ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡದ ಬಾದ್ ಷಾ ಕಿಚ್ಚ ಸುದೀಪ್ ಅವರು ಇತ್ತೀಚೆಗೆ 52ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ಪ್ರಯುಕ್ತ ಇದೀಗ ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್ ಮಹತ್ತರ ಕಾರ್ಯ ಕೈಗೊಂಡಿದ್ದಾರೆ. ಕಿಚ್ಚ ಸುದೀಪ್ ಕೇರ್ ಫೌಂಡೇಶನ್‌ ಮೂಲಕ ಅಂಗ ಮತ್ತು ಅಂಗಾಂಶ ದಾನಕ್ಕೆ ಅವರು ನೋಂದಣಿ ಮಾಡಿಸಿದ್ದು, ಈ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಅವರು ಮಾಹಿತಿ ಹಂಚಿಕೊಂಡಿರುವ ಅವರು, ಅಭಿಮಾನಿಗಳು ಕೂಡ ಈ ಕಾರ್ಯದಲ್ಲಿ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ. ‘ನಿಮ್ಮ ಒಂದು ಸಣ್ಣ ನಿರ್ಧಾರದಿಂದ ಒಂದು ಜೀವ ಉಳಿಯುತ್ತದೆ. ಅದಕ್ಕಿಂತ ದೊಡ್ಡ ಕೆಲಸ ಬೇರೊಂದಿಲ್ಲ’ ಎಂದು ಪ್ರಿಯಾ ಸುದೀಪ್ ಅವರು ಹೇಳಿದ್ದಾರೆ.

priya

ಅಭಿಮಾನಿಗಳಲ್ಲೂ ವಿಶೇಷ ಮನವಿ : ಪ್ರತಿ ವರ್ಷ ಸುದೀಪ್‌ ಅವರ ಹುಟ್ಟುಹಬ್ಬಕ್ಕೆ ಅವರ ಅಭಿಮಾನಿಗಳು, ಸ್ನೇಹಿತರು ಒಳ್ಳೆ ಕಾರ್ಯಗಳನ್ನು ನಡೆಸುತ್ತಾ ಬಂದಿದ್ದಾರೆ. ರಕ್ತದಾನ, ಅನ್ನದಾನ, ಬಡಮಕ್ಕಳಿಗೆ ಸಹಾಯ ಹೀಗೆ ತಮ್ಮದೇ ಆದ ಸಣ್ಣ ಕೊಡುಗೆಯನ್ನು ಸಮಾಜಕ್ಕೆ ನೀಡುತ್ತಾ ಬಂದಿದ್ದಾರೆ. ಹಾಗೆಯೇ, ಈ ವರ್ಷ ನಾನು ಸುದೀಪ್‌ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಂಗ ಮತ್ತು ಅಂಗಾಂಶ ದಾನ ಮಾಡಿದ್ದೇನೆ. ಅದರ ಪ್ರಕ್ರಿಯೆ ಬಹಳ ಸುಲಭ. ನಮ್ಮ ಒಂದು ಸಣ್ಣ ನಿರ್ಧಾರದಿಂದ ಒಂದು ಜೀವ ಉಳಿಯುತ್ತದೆ ಅಂದ್ರೆ ಅದಕ್ಕಿಂತ ದೊಡ್ಡ ಕೆಲಸ ಬೇರೆ ಇಲ್ಲ. ಕಿಚ್ಚ ಸುದೀಪ್‌ ಕೇರ್‌ ಫೌಂಡೇಶನ್‌ ಮೂಲಕ ನಾನು ಅಂಗ ಮತ್ತು ಅಂಗಾಂಶ ದಾನ ಮಾಡಿದ್ದೇನೆ. ನೀವು ದಾನ ಮಾಡಿ ಎಂದು ಮನವಿ ಎಂದು ಜನತೆಗೆ ಸುದೀಪ್‌ ಪತ್ನಿ ಪ್ರಿಯಾ ಅವರು ಕರೆ ಕೊಟ್ಟಿದ್ದಾರೆ.
ಅಂಗಾಂಗ ದಾನ ಮಾಡಬೇಕು ಅಂದ್ರೆ ನಮಗೆ ಜವಾಬ್ದಾರಿಗಳಿರುತ್ತವೆ. ಮೊದಲು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅದಕ್ಕಾಗಿ ನೀವು ಸ್ವಾಸ್ಥರಾಗಿರಿ, ನಿಮ್ಮನ್ನು ನೀವು ಚೆನ್ನಾಗಿ ನೋಡಿಕೊಳ್ಳಿ. ಆಗ ಈ ಮಹತ್ಕಾರ್ಯಕ್ಕೆ ಅರ್ಥ ಬರುತ್ತದೆ. ನಾವು ಯಾವಾಗ ಹೋಗುತ್ತೇವೋ ನಮಗೆ ಗೊತ್ತಿಲ್ಲ. ನಮ್ಮ ಜೀವನ ನಮ್ಮ ಕೈಯಲ್ಲಿಲ್ಲ. ಹಾಗಾಗಿ, ಅಂಗಾಂಗ ದಾನ ಮಾಡಿ ಎಂದು ಜಾಗೃತಿ ಮೂಡಿಸಿದ್ದಾರೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ