‌ ಸ್ಪೀಚ್‌ ಗಳಿಂದ ತುಂಬಿ ತುಳುಕುತ್ತಿವೆ.

4 ಜನ ಒಂದೆಡೆ ಜಗಳವಾಡುತ್ತಿದ್ದಾರೆ ಎಂದಾಗ, 40 ಜನ ಈ ತಮಾಷೆ ನೋಡಲು ಗುಂಪುಗೂಡುವುದು ಮಾಮೂಲಿ ವಿಷಯ. ಇಂದಿನ ಹೆಂಗಸರ ಎಲ್ಲಕ್ಕೂ ದೊಡ್ಡ ಟೈಂಪಾಸ್‌ ಎಂದರೆ ಯಾವುದೋ ವಿವಾದ, ಕಾಡುಹರಟೆ, ಇತರರ ಮನೆಯ ಜಗಳದ ಕುರಿತು ಹಂಚಿಕೊಳ್ಳುವುದಾಗಿದೆ. ಕಿಟಿ ಪಾರ್ಟಿಗಳಲ್ಲಂತೂ ಯಾರ ಮನೆಯಲ್ಲಿ ಏನಾಯ್ತು, ಯಾವನ ಹಿಂದೆ ಯಾವಳು ಓಡಿಹೋದಳು ಎಂಬುದಿರುತ್ತವೆಯೇ ಹೊರತು ಸಮಾಜಕ್ಕೆ ಒಳಿತಾಗುವ ವಿಚಾರಗಳಲ್ಲ.

ಸೋಶಿಯಲ್ ಮೀಡಿಯಾಗಳ ಮೂಲಕ ಹೇಟ್‌ ಸ್ಪೀಚ್‌ ಫೇಕ್‌ ನ್ಯೂಸ್‌ ಗಳ ನಿಂಬೆ ಹುಳಿಯಂಥ ಸಮಾಚಾರಗಳು ಧಾರಾಳ ನಲಿದಾಡುತ್ತವೆ. ಇದರ ಹಿಂದಿನ ಮೂಲ ಉದ್ದೇಶ ಪೂಜೆ ಭಜನೆಗಳಿಗಾಗಿ ಚಂದಾ ಸಂಗ್ರಹ, ಮಂದಿರಗಳಿಗಾಗಿ ಗುಂಪು ಗೂಡಿಸುವಿಕೆ, ಮನೆ ಮನೆಗಳಲ್ಲಿ ಹೋಮಹವನ, ದಾನದಕ್ಷಿಣೆ, ಜನರನ್ನು ತೀರ್ಥಯಾತ್ರೆಗೆ ಹೊರಡಿಸುವುದು, ಮನೆಯವರ ವಿರುದ್ಧ ಸೊಸೆಯನ್ನು ವ್ರತ ನೇಮಗಳಿಗೆ ಕೂರಿಸುವುದು, ಹರಕೆ ಹೊತ್ತು ಗುಡಿಗೋಪುರ ಅಲೆಸುವುದೇ ಆಗಿದೆ.

ಈ ಕಾರಣದಿಂದಲೇ ದೇಶವಿಡೀ ಮಠ, ಮಂದಿರ, ಆಶ್ರಮಗಳು ಬಾಬಾಗಳ ನಿಧಿ ಸಂಗ್ರಹಣಾ ಕೇಂದ್ರಗಳಾಗುತ್ತಿವೆ. ಇದರಲ್ಲಿ ಸೋಶಿಯಲ್ ಮೀಡಿಯಾಗಳ ಪಾತ್ರ ಹಿರಿದು. ಇದರಲ್ಲಿ ಕಂದಾಚಾರಿಗಳದೇ ಮೇಲುಗೈ. ಪ್ರತಿ ಪೋಸ್ಟ್ ನಲ್ಲೂ ತಂತಮ್ಮ ಧರ್ಮಗಳ ಅಬ್ಬರದ ಪ್ರಚಾರ ನಡೆಯುತ್ತಿರುತ್ತದೆ. ಫೇಕ್‌ ನ್ಯೂಸ್‌, ಹೇಟ್‌ ಸ್ಪೀಚ್‌ ಗಳಿಗೆ ಮಾರುಹೋಗುವ ಭಕ್ತರು ಇವುಗಳಿಗೆ ಶರಣಾಗುತ್ತಾರೆ.

ಆಲ್ಟ್ ನ್ಯೂಸ್‌ ನಡೆಸು ಮೊಹಮ್ಮದ್‌ ಜುಬೇರ್‌ ವಿರುದ್ಧ ಪೋಕ್ಸೋ ಆ್ಯಕ್ಟ್ ಪ್ರಕಾರ ದೂರು ಸಲ್ಲಿಸಿದಾಗ, ದೆಹಲಿಯ ಹೈಕೋರ್ಟ್ ಹೀಗೆ ದೂರು ನೀಡಿದವರ ವಿರುದ್ಧವೇ ಮೊಕದ್ದಮೆ ಹೂಡಬೇಕೆಂದು ಗುಡುಗಿದೆ! ಈತನ ವಿರುದ್ಧ ದೂರು ಸಲ್ಲಿಸಿದವರು ಟ್ವಿಟರ್‌ ನಲ್ಲಿ ಧರ್ಮದ ಕುರಿತಾಗಿ ತೀಕ್ಷ್ಣ ಕಮೆಂಟ್‌ ಮಾಡಿದ್ದರು. ಅದಕ್ಕೆ ಈತ, ಹೀಗೆ ಬೈಗುಳದ ಮಳೆ ಸುರಿಸುವ ಮೊದಲು ಕನಿಷ್ಠ ನಿಮ್ಮ  DPಗಳಲ್ಲಿ ಮೊಮ್ಮಗಳ ಫೋಟೋನಾದರೂ ತೆಗೆಸಿಬಿಡಿ ಎಂದಿದ್ದ. ಈ ಕುರಿತಾಗಿ ಚೈಲ್ಡ್ ಅಬ್ಯೂಸ್‌ ನ ಪ್ರಕರಣ ದಾಖಲಾಯಿತು. ಹೀಗಾಗಿ ಪೊಲೀಸರು ಕೂಡಲೇ ಆತನನ್ನು ಬಂಧಿಸಿದರು. ಸುಪ್ರೀಂ ಕೋರ್ಟ್‌ ಏನೋ ಆತನನ್ನು ಬಿಡುಗಡೆ ಮಾಡಿತ್ತು. ಪೊಲೀಸರು ಈಗ ಇದೆಲ್ಲ ಮಾಮೂಲಿ ಎಂದು ತಿಪ್ಪೆ ಸಾರಿಸುತ್ತಾರೆ. ಅಪರಾಧವೇ ನಡೆದಿಲ್ಲ ಎಂದ ಮೇಲೆ ಈ ಪೊಲೀಸರು ಆತನನ್ನು ಬಂಧಿಸಿದ್ದೇಕೆ?

ಈ ಕುರಿತಾಗಿ ಹೈಕೋರ್ಟ್‌ ಪೊಲೀಸರಿಗೇನೂ ಶಿಕ್ಷೆ ವಿಧಿಸಲಿಲ್ಲ, ಆದರೆ ದೂರು ನೀಡಿದವರ ವಿರುದ್ಧ ಮೊಕದ್ದಮೆ ನಡೆಸುವ ಆದೇಶ ನೀಡಿತು. ಸೋಶಿಯಲ್ ಮೀಡಿಯಾಗಳಲ್ಲಿ ಫೇಕ್‌ ನ್ಯೂಸ್‌ ಹರಡುವವರಿಗೆ ನಿಜಕ್ಕೂ ಇದೊಂದು ಎಚ್ಚರಿಕೆಯ ಗಂಟೆ. ಇದನ್ನು ಪಾರ್ವರ್ಡ್ ಮಾಡುವವರನ್ನೂ ಅಪರಾಧಿಗಳೆಂದೇ ಪರಿಗಣಿಸಬೇಕು. ಪುಣ್ಯ ಸಂಪಾದಿಸುವ ಅಂಗಡಿ ನಡೆಸುವ ಧರ್ಮನಿಷ್ಠರು ಇಡೀ ಸಮಾಜವನ್ನು ತುಂಡು ತುಂಡಾಗಿಸಿದ್ದಾರೆ. ಹೆಂಗಸರನ್ನು ಬೇಕೆಂದೇ ಬೇರೆ ಸಮುದಾಯದವರೆಂದು ಗುರುತಿಸಲಾಗುತ್ತದೆ, ಕೇವಲ ಧರ್ಮ ಮಾತ್ರವಲ್ಲ, ಜಾತಿಗಳನ್ನೂ ಛಿದ್ರಗೊಳಿಸಲಾಗಿದೆ.

ಈ ಡಿಜಿಟಲ್ ಪ್ಲಾಟ್‌ ಫಾರ್ಮ್ ಗಳಲ್ಲಿ ದಲಿತರು ಮತ್ತಿತರ ಕೆಳ ಜಾತಿಗಳವರನ್ನು ಬೇಕೆಂದೇ ಬೇರೆಯಾಗಿಸಿ, ಸವರ್ಣೀಯರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಇಲ್ಲಿ ತಮಗೆ ತೋಚಿದಂತೆ ಅವರವರು ಹೇಳಿಕೊಳ್ಳುತ್ತಾರೆ. ಫೇಕ್‌ ನ್ಯೂಸ್‌ ಮೂಲಕ ಪ್ರತಿ ಜಾತಿಯವರು ತಮ್ಮದೇ ಹಿರಿಯದೆಂದು ಕೊಚ್ಚಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರಿಗೂ ತಮ್ಮದೇ ಧರ್ಮ ಗುರುಗಳು, ಅ

ವರು ಹೇಳಿದ್ದೇ ವೇದವಾಕ್ಯ. ಈ ಪ್ಲಾಟ್‌ ಫಾರ್ಮುಗಳಲ್ಲಿ ಅದನ್ನು ಪ್ರಚಾರ ಮಾಡುವುದೊಂದೇ ಕೆಲಸ. ಹೀಗಾಗಿ ಇಂದಿನ ಕಾಲದಲ್ಲಿ ಮೊಬೈಲ್‌, ಫೋನ್‌ ಆಗಿ ಉಳಿಯದೆ ಮೆಶಿನ್‌ ಗನ್‌ ಆಗಿಹೋಗಿದೆ! ಇದು ನಿಮ್ಮ ಬುದ್ಧಿಯನ್ನು ವಿಕಲ್ಪಗೊಳಿಸಬಲ್ಲದು, ಇದರಿಂದ ಇತರರನ್ನು ಹುಚ್ಚೆಬ್ಬಿಸಬೇಡಿ!

ಆಟೋಟಗಳಲ್ಲೂ ಈಗ ಜಾತಿ ವಾದ

ಎಷ್ಟೋ ಸಾವಿರಾರು ಪ್ರಕರಣಗಳಲ್ಲಿ ಹುಡುಗಿಯರ ದೂರಿನಂತೆ, ಯಾವುದೇ ಆಧಾರಗಳಿಲ್ಲದೆ ರೇಪ್‌, ಚುಡಾಯಿಸುವಿಕೆ, ಬ್ಯಾಡ್ ಟಚ್‌ ಕುರಿತಾಗಿ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಾರೆ. ಅರು ತಿಂಗಳು, ವರ್ಷಗಳೇ ಜೇಲಿನಲ್ಲಿ ಕೊಳೆಯುವಂತಾಗಿದೆ. ಇದರ ಮಧ್ಯೆ ಆಶ್ಚರ್ಯದ ವಿಷಯವೆಂದರೆ ದೇಶಕ್ಕಾಗಿ, ವಿಶ್ವವಿಡೀ ಹೋರಾಡಿ ಬಗೆ ಬಗೆಯ ಪದಕಗಳನ್ನು ಗೆದ್ದು ತಂದ ಮಹಿಳಾ ಕುಸ್ತಿಪಟುಗಳ ವಿರುದ್ಧದ ಖುಲ್ಲಂಖುಲ್ಲ ಆರೋಪಗಳಿದ್ದೂ, ಭಾಜಪಾದ ಬೃಜ್‌ ಭೂಷಣ್‌ ಸಿಂಗ್‌, `ರೆಸ್ಲಿಂಗ್‌ ಫೆಡರೇಶನ್‌ ಆಫ್‌ಇಂಡಿಯಾ’ದ ಪ್ರಮುಖ ಅಧಿಕಾರಿಯಾಗಿ ಇನ್ನೂ ಉಳಿದಿದ್ದಾರೆ ಎನ್ನಲು ಕಾರಣ, ಅವರು ಭಾಜಪಾ ನೇತಾರ! ಪೊಲೀಸರು ಇವರ ತಂಟೆಗೆ ಬಾರರು.

ಈ ನಿಟ್ಟಿನಲ್ಲಿ ಭಾಜಪಾ ಪ್ರಶಂಸನೀಯ, ಏಕೆಂದರೆ ಅದು ತನ್ನ ಕರ್ಮಟ ಸಮರ್ಥಕರನ್ನು ಎಷ್ಟು ರಕ್ಷಿಸುತ್ತದೆಂದರೆ, 2 ತಿಂಗಳಿನಿಂದ ಈ ಮಹಿಳಾ ಕುಸ್ತಿಪಟುಗಳು ದೆಹಲಿಯ ಜಂತರ್‌ ಮಂತರ್‌ ಸ್ಮಾರಕದ ಮುಂದೆ ಧರಣಿ ಕುಳಿತಿದ್ದರೂ, ಆ ಮಹಾನ್‌ನಾಯಕನನ್ನು ರಕ್ಷಿಸಿಕೊಳ್ಳುವಲ್ಲಿ ಹೆಣಗುತ್ತಿದೆ! ಈ ರೆಸ್ಲರ್ಸ್‌ ಹಾಗೂ ಸಮರ್ಥಕರು, ಮೇ 28 ರಂದು ಸಂಸತ್ತನ್ನು ಪ್ರವೇಶಿಸ ಬಯಸಿದಾಗ, ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಗದಂತೆ, ಪೊಲೀಸರು ಅವರನ್ನು ಮನ ಬಂದಂತೆ ಥಳಿಸಿದರು!

mobile-2

ಅಷ್ಟು ಮಾತ್ರವಲ್ಲ, ಇವರನ್ನು ಜೇಲಿಗೆ ಎಳೆದೊಯ್ಯುವಾಗ, ಬಸ್ಸಿಗೆ ನೂಕುವ ಹೃದಯವಿದ್ರಾಕ ಫೋಟೋಗಳನ್ನು, ಪ್ರಕಟಣೆಯ ಸಮಯದಲ್ಲಿ, ಫೋಟೋಶಾಪ್‌ ನೆರವಿನಿಂದ ನಸುನಗುವ ಮುಖಗಳಾಗಿ ತಿದ್ದಲಾಯಿತು. ಪಾರ್ಟಿಯ ವಿಶಾಲ ಟ್ರೋಲ್ ಸಿಸ್ಟಂನಲ್ಲಿ ಹಾಕಿ, ಈ ಮಹಿಳಾ ಕುಸ್ತಿಪಟುಗಳು ಪೊಲೀಸ್‌ ಬಸ್‌ ನಲ್ಲಿ ಪಿಕ್ನಿಕ್‌ ಹೊರಡುತ್ತಿದ್ದಾರೆ, ಎಂಬಂತೆ ಬಿಂಬಿಸಲಾಗಿದೆ.

ಅಸಲಿಗೆ, ಇವತ್ತಿಗೂ ಸಹ ನಮ್ಮ ದೇಶದಲ್ಲಿ ಕುಸ್ತಿಗೆ ಕ್ರೀಡೆಗಳಲ್ಲಿ ವಿಶೇಷ ಸ್ಥಾನಮಾನವಿಲ್ಲ. ಏಕೆಂದರೆ ಈ ಹುಡುಗಿಯರು ಕೆಳ ವರ್ಗಕ್ಕೆ ಸೇರಿದವರು. ಈ ವಿವರಗಳನ್ನು ಆಮೀರ್‌ `ದಬಂಗ್‌’ ಚಿತ್ರದಲ್ಲಿ ಸ್ಪಷ್ಟ ತೋರಿಸಿದ್ದಾನೆ. ಅದೀಗ ಇಲ್ಲಿ ನಿಜವಾಗಿ ನಡೆಯುತ್ತಿದೆ. ಈ ಹುಡುಗಿಯರು ಬಹುಶಃ ಅತ್ಯಾಚಾರದಂಥ ಕೀಳುವ ಕರ್ಮಕ್ಕೆ ಬಲಿಯಾದರೂ ಕೇಳುವರಿಲ್ಲ!

ನಮ್ಮ ಸರ್ಕಾರ, ರೆಸ್ಲಿಂಗ್‌ ಮತ್ತಿತರ ಫೆಡರೇಶನ್‌ ಗಳ ಕುರಿತಾಗಿ ದಿವ್ಯ ನಿರ್ಲಕ್ಷ್ಯ ತೋರಲು ಮುಖ್ಯ ಕಾರಣ, ಜಾತಿಗಳ ಹೆಸರಲ್ಲಿ ಎಲ್ಲರೂ ಹಂಚಿಹೋಗಿದ್ದಾರೆ. ಹೀಗಾಗಿ ಈ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಕಷ್ಟಕ್ಕೆ ಮರುಗುವವರೇ ಇಲ್ಲ.

ನಮ್ಮ ದೇಶದಲ್ಲಿ ಮೊದಲಿನಿಂದಲೂ ಕುಸ್ತಿ ಎಂದರೆ ಬಡವರ ಆಟ ಎಂದು ನಿರ್ಲಕ್ಷಿಸಲಾಗಿದೆ. ಹಾಕಿ, ಫುಟ್‌ ಬಾಲ್ ‌ಗೂ ಇದೇ ಗತಿ. ಆಂಗ್ಲ ನವಾಬರ ಮೇಲ್ದರ್ಜೆಯ ಆಟ ಕ್ರಿಕೆಟ್‌ ಗೆ ಮಾತ್ರ ದೇಶವಿಡೀ ಮಾನ್ಯತೆ! ಪುರುಷರ ಕ್ರಿಕೆಟ್‌ ಗೆ ಇರುವ ಕೋಡು ಮಹಿಳಾ ಕ್ರಿಕೆಟ್‌ ಗೆ ಇಲ್ಲ. ಹೇಳಿ ಕೇಳಿ ಮೊದಲೇ ಕುಸ್ತಿ ಪಂದ್ಯ, ಅದರಲ್ಲೂ ಇಂಥ ಕೆಳವರ್ಗದ ಹುಡುಗಿಯರು, ಮತ್ತೆ ಇವರನ್ನು ಕೇಳುವವರಾರು? ಮೇಲು ಜಾತಿಯ ಹೆಂಗಸರನ್ನೂ ಇಲ್ಲಿ ಕೀಳಾಗಿಯೇ ಕಾಣುತ್ತಾರೆ. ಅವರೂ ಸಹ ಸದಾ ಸೇವೆ ಮಾಡುತ್ತಿರಲಿ ಎಂಬ ಟ್ರೇನಿಂಗ್‌ ನೀಡಲಾಗುತ್ತದೆ. ಆದರ್ಶ ಹೆಣ್ಣು ಎಂದರೆ ಅವಳು ಸದಾ ತಂದೆ, ಗಂಡ, ಒಡಹುಟ್ಟಿದವರು, ಅತ್ತೆ ಮನೆಯವರಿಗೆ ಸೇವೆ ಮಾಡಿಕೊಂಡಿರುವಳು. ಅವಳು ಯಾವುದೇ ವಿಷಯದ ವಿರುದ್ಧವಾಗಿ ಎಷ್ಟೇ ಜೋರು ದನಿ ತೆಗೆದರೂ, ಅದನ್ನು ಅಲ್ಲೇ ಹತ್ತಿಕ್ಕಲಾಗುತ್ತದೆ. ಜಂತರ್‌ ಮಂತರ್‌ ಬಳಿ ಕುಳಿತ ಹುಡುಗಿಯರು ತಾವು ಸೇರಿದ ಧರ್ಮ ಯಾವಾಗಲೋ ತುಂಡರಿಸಿ ಹೋದದ್ದು ಎಂದು ಮರೆತಂತಿದೆ. ಹೀಗಾಗಿ ಅವರು ಸಮಾನತೆಯ ಹಕ್ಕು ಕೇಳುವಂತೆಯೇ ಇಲ್ಲ.

ಸರ್ಕಾರ ಮಸ್ತಿಯಲ್ಲಿ, ಜನತೆ ಸಂಕಷ್ಟದಲ್ಲಿ!

ಕೇಂದ್ರ ಸರ್ಕಾರ ಯಾವ ರೀತಿ ನಮ್ಮ ಜನತೆಯನ್ನು ಹಿಂಸಿಸುವುದರಲ್ಲಿ ಆನಂದ ಕಾಣುತ್ತಿದೆ ಗೊತ್ತೇ? 2016ರಲ್ಲಿ ನೋಟ್‌ ಬ್ಯಾನ್ ಮಾಡಿ ಇದರ ಸ್ಯಾಂಪಲ್ ನೀಡಿತು. ನಂತರ ಲಾಕ್‌ ಡೌನ್‌ ಘೋಷಣೆ, ಇದೀಗ 2 ಸಾವಿರದ ನೋಟ್‌ ರದ್ದುಪಡಿಸಿ! ಈ ಸರ್ಕಾರಕ್ಕೆ ನಮ್ಮ ಜನತೆಯ ತೊಂದರೆಗಳನ್ನು ಕಟ್ಟಿಕೊಂಡು ಏನೂ ಆಗಬೇಕಿಲ್ಲ. ಅದು ತನ್ನ ಹಕ್ಕನ್ನು ಜನರ ಮೇಲೆ ಹೇರುತ್ತಲೇ ಇರುತ್ತದೆ. ದೂರ್ವಾಸ ಋಷಿಯ ಹಾಗೆ, ಸದಾ ಕೋಪದಲ್ಲಿ ಶಾಪ ಕೊಡುವುದೊಂದು ಗೊತ್ತು. ನಮ್ಮ ದೇವಿ ದೇವರುಗಳು, ಋಷಿಮುನಿಗಳು, ಪೌರಾಣಿಕ ಕಥೆಗಳ ಪ್ರಕಾರ ಜನ ಕಲ್ಯಾಣ ಮಾಡುವುದು ಕಡಿಮೆ, ದಾನದಕ್ಷಿಣೆ ಗಿಟ್ಟಿಸಿದ್ದೇ ಹೆಚ್ಚು. ಶಾಪ ಕೊಡುವುದಂತೂ ಮಾಮೂಲು. ಈ ಘನ ಸರ್ಕಾರ ಅದನ್ನೇ ಫಾಲೋ ಮಾಡುತ್ತಿದೆ.

2 ಸಾವಿರದ ನೋಟ್‌ ಬ್ಯಾನ್‌ ಆದೇಶ ನಿಜಕ್ಕೂ ನಿರರ್ಥಕ. ಈ ನೋಟ್‌ ಚಲಾವಣೆ ಇದ್ದದ್ದೂ ಕಡಿಮೆಯೇ. ಏಕೆಂದರೆ ರಿಸರ್ವ್ ಬ್ಯಾಂಕ್‌ ವರ್ಷಗಳ ಹಿಂದಿನಿಂದಲೇ ಇದರ ಪ್ರಿಂಟಿಂಗ್‌ ನಿಲ್ಲಿಸಿತ್ತು. ಹೀಗಾಗಿ ಜನ ವಿಧಿಯಿಲ್ಲದೆ 100-100ರ ನೋಟ್‌ ಕೂಡಿ ಹಾಕಿಕೊಳ್ಳುವಂತಾಗಿದೆ. ಯಾರ ಬಳಿ ಅಲ್ಪಸ್ವಲ್ಪ ಇತ್ತೋ ಅದನ್ನೂ ವಾಪಸ್ಸು ಕಿತ್ತುಕೊಂಡಿದೆ. ಹೀಗಾಗಿ ಉಳಿದ ತಿಜೋರಿ, ಖಜಾನೆ, ರೇಷ್ಮೆ ಸೀರೆಗಳ ಇಡುಗಂಟುಗಳಲ್ಲಿ ಹಾಗೆಯೇ ಉಳಿದು ಹೋಗುತ್ತಎ. 2-3 ವರ್ಷ ಕಳೆದ ಬಳಿಕ ನಿರರ್ಥಕ ಎಂದು ಸುಟ್ಟುಹೋದರೂ ಆಶ್ಚರ್ಯವಿಲ್ಲ. ಇದು ಸರ್ಕಾರದ್ದೇ ಲೂಟಿ.

ಇದಲ್ಲವೇ ಪೌರಾಣಿಕ ಅರಾಜಕತೆ? ಇದರಲ್ಲಿ ದೇವರು ಒಬ್ಬನನ್ನು ಮಾಲೀಕನನ್ನಾಗಿಸಿದರೆ, ಮತ್ತೊಬ್ಬ ದಾಸ ಆಗಿರುತ್ತಾನೆ. ಗೌತಮ್ ಅದಾನಿಗೆ ರಾತ್ರೋರಾತ್ರಿ ಕಾನೂನು ನಿಯಮ ಸಡಿಲಿಸಿ, ಆತನಿಗೆ ಕೋಟ್ಯಂತರ ರೂ.ಗಳ ಲಾಭ ಕಲ್ಪಿಸಿ, ಸಾಮಾನ್ಯ ಜನತೆಯ ಹಣ ಕೀಳಾಗುತ್ತದೆ. 2016ರ ನಂತರ 2 ಸಾವಿರದ ನೋಟ್‌ ಜನತೆಯ ಹಕ್ಕಾಗಿತ್ತು. ಜನತೆ ತನ್ನಿಷ್ಟದಂತೆ ಇದನ್ನು ಇರಿಸಿಕೊಳ್ಳಬಹುದಲ್ಲವೇ? ಇದು ಅವರವರ ಅನುಕೂಲಕ್ಕೆ ತಕ್ಕಂತೆ ಇರಲಿ, ಸರ್ಕಾರದ್ದೇನಲ್ಲಿ ದೌಲತ್ತು? ಸರ್ಕಾರ ಅಂದ್ರೆ ಇಷ್ಟ ಬಂದಂತೆ, ಒಮ್ಮೆ ಚರ್ಮದ ನಾಣ್ಯವನ್ನು ಮಾನ್ಯಗೊಳಿಸಿ ಮತ್ತೊಮ್ಮೆ ಅದನ್ನು ಹೂತು ಹಾಕುವುದಲ್ಲ. ಇಲ್ಲಿ ಈ ಸರ್ಕಾರ ಎಂಬ ರಾಜ ಒಮ್ಮೆ ತಾಮ್ರ, ಒಮ್ಮೆ ಚಿನ್ನ, ಒಮ್ಮೆ ಗಿಲೀಟು, ಮತ್ತೊಮ್ಮೆ ಕಾಗದವನ್ನೇ ಹಣವಾಗಿಸಿ ಅದನ್ನು ಶಾಶ್ವತ ಇಲ್ಲವಾಗಿಸುವುದೇ ಕೆಲಸವಾಗಿದೆ.

ಈ ಸರ್ಕಾರದ ನೋಟುಗಳ ಗುಡ್ಡೆ ನೋಡಿ, ಒಂದೇ ಬಣ್ಣ, ಒಂದೇ ಗಾತ್ರ…. ಇಲ್ಲವೇ ಇಲ್ಲ! ಸರ್ಕಾರ ಬೇಕೆಂದೇ ಜನತೆ 2 ಸಾವಿರದ ನೋಟ್‌ ಬಳಸುತ್ತಿಲ್ಲ ಎಂಬ ನೆಪವೊಡ್ಡಿ ಅದನ್ನು ಹಿಂಪಡೆಯುವ ನಾಟಕವಾಡುತ್ತಿದೆ. ಸರ್ಕಾರ ಹೇಳಿದ್ದರಿಂದ ತಾನೇ ಜನತೆ 2 ಸಾವಿರದ ನೋಟ್‌ ಬಳಸಿದ್ದು ಈಗ ಅದೇ ಸರ್ಕಾರ ಈ ನೋಟ್‌ ನ್ನು ಸುಡುತ್ತಿದೆ.

ಸರ್ಕಾರಕ್ಕೆ ಇಂಥ ಅನಗತ್ಯದ್ದು ಬಿಟ್ಟರೆ ಮಾಡಲೇನೂ ಒಳ್ಳೆ ಕೆಲಸವಿಲ್ಲವೇ? ರಾಗಿ ಸಾಸುವೆ ಬೆರೆಸಿ, ತಾನೇ ಅದನ್ನು ಬೇರ್ಪಡಿಸಿ, ಮತ್ತೆ ಬೆರೆಸುವ ಕೆಲಸವಲ್ಲವೇ ಇದು? ಇಂಥ ಬೇಕಾರ್‌ ಸರ್ಕಾರ ಇದ್ದರೆಷ್ಟು ಹೋದರೆಷ್ಟು? ಜನತೆಗೆ ತಮ್ಮ ಮನೆ ಕ್ಲೀನ್‌ಮಾಡಿಕೊಳ್ಳಲಿಕ್ಕೂ ಪುರಸತ್ತಿಲ್ಲ. ಅಂಥವರನ್ನು ಎಕ್ಸ್ ಚೇಂಜ್‌ ಗಾಗಿ ಬ್ಯಾಂಕಿನೆದುರು ಮತ್ತೆ ಕ್ಯೂ ನಿಲ್ಲಿಸಲಾಗಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ