- ರಾಘವೇಂದ್ರ ಅಡಿಗ ಎಚ್ಚೆನ್.
ಮನಂ ಮೂವಿ ಮೇಕರ್ಸ್ಬ್ಯಾನರ್ ಅಡಿ ನಿರ್ಮಾಣವಾಗಿರುವ ಪುಷ್ಪರಾಜ್ ನಿರ್ದೇಶನದ 1979 Untold Story ಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿದೆ. ನಿರ್ಮಾಪಕರಾಗಿ ಡಾ. ವಿ.ಎಂ. ಶ್ರೀನಿವಾಸ್ ವೀರಮಾರನಹಳ್ಳಿ ಈ ಚಿತ್ರ ನಿರ್ಮಿಸಿದ್ದರೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಜವಾಬ್ದಾರಿ ಪುಷ್ಪರಾಜ್ ಅವರದಿದೆ. ವಿಶೇಷ ಎಂದರೆ ನಿರ್ಮಾಪಕ ಶ್ರೀನಿವಾಸ್ ಕೋಲಾರದ ಅಂತರ ರಾಷ್ಟ್ರೀಯ ಮಾಸ್ಟರ್ ಅಥ್ಲೇಟಿಕ್ ಕ್ರೀಡಾ ಪಟುವಾಗಿದ್ದಾರೆ.

ಅಜ್ಜು, ಪ್ರಾಣ್ವಿ, ಸುಜಿತ್, ಅಮೃತಾ, ದುರ್ಗ, ಪ್ರೀತಿ, ಮಿತಾಕ್ಷರ, ನಿರಂಜನ್ ಮೊದಲಾದವರು ಈ ಚಿತ್ರದ ಕಲಾವಿದರಾಗಿದ್ದಾರೆ. ಕಲಾವಿದರು ಬಹುತೇಕ ಕೋಲಾರ ಜಿಲ್ಲೆಯವರೇ ಆಗಿದ್ದಾರೆ.
ಪೋಸ್ಟರ್ ಬಿಡುಗಡೆ ಸಮಾರಂಭಕ್ಕೆ ಅತಿಥಿಗಳಾಗಿ ಆ ದಿನಗಳು ಖ್ಯಾತಿಯ ಚೇತನ್ ಆಗಮಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಕೋಲಾರ ಜಿಲ್ಲೆಯ ಸುತ್ತ ಮುತ್ತ ಚಿತ್ರೀಕರಿಸಿರುವ ಪಶ್ವಿಮ ಬಂಗಾಲದ ಗುಡ್ಡಗಾಡು ನಿರಾಶ್ರಿತರನ್ನು ಅಲ್ಲಿನ ಪ್ರಭುತ್ವ ಅರಣ್ಯ ಪ್ರದೇಶದಿಂದ ಒಕ್ಕಲೆಬ್ಬಿಸುವ “ಸುಂದರ್ ಬಾನ್ ಹೋರಾಟದ ” ನೈಜ ಘಟನೆಯನ್ನು ಆಧರಿಸಿದ ಚಲನಚಿತ್ರ ಇದಾಗಿದೆ. ಪ್ರಸ್ತುತ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಪಶ್ಚಿಮ ಬಂಗಾಲದ ಒಂದು ಬುಡಕಟ್ಟು ಸಮುದಾಯ ನಿರಾಶ್ರಿತಗೊಂಡ ಬಳಿಕ ಅಲ್ಲಿನ ಅರಣ್ಯ ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡು ಬದುಕಲು ಮುಂದಾದಾಗ ಅಲ್ಲಿನ ಪ್ರಭುತ್ವ ಅವರನ್ನು ಬಲವಂತವಾಗಿ ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತದೆ.

ಆ ದಟ್ಟ ಅರಣ್ಯದಲ್ಲಿ ಪ್ರತಿರೋಧ ವ್ಯಕ್ತಪಡಿಸಿದ ಅಲ್ಲಿನ ಸಮುದಾಯ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಹಾಗೂ ಗೋಲಿಬಾರ್ ನಡೆಸುವ ಭಯಂಕರ ಯುದ್ಧಭೂಮಿಯ ಚಿತ್ರೀಕರಣವನ್ನು ಯರಗೋಳ್ ಸಮೀಪದ ಅರಣ್ಯಕ್ಕೆ ಹೊಂದಿಕೊoಡಿರುವ ಖಾಸಗೀ ಜಮೀನಿನಲ್ಲಿ ನಡೆಯಿತು. ಪ್ರತಿಯೊಬ್ಬ ಮನುಷ್ಯನಿಗೂ ಬದುಕುವ ಹಕ್ಕು ಇದೆ ಎಂಬುದನ್ನು ಮಾನವೀಯತೆ ಮತ್ತು ಸಾಮಾಜಿಕ ನ್ಯಾಯದ ಪರವಾಗಿ ಮನುಕುಲಕ್ಕೆ ಒಂದು ಸಂದೇಶವನ್ನು ಸಾರುವಂತ ಈ ಚಲನಚಿತ್ರ ಇದಾಗಿದೆ.

೨೦೨೩ರ ಅಕ್ಟೋಬರ್ ತಿಂಗಳ ೨೭ರಂದು ಮುಹೂರ್ತನೆರವೇರಿದ್ದ ಈ ಚಿತ್ರ ಕನ್ನಡ ಚಿತ್ರ ರಂಗದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಲಿದೆ ಎನ್ನುವ ಉತ್ಸಾಹದಲ್ಲಿ ಚಿತ್ರತಂಡ ಇದೆ.
ಚಿತ್ರಕ್ಕೆ -ಚರಣ್ ತೇಜಾ ಛಾಯಾಗ್ರಹಣವಿದ್ದರೆ ಶಿವಕಾಂತ.ಎಸ್.ಥರಕಾರ್ ಕಲಾ ನಿರ್ದೇಶಕರಾಗಿದ್ದಾರೆ. ಶಿವಕಾಂತ.ಎಸ್.ಥರಕಾರ್, ಸಹ ನಿರ್ದೇಶನ- ಸುನಿತಾ ನಂದನ್, ನಿರ್ಮಾಣ ವ್ಯವಸ್ಥಾಪಕರು–ಸುಹಾಸ್, ಸಹಾಯಕ ನಿರ್ದೇಕರಾಗಿದ್ದಾರೆ.





