ಪ್ರೋ ಕಬಡ್ಡಿ ಲೀಗ್ ಸೀಸನ್‌ನಲ್ಲಿ ದಬಾಂಗ್ ದೆಹಲಿ ಕೆ.ಸಿ. (ಡಿಡಿಕೆಸಿ) ತಂಡವು ವಿಶಿಷ್ಟ ಹಸಿರು ಜೆರ್ಸಿಯನ್ನು ಧರಿಸುವ ಮೂಲಕ ಪಿಕೆಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡವಾಗಿದೆ. ಕ್ರೀಡಾಂಗಣದ ಕಬಡ್ಡಿ ಕ್ಷಣಗಳನ್ನು ನೈಜ ಪರಿಸರ ಕ್ರಮಗಳೊಂದಿಗೆ ಸಂಪರ್ಕಿಸುವ ಈ ನೂತನ ಪ್ರಯತ್ನ ತಂಡದ ಹಸಿರು ಭವಿಷ್ಯದತ್ತ ನಿಜವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
'ರೇಡ್ ಫಾರ್ ಗ್ರೀನ್’ಅಭಿಯಾನದಡಿ ದಬಾಂಗ್ ದೆಹಲಿ ಕೆ.ಸಿ. ಪ್ರತಿ ಯಶಸ್ವಿ ರೇಡ್ ಪಾಯಿಂಟ್‌ನಿಂದ ನೈಜ ಬದಲಾವಣೆಯ ಪರಿಣಾಮ ಉಂಟಾಗುತ್ತದೆ. ಪ್ರತಿ ಯಶಸ್ವಿ ರೇಡ್ ನಂತರ, ಎನ್‌ಸಿಆರ್ ಪ್ರದೇಶದ ಹೆಚ್ಚಿನ ಮಾಲಿನ್ಯ ಮತ್ತು ಕಡಿಮೆ ಹಸಿರು ಆವರಣವಿರುವ ಪ್ರದೇಶಗಳಲ್ಲಿ ಗಿಡ ನೆಡಲಾಗುತ್ತದೆ. ಅಂತೆಯೇ ಈ ತಂಡವು 295 ಗಿಡಗಳನ್ನು ನೆಟ್ಟಿದೆ. ಹಸಿರು ಚಳುವಳಿಯಲ್ಲಿ ಭಾಗವಹಿಸಲು ಪ್ರೇರೇಪಿಸುವುದು ಅದರ ಉದ್ದೇಶ.
“ಗ್ರೀನ್ ಫ್ಯಾನ್ ಆಫ್ ದಿ ಮ್ಯಾಚ್”ವಿಭಾಗದಡಿ ಪರಿಸರ ಸ್ನೇಹಿ ಕ್ರಮಗಳನ್ನು ಹಂಚಿಕೊಳ್ಳುವ ಅಭಿಮಾನಿಗಳನ್ನು ಗೌರವಿಸಲಾಗುತ್ತದೆ. ದೆಹಲಿ ಹಂತದ ಮೊದಲ ಪಂದ್ಯದಲ್ಲಿ ‘ಗ್ರೀನ್ ಗೇಮ್ ಫಾರ್ ದಿ ಕ್ಲೈಮೇಟ್’ ಆಯೋಜಿಸಲಾಗಿತ್ತು, ಇದರಲ್ಲಿ ನೈಜ ಸಮಯದ ಹಸಿರು ಮೆಟ್ರಿಕ್‌ಗಳು ಮತ್ತು ಅಭಿಮಾನಿಗಳ ಪ್ರತಿಜ್ಞೆಗಳನ್ನು ಪ್ರದರ್ಶಿಸಲಾಯಿತು.
ಈ ಕುರಿತು ಮಾತನಾಡಿದ ತಂಡದ ಸಿಇಒ ಪ್ರಶಾಂತ್ ಮಿಶ್ರ 'ದಬಾಂಗ್ ದೆಹಲಿ ಕೆ.ಸಿ.ಯಲ್ಲಿ ನಾವು ಕ್ರೀಡೆಯ ಶಕ್ತಿ ಕ್ರೀಡಾಂಗಣದ ಮಿತಿ ಮೀರಿ ಸಮಾಜದ ಒಳಿತಿಗೆ ಕೂಡ ಬಳಸಬಹುದು. ಪ್ರತಿ ರೇಡ್ಮ ತ್ತು ಪ್ರತಿ ಅಭಿಮಾನಿಯ ಕ್ರಮವು ಸ್ವಚ್ಛ ಹಾಗೂ ಹಸಿರು ನಾಳೆಯ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಹಸಿರು ಜೆರ್ಸಿ ಕೇವಲ ಬಣ್ಣವಲ್ಲ, ಅದು ಹವಾಮಾನ ಸಕಾರಾತ್ಮಕ ಬದಲಾವಣೆಯತ್ತ ನಮ್ಮ ಬದ್ಧತೆಯ ಪ್ರತೀಕವಾಗಿದೆ ಎಂದರು.
ದಬಾಂಗ್ ದೆಹಲಿ ಕೆ.ಸಿ. ತಂಡವು ಪುಣೆರಿ ಪಲ್ಟನ್ ವಿರುದ್ಧ ತಮ್ಮ ವಿಶೇಷ ಹಸಿರು ಜೆರ್ಸಿಯಲ್ಲಿ ಮೈದಾನಕ್ಕಿಳಿದು ಹಸಿರು ಭವಿಷ್ಯದತ್ತದ ತಮ್ಮ ಬದ್ಧತೆ ತೋರಿಸಿದೆ. ನಾಯಕ ಅಶು ಮಲಿಕ್ ಗೈರುಹಾಜರಿದ್ದರೂ, ದೆಹಲಿ ತಂಡದ ರೇಡರ್‌ಗಳು ಅದ್ಭುತ ತಂಡಭಾವ ಮತ್ತು ನಿಶ್ಚಿತತೆಯನ್ನು ಪ್ರದರ್ಶಿಸಿದರು. ಅಜಿಂಕ್ಯ ಪವಾರ್ ಶ್ರೇಷ್ಠ “ಸೂಪರ್ 10” ದಾಖಲಿಸಿ ಮುನ್ನಡೆಸಿದರು.
ದಬಾಂಗ್ ದೆಹಲಿ ಕೆ.ಸಿ. ಭಾರತೀಯ ಕ್ರೀಡಾ ಲೋಕದಲ್ಲಿ ಹೊಸ ಮಾದರಿಯನ್ನು ನಿರ್ಮಿಸಲು ಉದ್ದೇಶಿಸಿದೆ.