ಇಂಡಿಯನ್ ಪಿಕಲ್‌ಬಾಲ್ ಅಸೋಸಿಯೇಷನ್ ನಿಂದ(IPA) ಮಾನ್ಯತೆ ಪಡೆದ ಇಂಡಿಯನ್ ಪಿಕಲ್‌ಬಾಲ್ ಲೀಗ್ (IPBL) ತನ್ನ ಅಧಿಕೃತ ಲೋಗೋವನ್ನು ಅಹಮದಾಬಾದ್‌ನಲ್ಲಿ ನಡೆದ 70ನೇ ಹುಂಡೈ ಫಿಲ್ಮ್‌ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದೆ.

ಇದು ಭಾರತದ ಅಧಿಕೃತ ಪಿಕಲ್‌ಬಾಲ್ ಲೀಗ್ ಆಗಿದ್ದು, ಕ್ರೀಡೆಯ ಬೆಳವಣಿಗೆಯ ಹೊಸ ಅಧ್ಯಾಯ ಆರಂಭಿಸಿದೆ. ಹೊಸ ಲೋಗೋ ಭಾರತದಾದ್ಯಂತ ಪಿಕಲ್‌ಬಾಲ್‌ನ ಚೈತನ್ಯ, ವೇಗ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸುವಂತದ್ದಾಗಿದೆ.

ಟೈಮ್ಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ವಿನೀತ್ ಜೈನ್ ಅವರು ಲೋಗೋವನ್ನು ಅನಾವರಣಗೊಳಿಸಿದರು. ಫಿಲ್ಮ್‌ಫೇರ್ ಪ್ರಶಸ್ತಿಯಂತಹ ಪ್ರತಿಷ್ಠಿತ ವೇದಿಕೆಯಲ್ಲಿ ನಡೆದ ಈ ಕ್ಷಣವು, ಪಿಕಲ್‌ಬಾಲ್ ಭಾರತದಲ್ಲಿ ಜನಪ್ರಿಯ ಕ್ರೀಡಾ ಸಂಸ್ಕೃತಿಯ ಭಾಗವಾಗುತ್ತಿರುವುದನ್ನು ಸೂಚಿಸುತ್ತದೆ.

ಈ ಸಂದರ್ಭ ಮಾತನಾಡಿದ ವಿನೀತ್ ಜೈನ್ “ಈ ಕ್ಷಣದೊಂದಿಗೆ ಇಂಡಿಯನ್ ಪಿಕಲ್‌ಬಾಲ್ ಲೀಗ್ ವಿಶ್ವ ವೇದಿಕೆಗೆ ಕಾಲಿಡುತ್ತಿದೆ. ನಮ್ಮ ಲೋಗೋದಲ್ಲಿನ ಜ್ವಾಲೆ ಉರಿಯುತ್ತಿರುವ ಕ್ರೀಡಾ ಉತ್ಸಾಹವನ್ನು ಪ್ರತಿನಿಧಿಸುತ್ತದೆ. IPA ಮಾನ್ಯತೆ ಈ ಲೀಗ್‌ಗೆ ನಂಬಿಕೆ ಮತ್ತು ಉದ್ದೇಶದ ಗುರುತು ನೀಡುತ್ತದೆ  ಎಂದರು.

ಲೀಗ್‌ನ ದಿನಾಂಕಗಳು, ವೇದಿಕೆಗಳು, ಫ್ರಾಂಚೈಸಿ ಮಾಲೀಕರು ಮತ್ತು  ಆಟಗಾರರ ಕುರಿತು ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಭಾರತದ ಮೊದಲ ಅಧಿಕೃತ ಇಂಡಿಯನ್ ಪಿಕಲ್‌ಬಾಲ್ ಲೀಗ್ ಹೊಸ ಗುರುತಿನೊಂದಿಗೆ ಕ್ರೀಡಾ ಶ್ರೇಷ್ಠತೆ ಸಾರಲು ಸಜ್ಜಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ