ಏಕದಿನ ಕ್ರಿಕೆಟ್​ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಪಾಕಿಸ್ತಾನ ವಿರುದ್ದ ಸೋಲಿಲ್ಲದ ಸರದಾರನಾಗಿ ಮುಂದುವರಿದಿದೆ. ಕೆಲವೆ ದಿನಗಳ ಅಂತರದಲ್ಲಿ ಪಾಕಿಸ್ತಾನಕ್ಕೆ ಭಾರಿ ಮುಖಭಂಗವಾಗಿದೆ.

ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ದ ಭಾರತ ಮಹಿಳಾ ತಂಡ ಗೆಲುವು ಸಾಧಿಸಿದೆ. ಭಾರತ ನೀಡಿದ 248 ರನ್ ಟಾರ್ಗೆಟ್ ಚೇಸ್ ಮಾಡಲು ಎಡವಿದ ಪಾಕಿಸ್ತಾನ 159 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಭಾರತ 88 ರನ್ ಗೆಲುವು ದಾಖಲಿಸಿದೆ.ಭಾರತ ಮಹಿಳಾ ತಂಡದ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ ಮುಗ್ಗರಿಸಿದೆ. ಭಾರತ ಮಹಿಳಾ ತಂಡವು ಸಹ ಪುರುಷರ ತಂಡದ ರೀತಿಯಲ್ಲೇ ಪಾಕಿಸ್ತಾನ ಆಟಗಾರ್ತಿಯರಿಗೆ ಹ್ಯಾಂಡ್ ಶೇಕ್ ಮಾಡದೇ ತೆರಳಿದೆ.

ಭಾರತ 248ರನ್ ಟಾರ್ಗೆಟ್ ನೀಡಿತ್ತು. ಪಾಕಿಸ್ತಾನದ ಸಾದಿರ್ ಅಮೀನ್ ದಿಟ್ಟ ಹೋರಾಟ ನೀಡಿದ್ದರು. 81 ರನ್ ಸಿಡಿಸಿ ಅಬ್ಬರಿಸಿದ್ದರು. ಅಮೀನ್ ಅಬ್ಬರ ಭಾರತಕ್ಕೆ ತಲೆನೋವಾಗಿತ್ತು. ಆದರೆ ಸಾದಿರ್ ಅಮೀನ್ ವಿಕೆಟ್ ಪತನದ ಬೆನ್ನಲ್ಲೇ ಪಾಕಿಸ್ತಾನ ದಿಢೀರ್ ಕುಸಿತ ಕಂಡಿತ್ತು. ನತಾಲಿಯಾ ಪರ್ವೇಜ್ , ಸಾದಿರ್ ಅಮಿನ್ ಜೊತೆಯಾಟ ಪಾಕಿಸ್ತಾನ ತಂಡಕ್ಕೆ ನೆರವಾಗಿತ್ತು. ಆದರೆ ಪರ್ವೇಜ್ 33 ರನ್ ಸಿಡಿಸಿ ನಿರ್ಗಮಿಸಿದರು. ಇತ್ತ ಸಾದಿರ್ ಅಮಿನ್ ಏಕಾಂಗಿಯಾಗಿ ಹೋರಾಡಿದರು. ಯಾರಿಂದರೂ ಉತ್ತಮ ಸಾಥ್ ಸಿಗಲಿಲ್ಲ. ಹೀಗಾಗಿ 43 ಓವರ್‌ಗಳಲ್ಲಿ ಪಾಕಿಸ್ತಾನ ಆಲೌಟ್ ಆಗಿತ್ತು. 159 ರನ್ ಸಿಡಿಸಿ ಪಾಕಿಸ್ತಾನ ಸೋಲೊಪ್ಪಿಕೊಂಡಿತ್ತು.

ಪಾಕಿಸ್ತಾನದ ವಿರುದ್ದ ಭಾರತ ಮಹಿಳಾ ತಂಡ ಏಕದಿನ ಮಾದರಿಯಲ್ಲಿ ಇದುವರೆಗೂ ಯಾವುದೇ ಪಂದ್ಯ ಸೋಲು ಕಂಡಿಲ್ಲ. 12 ಏಕದಿನ ಪಂದ್ಯ ಆಡಿದ್ದು, 12ರಲ್ಲೂ ಪಾಕಿಸ್ತಾನ ವಿರುದ್ದ ಭಾರತ ಗೆಲುವು ದಾಖಲಿಸಿದೆ.

ಮೊದಲ ಸ್ಥಾನ: ಮಹಿಳಾ ವಿಶ್ವಕಪ್ ಟೂರ್ನಿಯ ಅಂಕಪಟ್ಟಿಯಲ್ಲಿ ಭಾರತ ಮಹಿಳಾ ತಂಡ ಮೊದಲ ಸ್ಥಾನದಲ್ಲಿದೆ. ಆಡಿದ 2 ಪಂದ್ಯಗಳನ್ನು ಭಾರತ ಗೆದ್ದುಕೊಂಡಿದೆ. ಒಟ್ಟು ನಾಲ್ಕು ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ಇತ್ತ ಪಾಕಿಸ್ತಾನ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಆಡಿದ 2 ಪಂದ್ಯದಲ್ಲಿ ಮುಗ್ಗರಿಸಿದೆ. ಹೀಗಾಗಿ 6ನೇ ಸ್ಥಾನದಲ್ಲಿದೆ. ಒಟ್ಟು 8 ತಂಡಗಳ ಪೈಕಿ ನ್ಯೂಜಿಲೆಂಡ್ ಹಾಗೂ ಸೌತ್ ಆಫ್ರಿಕಾ 7 ಮತ್ತು 8ನೇ ಸ್ಥಾನದಲ್ಲಿದೆ. 2ರಲ್ಲಿ ಒಂದು ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇಂಗ್ಲೆಂಡ್, ಬಾಂಗ್ಲಾದೇಶ, ಶ್ರೀಲಂಕಾ ತಂಡಗಳು ನಂತರದ ಸ್ಥಾನದಲ್ಲಿವೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ