ವಾಟ್ಸ್ ಆ್ಯಪ್ ಟ್ವಿಟರ್ ಹಿಂದಿನ ಹಾಗೇ ಮುಂದೆ ಇರುವುದಿಲ್ಲ. ಇವುಗಳಲ್ಲಿ ಖುಲ್ಲಂಖುಲ್ಲ ಹೇಟ್ ಸ್ಪೀಚ್ ಫೇಕ್ ನ್ಯೂಸ್ ನೀಡುವುದೇ ಆಗಿದೆ. ಕಂದಾಚಾರಿಗಳ ಒಂದು ದೊಡ್ಡ ದಂಡು ಈ ಸಮೂಹ ಮಾಧ್ಯಮವನ್ನು ತಮ್ಮಿಷ್ಟದಂತೆ ಜಾತಿವಾದ, ಧರ್ಮವಾದ, ಪುರುಷವಾದಗಳನ್ನು ಹರಡಲು ಬಳಸಿಕೊಳ್ಳುತ್ತಾ ವಿಜೃಂಭಿಸುತ್ತಿದೆ.
ಈ ಕುರಿತಾಗಿ ಸುಪ್ರೀಂ ಕೋರ್ಟ್ ಒಂದು ಪ್ರಕರಣದಲ್ಲಿ ಸ್ಪಷ್ಟವಾಗಿ ಹೇಳಿದ್ದೆಂದರೆ, ಹೇಟ್ ಸ್ಪೀಚ್ ನೀಡುವವರ ವಿರುದ್ಧ ಪೊಲೀಸರು ನೇರವಾಗಿ ಆ್ಯಕ್ಷನ್ ತೆಗೆದುಕೊಳ್ಳಲಿ. ವಾಟ್ಸ್ ಆ್ಯಪ್, ಟ್ವಿಟರ್, ಇನ್ ಸ್ಟಾಗ್ರಾಮ್, FB, U-ಟ್ಯೂಬ್ ಇತ್ಯಾದಿಗಳು ಇಂಥದ್ದೇ ಹೇಟ್ ಸ್ಪೀಚ್ ಗಳಿಂದ ತುಂಬಿ ತುಳುಕುತ್ತಿವೆ.
4 ಜನ ಒಂದೆಡೆ ಜಗಳವಾಡುತ್ತಿದ್ದಾರೆ ಎಂದಾಗ, 40 ಜನ ಈ ತಮಾಷೆ ನೋಡಲು ಗುಂಪುಗೂಡುವುದು ಮಾಮೂಲಿ ವಿಷಯ. ಇಂದಿನ ಹೆಂಗಸರ ಎಲ್ಲಕ್ಕೂ ದೊಡ್ಡ ಟೈಂಪಾಸ್ ಎಂದರೆ ಯಾವುದೋ ವಿವಾದ, ಕಾಡುಹರಟೆ, ಇತರರ ಮನೆಯ ಜಗಳದ ಕುರಿತು ಹಂಚಿಕೊಳ್ಳುವುದಾಗಿದೆ. ಕಿಟಿ ಪಾರ್ಟಿಗಳಲ್ಲಂತೂ ಯಾರ ಮನೆಯಲ್ಲಿ ಏನಾಯ್ತು, ಯಾವನ ಹಿಂದೆ ಯಾವಳು ಓಡಿಹೋದಳು ಎಂಬುದಿರುತ್ತವೆಯೇ ಹೊರತು ಸಮಾಜಕ್ಕೆ ಒಳಿತಾಗುವ ವಿಚಾರಗಳಲ್ಲ.
ಸೋಶಿಯಲ್ ಮೀಡಿಯಾಗಳ ಮೂಲಕ ಹೇಟ್ ಸ್ಪೀಚ್ ಫೇಕ್ ನ್ಯೂಸ್ ಗಳ ನಿಂಬೆ ಹುಳಿಯಂಥ ಸಮಾಚಾರಗಳು ಧಾರಾಳ ನಲಿದಾಡುತ್ತವೆ. ಇದರ ಹಿಂದಿನ ಮೂಲ ಉದ್ದೇಶ ಪೂಜೆ ಭಜನೆಗಳಿಗಾಗಿ ಚಂದಾ ಸಂಗ್ರಹ, ಮಂದಿರಗಳಿಗಾಗಿ ಗುಂಪು ಗೂಡಿಸುವಿಕೆ, ಮನೆ ಮನೆಗಳಲ್ಲಿ ಹೋಮಹವನ, ದಾನದಕ್ಷಿಣೆ, ಜನರನ್ನು ತೀರ್ಥಯಾತ್ರೆಗೆ ಹೊರಡಿಸುವುದು, ಮನೆಯವರ ವಿರುದ್ಧ ಸೊಸೆಯನ್ನು ವ್ರತ ನೇಮಗಳಿಗೆ ಕೂರಿಸುವುದು, ಹರಕೆ ಹೊತ್ತು ಗುಡಿಗೋಪುರ ಅಲೆಸುವುದೇ ಆಗಿದೆ.
ಈ ಕಾರಣದಿಂದಲೇ ದೇಶವಿಡೀ ಮಠ, ಮಂದಿರ, ಆಶ್ರಮಗಳು ಬಾಬಾಗಳ ನಿಧಿ ಸಂಗ್ರಹಣಾ ಕೇಂದ್ರಗಳಾಗುತ್ತಿವೆ. ಇದರಲ್ಲಿ ಸೋಶಿಯಲ್ ಮೀಡಿಯಾಗಳ ಪಾತ್ರ ಹಿರಿದು. ಇದರಲ್ಲಿ ಕಂದಾಚಾರಿಗಳದೇ ಮೇಲುಗೈ. ಪ್ರತಿ ಪೋಸ್ಟ್ ನಲ್ಲೂ ತಂತಮ್ಮ ಧರ್ಮಗಳ ಅಬ್ಬರದ ಪ್ರಚಾರ ನಡೆಯುತ್ತಿರುತ್ತದೆ. ಫೇಕ್ ನ್ಯೂಸ್, ಹೇಟ್ ಸ್ಪೀಚ್ ಗಳಿಗೆ ಮಾರುಹೋಗುವ ಭಕ್ತರು ಇವುಗಳಿಗೆ ಶರಣಾಗುತ್ತಾರೆ.
ಆಲ್ಟ್ ನ್ಯೂಸ್ ನಡೆಸು ಮೊಹಮ್ಮದ್ ಜುಬೇರ್ ವಿರುದ್ಧ ಪೋಕ್ಸೋ ಆ್ಯಕ್ಟ್ ಪ್ರಕಾರ ದೂರು ಸಲ್ಲಿಸಿದಾಗ, ದೆಹಲಿಯ ಹೈಕೋರ್ಟ್ ಹೀಗೆ ದೂರು ನೀಡಿದವರ ವಿರುದ್ಧವೇ ಮೊಕದ್ದಮೆ ಹೂಡಬೇಕೆಂದು ಗುಡುಗಿದೆ! ಈತನ ವಿರುದ್ಧ ದೂರು ಸಲ್ಲಿಸಿದವರು ಟ್ವಿಟರ್ ನಲ್ಲಿ ಧರ್ಮದ ಕುರಿತಾಗಿ ತೀಕ್ಷ್ಣ ಕಮೆಂಟ್ ಮಾಡಿದ್ದರು. ಅದಕ್ಕೆ ಈತ, ಹೀಗೆ ಬೈಗುಳದ ಮಳೆ ಸುರಿಸುವ ಮೊದಲು ಕನಿಷ್ಠ ನಿಮ್ಮ DPಗಳಲ್ಲಿ ಮೊಮ್ಮಗಳ ಫೋಟೋನಾದರೂ ತೆಗೆಸಿಬಿಡಿ ಎಂದಿದ್ದ. ಈ ಕುರಿತಾಗಿ ಚೈಲ್ಡ್ ಅಬ್ಯೂಸ್ ನ ಪ್ರಕರಣ ದಾಖಲಾಯಿತು. ಹೀಗಾಗಿ ಪೊಲೀಸರು ಕೂಡಲೇ ಆತನನ್ನು ಬಂಧಿಸಿದರು. ಸುಪ್ರೀಂ ಕೋರ್ಟ್ ಏನೋ ಆತನನ್ನು ಬಿಡುಗಡೆ ಮಾಡಿತ್ತು. ಪೊಲೀಸರು ಈಗ ಇದೆಲ್ಲ ಮಾಮೂಲಿ ಎಂದು ತಿಪ್ಪೆ ಸಾರಿಸುತ್ತಾರೆ. ಅಪರಾಧವೇ ನಡೆದಿಲ್ಲ ಎಂದ ಮೇಲೆ ಈ ಪೊಲೀಸರು ಆತನನ್ನು ಬಂಧಿಸಿದ್ದೇಕೆ?
ಈ ಕುರಿತಾಗಿ ಹೈಕೋರ್ಟ್ ಪೊಲೀಸರಿಗೇನೂ ಶಿಕ್ಷೆ ವಿಧಿಸಲಿಲ್ಲ, ಆದರೆ ದೂರು ನೀಡಿದವರ ವಿರುದ್ಧ ಮೊಕದ್ದಮೆ ನಡೆಸುವ ಆದೇಶ ನೀಡಿತು. ಸೋಶಿಯಲ್ ಮೀಡಿಯಾಗಳಲ್ಲಿ ಫೇಕ್ ನ್ಯೂಸ್ ಹರಡುವವರಿಗೆ ನಿಜಕ್ಕೂ ಇದೊಂದು ಎಚ್ಚರಿಕೆಯ ಗಂಟೆ. ಇದನ್ನು ಪಾರ್ವರ್ಡ್ ಮಾಡುವವರನ್ನೂ ಅಪರಾಧಿಗಳೆಂದೇ ಪರಿಗಣಿಸಬೇಕು. ಪುಣ್ಯ ಸಂಪಾದಿಸುವ ಅಂಗಡಿ ನಡೆಸುವ ಧರ್ಮನಿಷ್ಠರು ಇಡೀ ಸಮಾಜವನ್ನು ತುಂಡು ತುಂಡಾಗಿಸಿದ್ದಾರೆ. ಹೆಂಗಸರನ್ನು ಬೇಕೆಂದೇ ಬೇರೆ ಸಮುದಾಯದವರೆಂದು ಗುರುತಿಸಲಾಗುತ್ತದೆ, ಕೇವಲ ಧರ್ಮ ಮಾತ್ರವಲ್ಲ, ಜಾತಿಗಳನ್ನೂ ಛಿದ್ರಗೊಳಿಸಲಾಗಿದೆ.